India vs Sri Lanka 2nd T20I: 9 ಆಟಗಾರರು ಔಟ್: ಟೀಮ್ ಇಂಡಿಯಾದಲ್ಲಿ 5 ನೆಟ್​ ಬೌಲರುಗಳಿಗೆ ಅವಕಾಶ

| Updated By: ಝಾಹಿರ್ ಯೂಸುಫ್

Updated on: Jul 28, 2021 | 6:51 PM

India vs Sri Lanka 2nd T20 Predicted Playing 11: ಭಾರತದ ಸಂಭವನೀಯ ಇಲೆವೆನ್: ಭುವನೇಶ್ವರ್ ಕುಮಾರ್ (ನಾಯಕ), ದೇವದತ್ ಪಡಿಕ್ಕಲ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ನಿತೀಶ್ ರಾಣಾ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ದೀಪಕ್ ಚಹರ್, ರಾಹುಲ್ ಚಹರ್, ಚೇತನ್ ಸಕಾರಿಯಾ, ಅರ್ಷ್‌ದೀಪ್ ಸಿಂಗ್

India vs Sri Lanka 2nd T20I: 9 ಆಟಗಾರರು ಔಟ್: ಟೀಮ್ ಇಂಡಿಯಾದಲ್ಲಿ 5 ನೆಟ್​ ಬೌಲರುಗಳಿಗೆ ಅವಕಾಶ
India vs Sri Lanka 2nd T20I
Follow us on

ಭಾರತ-ಶ್ರೀಲಂಕಾ (India vs Sri Lanka) ನಡುವಣ ಟಿ20 ಸರಣಿಗೆ ಕೋರೋನಾ ಕಾರ್ಮೋಡ ಕವಿದಿದೆ. ಟೀಮ್ ಇಂಡಿಯಾ (Team India) ಆಟಗಾರ ಕೃನಾಲ್ ಪಾಂಡ್ಯ ಕೊರೋನಾ ಸೋಂಕಿಗೆ ಒಳಗಾಗುತ್ತಿದ್ದಂತೆ ತಂಡದ ಎಲ್ಲಾ ಆಟಗಾರರನ್ನು ಐಸೊಲೇಷನ್​ಗೆ ಒಳಪಡಿಸಲಾಗಿತ್ತು. ಅಲ್ಲದೆ ಮಂಗಳವಾರ ನಡೆಯಬೇಕಿದ್ದ ಪಂದ್ಯವನ್ನು ಬುಧವಾರಕ್ಕೆ ಮುಂದೂಡಲಾಗಿತ್ತು. ಇದರ ಬೆನ್ನಲ್ಲೇ ಕೃನಾಲ್ (Krunal Pandya) ಜೊತೆ 9 ಆಟಗಾರರು ನೇರ ಸಂಪರ್ಕ ಹೊಂದಿದ್ದ ವಿಚಾರ ಬಹಿರಂಗವಾಗಿತ್ತು. 2ನೇ ಟಿ20 ಪಂದ್ಯದ ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕೃಷ್ಣಪ್ಪ ಗೌತಮ್, ಮನೀಶ್ ಪಾಂಡೆ, ಇಶಾನ್ ಕಿಶನ್ ಮತ್ತು ಶಿಖರ್ ಧವನ್ (Shikhar Dhawan) ಕ್ವಾರಂಟೈನ್​ನಲ್ಲಿ ಇರಬೇಕಾದ ಕಾರಣ ಬುಧವಾರ ಕಣಕ್ಕಿಳಿಯುವುದಿಲ್ಲ ಎನ್ನಲಾಗಿದೆ. 20 ಮಂದಿ ಸದಸ್ಯರ ತಂಡದಿಂದ 10 ಮಂದಿ ಹೊರಗುಳಿಯುತ್ತಿರುವುದರಿಂದ 2ನೇ ಪಂದ್ಯದ ವೇಳೆ ಭಾರತದ ಪರ ಯಾರು ಕಣಕ್ಕಿಳಿಯಲಿದ್ದಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತು.

ಇದೀಗ ಶಿಖರ್ ಧವನ್ ಅನುಪಸ್ಥಿತಿಯಲ್ಲಿ ತಂಡವನ್ನು ಭುವನೇಶ್ವರ್ ಕುಮಾರ್ ಮುನ್ನಡೆಸಲಿದ್ದಾರೆ ಎಂದು ವರದಿಯಾಗಿದೆ. ಇದಾಗ್ಯೂ ಉಳಿದ ಪ್ಲೇಯರ್ಸ್​ ಯಾರು ಎಂಬ ಪ್ರಶ್ನೆಗೆ ಸದ್ಯದ ಉತ್ತರ ಮೀಸಲು ಆಟಗಾರರು. ಹೌದು, ಶ್ರೀಲಂಕಾ ಸರಣಿಗಾಗಿ ಟೀಮ್ ಇಂಡಿಯಾ ಐವರು ನೆಟ್​ ಬೌಲರುಗಳನ್ನು ಕರೆದುಕೊಂಡು ಹೋಗಿದ್ದರು. ಇವರಲ್ಲಿ ಕೆಲವರಿಗೆ 2ನೇ ಟಿ20 ಪಂದ್ಯದ ವೇಳೆ ಚಾನ್ಸ್ ಸಿಗುವ ಸಾಧ್ಯತೆಯಿದೆ.

ಕೆಲ ಮೂಲಗಳ ಪ್ರಕಾರ 2ನೇ ಟಿ20 ಪಂದ್ಯದಲ್ಲಿ ದೇವದತ್ ಪಡಿಕ್ಕಲ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ನಿತೀಶ್ ರಾಣಾ, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್ (ನಾಯಕ), ವರುಣ್ ಚಕ್ರವರ್ತಿ, ದೀಪಕ್ ಚಹರ್, ರಾಹುಲ್ ಚಹರ್, ಚೇತನ್ ಸಕಾರಿಯಾ ಕಣಕ್ಕಿಳಿಯಬಹುದು. ಹಾಗೆಯೇ 11ನೇ ಆಟಗಾರನಾಗಿ ನೆಟ್ ಬೌಲರ್​ ಒಬ್ಬರನ್ನು ತಂಡಕ್ಕೆ ಸೇರ್ಪಡೆಗೊಳಿಸುವ ಸಾಧ್ಯತೆ ಹೆಚ್ಚಿದೆ. ಹಾಗೆಯೇ ಬದಲಿ ಆಟಗಾರನ ಸ್ಥಾನ ಕೂಡ ಮೀಸಲು ಆಟಗಾರನ ಪಾಲಾಗಲಿದೆ. ಪ್ರಸ್ತುತ ಟೀಮ್ ಇಂಡಿಯಾದಲ್ಲಿ ನೆಟ್​ ಬೌಲರುಗಳಾಗಿ ಇಶಾನ್ ಪೊರೆಲ್, ಸಂದೀಪ್ ವಾರಿಯರ್, ಸಾಯಿ ಕಿಶೋರ್, ಅರ್ಷ್‌ದೀಪ್ ಸಿಂಗ್ ಮತ್ತು ಸಿಮಾರ್ಜಿತ್ ಸಿಂಗ್ ಇದ್ದು, ಇವರಲ್ಲಿ ಒಬ್ಬರು ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಬಹುದು.

ಹಾಗೆಯೇ 3ನೇ ಪಂದ್ಯಕ್ಕೂ ಕೃನಾಲ್ ಜೊತೆ ನೇರ ಸಂಪರ್ಕ ಹೊಂದಿದ್ದ ಅಲಭ್ಯರಾಗಲಿದ್ದು, ಹೀಗಾಗಿ ನೆಟ್ ಬೌಲರುಗಳೊಂದಿಗೆ ಸರಣಿಯ ಉಳಿದ ಪಂದ್ಯಗಳನ್ನು ಆಡಲು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಚಿಂತಿಸಿದೆ ಎಂದು ವರದಿಯಾಗಿದೆ. ಇನ್ನು ಪೃಥ್ವಿ ಶಾ ಹಾಗೂ ಶಿಖರ್ ಧವನ್ ಕ್ವಾರಂಟೈನ್​ನಲ್ಲಿರುವ ಕಾರಣ ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕನ್ನಡಿಗ ದೇವದತ್ ಪಡಿಕ್ಕಲ್ ಹಾಗೂ ರುತುರಾಜ್ ಗಾಯಕ್ವಾಡ್ ಪದಾರ್ಪಣೆ ಮಾಡಲಿದ್ದಾರೆ.

ಭಾರತದ ಸಂಭವನೀಯ ಇಲೆವೆನ್: ಭುವನೇಶ್ವರ್ ಕುಮಾರ್ (ನಾಯಕ), ದೇವದತ್ ಪಡಿಕ್ಕಲ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ನಿತೀಶ್ ರಾಣಾ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ದೀಪಕ್ ಚಹರ್, ರಾಹುಲ್ ಚಹರ್, ಚೇತನ್ ಸಕಾರಿಯಾ, ಅರ್ಷ್‌ದೀಪ್ ಸಿಂಗ್.

 

ಇದನ್ನೂ ಓದಿ: ಮದ್ಯಪಾನ ಮಾಡಿ ಶತಕ ಸಿಡಿಸಿದ್ದ ಗ್ಯಾರಿ ಸೋಬರ್ಸ್​..!

ಇದನ್ನೂ ಓದಿ: ಸೂರ್ಯಕುಮಾರ್ ಯಾದವ್​ಗೆ ಅವಕಾಶ ಕೈತಪ್ಪುವ ಆತಂಕ

(5 net bowlers named in the team India vs Sri Lanka 2nd T20I)