Sachin Tendulkar: ‘ಅಪ್ಪ ನೆನಪಾದ್ರು’; ಮಗನ ಚೊಚ್ಚಲ ಶತಕದ ಬಗ್ಗೆ ಕ್ರಿಕೆಟ್ ದೇವರು ಹೇಳಿದ್ದೇನು ಗೊತ್ತಾ?

Sachin Tendulkar: ಶತಕದ ಹಿಂದಿನ ರಾತ್ರಿ ಅರ್ಜುನ್ ಜೊತೆ ಮಾತನಾಡಿದ್ದೆ. ಆ ರಾತ್ರಿ ಅರ್ಜುನ್‌ ಜತೆ ಮಾತನಾಡಿದಾಗ ಶತಕ ಬಾರಿಸಲು ಪ್ರಯತ್ನಿಸುವಂತೆ ಹೇಳಿದ್ದೆ ಎಂದು ಸಚಿನ್ ತೆಂಡೂಲ್ಕರ್ ಹೇಳಿಕೊಂಡಿದ್ದಾರೆ.

Sachin Tendulkar: ‘ಅಪ್ಪ ನೆನಪಾದ್ರು’; ಮಗನ ಚೊಚ್ಚಲ ಶತಕದ ಬಗ್ಗೆ ಕ್ರಿಕೆಟ್ ದೇವರು ಹೇಳಿದ್ದೇನು ಗೊತ್ತಾ?
ಮಗನೊಂದಿಗೆ ಸಚಿನ್ ತೆಂಡೂಲ್ಕರ್Image Credit source: Cricket Australia
Follow us
TV9 Web
| Updated By: ಪೃಥ್ವಿಶಂಕರ

Updated on:Dec 16, 2022 | 11:47 AM

ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ (Sachin Tendulkar) ಅವರಿಗೆ ಬುಧವಾರ ಅತ್ಯಂತ ವಿಶೇಷ ದಿನವಾಗಿತ್ತು. ಇದಕ್ಕೆ ಕಾರಣವೂ ಇದ್ದು, ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ರಣಜಿ ಪಂದ್ಯಾವಳಿಯಲ್ಲಿ (Ranji Trophy) ಗೋವಾ ಪರ ಚೊಚ್ಚಲ ಆವೃತ್ತಿಯನ್ನು ಆಡುತ್ತಿರುವ ಸಚಿನ್ ಮಗ ಅರ್ಜುನ್ ತೆಂಡೂಲ್ಕರ್ (Arjun Tendulkar) ಆಡಿದ ಮೊದಲ ಪಂದ್ಯದಲ್ಲಿಯೇ ಶತಕ ಸಿಡಿಸಿ ಮಿಂಚಿದರು. ಈ ಮೂಲಕ ರಣಜಿಯಲ್ಲಿ ಅಪ್ಪ ಮಾಡಿದ ದಾಖಲೆಯನ್ನು ಅರ್ಜುನ್ ಸರಿಗಟ್ಟಿದ್ದರು. ವಾಸ್ತವವಾಗಿ ಸಚಿನ್ ತೆಂಡೂಲ್ಕರ್ ಕೂಡ ತಮ್ಮ ಮೊದಲ ರಣಜಿ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದರು. ಅರ್ಜುನ್ ಶತಕದ ಬಳಿಕ ಹಲವು ಕ್ರಿಕೆಟ್​ ಪಂಡಿತರು ಅವರನ್ನು ಹಾಡಿ ಹೊಗಳಿದ್ದರು. ಇದೀಗ ಕಾರ್ಯಕ್ರಮವೊಂದರಲ್ಲಿ ಅರ್ಜುನ್‌ ಶತಕದ ಬಗ್ಗೆ ಮಾತನಾಡಿರುವ ಕ್ರಿಕೆಟ್ ದೇವರು, ಮಗನ ಆಟದಿಂದ ನನ್ನ ತಂದೆ ನೆನಪಾದರು ಎಂಬ ಹೇಳಿಕೆ ನೀಡಿದ್ದಾರೆ.

23 ವರ್ಷದ ಅರ್ಜುನ್ ತೆಂಡೂಲ್ಕರ್, ಕಳೆದ ಆವೃತ್ತಿಯವರೆಗೂ ಮುಂಬೈ ತಂಡದ ಪರ ಆಡುತ್ತಿದ್ದರು. ಇದರೆ ಮುಂಬೈ ತಂಡದಲ್ಲಿ ಆಡುವ ಅವಕಾಶ ಸಿಗಲಿಲ್ಲ. ಹೀಗಾಗಿ ಈ ವರ್ಷ ಮುಂಬೈ ಬಿಟ್ಟು ಗೋವಾ ಪರ ಆಡಲು ನಿರ್ಧರಿಸಿದ್ದರು. ಅದರಂತೆಯೇ ಬುಧವಾರದಿಂದ ಆರಂಭವಾದ ಗೋವಾ ಹಾಗೂ ರಾಜಸ್ಥಾನ ನಡುವಿನ ಪಂದ್ಯದಲ್ಲಿ ಅರ್ಜುನ್ 207 ಎಸೆತಗಳಲ್ಲಿ 16 ಬೌಂಡರಿ ಹಾಗೂ 2 ಸಿಕ್ಸರ್​ಗಳ ಸಹಿತ 120 ರನ್​ಗಳ ಇನ್ನಿಂಗ್ಸ್ ಆಡಿದರು. ಅಲ್ಲದೆ ಬೌಲಿಂಗ್​ನಲ್ಲೂ ಮಿಂಚಿನ ಪ್ರದರ್ಶನ ತೋರಿರುವ ಅರ್ಜುನ್ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಅಪ್ಪನಂತೆಯೇ ಚೊಚ್ಚಲ ರಣಜಿ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ ಅರ್ಜುನ್ ತೆಂಡೂಲ್ಕರ್..!

2. ತಂದೆಯನ್ನು ನೆನೆದ ಸಚಿನ್‌

ಈಗ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಸಚಿನ್ ಅವರ ಬಳಿ ಮಗ ಅರ್ಜುನ್ ಶತಕದ ಬಗ್ಗೆ ಕೇಳಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕ್ರಿಕೆಟ್ ದೇವರು, ತಮ್ಮ ವೃತ್ತಿಜೀವನದ ಆರಂಭಿಕ ದಿನಗಳ ಕಥೆಯನ್ನು ಇಲ್ಲಿ ಉಲ್ಲೇಖಿಸಿದ್ದಾರೆ. ‘‘ಕ್ರಿಕೆಟ್‌ನ ಆರಂಭದ ದಿನಗಳಲ್ಲಿ ಯಾರೋ ನನ್ನ ತಂದೆಯನ್ನು ಸಚಿನ್ ತಂದೆ ಎಂದು ಕರೆದದ್ದು ನನಗೆ ಇನ್ನೂ ನೆನಪಿದೆ. ಆಗ ನನ್ನ ತಂದೆಯ ಸ್ನೇಹಿತರೊಬ್ಬರು ನನ್ನ ತಂದೆಯ ಬಳಿ ಈಗ ನಿನಗೆ ಹೇಗನಿಸುತ್ತಿದೆ? ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ನನ್ನಪ್ಪ ಇದು ನನ್ನ ಜೀವನದ ಅತ್ಯಂತ ಹೆಮ್ಮೆಯ ಕ್ಷಣ ಎಂದಿದ್ದರು. ಅಲ್ಲದೆ, ಪ್ರತಿಯೊಬ್ಬ ತಂದೆಯು ತನ್ನ ಮಗುವಿನ ಕೆಲಸದಿಂದ ಗುರುತಿಸಲ್ಪಡಬೇಕೆಂದು ಬಯಸಿದ್ದರು ಎಂದಿದ್ದಾರೆ.

3. ಶತಕ ಬಾರಿಸುವಂತೆ ಸಲಹೆ ನೀಡಿದ್ದ ಸಚಿನ್

ಶತಕದ ಹಿಂದಿನ ರಾತ್ರಿ ಅರ್ಜುನ್ ಜೊತೆ ಮಾತನಾಡಿದ್ದೆ. ಆ ರಾತ್ರಿ ಅರ್ಜುನ್‌ ಜತೆ ಮಾತನಾಡಿದಾಗ ಶತಕ ಬಾರಿಸಲು ಪ್ರಯತ್ನಿಸುವಂತೆ ಹೇಳಿದ್ದೆ. ನಾನು ಮಾತನಾಡುವ ವೇಳೆಗಾಗಲೇ ಮೊದಲ ದಿನದಾಟ ಮುಕ್ತಾಯವಾಗಿತ್ತು. ಮೊದಲ ದಿನದಂತ್ಯಕ್ಕೆ ಅರ್ಜುನ್ ಅಜೇಯ 4 ರನ್ ಗಳಿಸಿದ್ದರು. ದಿನದಾಟದಂತ್ಯಕ್ಕೂ ಮುನ್ನ ವಿಕೆಟ್ ಉರುಳಿದರಿಂದ ಅರ್ಜುನ್​ನನ್ನು ರಾತ್ರಿ ಕಾವಲುಗಾರನಾಗಿ (ನೈಟ್ ವಾಚ್​ಮನ್) ಕಳುಹಿಸಲಾಗಿತ್ತು. ಈ ವೇಳೆ ಅರ್ಜುನ್, ಈ ಪಿಚ್‌ನಲ್ಲಿ ಉತ್ತಮ ಸ್ಕೋರ್ ಏನಾಗಬಹುದು ಎಂದು ನನ್ನ ಬಳಿ ಕೇಳಿದ್ದ. ಅದಕ್ಕೆ ನಾನು, ಕನಿಷ್ಠ 375 ರನ್ ತಲುಪಬೇಕು ಎಂದು ಹೇಳಿದೆ. ಆಗ ಗೋವಾ ಸ್ಕೋರ್ ತಂಡದ 5 ವಿಕೆಟ್​ಗೆ 210 ಆಗಿತ್ತು. ಇದೇ ವೇಳೆ ನೀನು ಶತಕ ಸಿಡಿಸಬೇಕು ಎಂದು ನಾನು ಅರ್ಜುನ್​ಗೆ ಹೇಳಿದ್ದೆ ಎಂದು ಸಚಿನ್ ಹೇಳಿಕೊಂಡಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:44 am, Fri, 16 December 22

ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ