U19 World Cup 2024: ಸೂಪರ್ ಸಿಕ್ಸ್ ಸುತ್ತಿಗೆ 9 ತಂಡಗಳು ಎಂಟ್ರಿ; ಭಾರತ- ಪಾಕ್ ಫೈಟ್ ಖಚಿತ..!

|

Updated on: Jan 27, 2024 | 3:07 PM

U19 World Cup 2024: ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ಏಕದಿನ ವಿಶ್ವಕಪ್​ನ ಗುಂಪು ಹಂತ ಮುಕ್ತಾಯದ ಹಂತಕ್ಕೆ ಬಂದಿದೆ. ಆ ಬಳಿಕ ಜನವರಿ 30 ರಿಂದ ಸೂಪರ್ ಸಿಕ್ಸ್ ಹಂತ ಆರಂಭವಾಗಲಿದೆ. ಈ ಸೂಪರ್ ಸಿಕ್ಸ್ ಹಂತದಲ್ಲಿ 12 ತಂಡಗಳು ಸ್ಥಾನ ಪಡೆಯಲ್ಲಿದ್ದು, ಈ ಹಂತಕ್ಕೆ ಈಗಾಗಲೇ 9 ತಂಡಗಳು ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ.

U19 World Cup 2024: ಸೂಪರ್ ಸಿಕ್ಸ್ ಸುತ್ತಿಗೆ 9 ತಂಡಗಳು ಎಂಟ್ರಿ; ಭಾರತ- ಪಾಕ್ ಫೈಟ್ ಖಚಿತ..!
19 ವರ್ಷದೊಳಗಿನವರ ಏಕದಿನ ವಿಶ್ವಕಪ್
Follow us on

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ಏಕದಿನ ವಿಶ್ವಕಪ್​ನ ( Under 19 World Cup 2024) ಗುಂಪು ಹಂತ ಮುಕ್ತಾಯದ ಹಂತಕ್ಕೆ ಬಂದಿದೆ. ಆ ಬಳಿಕ ಜನವರಿ 30 ರಿಂದ ಸೂಪರ್ ಸಿಕ್ಸ್ ಹಂತ ಆರಂಭವಾಗಲಿದೆ. ಈ ಸೂಪರ್ ಸಿಕ್ಸ್ (Super 6) ಹಂತದಲ್ಲಿ 12 ತಂಡಗಳು ಸ್ಥಾನ ಪಡೆಯಲ್ಲಿದ್ದು, ಈ ಹಂತಕ್ಕೆ ಈಗಾಗಲೇ 9 ತಂಡಗಳು ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಉಳಿದ ಮೂರು ತಂಡಗಳು ಯಾವುವು ಎಂಬುದರ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ. ಈ ಬಾರಿಯ ವಿಶ್ವಕಪ್​ನಲ್ಲಿ 16 ತಂಡಗಳು ಭಾಗವಹಿಸುತ್ತಿವೆ. ಈ 16 ತಂಡಗಳನ್ನು ತಲಾ 4 ತಂಡಗಲಾಗಿ 4 ಗುಂಪುಗಳಲ್ಲಿ ಇರಿಸಲಾಗಿದೆ. ಪ್ರತಿ ಗುಂಪಿನಿಂದ ಮೂರು ತಂಡಗಳು ಸೂಪರ್ ಸಿಕ್ಸ್ ಹಂತಕ್ಕೆ ಅರ್ಹತೆ ಗಿಟ್ಟಿಸಿಕೊಳ್ಳಲಿವೆ.

ಅರ್ಹತೆ ಪಡೆದ 9 ತಂಡಗಳು

ಜನವರಿ 30ರಿಂದ ಆರಂಭವಾಗಲಿರುವ ಸೂಪರ್ 6 ಸುತ್ತಿಗೆ ಟೀಂ ಇಂಡಿಯಾ ಸೇರಿದಂತೆ 9 ತಂಡಗಳು ತಮ್ಮ ಸ್ಥಾನವನ್ನು ಖಚಿತಪಡಿಸಿವೆ. ಜನವರಿ 27ರ ಬೆಳಗ್ಗೆ ಐಸಿಸಿ ಈ ಮಾಹಿತಿಯನ್ನು ನೀಡಿದೆ. ಎ ಗುಂಪಿನಲ್ಲಿರುವ ಟೀಂ ಇಂಡಿಯಾ ಜೊತೆಗೆ ಇದುವರೆಗೆ ಬಾಂಗ್ಲಾದೇಶ ತಂಡ ಮಾತ್ರ ಮುಂದಿನ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಇನ್ನು ಈ ಗುಂಪಿನಿಂದ ಆಯ್ಕೆಯಾಗುವ ಮೂರನೇ ತಂಡ ಯಾವುದು ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ. ಆ ಮೂರನೇ ತಂಡದ ಸ್ಥಾನಕ್ಕಾಗಿ ಐರ್ಲೆಂಡ್ ಹಾಗೂ ಅಮೆರಿಕ ನಡುವೆ ಪೈಪೋಟಿ ಏರ್ಪಟ್ಟಿದೆ. ಇನ್ನು ಬಿ ಗುಂಪಿನಿಂದ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಮುಂದಿನ ಸುತ್ತಿಗೆ ಅರ್ಹತೆ ಪಡೆದಿದ್ದರೆ, ಸಿ ಗುಂಪಿನಿಂದ ಆಸ್ಟ್ರೇಲಿಯಾ, ಶ್ರೀಲಂಕಾ ಮತ್ತು ಡಿ ಗುಂಪಿನಿಂದ ಪಾಕಿಸ್ತಾನ, ನೇಪಾಳ ಮತ್ತು ನ್ಯೂಜಿಲೆಂಡ್ ಮುಂದಿನ ಸುತ್ತಿನಲ್ಲಿ ಸ್ಥಾನ ಪಡೆದಿವೆ.

2 ಗುಂಪುಗಳಾಗಿ ವಿಂಗಡಣೆ

ಮೇಲೆ ಹೇಳಿದಂತೆ ಒಟ್ಟು 12 ತಂಡಗಳು ಸೂಪರ್ ಸಿಕ್ಸ್‌ಗೆ ಅರ್ಹತೆ ಪಡೆಯಲ್ಲಿವೆ. ಈ 12 ತಂಡಗಳನ್ನು ಎರಡು ವಿಭಿನ್ನ ಗುಂಪುಗಳಾಗಿ ವಿಂಗಡಿಸಲಾಗುವುದು. ಇದರಲ್ಲಿ ಎ ಮತ್ತು ಡಿ ಗುಂಪಿನ ತಂಡಗಳು ಮೊದಲ ಗುಂಪಿನಲ್ಲಿ ಸ್ಥಾನ ಪಡೆದರೆ, ಬಿ ಮತ್ತು ಸಿ ಗುಂಪಿನ ತಂಡಗಳನ್ನು ಎರಡನೇ ಗುಂಪಿನಲ್ಲಿ ಇರಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ ಮತ್ತು ಪಾಕಿಸ್ತಾನ ನಡುವೆ ಸೂಪರ್ ಸಿಕ್ಸ್ ಪಂದ್ಯ ನಡೆಯುವುದು ಬಹುತೇಕ ಖಚಿತ ಎಂದು ಪರಿಗಣಿಸಲಾಗಿದೆ. ಇದಲ್ಲದೇ ಟೂರ್ನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನೇಪಾಳ ತಂಡ ಕೂಡ ಸೂಪರ್ ಸಿಕ್ಸ್‌ಗೆ ಮೊದಲ ಬಾರಿಗೆ ಅರ್ಹತೆ ಪಡೆದುಕೊಂಡಿದೆ.

ಭಾರತದ ಅಜೇಯ ಓಟ

ಅಂಡರ್-19 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಇದುವರೆಗೆ ಅದ್ಭುತ ಪ್ರದರ್ಶನ ನೀಡಿದೆ. ಟೀಂ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 84 ರನ್‌ಗಳಿಂದ ಸೋಲಿಸಿತ್ತು. ಇದಾದ ಬಳಿಕ ಎರಡನೇ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು 201 ರನ್​ಗಳಿಂದ ಸೋಲಿಸಿ ಅಜೇಯವಾಗಿ ಮುಂದಿನ ಸುತ್ತಿನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಆದರೆ, ಟೀಂ ಇಂಡಿಯಾ ಇನ್ನೂ ತನ್ನ ಕೊನೆಯ ಗುಂಪಿನ ಪಂದ್ಯವನ್ನು ಆಡಿಲ್ಲ. ಈ ಪಂದ್ಯ ನಾಳೆ ಅಂದರೆ ಜನವರಿ 28 ರಂದು ಅಮೇರಿಕಾ ವಿರುದ್ಧ ನಡೆಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ