T20 World Cup 2026: ಟೀಂ ಇಂಡಿಯಾವನ್ನು ಬಿಟ್ಟು ಇತರ ತಂಡಗಳಲ್ಲಿ 40 ಭಾರತೀಯ ಮೂಲದ ಕ್ರಿಕೆಟಿಗರು

T20 World Cup 2026: 2026ರ ಟಿ20 ವಿಶ್ವಕಪ್ ಫೆಬ್ರವರಿ 7 ರಿಂದ ಮಾರ್ಚ್ 8 ರವರೆಗೆ ನಡೆಯಲಿದ್ದು, 20 ತಂಡಗಳು ಕಪ್‌ಗಾಗಿ ಸೆಣಸಲಿವೆ. ಈ ಮಹತ್ವದ ಪಂದ್ಯಾವಳಿಯಲ್ಲಿ 40ಕ್ಕೂ ಹೆಚ್ಚು ಭಾರತೀಯ ಮೂಲದ ಕ್ರಿಕೆಟಿಗರು ವಿವಿಧ ದೇಶಗಳ ಪರ ಆಡುತ್ತಿರುವುದು ವಿಶೇಷ. ಅಮೆರಿಕ, ಕೆನಡಾ, ಯುಎಇ ಮತ್ತು ಓಮನ್ ತಂಡಗಳಲ್ಲಿ ಇವರ ಸಂಖ್ಯೆ ಹೆಚ್ಚಿದ್ದು, ತವರು ನೆಲದಲ್ಲಿ ಅವಕಾಶ ವಂಚಿತರಾದ ಪ್ರತಿಭೆಗಳಿಗೆ ಇದೊಂದು ಜಾಗತಿಕ ವೇದಿಕೆಯಾಗಿದೆ.

T20 World Cup 2026: ಟೀಂ ಇಂಡಿಯಾವನ್ನು ಬಿಟ್ಟು ಇತರ ತಂಡಗಳಲ್ಲಿ 40 ಭಾರತೀಯ ಮೂಲದ ಕ್ರಿಕೆಟಿಗರು
T20 World Cup

Updated on: Feb 03, 2026 | 9:59 PM

2026 ರ ಟಿ20 ವಿಶ್ವಕಪ್ ( T20 World Cup 2026) ಫೆಬ್ರವರಿ 7 ರಿಂದ ಪ್ರಾರಂಭವಾಗಲಿದೆ. ಈ ಪಂದ್ಯಾವಳಿಯಲ್ಲಿ 20 ತಂಡಗಳು ಏಕೈಕ ಟ್ರೋಫಿಗಾಗಿ ಸೆಣಸಾಡಲಿವೆ. ಈ ಆವೃತ್ತಿಯಲ್ಲಿ 55 ಪಂದ್ಯಗಳು ನಡೆಯಲಿದ್ದು, ಮಾರ್ಚ್​ 8 ರಂದು ನಡೆಯಲಿರುವ ಫೈನಲ್ ಪಂದ್ಯದೊಂದಿಗೆ ಅಂತ್ಯಗೊಳಲಿದೆ. ಈ ಬಾರಿಯ ಟಿ20 ವಿಶ್ವಕಪ್​ನ ವಿಶೇಷತೆ ಏನೆಂದರೆ, ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ವಿವಿದ ತಂಡಗಳಲ್ಲಿ ಬರೋಬ್ಬರಿ 40 ಭಾರತೀಯ ಮೂಲದ ಕ್ರಿಕೆಟಿಗರು ಸೇರಿದ್ದಾರೆ.

ಅದರಲ್ಲೂ ಅಮೆರಿಕ, ಕೆನಡಾ, ಯುಎಇ ಮತ್ತು ಓಮನ್ ತಂಡಗಳಲ್ಲಿ ಭಾರತೀಯ ಮೂಲದ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೆನಡಾ ತಂಡದಲ್ಲಿ 11 ಭಾರತೀಯರು, ಯುಎಸ್ಎ ತಂಡದಲ್ಲಿ 9 ಆಟಗಾರರು ಮತ್ತು ಓಮನ್ ಮತ್ತು ಯುಎಇ ತಂಡಗಳಲ್ಲಿ ತಲಾ ಏಳು ಆಟಗಾರರು ಸೇರಿದ್ದಾರೆ. ಅಂದರೆ, ಈ ನಾಲ್ಕು ದೇಶಗಳ ತಂಡಗಳಲ್ಲಿ ಬರೋಬ್ಬರಿ 34 ಭಾರತೀಯರಿದ್ದಾರೆ. ಇತರ ದೇಶಗಳ ತಂಡಗಳನ್ನು ಸೇರಿಸಿದರೆ, ಈ ಸಂಖ್ಯೆ 40 ದಾಟುತ್ತದೆ.

ಕೆನಡಾ: ದಿಲ್‌ಪ್ರೀತ್ ಬಾಜ್ವಾ (ನಾಯಕ), ಅಜಯ್‌ವೀರ್ ಹುಂಡಾಲ್, ಅಂಶ್ ಪಟೇಲ್, ಹರ್ಷ್ ಠಾಕರ್, ಜಸ್ಕರನ್‌ದೀಪ್ ಬಟ್ಟರ್, ಕನ್ವರ್‌ಪಾಲ್ ತತ್ಗುರ್, ನವನೀತ್ ಧಲಿವಾಲ್, ರವೀಂದರ್‌ಪಾಲ್ ಸಿಂಗ್, ಶಿವಂ ಶರ್ಮಾ, ಶ್ರೇಯಸ್ ಮೊವ್ವಾ ಮತ್ತು ಯುವರಾಜ್ ಸಮ್ರಾ.

ಅಮೆರಿಕ: ಮೋನಾಂಕ್ ಪಟೇಲ್ (ನಾಯಕ), ಜೆಸ್ಸಿ ಸಿಂಗ್, ಮಿಲಿಂದ್ ಕುಮಾರ್, ನೋಸ್ತುಷ್ ಕೆಂಜಿಗೆ, ಸೈತೀಜಾ ಮುಕ್ಕಮಲ, ಸಂಜಯ್ ಕೃಷ್ಣಮೂರ್ತಿ, ಹರ್ಮೀತ್ ಸಿಂಗ್, ಸೌರಭ್ ನೇತ್ರವಲ್ಕರ್, ಶುಭಂ ರಂಜನೆ.

ಓಮನ್; ಜತಿಂದರ್ ಸಿಂಗ್ (ನಾಯಕ), ವಿನಾಯಕ್ ಶುಕ್ಲಾ, ಕರಣ್ ಸೋನಾವಾಲೆ, ಜೇ ಒಡೆದರ, ಆಶಿಶ್ ಒಡೆದರ, ವಾಸಿಂ ಅಲಿ, ಜಿತೇನ್ ರಾಮನಂದಿ.

ಯುನೈಟೆಡ್ ಅರಬ್ ಎಮಿರೇಟ್ಸ್‌: ಅಲಿಶನ್ ಶರಾಫು, ಆರ್ಯನ್ಶ್ ಶರ್ಮಾ, ಧ್ರುವ್ ಪರಾಶರ್, ಹರ್ಷಿತ್ ಕೌಶಿಕ್, ಮಾಯಾಂಕ್ ಕುಮಾರ್, ಸಿಮ್ರಂಜಿತ್ ಸಿಂಗ್, ಸೊಹೈಬ್ ಖಾನ್.

ನ್ಯೂಜಿಲೆಂಡ್: ಇಶ್ ಸೋಧಿ, ರಚಿನ್ ರವೀಂದ್ರ

ದಕ್ಷಿಣ ಆಫ್ರಿಕಾ: ಕೇಶವ್ ಮಹಾರಾಜ್

ವೆಸ್ಟ್ ಇಂಡೀಸ್: ಗುಡಕೇಶ್ ಮೋತಿ

ಇಟಲಿ: ಜಸ್ಪ್ರೀತ್ ಸಿಂಗ್

ನೆದರ್ಲ್ಯಾಂಡ್ಸ್: ಆರ್ಯನ್ ದತ್

ಟಿ20 ವಿಶ್ವಕಪ್ ಹೀಗಿರಲಿದೆ

ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಒಟ್ಟು 20 ತಂಡಗಳು ಭಾಗವಹಿಸುತ್ತಿವೆ. ಇವುಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲಿ ಐದು ತಂಡಗಳು ಇರುತ್ತವೆ. ಲೀಗ್ ಹಂತದ ನಂತರ, ಅಗ್ರ-8 ತಂಡಗಳು ಸೂಪರ್-8 ಹಂತಕ್ಕೆ ಮುನ್ನಡೆಯುತ್ತವೆ. ಅಲ್ಲಿಂದ ಸೆಮಿಫೈನಲ್ ನಡೆಯಲಿದ್ದು, ನಂತರ ಮಾರ್ಚ್ 8 ರಂದು ಗ್ರ್ಯಾಂಡ್ ಫೈನಲ್ ನಡೆಯಲಿದೆ. ಈ ಟೂರ್ನಿಯಲ್ಲಿ ಬಾಂಗ್ಲಾದೇಶದ ಬದಲು ಐಸಿಸಿ ಸ್ಕಾಟ್ಲೆಂಡ್‌ಗೆ ಅವಕಾಶ ನೀಡಿದೆ. ಮತ್ತೊಂದೆಡೆ, ಫೆಬ್ರವರಿ 15 ರಂದು ನಡೆಯಲಿರುವ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ಪಾಕಿಸ್ತಾನದ ಯೋಜನೆ ಈಗ ಬಿಸಿ ವಿಷಯವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:57 pm, Tue, 3 February 26