CWG 2022: ಭಾರತಕ್ಕೆ ಮತ್ತೊಂದು ಪದಕ: ಲಾಂಗ್ಜಂಪ್ನಲ್ಲಿ ಬೆಳ್ಳಿ ಗೆದ್ದು ದಾಖಲೆ ಬರೆದ ಮುರಳಿ ಶ್ರೀಶಂಕರ್
ಲಾಂಗ್ಜಂಪ್ನಲ್ಲಿ ಮುರಳಿ ಶ್ರೀಶಂಕರ್ (Murali Sreeshankar) ಬೆಳ್ಳಿ ಗೆದ್ದ ಸಾಧನೆ ಮಾಡಿದ್ದಾರೆ. ವಿಶೇಷ ಎಂದರೆ ಕಾಮನ್ವೆಲ್ತ್ ಗೇಮ್ಸ್ ಇತಿಹಾಸದಲ್ಲಿ ಬೆಳ್ಳಿ ಗೆದ್ದ ಮೊದಲ ಪುರುಷ ಲಾಂಗ್ಜಂಪರ್ ಶ್ರೀಶಂಕರ್ ಆಗಿದ್ದಾರೆ.
ಕಾಮನ್ವೆಲ್ತ್ ಗೇಮ್ಸ್ 2022 ರಲ್ಲಿ (Commonwealth Games 2022) ಭಾರತದ ಪದಕಗಳ ಸಂಖ್ಯೆ 20ಕ್ಕೇರಿದೆ. ಭಾರತೀಯ ಕಾಲಮಾನದ ಪ್ರಕಾರ ಗುರುವಾರ ರಾತ್ರಿ ಕೂಡ ಭಾರತ ಎರಡು ಪದಕಗಳನ್ನು ಬಾಜಿಕೊಂಡಿತು. ಕಾಮನ್ವೆಲ್ತ್ ಗೇಮ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ಯಾರಾ ಪವರ್ ಲಿಫ್ಟಿಂಗ್ನಲ್ಲಿ ಭಾರತದ ಸುಧೀರ್ ಚಿನ್ನದ ಪದಕಕ್ಕೆ ಕೊರಳೊಡ್ಡಿದರೆ ಲಾಂಗ್ಜಂಪ್ನಲ್ಲಿ ಮುರಳಿ ಶ್ರೀಶಂಕರ್ (Murali Sreeshankar) ಬೆಳ್ಳಿ ಗೆದ್ದ ಸಾಧನೆ ಮಾಡಿದ್ದಾರೆ. ವಿಶೇಷ ಎಂದರೆ ಕಾಮನ್ವೆಲ್ತ್ ಗೇಮ್ಸ್ ಇತಿಹಾಸದಲ್ಲಿ ಬೆಳ್ಳಿ ಗೆದ್ದ ಮೊದಲ ಪುರುಷ ಲಾಂಗ್ಜಂಪರ್ ಶ್ರೀಶಂಕರ್ ಆಗಿದ್ದಾರೆ. 8.08ಮೀ ಜಿಗಿತದ ಮೂಲಕ ಭಾರತಕ್ಕೆ (India) ಐತಿಹಾಸಿಕ ಬೆಳ್ಳಿ ಗೆದ್ದುಕೊಟ್ಟರು. ಈ ಮೂಲಕ ಸುರೇಶ್ ಬಾಬು ಬಳಿಕ ಪದಕ ಗೆದ್ದ ಭಾರತದ ಎರಡನೇ ಪುರುಷ ಲಾಂಗ್ಜಂಪರ್ ಎನಿಸಿಕೊಂಡಿದ್ದಾರೆ. ಸುರೇಶ್ ಅವರು 1978ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಕಂಚು ಗೆದ್ದಿದ್ದರು.
ಸುಧೀರ್ಗೆ ಚಿನ್ನ:
ಕಾಮನ್ವೆಲ್ತ್ ಗೇಮ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ಯಾರಾ ಪವರ್ ಲಿಫ್ಟಿಂಗ್ನಲ್ಲಿ ಭಾರತದ ಸುಧೀರ್ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಗುರುವಾರ ತಡರಾತ್ರಿ ನಡೆದ ಪುರುಷರ ಹೆವಿವೇಯ್ಟ್ ವಿಭಾಗದಲ್ಲಿ ಸುಧೀರ್ 134.5 ಅಂಕಗಳೊಂದಿಗೆ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಇತಿಹಾಸ ನಿರ್ಮಿಸಿದರು. ಸುಧೀರ್ ತಮ್ಮ ಮೊದಲ ಪ್ರಯತ್ನದಲ್ಲಿ 208 ಕೆ.ಜಿ ಭಾರ ಎತ್ತಿದರು. ಹೀಗೆ 132 ಕ್ಕೂ ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ ಮೊದಲ ಸ್ಥಾನವನ್ನು ಗಳಿಸಿದರು.
ಇನ್ನು ಪುರುಷರ ವೆಲ್ಟರ್ ವೇಟ್ ವಿಭಾಗದಲ್ಲಿ ಬಾಕ್ಸರ್ ರೋಹಿತ್ ಟೋಕಾಸ್ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಹಾಲಿ ಚಾಂಪಿಯನ್ ಮಣಿಕಾ ಬಾತ್ರಾ 4-0 ಅಂತರದ ಮೇಲುಗೈ ಸಾಧಿಸುವ ಮೂಲಕ ಮಹಿಳೆಯರ ಸಿಂಗಲ್ಸ್ 16ರ ಸುತ್ತಿಗೆ ಪ್ರವೇಶಿಸಿದ್ದಾರೆ. ಪ್ಯಾಡ್ಲರ್‌ಗಳಾದ ಶ್ರೀಜಾ ಅಕುಲಾ ಮತ್ತು ರೀತ್ ಟೆನ್ನಿಸನ್ ಅವರು ತಮ್ಮ ಪಂದ್ಯಗಳಲ್ಲಿ ಜಯಗಳಿಸುವುದರೊಂದಿಗೆ 16ರ ಮಹಿಳಾ ಸಿಂಗಲ್ಸ್ ಸುತ್ತಿಗೆ ಪ್ರವೇಶಿಸಿದರು.ಟೆಬಲ್ ಟೆನಿಸ್ ಪುರಷರ ಡಬಲ್ಸ್ ವಿಭಾಗದಲ್ಲಿ ಅಲ್ಲೆನ್ ಜೋಯಲ್ ಮತ್ತು ವ್ಯಾನ್ ಲ್ಯಾಂಗ್ ಜೋನಾಥನ್ ವಿರುದ್ಧ ಭಾರತ ತಂಡದ ಆಟಗಾರರಾದ ಶರತ್ ಮತ್ತು ಸಾಥಿಯಾನ್ ಭರ್ಜರಿ ಗೆಲುವು ಸಾಧಿಸುವ ಮೂಲಕ 16ರ ಸುತ್ತಿಗೆ ಪ್ರವೇಶಿಸಿದರು.
ಇತ್ತ ಭಾರತೀಯ ಪುರುಷರ ಹಾಕಿ ತಂಡವು ಸೆಮಿಫೈನಲ್‌ಗೆ ಭರ್ಜರಿ ಗೆಲುವಿನೊಂದಿಗೆ ಪ್ರವೇಶಿಸಿತು. ಸ್ಟಾರ್ ಡಿಫೆಂಡರ್ ಹರ್ಮನ್‌ಪ್ರೀತ್ ಸಿಂಗ್ ಅವರ ಅಮೋಘ ಹ್ಯಾಟ್ರಿಕ್ ಹಿನ್ನಲೆಯಲ್ಲಿ ಭಾರತ ತನ್ನ ಕೊನೆಯ ಪೂಲ್ ಬಿ ಪಂದ್ಯದಲ್ಲಿ ವೇಲ್ಸ್ ತಂಡವನ್ನು 4-1 ಗೋಲುಗಳಿಂದ ಸೋಲಿಸಿತು. ಪೂಲ್ ಹಂತದಲ್ಲಿ 4 ಪಂದ್ಯಗಳಲ್ಲಿ ಟೀಂ ಇಂಡಿಯಾ ಒಟ್ಟು 3 ಪಂದ್ಯಗಳನ್ನು ಗೆದ್ದಿದ್ದರೆ, 1 ಡ್ರಾ ಆಗಿತ್ತು.
ಭಾರತದ ಅನುಭವಿ ಡಿಫೆಂಡರ್ ಹರ್ಮನ್‌ಪ್ರೀತ್ ಪಂದ್ಯಾವಳಿಯಲ್ಲಿ ತಮ್ಮ ಎರಡನೇ ಹ್ಯಾಟ್ರಿಕ್ ಅನ್ನು ಪೂರ್ಣಗೊಳಿಸಿದ್ದು ಮಾತ್ರವಲ್ಲದೆ, ಪೆನಾಲ್ಟಿ ಕಾರ್ನರ್‌ನಲ್ಲಿ ತಮ್ಮ ಪ್ರಬಲ ಡ್ರ್ಯಾಗ್–ಫ್ಲಿಕ್ ಆಧಾರದ ಮೇಲೆ 3 ಪ್ರಚಂಡ ಗೋಲುಗಳನ್ನು ಗಳಿಸುವ ಮೂಲಕ ದಾಖಲೆ ಮಾಡಿದರು. ಒಟ್ಟು 9 ಗೋಲುಗಳೊಂದಿಗೆ, ಅವರು ಕಾಮನ್ವೆಲ್ತ್ ಗೇಮ್ಸ್ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಭಾರತೀಯರಾಗಿದ್ದಾರೆ.
Published On - 7:40 am, Fri, 5 August 22