CWG 2022: 17 ಬಾರಿ ಸೋಲಿಸಿರುವ ಈ ಬಲಿಷ್ಠ ತಂಡ ಹರ್ಮನ್​ಪ್ರೀತ್ ಪಡೆಗೆ ಸೆಮಿಫೈನಲ್ ಎದುರಾಳಿ..!

| Updated By: ಪೃಥ್ವಿಶಂಕರ

Updated on: Aug 05, 2022 | 3:21 PM

CWG 2022: ಭಾರತ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳು ಇದುವರೆಗೆ 22 ಟಿ20 ಐಗಳಲ್ಲಿ ಮುಖಾಮುಖಿಯಾಗಿವೆ. ಆ 22 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡ 17 ಬಾರಿ ಗೆದ್ದಿದೆ. ಅಂದರೆ ಕೇವಲ 5 ಬಾರಿ ಮಾತ್ರ ಭಾರತ ತಂಡ ಗೆಲುವು ಸಾಧಿಸಿದೆ.

CWG 2022: 17 ಬಾರಿ ಸೋಲಿಸಿರುವ ಈ ಬಲಿಷ್ಠ ತಂಡ ಹರ್ಮನ್​ಪ್ರೀತ್ ಪಡೆಗೆ ಸೆಮಿಫೈನಲ್ ಎದುರಾಳಿ..!
Follow us on

ಕಾಮನ್‌ವೆಲ್ತ್ ಗೇಮ್ಸ್ 2022 (Commonwealth Games 2022)ರಲ್ಲಿ ಯಾವ 4 ತಂಡಗಳು ಕ್ರಿಕೆಟ್‌ನ ಸೆಮಿಫೈನಲ್ ಪಂದ್ಯಗಳನ್ನು ಆಡಲಿವೆ ಎಂದು ನಿರ್ಧರಿಸಲಾಗಿದೆ. ಭಾರತ ಮಹಿಳಾ ಕ್ರಿಕೆಟ್ ತಂಡದ (India’s women’s cricket team) ಹೊರತಾಗಿ ಆತಿಥೇಯ ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳಿವೆ. ಸೆಮಿಫೈನಲ್‌ಗೆ 4 ತಂಡಗಳ ಹೆಸರು ಮುದ್ರೆ ಬಿದ್ದ ತಕ್ಷಣ, ಅಂತಿಮ ಟಿಕೆಟ್‌ಗಾಗಿ ಯಾವ ತಂಡ ಯಾರನ್ನು ಎದುರಿಸಲಿದೆ ಎಂಬುದು ಸ್ಪಷ್ಟವಾಗಿದೆ. ಟೀಮ್ ಇಂಡಿಯಾ (Team India) ಈ ರೇಸ್‌ನಲ್ಲಿ ಸ್ಪರ್ಧಿಸುತ್ತಿದ್ದು, ಈಗ ಸೆಮಿಫೈನಲ್​ನಲ್ಲಿ ಇಂಡಿಯಾ ಟಿ20 ಕ್ರಿಕೆಟ್​ನಲ್ಲಿ ಒಂದಲ್ಲ, ಎರಡು ಅಥವಾ ಮೂರಲ್ಲ, ಬರೋಬ್ಬರಿ 17 ಬಾರಿ ಸೋಲಿಸಿದ ತಂಡದ ಎದುರು ಕಣಕ್ಕಿಳಿಯಲಿದೆ.

ಟೀಂ ಇಂಡಿಯಾ ಫೈನಲ್‌ಗೆ ತಲುಪುವ ಹಾದಿ ಸುಲಭವಲ್ಲ ಎಂಬುದು ಸ್ಪಷ್ಟವಾಗಿದೆ. ಫೈನಲ್​ ಟಿಕೆಟ್ ಪಡೆಯಬೇಕೆಂದರೆ ಟೀಂ ಇಂಡಿಯಾ ಅತ್ಯುತ್ತಮ ಕ್ರಿಕೆಟ್ ಆಡಬೇಕಾಗುತ್ತದೆ. ಮೊನ್ನೆ ನಡೆದಿದ್ದನ್ನು ಮರೆತು ಮೈದಾನಕ್ಕೆ ಇಳಿಯಬೇಕು. ಏಕೆಂದರೆ ನಾವು CWG 2022 ರಲ್ಲಿ ಆಡಿದ ಕ್ರಿಕೆಟ್ ಪಂದ್ಯಗಳ ಬಗ್ಗೆ ಮಾತನಾಡಿದರೆ, ಎರಡೂ ತಂಡಗಳ ಬಲವು ಇಲ್ಲಿಯವರೆಗೆ ಸಾಕಷ್ಟು ಪ್ರದರ್ಶನಗೊಂಡಿದೆ.

CWG ನಲ್ಲಿ ಕ್ರಿಕೆಟ್ ಸೆಮಿಫೈನಲ್

ಇದನ್ನೂ ಓದಿ
CWG 2022 Day 8 Schedule: ಕುಸ್ತಿ, ಟೇಬಲ್ ಟೆನ್ನಿಸ್​, ಬ್ಯಾಡ್ಮಿಂಟನ್; 8ನೇ ದಿನ ಭಾರತದ ಪದಕ ಭೇಟೆ ಹೇಗಿರಲಿದೆ?
CWG 2022 Badminton: ಎದುರಾಳಿಗಳನ್ನು ಸುಲಭವಾಗಿ ಸೋಲಿಸಿ ಮುಂದಿನ ಸುತ್ತಿಗೆ ಲಗ್ಗೆ ಇಟ್ಟ ಸಿಂಧು ಮತ್ತು ಶ್ರೀಕಾಂತ್
CWG 2022: ಕಾಮನ್​ವೆಲ್ತ್ ಕ್ರೀಡಾ ಗ್ರಾಮದಿಂದ ಶ್ರೀಲಂಕಾದ ಇಬ್ಬರು ಅಥ್ಲೀಟ್‌, ಒಬ್ಬ ಅಧಿಕಾರಿ ನಾಪತ್ತೆ

ಭಾರತ ಮಹಿಳಾ ತಂಡ CWG ಕ್ರಿಕೆಟ್‌ನ ಸೆಮಿ-ಫೈನಲ್‌ನಲ್ಲಿ ಆತಿಥೇಯ ರಾಷ್ಟ್ರವಾದ ಇಂಗ್ಲೆಂಡ್ ಅನ್ನು ಎದುರಿಸಲಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವೆ ಮತ್ತೊಂದು ಸೆಮಿಫೈನಲ್ ನಡೆಯಲಿದೆ. ಈ ಎರಡೂ ಪಂದ್ಯಗಳು ಆಗಸ್ಟ್ 6 ರಂದು ನಡೆಯಲಿವೆ.

ಭಾರತ ತಂಡ ಇಂಗ್ಲೆಂಡ್ ವಿರುದ್ಧ 17 ಟಿ20 ಪಂದ್ಯಗಳನ್ನು ಸೋತಿದೆ

ಸೆಮಿಫೈನಲ್‌ನಿಂದ ಫೈನಲ್‌ವರೆಗಿನ ಅಂತರವು ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಎಷ್ಟು ಸವಾಲಾಗಿದೆ ಎಂಬುದನ್ನು ಈಗ ಈ ಅಂಕಿ ಅಂಶದಿಂದ ಅರ್ಥಮಾಡಿಕೊಳ್ಳಿ. ಭಾರತ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳು ಇದುವರೆಗೆ 22 ಟಿ20 ಐಗಳಲ್ಲಿ ಮುಖಾಮುಖಿಯಾಗಿವೆ. ಆ 22 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡ 17 ಬಾರಿ ಗೆದ್ದಿದೆ. ಅಂದರೆ ಕೇವಲ 5 ಬಾರಿ ಮಾತ್ರ ಭಾರತ ತಂಡ ಗೆಲುವು ಸಾಧಿಸಿದೆ.

ಭಾರತದ ವಿರುದ್ಧ ಇನ್ನೊಂದು ವಿಷಯವೆಂದರೆ ಇಂಗ್ಲೆಂಡ್ ತಂಡ ತವರಿನಲ್ಲಿ ಆಡಲಿದೆ. ನಿಸ್ಸಂಶಯವಾಗಿ ಅವರು ಇದರ ಪ್ರಯೋಜನವನ್ನು ಪಡೆಯುತ್ತಾರೆ. ಅಷ್ಟೇ ಅಲ್ಲ, ತವರಿನಲ್ಲಿ ಭಾರತದೊಂದಿಗೆ ಇದುವರೆಗೆ ಆಡಿದ 8 ಟಿ20 ಪಂದ್ಯಗಳಲ್ಲಿ ಇಂಗ್ಲೆಂಡ್ ಕೂಡ ತನ್ನ ಪ್ರಾಬಲ್ಯವನ್ನು ಕಾಯ್ದುಕೊಂಡಿದೆ. ಅವರು ತಮ್ಮ ನೆಲದಲ್ಲಿ ತಮ್ಮ ವಿರುದ್ಧ ಕೇವಲ 2 ಪಂದ್ಯಗಳನ್ನು ಗೆಲ್ಲಲು ಭಾರತೀಯ ಮಹಿಳೆಯರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.

ಭಾರತ ನವಿತೆಯರು ಹೊಸ ಇತಿಹಾಸ ಬರೆಯಲಿದ್ದಾರೆ

ಅಂದಹಾಗೆ, ಕ್ರಿಕೆಟ್‌ನಲ್ಲಿ ಪ್ರತಿದಿನ, ಪ್ರತಿ ಪಂದ್ಯವೂ ಹೊಸದು. ಮೊನ್ನೆ ನಡೆದದ್ದು ಇತಿಹಾಸ ಪುಟಗಳಲ್ಲಿ ದಾಖಲಾಗಿದೆ. ಈಗ ಏನೇ ನಡೆದರೂ ಅದು ಹೊಸ ಇತಿಹಾಸವಾಗುತ್ತದೆ. 1998 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪುರುಷರ ಕ್ರಿಕೆಟ್ ತಂಡವು ಗ್ರೂಪ್ ಹಂತದಲ್ಲೇ ಹೊರಗುಳಿದಿತ್ತು, ಬರ್ಮಿಂಗ್‌ಹ್ಯಾಮ್‌ನಲ್ಲಿ ಭಾರತದ ಮಹಿಳಾ ಪಡೆದ ಆ ವಿಷಾದವನ್ನು ದೂರವಿಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಇನ್ನಷ್ಟು ಕಾಮನ್​ವೆಲ್ತ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:21 pm, Fri, 5 August 22