Emerging Asia Cup 2023: ಎಮರ್ಜಿಂಗ್ ಏಷ್ಯಾಕಪ್: ಭಾರತ ಸೇರಿದಂತೆ 7 ತಂಡಗಳು ಪ್ರಕಟ
Emerging Asia Cup 2023: ಮೊದಲ ಪಂದ್ಯದಲ್ಲಿ ಶ್ರೀಲಂಕಾ ಎ ಹಾಗೂ ಬಾಂಗ್ಲಾದೇಶ್ ಎ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಭಾರತ ತಂಡವು ಜುಲೈ 14 ರಂದು ತನ್ನ ಮೊದಲ ಪಂದ್ಯವನ್ನು ಒಮಾನ್ ವಿರುದ್ಧ ಆಡಲಿದೆ.
ACC Emerging Asia Cup 2023: ಉದಯೋನ್ಮುಖ ತಂಡಗಳ ನಡುವಣ ಏಷ್ಯಾ ಕಪ್ ಜುಲೈ 13 ರಿಂದ ಶುರುವಾಗಲಿದೆ. 8 ಟೀಮ್ಗಳ ನಡುವಣ ಈ ಟೂರ್ನಿಗಾಗಿ ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಇಲ್ಲಿ ಗ್ರೂಪ್-ಎ ನಲ್ಲಿ ಅಫ್ಘಾನಿಸ್ತಾನ್ ಎ, ಬಾಂಗ್ಲಾದೇಶ್ ಎ, ಒಮಾನ್ ಎ, ಶ್ರೀಲಂಕಾ ಎ ತಂಡಗಳಿವೆ. ಹಾಗೆಯೇ ಗ್ರೂಪ್ ಬಿ ನಲ್ಲಿ ಭಾರತ ಎ, ಪಾಕಿಸ್ತಾನ ಎ, ನೇಪಾಳ ಎ, ಯುಎಇ ಎ ತಂಡಗಳು ಸ್ಥಾನ ಪಡೆದಿವೆ. ಅದರಂತೆ ಶ್ರೀಲಂಕಾದ ಪ್ರೇಮದಾಸ ಕ್ರೀಡಾಂಗಣದಲ್ಲಿ ಗುರುವಾರದಿಂದ ಪ್ರಾರಂಭವಾಗಲಿರುವ ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಎ ಹಾಗೂ ಬಾಂಗ್ಲಾದೇಶ್ ಎ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಭಾರತ ತಂಡವು ಜುಲೈ 14 ರಂದು ತನ್ನ ಮೊದಲ ಪಂದ್ಯವನ್ನು ಒಮಾನ್ ವಿರುದ್ಧ ಆಡಲಿದೆ.
ಈ ಟೂರ್ನಿಯಲ್ಲಿ ಕಣಕ್ಕಿಳಿಯುವ 8 ತಂಡಗಳ ಆಟಗಾರರ ಪಟ್ಟಿ ಈ ಕೆಳಗಿನಂತಿದೆ.
ಭಾರತ ಎ: ಸಾಯಿ ಸುದರ್ಶನ್, ಅಭಿಷೇಕ್ ಶರ್ಮಾ, ನಿಕಿನ್ ಜೋಸ್, ಪ್ರದೋಶ್ ರಂಜನ್ ಪಾಲ್, ಯಶ್ ಧುಲ್ (ನಾಯಕ), ರಿಯಾನ್ ಪರಾಗ್, ನಿಶಾಂತ್ ಸಿಂಧು, ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ಮಾನವ್ ಸುತಾರ್, ಯುವರಾಜ್‌ಸಿನ್ಹ್ ದೋಡಿಯಾ, ಹರ್ಷಿತ್ ರಾಣಾ, ಆಕಾಶ್ ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ರಾಜವರ್ಧನ್ ಹಂಗರ್ಗೇಕರ್.
ಮೀಸಲು ಆಟಗಾರರು: ಹರ್ಷ್ ದುಬೆ, ನೆಹಾಲ್ ವಧೇರಾ, ಸ್ನೆಲ್ ಪಟೇಲ್, ಮೋಹಿತ್ ರೆಡ್ಕರ್.
ಪಾಕಿಸ್ತಾನ್ ಎ: ಮೊಹಮ್ಮದ್ ಹ್ಯಾರಿಸ್ (ನಾಯಕ), ಒಮೈರ್ ಬಿನ್ ಯೂಸುಫ್, ಅಮದ್ ಬಟ್, ಅರ್ಷದ್ ಇಕ್ಬಾಲ್, ಹಸೀಬುಲ್ಲಾ, ಕಮ್ರಾನ್ ಗುಲಾಮ್, ಮೆಹ್ರಾನ್ ಮುಮ್ತಾಜ್, ಮುಬಾಸಿರ್ ಖಾನ್, ಮೊಹಮ್ಮದ್ ವಾಸಿಂ ಜೂನಿಯರ್, ಖಾಸಿಮ್ ಅಕ್ರಮ್, ಸಾಹಿಬ್ಜಾದಾ ಫರ್ಹಾನ್, ಸೈಮ್ ಅಯೂಬ್ , ಸುಫಿಯಾನ್ ಮುಖೀಮ್ ಮತ್ತು ತಯ್ಯಬ್ ತಾಹಿರ್.
ಅಫ್ಘಾನಿಸ್ತಾನ್ ಎ: ಶಾಹಿದುಲ್ಲಾ ಕಮಾಲ್ (ನಾಯಕ), ಇಕ್ರಾಮ್ ಅಲಿಖಿಲ್ (ವಿಕೆಟ್ ಕೀಪರ್), ಇಶಾಕ್ ರಹೀಮಿ, ರಿಯಾಜ್ ಹಸನ್, ಇಹ್ಸಾನುಲ್ಲಾ ಜನ್ನತ್, ನೂರ್ ಅಲಿ ಜದ್ರಾನ್, ಜುಬೈದ್ ಅಕ್ಬರಿ, ಬಹೀರ್ ಶಾ, ಅಲ್ಲಾ ನೂರ್ ನಾಸಿರಿ, ಶರಫುದ್ದೀನ್ ಅಶ್ರಫ್, ಇಝರುಲ್ಹಕ್ ಮೊಮಾನ್, ವಫಾದರ್ ನವೀದ್, ಇಬ್ರಾಹಿಂ ಅಬ್ದುಲ್ರಹಿಮ್ಜಾಯ್, ಸಲೀಂ ಸಫಿ, ಜಿಯಾ ಉರ್ ರೆಹಮಾನ್ ಅಕ್ಬರ್ ಮತ್ತು ಬಿಲಾಲ್ ಸಾಮಿ.
ಬಾಂಗ್ಲಾದೇಶ್ ಎ: ಮೊಹಮ್ಮದ್ ಸೈಫ್ ಹಸನ್ (ನಾಯಕ), ಮೊಹಮ್ಮದ್ ಪರ್ವೇಜ್ ಹೊಸೈನ್ ಎಮನ್, ತಂಝೀದ್ ಹಸನ್ ತಮೀಮ್, ಶಹದತ್ ಹೊಸೈನ್, ಮಹ್ಮದುಲ್ ಹಸನ್ ಜಾಯ್, ಜಾಕಿರ್ ಹಸನ್, ಸೌಮ್ಯ ಸರ್ಕಾರ್, ಶಾಕ್ ಮಹೇದಿ ಹಸನ್, ರಾಕಿಬುಲ್ ಹಸನ್, ಮೊಹಮ್ಮದ್ ಮೃತುಂಜಯ್ ಚೌಧುರಿ ನಿಮ್ಪುನ್ ಚೌಧುರಿ ನಿಮ್ಪುನ್ ಚೌಧರಿ , ರಿಪಾನ್ ಮೊಂಡೋಲ್, ಮೊಹಮ್ಮದ್ ಮುಸ್ಫಿಕ್ ಹಸನ್, ಅಕ್ಬರ್ ಅಲಿ, ನಯಿಮ್ ಶೇಖ್.
ನೇಪಾಳ ಎ ತಂಡ: ರೋಹಿತ್ ಪೌಡೆಲ್ (ನಾಯಕ), ಅರ್ಜುನ್ ಸೌದ್, ಆಸಿಫ್ ಶೇಖ್ (ವಿಕೆಟ್ ಕೀಪರ್), ಕುಶಾಲ್ ಭುರ್ಟೆಲ್, ಗುಲ್ಸನ್ ಝಾ, ಸೋಂಪಾಲ್ ಕಾಮಿ, ಪ್ರತೀಶ್ ಜಿಸಿ, ದೇವ್ ಖಾನಲ್, ಸಂದೀಪ್ ಜೋರಾ, ಕುಶಾಲ್ ಮಲ್ಲಾ, ಲಲಿತ್ ರಾಜಬನ್ಶಿ, ಭೀಮ್ ಶರ್ಕಿ, ಪವನ್ ಸರ್ರಾಫ್, ಸೂರ್ಯ ತಮಾಂಗ್, ಕಿಶೋರ್ ಮಹತೋ, ಶ್ಯಾಮ್ ಧಾಕಲ್.
ಒಮಾನ್ ಎ: ಆಕಿಬ್ ಇಲ್ಯಾಸ್ (ನಾಯಕ), ಜತೀಂದರ್ ಸಿಂಗ್, ಕಶ್ಯಪ್ ಪ್ರಜಾಪತಿ, ಅಯಾನ್ ಖಾನ್, ಶೋಯೆಬ್ ಖಾನ್, ಸೂರಜ್ ಕುಮಾರ್, ಜಯ್ ಒಡೆದ್ರಾ, ಕಲೀಮುಲ್ಲಾ, ಅಹ್ಮದ್ ಫಯಾಜ್ ಬಟ್, ಸಮಯ್ ಶ್ರೀವಾಸ್ತವ, ವಾಸಿಂ ಅಲಿ, ರಫಿಯುಲ್ಲಾ, ಅಬ್ದುಲ್ ರೌಫ್, ಶುಬೋ ಪಾಲ್, ಮುಹಮ್ಮದ್ ಬಿಲಾಲ್.
ಯುಎಇ ಎ: ಅಲಿ ನಾಸೀರ್ (ನಾಯಕ), ಆದಿತ್ಯ ಶೆಟ್ಟಿ, ಆರ್ಯನ್ಶ್ ಶರ್ಮಾ, ಅಂಶ್ ಟಂಡನ್, ಅಶ್ವಂತ್ ವಲ್ತಾಪ, ಎಥಾನ್ ಡಿಸೋಜಾ, ಫಹಾದ್ ನವಾಜ್, ಜಶ್ ಗಿಯಾನಾನಿ, ಜೊನಾಥನ್ ಫಿಗಿ, ಲವ್‌ಪ್ರೀತ್ ಸಿಂಗ್, ಮತಿಯುಲ್ಲಾ, ಮೊಹಮ್ಮದ್ ಫರಾಜುದ್ದೀನ್, ಮುಹಮ್ಮದ್ ಜವದುಲ್ಲಾ, ನೀಲಾಂಶ್ ಕೆಸ್ವಾನಿ, ಸಂಜಿತ್ ಶರ್ಮಾ.
ಶ್ರೀಲಂಕಾ ಎ: ತಂಡವನ್ನು ಇನ್ನೂ ಪ್ರಕಟಿಸಿಲ್ಲ.