ಇಂಗ್ಲೆಂಡ್ ಅಂಡರ್-19 ತಂಡದಲ್ಲಿ ಟೀಂ ಇಂಡಿಯಾ ಮಾಜಿ ವೇಗಿ ಆರ್ಪಿ ಸಿಂಗ್ ಪುತ್ರನಿಗೆ ಸ್ಥಾನ
80ರ ದಶಕದಲ್ಲಿ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದ ಕ್ರಿಕೆಟಿಗ ಆರ್.ಪಿ.ಸಿಂಗ್ ಅವರ ಪುತ್ರ ಹ್ಯಾರಿ ಸಿಂಗ್ ಇಂಗ್ಲೆಂಡ್ ಅಂಡರ್-19 ತಂಡಕ್ಕೆ ಆಯ್ಕೆಯಾಗಿದ್ದಾರೆ.
80ರ ದಶಕದಲ್ಲಿ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದ ಕ್ರಿಕೆಟಿಗ ಆರ್.ಪಿ.ಸಿಂಗ್ ಅವರ ಪುತ್ರ ಹ್ಯಾರಿ ಸಿಂಗ್ ಇಂಗ್ಲೆಂಡ್ ಅಂಡರ್-19 ತಂಡಕ್ಕೆ ಆಯ್ಕೆಯಾಗಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿಗೆ ಅವರು ಇಂಗ್ಲೆಂಡ್ ತಂಡದಲ್ಲಿ ಆಯ್ಕೆಯಾಗಿದ್ದಾರೆ. ಆರ್‌ಪಿ ಸಿಂಗ್ ಉತ್ತರ ಪ್ರದೇಶದವರಾಗಿದ್ದು ಭಾರತಕ್ಕಾಗಿ ಕೆಲವು ODI ಪಂದ್ಯಗಳನ್ನು ಆಡಿದ್ದಾರೆ. ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನವನ್ನು ಹೆಚ್ಚು ಸಮಯ ಆಡದ ನಂತರ, ಆರ್‌ಪಿ ಸಿಂಗ್ ಅವರು ಇಂಗ್ಲೆಂಡ್‌ಗೆ ಹೋಗಿ ಅಲ್ಲಿ ಕೋಚಿಂಗ್ ಕೋರ್ಸ್ ಮುಗಿಸಿ, ಕ್ಲಬ್ ಕ್ರಿಕೆಟ್‌ನಲ್ಲಿ ತರಬೇತುದಾರರಾಗಿ ಕೆಲಸ ಮಾಡಲು ಪ್ರಾರಂಭಿಸಿದರು.
ಆರ್‌ಪಿ ಸಿಂಗ್ ಅವರ ಮಗ ಮತ್ತು ಮಗಳು ಇಂಗ್ಲೆಂಡ್‌ನಲ್ಲಿ ಬೆಳೆದಿದ್ದು, ಇಬ್ಬರಿಗೂ ಕ್ರಿಕೆಟ್‌ನಲ್ಲಿ ಆಸಕ್ತಿ ಇದೆ. ಹೀಗಾಗಿ ಆರ್ಪಿ ಸಿಂಗ್ ಅವರ ಮಗ ಲಂಕಾಶೈರ್ ತಂಡದಲ್ಲಿ ಸ್ಥಾನ ಪಡೆದಿದ್ದಾನೆ. ಆರ್‌ಪಿ ಸಿಂಗ್ ಅವರ ಪುತ್ರಿ ಲಂಕಾಶೈರ್‌ನ 19 ವರ್ಷದೊಳಗಿನವರ ತಂಡವನ್ನೂ ಪ್ರತಿನಿಧಿಸಿದ್ದಾರೆ. ಆದರೆ ನಂತರ ಅವರು ತಮ್ಮ ಅಧ್ಯಯನದತ್ತ ಗಮನ ಹರಿಸಲು ನಿರ್ಧರಿಸಿ ಕ್ರಿಕೆಟ್ ತೊರೆದಿದ್ದಾರೆ.
ಹ್ಯಾರಿ ಆಲ್ ರೌಂಡರ್
ಆರ್ಪಿ ಸಿಂಗ್ ಅವರ ಮಗ ಇಂಗ್ಲೆಂಡ್ ರಾಷ್ಟ್ರೀಯ ತಂಡದೊಂದಿಗೆ ಆಡಲು ಸಮಯ ಹತ್ತಿರವಾದಂತೆ ಕಾಣುತ್ತಿದೆ. ಅವರ ಮಗ ಹ್ಯಾರಿ ಬಗ್ಗೆ ಮಾತನಾಡುವುದಾದರೆ, ಆರ್‌ಪಿ ಸಿಂಗ್ ದಿ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿದ್ದು, ತಮ್ಮ ಮಗ ಓಪನರ್ ಆಗಿದ್ದು, ಅವನು ಆಫ್‌ಸ್ಪಿನ್ ಕೂಡ ಮಾಡುವ ಸಾಮಥ್ಯ್ರ ಹೊಂದಿದ್ದಾನೆ ಎಂದು ಹೇಳಿದರು. ಆರ್ಪಿ ಪ್ರಕಾರ, ಹ್ಯಾರಿ ಆರಂಭದಲ್ಲಿ ವೇಗದ ಬೌಲಿಂಗ್ನಲ್ಲಿ ಆಸಕ್ತಿ ಹೊಂದಿದ್ದರು, ಆದರೆ ನಂತರ ನೀನು ಬ್ಯಾಟಿಂಗ್ ಕಡೆ ಗಮನಹರಿಸು ಎಂದು ಸ್ವತಃ ಆರ್ಪಿ ಸಿಂಗ್ ಅವರೆ ಹೇಳಿದರಂತೆ. ಇಂತಹ ಪರಿಸ್ಥಿತಿಯಲ್ಲಿ ವೇಗದ ಬೌಲಿಂಗ್ ಮಾಡಲು ಕಷ್ಟವಾದರೆ, ಆಲ್ ರೌಂಡರ್ ಆಗಲು ಸ್ಪಿನ್ ಬೌಲಿಂಗ್ನತ್ತ ಗಮನ ಹರಿಸುವಂತೆ ಸೂಚಿಸಿದರಂತೆ.
ಕ್ರಿಕೆಟ್‌ನಲ್ಲಿ ಇಬ್ಬರು ಆರ್ಪಿ ಸಿಂಗ್
2007ರಲ್ಲಿ ಟಿ20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾದ ಭಾಗವಾಗಿದ್ದ ಆರ್ ಪಿ ಸಿಂಗ್ ಈ ಆರ್ ಪಿ ಸಿಂಗ್ ಅಲ್ಲ. ಆರ್‌ಪಿ ಸಿಂಗ್ ಇಬ್ಬರೂ ಉತ್ತರ ಪ್ರದೇಶದಿಂದ ಬಂದವರಾಗಿದ್ದು, ಇಬ್ಬರೂ ಸಹ ಎಡಗೈ ವೇಗದ ಬೌಲರ್‌ಗಳಾಗಿದ್ದರು. ಹ್ಯಾರಿ ಅವರ ತಂದೆ ಆರ್‌ಪಿ ಸಿಂಗ್ ಸೀನಿಯರ್ ಆಗಿದ್ದು, ಭಾರತದ ಪರ ಎರಡು ODI ಪಂದ್ಯಗಳನ್ನು ಆಡಿದ್ದಾರೆ. ಅವರು 1986 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಈ ಪಂದ್ಯಗಳನ್ನು ಆಡಿದರು. ಅದೇ ಸಮಯದಲ್ಲಿ, ಆರ್ಪಿ ಸಿಂಗ್ ಜೂನಿಯರ್ ಭಾರತಕ್ಕಾಗಿ 14 ಟೆಸ್ಟ್ ಪಂದ್ಯ, 58 ಏಕದಿನ ಮತ್ತು 10 T20 ಪಂದ್ಯಗಳನ್ನು ಆಡಿದ್ದಾರೆ.
Published On - 6:50 pm, Thu, 4 August 22