AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2024: ಟಿ20 ವಿಶ್ವಕಪ್​ನಿಂದ 10 ತಂಡಗಳು ಔಟ್!

T20 World Cup 2024: ಒಂದೆಡೆ 6 ತಂಡಗಳು ಸೂಪರ್-8ಗೆ ಅರ್ಹತೆ ಪಡೆದಿದ್ದರೆ, ಮತ್ತೊಂದೆಡೆ 10 ತಂಡಗಳು ಸೂಪರ್-8 ರೇಸ್‌ನಿಂದ ಹೊರಗುಳಿದಿವೆ. ಇದರಲ್ಲಿ ಪಾಕಿಸ್ತಾನ, ಕೆನಡಾ, ಐರ್ಲೆಂಡ್, ನ್ಯೂಜಿಲೆಂಡ್, ನಮೀಬಿಯಾ, ಪಪುವಾ ನ್ಯೂಗಿನಿಯಾ, ಶ್ರೀಲಂಕಾ, ಉಗಾಂಡಾ, ನೇಪಾಳ ಮತ್ತು ಒಮಾನ್ ತಂಡಗಳು ಸೇರಿವೆ.

T20 World Cup 2024: ಟಿ20 ವಿಶ್ವಕಪ್​ನಿಂದ 10 ತಂಡಗಳು ಔಟ್!
ಟಿ20 ವಿಶ್ವಕಪ್ 2024
ಪೃಥ್ವಿಶಂಕರ
|

Updated on: Jun 15, 2024 | 4:34 PM

Share

ಟಿ20 ವಿಶ್ವಕಪ್‌ನಲ್ಲಿ (T20 World Cup 2024) ಇದುವರೆಗೆ 31 ಪಂದ್ಯಗಳು ನಡೆದಿವೆ. 31 ನೇ ಪಂದ್ಯ ದಕ್ಷಿಣ ಆಫ್ರಿಕಾ ಮತ್ತು ನೇಪಾಳ ನಡುವೆ ನಡೆಯಿತು. ಈ ಪಂದ್ಯವನ್ನು ದಕ್ಷಿಣ ಆಫ್ರಿಕಾ ಒಂದು ರನ್‌ನಿಂದ ಗೆದ್ದುಕೊಂಡಿತು. ಈ ಪಂದ್ಯದ ಸೋಲಿನೊಂದಿಗೆ ನೇಪಾಳ ಕೂಡ ವಿಶ್ವಕಪ್‌ನಿಂದ ಹೊರಬಿದ್ದಿದೆ. ಈ 31 ಪಂದ್ಯಗಳ ನಂತರ ಸೂಪರ್ 8 ಸುತ್ತಿಗೆ 6 ತಂಡಗಳು ಅರ್ಹತೆ ಪಡೆದಂತ್ತಾಗಿದೆ. ಈ 6 ತಂಡಗಳಲ್ಲಿ ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ತಂಡಗಳು ಸೇರಿವೆ. ಮೊದಲ ಟಿ20 ವಿಶ್ವಕಪ್ ಆಡುತ್ತಿರುವ ಅಮೆರಿಕ ತಂಡ ತನ್ನ ಮೊದಲ ಆವೃತ್ತಿಯಲ್ಲೇ ಅದ್ಭುತ ಪ್ರದರ್ಶನ ನೀಡಿ ಸೂಪರ್ 8 ಸುತ್ತಿಗೆ ಅರ್ಹತೆ ಪಡೆದು ಇತಿಹಾಸ ನಿರ್ಮಿಸಿದೆ.

10 ತಂಡಗಳು ಟೂರ್ನಿಯಿಂದ ಔಟ್

ಒಂದೆಡೆ 6 ತಂಡಗಳು ಸೂಪರ್-8ಗೆ ಅರ್ಹತೆ ಪಡೆದಿದ್ದರೆ, ಮತ್ತೊಂದೆಡೆ 10 ತಂಡಗಳು ಸೂಪರ್-8 ರೇಸ್‌ನಿಂದ ಹೊರಗುಳಿದಿವೆ. ಇದರಲ್ಲಿ ಪಾಕಿಸ್ತಾನ, ಕೆನಡಾ, ಐರ್ಲೆಂಡ್, ನ್ಯೂಜಿಲೆಂಡ್, ನಮೀಬಿಯಾ, ಪಪುವಾ ನ್ಯೂಗಿನಿಯಾ, ಶ್ರೀಲಂಕಾ, ಉಗಾಂಡಾ, ನೇಪಾಳ ಮತ್ತು ಒಮಾನ್ ತಂಡಗಳು ಸೇರಿವೆ. ಇನ್ನೂ ಎರಡು ತಂಡಗಳು ಸೂಪರ್-8 ರಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಳ್ಳಬೇಕಾಗಿದೆ. ಅದಕ್ಕಾಗಿ ಈಗ ನಾಲ್ಕು ತಂಡಗಳ ನಡುವೆ ಪೈಪೋಟಿ ನಡೆಯುತ್ತಿದೆ.

ಬಲಿಷ್ಠ ತಂಡಗಳೇ ಸುಸ್ತು

ಹೊರಬಿದ್ದ ತಂಡಗಳ ಪೈಕಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಈ ಬಾರಿ ಸಾಕಷ್ಟು ಅಚ್ಚರಿ ಮೂಡಿಸಿವೆ. ಎರಡೂ ತಂಡಗಳನ್ನು ಅತ್ಯಂತ ಬಲಿಷ್ಠವೆಂದು ಪರಿಗಣಿಸಲಾಗಿತ್ತು. ಆದರೆ ಈ ವಿಶ್ವಕಪ್‌ನಲ್ಲಿ ಈ ಎರಡೂ ತಂಡಗಳು ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದವು. ಇದರಿಂದಾಗಿ ಈ ಎರಡೂ ತಂಡಗಳಿಗೆ ಸೂಪರ್‌-8ರ ಘಟ್ಟ ತಲುಪಲು ಸಾಧ್ಯವಾಗಿಲ್ಲ.

ಇದೀಗ ಇಂಗ್ಲೆಂಡ್, ಸ್ಕಾಟ್ಲೆಂಡ್, ಬಾಂಗ್ಲಾದೇಶ ಮತ್ತು ನೆದರ್ಲೆಂಡ್‌ ನಡುವೆ ಸೂಪರ್ 8 ಸುತ್ತಿಗೆ ಅರ್ಹತೆ ಪಡೆಯಲು ಪೈಪೋಟಿ ಏರ್ಪಟ್ಟಿದ್ದು, ಇದರಲ್ಲಿ ಎರಡು ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆಯಲ್ಲಿವೆ. ಈ ನಾಲ್ಕು ತಂಡಗಳಲ್ಲಿ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶಕ್ಕೆ ಹೆಚ್ಚಿನ ಅವಕಾಶಗಳಿವೆ ಎಂದು ಪರಿಗಣಿಸಲಾಗಿದೆ.

T20 World Cup 2024: ಟಿ20 ವಿಶ್ವಕಪ್​ನಲ್ಲೂ ಕಳಪೆ ಪ್ರದರ್ಶನ; ಮತ್ತೆ ಬಾಬರ್ ಆಝಂ ತಲೆದಂಡ?

ಸೂಪರ್ 8 ಸುತ್ತಿನಲ್ಲಿ ಭಾರತದ ಪಂದ್ಯಗಳ ವಿವರ

ಟಿ20 ವಿಶ್ವಕಪ್‌ನ ಸೂಪರ್-8 ಸುತ್ತಿನಲ್ಲಿ ಭಾರತ ತಂಡವು ತನ್ನ ಮೂರು ಪಂದ್ಯಗಳನ್ನು ಯಾವ ದಿನಾಂಕ ಮತ್ತು ಸ್ಥಳದಲ್ಲಿ ಆಡುತ್ತದೆ ಎಂಬುದನ್ನು ಈಗಾಗಲೇ ನಿರ್ಧರಿಸಲಾಗಿದೆ. ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಜೂನ್ 20 ರಂದು ಬಾರ್ಬಡೋಸ್‌ನಲ್ಲಿ ಆಡಲಿದೆ. ಇದಾದ ಬಳಿಕ ಎರಡನೇ ಪಂದ್ಯ ಜೂನ್ 22 ರಂದು ಆಂಟಿಗುವಾದಲ್ಲಿ ನಡೆಯಲಿದೆ. ಈ ಸುತ್ತಿನ ಮೂರನೇ ಮತ್ತು ಕೊನೆಯ ಪಂದ್ಯ ಜೂನ್ 24 ರಂದು ಸೇಂಟ್ ಲೂಸಿಯಾದಲ್ಲಿ ನಡೆಯಲ್ಲಿದೆ.

ಯಾವ ತಂಡಗಳನ್ನು ಎದುರಿಸಲಿದೆ?

ಟೀಂ ಇಂಡಿಯಾವಿರುವ ಗುಂಪು 1 ರಲ್ಲಿ ಈಗಾಗಲೇ ಎರಡು ತಂಡಗಳು ಸೂಪರ್ 8 ಸುತ್ತಿಗೆ ಅರ್ಹತೆ ಪಡೆದಿವೆ. ಮೂರನೇ ತಂಡ ಯಾವುದೆಂದು ಇನ್ನಷ್ಟೇ ನಿರ್ಧರಿಸಬೇಕಾಗಿದೆ. ಬಿ ಗುಂಪಿನಿಂದ ಆಸ್ಟ್ರೇಲಿಯಾ ಮತ್ತು ಸಿ ಗುಂಪಿನಿಂದ ಅಫ್ಘಾನಿಸ್ತಾನ ತಂಡ ಗುಂಪು-1 ರ ಭಾಗವಾಗಿವೆ. ಈಗ ನಾಲ್ಕನೇ ತಂಡ ಡಿ ಗುಂಪಿನಿಂದ ಆಯ್ಕೆಯಾಗಬೇಕಾಗಿದೆ. ಡಿ ಗುಂಪಿನಲ್ಲಿ ಯಾವ ತಂಡ ಎರಡನೇ ಸ್ಥಾನ ಪಡೆಯುತ್ತದೋ, ಆ ತಂಡವು ಗುಂಪು-1 ರ ಭಾಗವಾಗಲಿದೆ. ಶ್ರೀಲಂಕಾ ತಂಡ ಈಗಾಗಲೇ ಡಿ ಗುಂಪಿನಿಂದ ಹೊರಗುಳಿದಿದೆ. ಆದರೆ ದಕ್ಷಿಣ ಆಫ್ರಿಕಾ ತಂಡ ಸೂಪರ್-8 ಸುತ್ತಿನಲ್ಲಿ ಗುಂಪು-2 ಭಾಗವಾಗಿದೆ. ಇದರರ್ಥ ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್ ಮತ್ತು ನೇಪಾಳ, ಈ ಮೂರು ತಂಡಗಳಲ್ಲಿ ಒಂದು ತಂಡವು ಸೂಪರ್-8 ಸುತ್ತಿನಲ್ಲಿ ಗುಂಪು-1 ರಲ್ಲಿ ಸ್ಥಾನ ಪಡೆಯಲ್ಲಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ