CWG 2022: ಭಾರತ ಮಹಿಳಾ ಹಾಕಿ ತಂಡದ ಸ್ಟಾರ್ ಆಟಗಾರ್ತಿಗೆ ಕೊರೊನಾ ಸೋಂಕು..!

CWG 2022: ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ, ಭಾರತೀಯ ಮಹಿಳಾ ಹಾಕಿ ತಂಡವು ತನ್ನ ಪಂದ್ಯಕ್ಕೂ ಮುನ್ನ ಕೊರೊನಾ ಸೋಂಕನ್ನು ಎದುರಿಸಬೇಕಾಗಿದೆ. ತಂಡದ ಸ್ಟಾರ್ ಆಟಗಾರ್ತಿ ನವಜೋತ್ ಕೌರ್ ಸೋಂಕಿಗೆ ಒಳಗಾಗಿದ್ದಾರೆ.

CWG 2022: ಭಾರತ ಮಹಿಳಾ ಹಾಕಿ ತಂಡದ ಸ್ಟಾರ್ ಆಟಗಾರ್ತಿಗೆ ಕೊರೊನಾ ಸೋಂಕು..!
women's hockey team
Updated By: ಪೃಥ್ವಿಶಂಕರ

Updated on: Jul 30, 2022 | 6:08 PM

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ, ಭಾರತೀಯ ಮಹಿಳಾ ಹಾಕಿ ತಂಡವು ತನ್ನ ಪಂದ್ಯಕ್ಕೂ ಮುನ್ನ ಕೊರೊನಾ ಸೋಂಕನ್ನು ಎದುರಿಸಬೇಕಾಗಿದೆ. ತಂಡದ ಸ್ಟಾರ್ ಆಟಗಾರ್ತಿ ನವಜೋತ್ ಕೌರ್ ಸೋಂಕಿಗೆ ಒಳಗಾಗಿದ್ದಾರೆ. ಬರ್ಮಿಂಗ್ಹ್ಯಾಮ್‌ನಿಂದ ಬಂದಿರುವ ಮಾಹಿತಿಯ ಪ್ರಕಾರ, ಜುಲೈ 30 ಶನಿವಾರದಂದು ನಡೆದ ಕೊರೊನಾ ಪರೀಕ್ಷೆಯಲ್ಲಿ ತಂಡದ ಅನುಭವಿ ಆಟಗಾರ್ತಿ ನವಜೋತ್ ಪಾಸಿಟಿವ್ ಎಂದು ಕಂಡುಬಂದಿದ್ದು, ಈ ಕಾರಣದಿಂದಾಗಿ ಅವರು ಸಂಪೂರ್ಣ ಪಂದ್ಯಗಳಿಂದ ಹೊರಗುಳಿದಿದ್ದಾರೆ. ನವಜೋತ್‌ಗೆ ಸೋಂಕು ತಗುಲಿರುವುದರಿಂದ ಟೀಂ ಇಂಡಿಯಾ ಹಿನ್ನಡೆ ಅನುಭವಿಸಿದೆ. ಭಾರತ ತಂಡ ಶನಿವಾರ ರಾತ್ರಿಯೇ ಗ್ರೂಪ್ ಹಂತದ ತನ್ನ ಎರಡನೇ ಪಂದ್ಯದಲ್ಲಿ ವೇಲ್ಸ್ ತಂಡವನ್ನು ಎದುರಿಸಬೇಕಾಗಿದೆ.

ಆದಾಗ್ಯೂ, ನವಜೋತ್ ಸೋಂಕಿನ ಲಕ್ಷಣಗಳನ್ನು ಹೊಂದಿಲ್ಲ, ಈ ಕಾರಣದಿಂದಾಗಿ ಅವರು ಈಗ ಜುಲೈ 31 ರ ಭಾನುವಾರದಂದು ದೇಶಕ್ಕೆ ಮರಳಲಿದ್ದಾರೆ. ನವಜೋತ್ ಬದಲಿಗೆ ಸೋನಿಕಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಸುದ್ದಿ ಸಂಸ್ಥೆ ಪಿಟಿಐ ವರದಿಯ ಪ್ರಕಾರ, 27 ವರ್ಷದ ಸ್ಟಾರ್ ಮಿಡ್‌ಫೀಲ್ಡರ್ ಕಳೆದ ಎರಡು ದಿನಗಳಿಂದ ಪ್ರತ್ಯೇಕವಾಗಿದ್ದಾರೆ. ಆಕೆಯ ಆರೋಗ್ಯ ಸುಧಾರಿಸಿದ್ದರೂ ಇನ್ನು ಮುಂದೆ ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ
CWG 2022: ಕೇವಲ ಒಂದೇ ಒಂದು ಕೆ.ಜಿ ಭಾರ ಪದಕದ ಬಣ್ಣವನ್ನೇ ಬದಲಾಯಿಸಿತು..!
CWG 2022: ಚಿನ್ನ ಜಸ್ಟ್ ಮಿಸ್; ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಬೆಳ್ಳಿಯೊಂದಿಗೆ ಭಾರತದ ಖಾತೆ ತೆರೆದ ಸಂಕೇತ್ ಸರ್ಗರ್..!
CWG 2022: ಭಾರತದೆದುರು ಆಡುವ ಮುನ್ನವೇ ಪಾಕಿಸ್ತಾನಕ್ಕೆ ಹೀನಾಯ ಸೋಲಿನ ರುಚಿ ತೋರಿದ ಕ್ರಿಕೆಟ್ ಶಿಶು ಬಾರ್ಬಡೋಸ್

Published On - 5:47 pm, Sat, 30 July 22