CWG 2022: ಭಾರತಕ್ಕೆ ಆರನೇ ಚಿನ್ನ: ಪ್ಯಾರಾ ಪವರ್ ಲಿಫ್ಟಿಂಗ್ನಲ್ಲಿ ಇತಿಹಾಸ ನಿರ್ಮಿಸಿದ ಸುಧೀರ್
ಕಾಮನ್ವೆಲ್ತ್ ಗೇಮ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ಯಾರಾ ಪವರ್ ಲಿಫ್ಟಿಂಗ್ನಲ್ಲಿ (Para Powerlifting ) ಭಾರತದ ಸುಧೀರ್ (Sudhir) ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ 2022 ರಲ್ಲಿ (Commonwealth Games 2022) ಭಾರತದ ಪದಕದ ಬೇಟೆ ಮುಂದುವರೆದಿದೆ. ಕಾಮನ್ವೆಲ್ತ್ ಗೇಮ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ಯಾರಾ ಪವರ್ ಲಿಫ್ಟಿಂಗ್ನಲ್ಲಿ (Para Powerlifting ) ಭಾರತದ ಸುಧೀರ್ (Sudhir) ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಗುರುವಾರ ತಡರಾತ್ರಿ ನಡೆದ ಪುರುಷರ ಹೆವಿವೇಯ್ಟ್ ವಿಭಾಗದಲ್ಲಿ ಸುಧೀರ್ 134.5 ಅಂಕಗಳೊಂದಿಗೆ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಇತಿಹಾಸ ನಿರ್ಮಿಸಿದರು. ಈ ಮೂಲಕ ಭಾರತದ ಪದಕಗಳ ಸಂಖ್ಯೆ 20 ಕ್ಕೇರಿದೆ. ಸದ್ಯ ಭಾರತದ ಬಳಿ ಆರು ಚಿನ್ನ, ಏಳು ಬೆಳ್ಳಿ ಮತ್ತು 7 ಕಂಚಿನ ಪದಕವಿದೆ. 87 ಕೆ.ಜಿ. ಇರುವ ಸುಧೀರ್ ತಮ್ಮ ಮೊದಲ ಪ್ರಯತ್ನದಲ್ಲಿ 208 ಕೆ.ಜಿ ಭಾರ ಎತ್ತಿದರು. ಹೀಗೆ 132 ಕ್ಕೂ ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ ಮೊದಲ ಸ್ಥಾನವನ್ನು ಗಳಿಸಿದರು.
ಪ್ಯಾರಾ ಪವರ್ ಲಿಫ್ಟಿಂಗ್ನಲ್ಲಿ ವಿಜೇತರನ್ನು ಪಾಯಿಂಟ್ಗಳ ಆಧಾರದ ಮೇಲೆ ನಿರ್ಧರಿಸುವುದು ವಾಡಿಕೆ. ಇದರಲ್ಲಿ ಸ್ಪರ್ಧಿಯ ದೇಹದ ತೂಕ ಮತ್ತು ಅವನು ಅಥವಾ ಅವಳು ಎತ್ತುವ ತೂಕದ ಆಧಾರದ ಮೇಲೆ ಪಾಯಿಂಟ್ ಗಳನ್ನು ನಿರ್ಧರಿಸಲಾಗುತ್ತದೆ. ಸುಧೀರ್ ತಮ್ಮ ಎರಡನೇ ಪ್ರಯತ್ನದಲ್ಲಿ 212 ಕೆಜಿ ಎತ್ತಿ ದಾಖಲೆಯ 134.5 ಅಂಕಗಳನ್ನು ಗಳಿಸಿದರು. ಈ ಮೂಲಕ ಕಾಮನ್ ವೆಲ್ತ್ ಗೇಮ್ಸ್ 2022 ರಲ್ಲಿ ಚಿನ್ನದ ಪದಕವನ್ನು ಬಾಜಿಕೊಂಡಿದ್ದಾರೆ.
India’s Sudhir wins 1st ever gold medal in Para Powerlifting at #CommonwealthGames. pic.twitter.com/mspPzzIoSw
— ANI (@ANI) August 4, 2022
ಇನ್ನು ಲಾಂಗ್ಜಂಪ್ನಲ್ಲಿ ಮುರಳಿ ಶ್ರೀಶಂಕರ್ ಬೆಳ್ಳಿ ಗೆದ್ದ ಸಾಧನೆ ಮಾಡಿದ್ದಾರೆ. ವಿಶೇಷ ಎಂದರೆ ಕಾಮನ್ವೆಲ್ತ್ ಗೇಮ್ಸ್ ಇತಿಹಾಸದಲ್ಲಿ ಬೆಳ್ಳಿ ಗೆದ್ದ ಮೊದಲ ಪುರುಷ ಲಾಂಗ್ಜಂಪರ್ ಶ್ರೀಶಂಕರ್ ಆಗಿದ್ದಾರೆ. 8.08ಮೀ ಜಿಗಿತದ ಮೂಲಕ ಭಾರತಕ್ಕೆ ಐತಿಹಾಸಿಕ ಬೆಳ್ಳಿ ಗೆದ್ದುಕೊಟ್ಟರು. ಈ ಮೂಲಕ ಸುರೇಶ್ ಬಾಬು ಬಳಿಕ ಪದಕ ಗೆದ್ದ ಭಾರತದ ಎರಡನೇ ಪುರುಷ ಲಾಂಗ್ಜಂಪರ್ ಎನಿಸಿಕೊಂಡಿದ್ದಾರೆ. ಸುರೇಶ್ ಅವರು 1978ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಕಂಚು ಗೆದ್ದಿದ್ದರು.
ಭಾರತೀಯ ಪುರುಷರ ಹಾಕಿ ತಂಡವು ಸೆಮಿಫೈನಲ್‌ಗೆ ಭರ್ಜರಿ ಗೆಲುವಿನೊಂದಿಗೆ ಪ್ರವೇಶಿಸಿತು. ಸ್ಟಾರ್ ಡಿಫೆಂಡರ್ ಹರ್ಮನ್‌ಪ್ರೀತ್ ಸಿಂಗ್ ಅವರ ಅಮೋಘ ಹ್ಯಾಟ್ರಿಕ್ ಹಿನ್ನಲೆಯಲ್ಲಿ ಭಾರತ ತನ್ನ ಕೊನೆಯ ಪೂಲ್ ಬಿ ಪಂದ್ಯದಲ್ಲಿ ವೇಲ್ಸ್ ತಂಡವನ್ನು 4-1 ಗೋಲುಗಳಿಂದ ಸೋಲಿಸಿತು. ಪೂಲ್ ಹಂತದಲ್ಲಿ 4 ಪಂದ್ಯಗಳಲ್ಲಿ ಟೀಂ ಇಂಡಿಯಾ ಒಟ್ಟು 3 ಪಂದ್ಯಗಳನ್ನು ಗೆದ್ದಿದ್ದರೆ, 1 ಡ್ರಾ ಆಗಿತ್ತು.
Published On - 7:08 am, Fri, 5 August 22