AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ranji Trophy 2024: ಒಂದೇ ಪಂದ್ಯವಾಡಲು 2 ತಂಡಗಳಾಗಿ ಕಣಕ್ಕಿಳಿದ ಬಿಹಾರ..!

ಬಿಹಾರ ಕ್ರಿಕೆಟ್ ಸಂಸ್ಥೆಯಲ್ಲಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ನಡುವೆ ಎಲ್ಲವೂ ಸರಿಯಿಲ್ಲ. ಹೀಗಾಗಿ ಬಿಸಿಎ ಅಧ್ಯಕ್ಷ ರಾಕೇಶ್ ತಿವಾರಿ ಒಂದು ತಂಡವನ್ನು ಆಯ್ಕೆ ಮಾಡಿದರೆ, ಕಾರ್ಯದರ್ಶಿ ಅಮಿತ್ ಕುಮಾರ್ ಮತ್ತೊಂದು ತಂಡವನ್ನು ಆಯ್ಕೆ ಮಾಡಿದ್ದರು. ಇದರಿಂದಾಗಿ ಒಂದೇ ಪಂದ್ಯಕ್ಕಾಗಿ 2 ತಂಡಗಳು ಮೈದಾನಕ್ಕೆ ಆಗಮಿಸಿತು.

Ranji Trophy 2024: ಒಂದೇ ಪಂದ್ಯವಾಡಲು 2 ತಂಡಗಳಾಗಿ ಕಣಕ್ಕಿಳಿದ ಬಿಹಾರ..!
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jan 07, 2024 | 9:09 AM

Share

ರಣಜಿ ಟ್ರೋಫಿ (Ranji Trophy 2024) ಆರಂಭದಲ್ಲೇ ಬಿಹಾರ ಕ್ರಿಕೆಟ್​ ಬೋರ್ಡ್​ ಅವಾಂತರ ಸೃಷ್ಟಿಸಿಕೊಂಡಿದೆ. ಪಾಟ್ನಾದ ಮೊಯಿನುಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮುಂಬೈ ವಿರುದ್ಧದ ಪಂದ್ಯದಲ್ಲಿ ಬಿಹಾರದ ಎರಡು ತಂಡಗಳು ಕಣಕ್ಕಿಳಿಯಲು ಮುಂದಾಗಿದೆ. ಇದರಿಂದ ಕೆಲ ಕಾಲ ಮೈದಾನದಲ್ಲಿ ಗೊಂದಲ ಏರ್ಪಟ್ಟಿತ್ತು. ಪಂದ್ಯ ಆರಂಭಕ್ಕೂ ಮುನ್ನ ಬಿಹಾರದ ಎರಡು ತಂಡಗಳು ಸ್ಟೇಡಿಯಂಗೆ ತಲುಪಿದ್ದವು. ಬಿಹಾರ ಕ್ರಿಕೆಟ್ ಸಂಸ್ಥೆ (ಬಿಸಿಎ) ಅಧ್ಯಕ್ಷ ರಾಕೇಶ್ ತಿವಾರಿ ನೇತೃತ್ವದಲ್ಲಿ ಆಯ್ಕೆ ಮಾಡಲಾದ ತಂಡ ರಣಜಿ ಟೂರ್ನಿ ಆಡಲು ಬಂದರೆ, ಮತ್ತೊಂದೆಡೆ ಬಿಸಿಎ ಕಾರ್ಯದರ್ಶಿ ಅಮಿತ್ ಕುಮಾರ್ ಸಮಿತಿ ಆಯ್ಕೆ ಮಾಡಿದ ತಂಡ ಕೂಡ ಕಣಕ್ಕಿಳಿಯಲು ಸಜ್ಜಾಗಿತ್ತು.

ಒಂದೇ ರಾಜ್ಯದ ಎರಡು ತಂಡಗಳ ಆಗಮನದಿಂದಾಗಿ ಗೊಂದಲ ಸೃಷ್ಟಿಯಾಯಿತು. ಅಂತಿಮವಾಗಿ ಬಿಸಿಎ ಕಾರ್ಯದರ್ಶಿ ಅಮಿತ್ ಕುಮಾರ್ ಅವರು ಆಯ್ಕೆ ಮಾಡಿದ ತಂಡವನ್ನು ಅಮಾನತುಗೊಳಿಸಲಾಗಿದೆ. ಅಲ್ಲದೆ ಮುಂಬೈ ವಿರುದ್ಧ ರಾಕೇಶ್ ತಿವಾರಿ ನೇತೃತ್ವದಲ್ಲಿ ಆಯ್ಕೆ ಮಾಡಿದ ತಂಡವೇ ಕಣಕ್ಕಿಳಿದಿದೆ.

ಯಾಕಾಗಿ 2 ತಂಡಗಳು?

ಬಿಹಾರ ಕ್ರಿಕೆಟ್ ಸಂಸ್ಥೆಯಲ್ಲಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ನಡುವೆ ಎಲ್ಲವೂ ಸರಿಯಿಲ್ಲ. ಹೀಗಾಗಿ ಬಿಸಿಎ ಅಧ್ಯಕ್ಷ ರಾಕೇಶ್ ತಿವಾರಿ ಒಂದು ತಂಡವನ್ನು ಆಯ್ಕೆ ಮಾಡಿದರೆ, ಕಾರ್ಯದರ್ಶಿ ಅಮಿತ್ ಕುಮಾರ್ ಮತ್ತೊಂದು ತಂಡವನ್ನು ಆಯ್ಕೆ ಮಾಡಿದ್ದರು. ಇದರಿಂದಾಗಿ 2 ತಂಡಗಳು ಒಂದೇ ಪಂದ್ಯಕ್ಕಾಗಿ ಮೈದಾನಕ್ಕೆ ಆಗಮಿಸಿದ್ದರು.

ಈ ಬಗ್ಗೆ ಮಾತನಾಡಿದ ರಾಕೇಶ್ ತಿವಾರಿ ‘ನಾವು ಪ್ರತಿಭೆಯನ್ನು ಆಧರಿಸಿ ತಂಡವನ್ನು ಆಯ್ಕೆ ಮಾಡಿದ್ದೇವೆ. ಇದು ಸರಿಯಾದ ತಂಡ. ಬಿಹಾರದಿಂದ ಬರುವ ಪ್ರತಿಭೆಗಳನ್ನು ನೀವು ನೋಡುತ್ತೀರಿ. ನಮ್ಮಲ್ಲಿ ಒಬ್ಬ ಕ್ರಿಕೆಟಿಗ (ಸಾಕಿಬ್ ಹುಸೇನ್) ಐಪಿಎಲ್‌ನಲ್ಲಿ ಆಯ್ಕೆಯಾಗಿದ್ದಾರೆ.

ಆದರೆ ಬಿಹಾರ ಕ್ರಿಕೆಟ್ ಸಂಸ್ಥೆಯಿಂದ ಅಮಾನತುಗೊಂಡ ಕಾರ್ಯದರ್ಶಿ ಮತ್ತೊಂದು ತಂಡವನ್ನು ಆಯ್ಕೆ ಮಾಡಿದ್ದಾರೆ. ಹಾಗಾಗಿ ಇದು ರಾಜ್ಯದ ತಂಡವಲ್ಲ ಎಂದು ತಿಳಿಸಿದ್ದಾರೆ.

ಬಿಸಿಎ ಅಧ್ಯಕ್ಷರು ಈ ಗೊಂದಲಕ್ಕೆ 2013ರ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಅರ್ಜಿದಾರ ಆದಿತ್ಯ ವರ್ಮಾ ಅವರನ್ನು ದೂಷಿಸಿದ್ದಾರೆ. ಬಿಹಾರದ ಹೆಸರು ಕೆಡಿಸುವ ಕೆಲಸ ಅವರದು ಎಂದರು. ಮಗ ಆಯ್ಕೆಯಾಗದ ಕಾರಣ ಗಲಾಟೆ ಸೃಷ್ಟಿಸುತ್ತಿದ್ದಾರೆ. ಅವರು ನಮ್ಮ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಾವು ಅವರ ಮಾತನ್ನು ಕೇಳುವುದಿಲ್ಲ. ಏಕೆಂದರೆ ನಾವು ಅರ್ಹತೆಯ ಆಧಾರದ ಮೇಲೆ ತಂಡಗಳನ್ನು ಆಯ್ಕೆ ಮಾಡುತ್ತಿದ್ದೇವೆ ಎಂದು ಬಿಸಿಎ ಅಧ್ಯಕ್ಷರು ತಿಳಿಸಿದ್ದಾರೆ.

ಕಾರ್ಯದರ್ಶಿ ಹೇಳಿದ್ದೇನು?

ಬಿಸಿಎ ಕಾರ್ಯದರ್ಶಿ ಅಮಿತ್ ತಿವಾರಿ ಮಾತನಾಡಿ, ‘ಮೊದಲು ನಾನು ಚುನಾವಣೆಯಲ್ಲಿ ಗೆದ್ದೆ. ನಾನು BCA ಯ ಅಧಿಕೃತ ಕಾರ್ಯದರ್ಶಿ. ನೀವು ಕಾರ್ಯದರ್ಶಿಯನ್ನು ಅಮಾನತುಗೊಳಿಸಲಾಗುವುದಿಲ್ಲ. ಎರಡನೆಯದಾಗಿ, ಅಧ್ಯಕ್ಷರು ತಂಡವನ್ನು ಹೇಗೆ ಆಯ್ಕೆ ಮಾಡುತ್ತಾರೆ? ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ತಂಡವನ್ನು ಘೋಷಿಸುವುದನ್ನು ನೀವು ಎಂದಾದರೂ ನೋಡಿದ್ದೀರಾ?.

ಇದನ್ನೂ ಓದಿ: 147 ವರ್ಷಗಳ ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ಕಳಪೆ ದಾಖಲೆ ಬರೆದ ಟೀಮ್ ಇಂಡಿಯಾ

ಕಾರ್ಯದರ್ಶಿ ಜಯ್ ಶಾ ಅವರ ಸಹಿಯನ್ನು ನೀವು ಯಾವಾಗಲೂ ನೋಡುತ್ತೀರಿ. ಹಾಗಾಗಿ ಕಾರ್ಯದರ್ಶಿ ಆಯ್ಕೆ ಮಾಡಿದ ತಂಡವೇ ಮಾನ್ಯವಾಗಿರುತ್ತದೆ. ಆದರೆ ಕಾರ್ಯದರ್ಶಿ ಅಧಿಕಾರ ಹೊಂದಿರದ ಏಕೈಕ ಸಂಸ್ಥೆ ಬಿಸಿಎ ಎಂದು ಅಮಿತ್ ತಿವಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಬಿಸಿಎ ಅಧ್ಯಕ್ಷ ಹಾಗೂ ಕಾರ್ಯದರ್ಶಿ ನಡುವಣ ಒಣಪ್ರತಿಷ್ಠೆಯಿಂದ ಬಿಹಾರ ಯುವ ಆಟಗಾರರು ಗೊಂದಲಕ್ಕೀಡಾಗಿದ್ದಾರೆ.