ಐಪಿಎಲ್ ಕಳ್ಳಾಟಕ್ಕೆ 8 ವರ್ಷ; 2 ವರ್ಷ ನಿಷೇಧ.. ರಾಜಸ್ಥಾನ, ಚೆನ್ನೈ ಫ್ರಾಂಚೈಸ್ ಜಗತ್ತಿನೆದುರು ಅವಮಾನದಿಂದ ತಲೆ ತಗ್ಗಿಸಿದ್ದವು

ಈ ಪ್ರಕರಣದಿಂದಾಗಿ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎರಡು ವರ್ಷಗಳ ಕಾಲ ಐಪಿಎಲ್ ನಿಂದ ನಿಷೇಧಿಸಲಾಯಿತು.

1/8
IPL Trophy
ಪ್ರಾತಿನಿಧಿಕ ಚಿತ್ರ
2/8
ಲೀಗ್‌ನ ಆರನೇ ಆವೃತ್ತಿಯ ಹಂತಿಮ ಹಂತದಲ್ಲಿ ಫಿಕ್ಸಿಂಗ್ ಬಾಂಬ್ ಸ್ಫೋಟಿಸಿತು. ರಾಜಸ್ಥಾನ್ ರಾಯಲ್ಸ್ ತಂಡದ ಮೂವರು ಆಟಗಾರರು - ಎಸ್.ಕೆ. ಶ್ರೀಶಾಂತ್, ಅಂಕಿತ್ ಚವಾಣ್ ಮತ್ತು ಅಜಿತ್ ಚಂಡಿಲಾ ಇದರಲ್ಲಿ ಸಿಕ್ಕಿಬಿದ್ದಿದ್ದು, ಬುಕ್ಕಿಗಳೊಂದಿಗೆ ಸಂಪರ್ಕ ಹೊಂದಿದ ಆರೋಪದ ಮೇಲೆ ದೆಹಲಿ ಪೊಲೀಸರು ಈ ಮೂವರನ್ನು ಬಂಧಿಸಿದ್ದರು.
3/8
ಇದಲ್ಲದೆ ಚೆನ್ನೈ ಸೂಪರ್ ಕಿಂಗ್ಸ್‌ನ ತಂಡದ ಮುಖ್ಯಸ್ಥ ಮತ್ತು ಅಂದಿನ ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರ ಅಳಿಯ ಗುರುನಾಥ್ ಮರಿಯಪ್ಪನ್ ಅವರನ್ನೂ ಈ ಆರೋಪದಡಿ ಬಂಧಿಸಲಾಯಿತು.
4/8
ಶ್ರೀನಿವಾಸನ್ ಅವರು ತಮ್ಮ ಹುದ್ದೆಯನ್ನು ತೊರೆಯುವಂತೆ ಒತ್ತಡ ಹೇರಿದರು ಸಹ ಅವರು ತಮ್ಮ ಹುದ್ದೆಯಿಂದ ಕೆಳಗಿಳಿಯಲಿಲ್ಲ. ಮಂಡಳಿಯ ಕಾರ್ಯದರ್ಶಿ, ಖಜಾಂಚಿ ಮತ್ತು ಐಪಿಎಲ್ ಅಧ್ಯಕ್ಷರು ರಾಜೀನಾಮೆ ನೀಡಿದರು. ಇದರ ನಂತರ, ಶ್ರೀನಿವಾಸನ್ ತಾತ್ಕಾಲಿಕವಾಗಿ ಐಪಿಎಲ್​ನಿಂದ ದೂರವಾದರು.
5/8
ಈ ವಿಷಯದಲ್ಲಿ ಮಂಡಳಿಯು ತನಿಖಾ ಸಮಿತಿಯನ್ನು ರಚಿಸಿತ್ತು, ಆದರೆ ತನಿಖೆ ಪ್ರಾರಂಭವಾಗುವ ಮೊದಲು ರಾಜಸ್ಥಾನ್ ರಾಯಲ್ಸ್ ಮಾಲೀಕ ರಾಜ್ ಕುಂದ್ರಾ ಐಪಿಎಲ್ ಪಂದ್ಯಗಳಲ್ಲಿ ಬೆಟ್ಟಿಂಗ್ ಮಾಡುವುದನ್ನು ಒಪ್ಪಿಕೊಂಡಿದ್ದಾರೆ ಎಂದು ದೆಹಲಿ ಪೊಲೀಸರು ಬಹಿರಂಗಪಡಿಸಿದ್ದರು.
6/8
ಈ ಪ್ರಕರಣದಿಂದಾಗಿ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎರಡು ವರ್ಷಗಳ ಕಾಲ ಐಪಿಎಲ್ ನಿಂದ ನಿಷೇಧಿಸಲಾಯಿತು. ನಂತರ 2018 ರಲ್ಲಿ ಈ ಎರಡು ತಂಡಗಳು ಲೀಗ್‌ಗೆ ಮರಳಿದವು. 2013 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕರಾಗಿ ಮಹೇಂದ್ರ ಸಿಂಗ್ ಧೋನಿ. ಹಾಗೂ ಅದೇ ಸಮಯದಲ್ಲಿ, ರಾಹುಲ್ ದ್ರಾವಿಡ್ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿದ್ದರು.
7/8
ಅದೇ ಸಮಯದಲ್ಲಿ, ಸಿಕ್ಕಿಬಿದ್ದ ಮೂವರು ಆಟಗಾರರ ವೃತ್ತಿಜೀವನ ಹಾಳಾಯಿತು. ಅವರನ್ನು ಬಿಸಿಸಿಐ ನಿಷೇಧಿಸಿತು. ಆದಾಗ್ಯೂ, ಶ್ರೀಶಾಂತ್ ಅವರು ವಿಧಿಸಿದ ನಿಷೇಧದ ವಿರುದ್ಧ ಸುದೀರ್ಘ ಹೋರಾಟ ನಡೆಸಿದರು ಮತ್ತು ಅವರು ಕ್ರಿಕೆಟ್‌ಗೆ ಪುನರಾಗಮನ ಮಾಡುವಲ್ಲಿ ಯಶಸ್ವಿಯಾದರು. ವಿಜಯ್ ಹಜಾರೆ ಟ್ರೋಫಿ -2021 ರಲ್ಲಿ ಕೇರಳ ಪರ ಆಡಿದ್ದರು.
8/8
ಉಳಿದ ಇಬ್ಬರು ಆಟಗಾರರಾದ ಅಂಕಿತ್ ಚವಾಣ್ ಮತ್ತು ಅಜಿತ್ ಚಂದೇಲಾ ಅವರ ವೃತ್ತಿಜೀವನ ಈ ಪ್ರಕರಣದ ನಂತರ ಕೊನೆಗೊಂಡಿತು. ದೆಹಲಿ ನ್ಯಾಯಾಲಯ ಅವರಿಬ್ಬರಿಗೂ ಕ್ಲೀನ್ ಚಿಟ್ ನೀಡಿತ್ತು, ಆದರೆ ಬಿಸಿಸಿಐ ಅವರ ಮೇಲೆ ವಿಧಿಸಿದ್ದ ನಿಷೇಧವನ್ನು ತೆಗೆದುಹಾಕಲಿಲ್ಲ.