49 ಎಸೆತ, 15 ಸಿಕ್ಸರ್, 137 ರನ್! ಟಿ20 ಕ್ರಿಕೆಟ್​ನಲ್ಲಿ ಅಬ್ಬರಿಸಿದ 36 ವರ್ಷದ ಆಲ್​ರೌಂಡರ್

| Updated By: ಪೃಥ್ವಿಶಂಕರ

Updated on: Jun 06, 2022 | 5:40 PM

T20 cricket: ಸುಮಾರು 280 ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ ಜೀಶನ್ 49 ಎಸೆತಗಳಲ್ಲಿ 137 ರನ್​ಗಳ ಮಿಂಚಿನ ಇನ್ನಿಂಗ್ಸ್ ಆಡಿದರು. ಈ ವೇಳೆ ಅವರು 15 ಸಿಕ್ಸರ್ ಮತ್ತು 7 ಬೌಂಡರಿಗಳನ್ನು ಬಾರಿಸಿದರು.

49 ಎಸೆತ, 15 ಸಿಕ್ಸರ್, 137 ರನ್! ಟಿ20 ಕ್ರಿಕೆಟ್​ನಲ್ಲಿ ಅಬ್ಬರಿಸಿದ 36 ವರ್ಷದ ಆಲ್​ರೌಂಡರ್
ಜೀಶನ್ ಕುಕಿಖೇಲ್
Follow us on

ಟಿ20 ಕ್ರಿಕೆಟ್ (T20 cricket) ಕೇವಲ ಯುವ ಆಟಗಾರರಿಗೆ ಮಾತ್ರ ಎಂದು ಹೇಳಲಾಗುತ್ತದೆ. ಆದರೆ, ಇತ್ತೀಚೆಗಷ್ಟೇ 36ರ ಹರೆಯದ ಬ್ಯಾಟ್ಸ್​ಮನ್ ಮೈದಾನದಲ್ಲಿ ಬಿರುಗಾಳಿ ಎಬ್ಬಿಸಿ ಯುವಕರಷ್ಟೇ ಅಲ್ಲ ಹಿರಿಯರೂ ಧೂಳೆಬ್ಬಿಸುತ್ತಿದ್ದಾರೆ ಎಂಬುದನ್ನು ಸಾಭೀತುಪಡಿಸಿದ್ದಾನೆ. ಕೇವಲ 49 ಎಸೆತಗಳಲ್ಲಿ 15 ಸಿಕ್ಸರ್ ಬಾರಿಸಿ ಬೌಲರ್​ಗಳಿಗೆ ದುಸ್ವಪ್ನವಾಗಿ ಕಾಡಿದ್ದಾನೆ. ಆಸ್ಟ್ರಿಯಾ ವಿರುದ್ಧದ ಪಂದ್ಯದಲ್ಲಿ ಹಂಗೇರಿಯದ 36 ವರ್ಷದ ಆರಂಭಿಕ ಆಟಗಾರ ಜೀಶಾನ್ ಕುಕಿಖೇಲ್ ತನ್ನ ಅಬ್ಬರದ ಬ್ಯಾಟಿಂಗ್ ಮೂಲಕ ಎದುರಾಳಿ ನೀಡಿದ್ದ 197 ರನ್‌ಗಳ ಗುರಿಯನ್ನು ಸುಲಭವಾಗಿ ದಾಟುವ ಮೂಲಕ ಈ ದಾಖಲೆಯನ್ನು ನಿರ್ಮಿಸಿದ್ದಾರೆ. ಜೀಶನ್ ಕೇವಲ 49 ಎಸೆತಗಳಲ್ಲಿ 137 ರನ್ ಗಳಿಸಿ ಎದುರಾಳಿಗಳ ನಿರೀಕ್ಷೆಗೆ ನೀರೆರೆದರು. ಪರಿಣಾಮವಾಗಿ ಅವರ ತಂಡವು 4 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದಿತು.

ಈ ಪಂದ್ಯದಲ್ಲಿ ಆಸ್ಟ್ರಿಯಾ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 196 ರನ್ ಕಲೆ ಹಾಕಿತು. ಆದರೆ, ಅವರಿಗೆ ಎದುರಾಳಿಯಿಂದ ಸೂಕ್ತ ಉತ್ತರ ಬರುತ್ತದೆ ಎಂದು ಅವರು ಭಾವಿಸದೇ ಇರಬಹುದು. ಹಂಗೇರಿ ತಂಡ ಅದರಲ್ಲೂ ಆರಂಭಿಕ ಆಟಗಾರ ಜೀಶಾನ್ ಶತಕ ಬಾರಿಸಿದ್ದರಿಂದ ತಂಡ ಸುಲಭವಾಗಿ ಗೆಲುವಿನ ದಡ ಸೇರಿತು.

49 ಎಸೆತಗಳಲ್ಲಿ 15 ಸಿಕ್ಸರ್, 137 ರನ್

ಇದನ್ನೂ ಓದಿ
Ranji Trophy: ಮೊದಲ ದಿನವೇ ಸುಸ್ತಾದ ಗಿಲ್, ಮಯಾಂಕ್, ಪೃಥ್ವಿ, ಜೈಸ್ವಾಲ್; ಸಂಕಷ್ಟಕ್ಕೆ ಸಿಲುಕಿದ ತಂಡಗಳು
HBD Ajinkya Rahane: ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್, 6 ಎಸೆತಗಳಲ್ಲಿ 6 ಬೌಂಡರಿ; ರಹಾನೆ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳಿವು

ಸುಮಾರು 280 ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ ಜೀಶನ್ 49 ಎಸೆತಗಳಲ್ಲಿ 137 ರನ್​ಗಳ ಮಿಂಚಿನ ಇನ್ನಿಂಗ್ಸ್ ಆಡಿದರು. ಈ ವೇಳೆ ಅವರು 15 ಸಿಕ್ಸರ್ ಮತ್ತು 7 ಬೌಂಡರಿಗಳನ್ನು ಬಾರಿಸಿದರು. ಜೀಶನ್ ಅವರ ಟಿ20 ವೃತ್ತಿಜೀವನದಲ್ಲಿ ಇದು ಮೊದಲ ಶತಕವಾಗಿದೆ. ಇದಕ್ಕೂ ಮೊದಲು ಅವರು ಗಳಿಸಿದ್ದು ಕೇವಲ 3 ಅರ್ಧ ಶತಕಗಳು ಮಾತ್ರ. ಜೀಶನ್ ತನ್ನ T20 ಅಂತರಾಷ್ಟ್ರೀಯ ವೃತ್ತಿಜೀವನದ 7 ನೇ ಪಂದ್ಯದಲ್ಲಿ ತನ್ನ ಮೊದಲ ಚಂಡಮಾರುತ ಶತಕಕ್ಕೆ ಸ್ಕ್ರಿಪ್ಟ್ ಬರೆದರು.

ಇದನ್ನೂ ಓದಿ:Ranji Trophy: ಮೊದಲ ದಿನವೇ ಸುಸ್ತಾದ ಗಿಲ್, ಮಯಾಂಕ್, ಪೃಥ್ವಿ, ಜೈಸ್ವಾಲ್; ಸಂಕಷ್ಟಕ್ಕೆ ಸಿಲುಕಿದ ತಂಡಗಳು

ಈ ಮೂಲಕ ಹಂಗೇರಿ ತಂಡ ಸುಲಭವಾಗಿ 197 ರನ್ ಗಳಿಸಿತು. ಅರ್ಧಕ್ಕಿಂತ ಹೆಚ್ಚು ರನ್‌ಗಳು ಒಬ್ಬನೇ ಬ್ಯಾಟ್ಸ್‌ಮನ್ ಜೀಶನ್ ಬ್ಯಾಟ್‌ನಿಂದ ಬಂದವು. ತಂಡದ ಎರಡನೇ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ ಕೇವಲ 18 ರನ್ ಗಳಿಸಿದರು. ಅಂದರೆ 36ರ ಹರೆಯದ ಹಂಗೇರಿಯ ಬ್ಯಾಟ್ಸ್​ಮನ್ ಬ್ಯಾಟಿಂಗ್ ಮಾಡದೇ ಇದ್ದಿದ್ದರೆ ತಂಡ ಅದ್ಭುತ ಗೆಲುವಿನಂತೆ, ಸಮಾನ ಸೋಲನುಭವಿಸುತ್ತಿತ್ತು. ಹಂಗೇರಿ 19 ಓವರ್‌ಗಳಲ್ಲಿ 6 ವಿಕೆಟ್‌ಗೆ 197 ರನ್ ಗಳಿಸಿತು.

ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲ, ಬೌಲಿಂಗ್‌ನಲ್ಲೂ ಅಬ್ಬರ

ಇದಕ್ಕೂ ಮುನ್ನ ಆಸ್ಟ್ರಿಯಾ ಮೊದಲು ಬ್ಯಾಟ್ ಮಾಡಿದಾಗ ಜೀಶಾನ್ ಕೂಡ ಬೌಲಿಂಗ್​ನಲ್ಲಿ ವಿಕೆಟ್ ಪಡೆದರು. ಅವರು ಆಸ್ಟ್ರಿಯಾದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಮೆಹರ್ ಚೀಮಾ ಅವರನ್ನು 33 ರನ್‌ಗಳಲ್ಲಿ ಕೆಡವಿದರು. ಜೀಶನ್ ಕೇವಲ 2 ಓವರ್‌ಗಳನ್ನು ಬೌಲ್ ಮಾಡಿ 23 ರನ್‌ಗಳಿಗೆ 1 ವಿಕೆಟ್ ಪಡೆದರು. 36ರ ಹರೆಯದ ಹಂಗೇರಿಯ ಆಟಗಾರ ಬ್ಯಾಟ್ ಮತ್ತು ಚೆಂಡಿನ ಪ್ರಭಾವಿ ಪ್ರದರ್ಶನಕ್ಕಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಪಡೆದರು.