AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Team India: ಟೀಮ್ ಇಂಡಿಯಾಗೆ 2 ತಿಂಗಳ ಬ್ರೇಕ್: ಮುಂದಿನ ಸರಣಿ ಯಾರ ವಿರುದ್ಧ?

Team India: ಕ್ಟೋಬರ್​ನಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಶುರುವಾಗಲಿದ್ದು, ಅಕ್ಟೋಬರ್ 23 ರಂದು ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ವಿರುದ್ದ ಸೆಣಸಲಿದೆ.

Team India: ಟೀಮ್ ಇಂಡಿಯಾಗೆ 2 ತಿಂಗಳ ಬ್ರೇಕ್: ಮುಂದಿನ ಸರಣಿ ಯಾರ ವಿರುದ್ಧ?
Team India
TV9 Web
| Updated By: ಝಾಹಿರ್ ಯೂಸುಫ್|

Updated on:Mar 16, 2022 | 4:24 PM

Share

2021 ರ ಇಂಗ್ಲೆಂಡ್ ವಿರುದ್ದದ ಸರಣಿಯಿಂದ ಶುರುವಾದ ಟೀಮ್ ಇಂಡಿಯಾದ (Team India) ಸತತ ಕ್ರಿಕೆಟ್ ಆಟಕ್ಕೆ ಇದೀಗ ಬ್ರೇಕ್ ಬಿದ್ದಿದೆ. ಇಂಗ್ಲೆಂಡ್ ಸರಣಿ ಬೆನ್ನಲ್ಲೇ ಐಪಿಎಲ್ 2021, ಇದರ ಬಳಿಕ ಟಿ20 ವಿಶ್ವಕಪ್, ಚುಟುಕು ಕ್ರಿಕೆಟ್​ ಕದನದಲ್ಲಿನ ಸೋಲಿನ ಬಳಿಕ ನ್ಯೂಜಿಲೆಂಡ್ ವಿರುದ್ದದ ಸರಣಿ. ಆ ಬಳಿಕ ದಕ್ಷಿಣ ಆಫ್ರಿಕಾ ಪ್ರವಾಸ. ದಕ್ಷಿಣ ಆಫ್ರಿಕಾದಲ್ಲಿ ಸರಣಿ ಸೋಲಿನ ಬೆನ್ನಲ್ಲೇ ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ದ ಸರಣಿ…ಹೀಗೆ ಕಳೆದ ಐದಾರು ತಿಂಗಳಿಂದ ಟೀಮ್ ಇಂಡಿಯಾ ಸತತ ಕ್ರಿಕೆಟ್ ಆಡುತ್ತಿದೆ. ಇದೀಗ ಐಪಿಎಲ್ 2022 (IPL 2022) ರ ಕಾರಣ ಟೀಮ್ ಇಂಡಿಯಾ ಆಟಗಾರರಿಗೆ ವಿಶ್ರಾಂತಿ ಸಿಕ್ಕಿದೆ. ವಿಶ್ರಾಂತಿಗಿಂತ ಐಪಿಎಲ್​ ಆಡಲು ಸಜ್ಜಾಗಿದ್ದಾರೆ ಎನ್ನಬಹುದು.

ಮಾರ್ಚ್ 26 ರಿಂದ ಟೀಮ್ ಇಂಡಿಯಾದಲ್ಲಿರುವ ಪ್ರಮುಖ ಆಟಗಾರರು ಪರಸ್ಪರ ಬೇರೆ ಬೇರೆ ತಂಡಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗೆಲುವಿಗಾಗಿ ಪಣ ತೊಡಲಿದ್ದಾರೆ. ಈ ಬಾರಿ 10 ತಂಡಗಳಿರುವ ಕಾರಣ ಹೋರಾಟ ಮತ್ತಷ್ಟು ರೋಚಕತೆಯಿಂದ ಕೂಡಿರಲಿದೆ. ಅದರಂತೆ ಲೀಗ್ ಹಂತದ 70 ಪಂದ್ಯಗಳನ್ನು ಆಡಲು ಎಲ್ಲಾ ಆಟಗಾರರು ಸಜ್ಜಾಗಿದ್ದಾರೆ. ಈ ಬಾರಿ ಲೀಗ್ ಹಂತದ ಪಂದ್ಯಗಳು 4 ಸ್ಟೇಡಿಯಂಗಳಲ್ಲಿ ನಡೆಯಲಿದೆ. ಅದರಂತೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿನ 20 ಪಂದ್ಯಗಳು, ಬ್ರಬೋರ್ನ್ ಸ್ಟೇಡಿಯಂ (CCI)ನಲ್ಲಿನ 15 ಪಂದ್ಯಗಳು, ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ 20 ಪಂದ್ಯಗಳು ಹಾಗೂ ಪುಣೆಯ ಎಂಸಿಎ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿನ 15 ಪಂದ್ಯಗಳು ನಡೆಯಲಿದೆ. ಇದಾದ ಬಳಿಕ ಪ್ಲೇ ಆಫ್ ಪಂದ್ಯಗಳು ಜರುಗಲಿದೆ. ಇನ್ನು ಫೈನಲ್ ಪಂದ್ಯವು ಮೇ 29 ರಂದು ನಡೆಯಲಿದ್ದು, ಇದರೊಂದಿಗೆ ಐಪಿಎಲ್ ಕದನಕ್ಕೆ ತೆರೆ ಬೀಳಲಿದೆ.

ಇದಾದ ಬಳಿಕ ಟೀಮ್ ಇಂಡಿಯಾ ಮತ್ತೆ ಬ್ಯಾಕ್ ಟು ಬ್ಯಾಕ್ ಸರಣಿ ಆಡಲಿದೆ. ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಆಟಗಾರರು ಸೌತ್ ಆಫ್ರಿಕಾ ವಿರುದ್ದದ ಸರಣಿಗೆ ಸಜ್ಜಾಗಲಿದ್ದಾರೆ. ಜೂನ್ 9 ರಿಂದ ಶುರುವಾಗಲಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾ 5 ಟಿ20 ಪಂದ್ಯಗಳನ್ನು ಆಡಲಿದೆ. ಇದಾದ ಬಳಿಕ ಜೂನ್ 26 ರಿಂದ ಐರ್ಲೆಂಡ್ ವಿರುದ್ದ 2 ಪಂದ್ಯಗಳ ಟಿ20 ಸರಣಿ ಆಡಲಿದೆ.

ಇನ್ನು ಜುಲೈ ತಿಂಗಳಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ದ ಸರಣಿ ಆಡಲು ತೆರಳಿದ್ದು, ಈ ಸರಣಿಯಲ್ಲಿ 3 ಟಿ20 ಹಾಗೂ 3 ಏಕದಿನ ಪಂದ್ಯಗಳನ್ನು ಆಡಲಿದೆ. ಇನ್ನು ಈ ಬಾರಿ ಏಷ್ಯಾ ಕಪ್ ಕೂಡ ಜರುಗುವ ಸಾಧ್ಯತೆಯಿದೆ. ಇದಾದ ಬಳಿಕ ಅಕ್ಟೋಬರ್​ನಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಶುರುವಾಗಲಿದ್ದು, ಅಕ್ಟೋಬರ್ 23 ರಂದು ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ವಿರುದ್ದ ಸೆಣಸಲಿದೆ. ಇನ್ನು ಈ ವಿಶ್ವಕಪ್ ಮುಗಿಯುವುದು ನವೆಂಬರ್​ನಲ್ಲಿ, ಅಂದರೆ ನವೆಂಬರ್​ವರೆಗೂ ಟೀಮ್ ಇಂಡಿಯಾ ಸತತ ಸರಣಿ ಆಡಲಿರುವುದು ಖಚಿತವಾಗಿದೆ.

ಇದನ್ನೂ ಓದಿ: PSL vs IPL Prize Money: ಪಾಕಿಸ್ತಾನ್ ಸೂಪರ್ ಲೀಗ್ ಗೆದ್ರೆ ಸಿಗುವ ಪ್ರಶಸ್ತಿ ಮೊತ್ತವೆಷ್ಟು ಗೊತ್ತಾ?

ಇದನ್ನೂ ಓದಿ: IPL 2022: ಐಪಿಎಲ್​ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: IPL ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಆರೋನ್ ಫಿಂಚ್

Published On - 4:23 pm, Wed, 16 March 22