AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

30 ಬೌಂಡರಿ, 38 ಸಿಕ್ಸರ್, 130 ಎಸೆತಗಳಲ್ಲಿ 401 ರನ್! ಕ್ರಿಕೆಟ್ ಮೈದಾನದಲ್ಲಿ ಸುನಾಮಿ ಎಬ್ಬಿಸಿದ 13 ವರ್ಷದ ಪೋರ

ಈ ಪಂದ್ಯದಲ್ಲಿ ಕೇವಲ 132 ಎಸೆತಗಳನ್ನು ಎದುರಿಸಿದ ತನ್ಮಯ್ 38 ಸಿಕ್ಸರ್‌ ಹಾಗೂ 30 ಬೌಂಡರಿಗಳ ಸಹಿತ ಬರೋಬ್ಬರಿ 401 ರನ್ ಬಾರಿಸಿದರು.

30 ಬೌಂಡರಿ, 38 ಸಿಕ್ಸರ್, 130 ಎಸೆತಗಳಲ್ಲಿ 401 ರನ್! ಕ್ರಿಕೆಟ್ ಮೈದಾನದಲ್ಲಿ ಸುನಾಮಿ ಎಬ್ಬಿಸಿದ 13 ವರ್ಷದ ಪೋರ
Tanmay Singh
TV9 Web
| Updated By: ಪೃಥ್ವಿಶಂಕರ|

Updated on:Dec 21, 2022 | 12:05 PM

Share

ಶಾಲಾ ಕ್ರಿಕೆಟ್ ಅಥವಾ ಕ್ಲಬ್ ಕ್ರಿಕೆಟ್‌ನಲ್ಲಿ ಐತಿಹಾಸಿಕ ಇನ್ನಿಂಗ್ಸ್‌ ಆಡಿ ಹೆಸರು ಗಳಿಸಿದ ಅನೇಕ ಕ್ರಿಕೆಟಿಗರು ಭಾರತದಲ್ಲಿದ್ದಾರೆ. ಇಂತಹವರಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ವಿನೋದ್ ಕಾಂಬ್ಳಿ, ಸರ್ಫರಾಜ್ ಖಾನ್, ಪೃಥ್ವಿ ಶಾ ಅವರಂತಹ ಟೀಂ ಇಂಡಿಯಾ ಆಟಗಾರರ ಹೆಸರುಗಳು ಸೇರಿವೆ. ಈ ಆಟಗಾರರು ಚಿಕ್ಕ ವಯಸ್ಸಿನಲ್ಲಿಯೇ ಐತಿಹಾಸಿಕ ಇನ್ನಿಂಗ್ಸ್‌ಗಳನ್ನು ಆಡುವ ಮೂಲಕ ಸುದ್ದಿ ಮಾಡಿದ್ದರು. ಇದೀಗ ಈ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಯಾಗಿದೆ. ತನ್ನ ಸ್ಫೋಟಕ ಬ್ಯಾಟಿಂಗ್​ ಮೂಲಕ ಕ್ರಿಕೆಟ್ ಮೈದಾನದಲ್ಲಿ ಸುನಾಮಿ ಎಬ್ಬಿಸಿದ ಈ ಆಟಗಾರನ ಹೆಸರು ತನ್ಮಯ್ ಸಿಂಗ್. ಕೇವಲ 13 ವರ್ಷ ವಯಸ್ಸಿನ ತನ್ಮಯ್, 14 ವರ್ಷದೊಳಗಿನವರ ಟೂರ್ನಿಯಲ್ಲಿ ದಾಖಲೆಯ ಇನ್ನಿಂಗ್ಸ್ ಆಡಿದ್ದಾರೆ.

ಗ್ರೇಟರ್ ನೋಯ್ಡಾದ ರಯಾನ್ ಇಂಟರ್ ನ್ಯಾಷನಲ್ ಸ್ಕೂಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ದೇವರಾಜ್ ಸ್ಪೋರ್ಟ್ಸ್ ಕ್ಲಬ್ ಹಾಗೂ ರಿಯಾನ್ ಇಂಟರ್ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ದೇವರಾಜ್ ಸ್ಪೋರ್ಟ್ಸ್ ಕ್ಲಬ್ ಪರ ಕಣಕ್ಕಿಳಿದಿದ್ದ ತನ್ಮಯ್ ಅದ್ಭುತ ಇನ್ನಿಂಗ್ಸ್ ಆಡಿದರು.

Sachin Tendulkar: ‘ಅಪ್ಪ ನೆನಪಾದ್ರು’; ಮಗನ ಚೊಚ್ಚಲ ಶತಕದ ಬಗ್ಗೆ ಕ್ರಿಕೆಟ್ ದೇವರು ಹೇಳಿದ್ದೇನು ಗೊತ್ತಾ?

400 ರನ್ ಚಚ್ಚಿದ ತನ್ಮಯ್

ಈ ಪಂದ್ಯದಲ್ಲಿ ಟಾಸ್ ಗೆದ್ದ ರಿಯಾನ್ ಇಂಟರ್‌ನ್ಯಾಶನಲ್ ತಂಡದ ನಾಯಕ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ದೇವರಾಜ್ ಸ್ಪೋರ್ಟ್ಸ್ ಕ್ಲಬ್ ಪರ ಬ್ಯಾಟಿಂಗ್​ ಮಾಡಿದ ತನ್ಮಯ್ ಸಿಂಗ್ ಬಿರುಸಿನ ಇನ್ನಿಂಗ್ಸ್ ಆಡಿದರು. ಈ ಪಂದ್ಯದಲ್ಲಿ ಕೇವಲ 132 ಎಸೆತಗಳನ್ನು ಎದುರಿಸಿದ ತನ್ಮಯ್ 38 ಸಿಕ್ಸರ್‌ ಹಾಗೂ 30 ಬೌಂಡರಿಗಳ ಸಹಿತ ಬರೋಬ್ಬರಿ 401 ರನ್ ಬಾರಿಸಿದರು. ಅದರಲ್ಲೂ ತನ್ಮಯ್ ಕೇವಲ ಸಿಕ್ಸರ್‌ಗಳೊಂದಿಗೆ 226 ರನ್ ಮತ್ತು ಕೇವಲ ಬೌಂಡರಿಗಳೊಂದಿಗೆ 120 ರನ್ ಗಳಿಸಿದರು. ಹಾಗೆಯೇ ತನ್ಮಯ್ ಅವರೊಂದಿಗೆ ರುದ್ರ ಬಿಧುರಿ ಎಂಬ ಮತ್ತೊಬ್ಬ ಯುವ ಆಟಗಾರ ಕೂಡ 15 ಸಿಕ್ಸರ್‌ ಮತ್ತು ಐದು ಬೌಂಡರಿ ಸಹಿತ ಅಜೇಯ 135 ರನ್ ಬಾರಿಸಿದರು.

ಇವರಿಬ್ಬರ ಅದ್ಭುತ ಬ್ಯಾಟಿಂಗ್ ನೆರವಿನಿಂದ ದೇವರಾಜ್ ಸ್ಪೋರ್ಟ್ಸ್ ಕ್ಲಬ್ ಮೊದಲು ಬ್ಯಾಟಿಂಗ್ ಮಾಡಿ 656 ರನ್​ಗಳ ಬೃಹತ್ ಸ್ಕೋರ್ ಗಳಿಸಿತು. ಈ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ರಿಯಾನ್ ಇಂಟರ್ ನ್ಯಾಷನಲ್ ಸ್ಕೂಲ್ ತಂಡ ಕೇವಲ 193 ರನ್​ಗಳಿಗೆ ಆಲೌಟ್ ಆಯಿತು. ಹೀಗಾಗಿ ಈ ಪಂದ್ಯದಲ್ಲಿ ದೇವರಾಜ್ ಶಾಲೆ 463 ರನ್‌ಗಳ ಭರ್ಜರಿ ಜಯ ಸಾಧಿಸಿತು.

ಸಚಿನ್-ಕಾಂಬ್ಳಿ ನೆನಪಿಸಿದ ಈ ಜೊತೆಯಾಟ

ವಾಸ್ತವವಾಗಿ ಇಡೀ ವಿಶ್ವ ಕ್ರಿಕೆಟನ್ನು ಆಳಿದ ಸಚಿನ್ ತೆಂಡೂಲ್ಕರ್ ತಮ್ಮ ಶಾಲಾ ದಿನಗಳಲ್ಲಿ ತಮ್ಮ ಸಹಪಾಠಿ ವಿನೋದ್ ಕಾಂಬ್ಳಿ ಅವರೊಂದಿಗೆ ಶಾಲಾ ಪಂದ್ಯಾವಳಿಯಲ್ಲಿ 646 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡಿದ್ದರು. ಶಾಲಾ ದಿನಗಳಲ್ಲಿ ಶಾರದಾಶ್ರಮ ವಿದ್ಯಾಮಂದಿರ ತಂಡದ ಪರ ಆಡಿದ್ದ ಸಚಿನ್ 326 ರನ್ ಹಾಗೂ ಕಾಂಬ್ಳಿ 349 ರನ್ ಬಾರಿಸಿದ್ದರು. ಅಲ್ಲದೆ ಇವರಿಬ್ಬರ ಜೊತೆಯಾಟ ದಾಖಲೆ ನಿರ್ಮಿಸಿತ್ತು. ಈ ಇಬ್ಬರ ಬಳಿಕ ದೇಶೀ ಕ್ರಿಕೆಟ್​ನಲ್ಲಿ ಶತಕಗಳ ಸರಮಾಲೆ ಕಟ್ಟಿರುವ ಸರ್ಫರಾಜ್ ಕೂಡ ತಮ್ಮ ಶಾಲಾ ಕ್ರಿಕೆಟ್​ನಲ್ಲಿ 439 ರನ್​ಗಳ ಇನ್ನಿಂಗ್ಸ್ ಆಡಿದ್ದರೆ, ಪೃಥ್ವಿ ಶಾ ಕೂಡ 546 ರನ್​ಗಳ ಇನ್ನಿಂಗ್ಸ್ ಆಡಿ ದಾಖಲೆ ನಿರ್ಮಿಸಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:03 pm, Wed, 21 December 22