Women’s Asia Cup 2022: ಮಹಿಳಾ ಏಷ್ಯಾಕಪ್ ವೇಳಾಪಟ್ಟಿ ಪ್ರಕಟ; ಭಾರತ- ಪಾಕ್ ಮುಖಾಮುಖಿಗೂ ದಿನಾಂಕ ಫಿಕ್ಸ್

Women's Asia Cup 2022: 6 ಬಾರಿ ಚಾಂಪಿಯನ್ ಆಗಿರುವ ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಮೊದಲ ದಿನ ಅಂದರೆ ಅಕ್ಟೋಬರ್ 1 ರಂದು ಆಡಲಿದೆ. ಅಕ್ಟೋಬರ್ 7 ರಂದು ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ.

Women's Asia Cup 2022: ಮಹಿಳಾ ಏಷ್ಯಾಕಪ್ ವೇಳಾಪಟ್ಟಿ ಪ್ರಕಟ; ಭಾರತ- ಪಾಕ್ ಮುಖಾಮುಖಿಗೂ ದಿನಾಂಕ ಫಿಕ್ಸ್
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಪೃಥ್ವಿಶಂಕರ

Updated on:Sep 21, 2022 | 4:01 PM

ಏಷ್ಯಾಕಪ್‌ನಲ್ಲಿ (Asia Cup) ಭಾರತ ಮತ್ತು ಪಾಕಿಸ್ತಾನ ನಡುವಿನ ಎರಡು ಬಾರಿಯ ಮುಖಾಮುಖಿ ಕ್ರಿಕೆಟ್ ಅಭಿಮಾನಿಗಳ ಕಣ್ಣಿಗೆ ರಸದೌತಣವನ್ನೇ ನೀಡಿತ್ತು. ಪಂದ್ಯಾವಳಿ ಆರಂಭದ ಮೊದಲ ಪಂದ್ಯದಲ್ಲಿ ಭಾರತ ಗೆದ್ದಿದ್ದರೆ, ಸೂಪರ್ 4 ಹಂತದಲ್ಲಿ ಭಾರತ, ಪಾಕ್ ಎದುರು ಮುಗ್ಗರಿಸಿತ್ತು. ಈ ಎರಡೂ ಪಂದ್ಯಗಳು ಪಂದ್ಯಾವಳಿಯ ರೋಚಕತೆಯನ್ನು ಹೆಚ್ಚಿಸಿದ್ದವು. ಈಗ ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ (T20 World Cup) ಉಭಯ ತಂಡಗಳು ಮತ್ತೆ ಮುಖಾಮುಖಿಯಾಗಲಿವೆ. ವಿಶ್ವಕಪ್ ಪಂದ್ಯಕ್ಕೆ ಇನ್ನೂ ಬಹಳ ಸಮಯವಿದ್ದರೂ ಅದಕ್ಕೂ ಮುನ್ನ ಭಾರತ ಮತ್ತು ಪಾಕಿಸ್ತಾನ (IND vs PAK) ನಡುವೆ ಮತ್ತೊಂದು ಕದನ ನಡೆಯಲಿದೆ. ಇನ್ನೊಮ್ಮೆ ಉಭಯ ದೇಶಗಳ ತಂಡಗಳು ಮುಖಾಮುಖಿಯಾಗಲಿದ್ದು, ಮತ್ತೊಮ್ಮೆ ಅಭಿಮಾನಿಗಳು ಸಂಭ್ರಮ ಪಡುವ ಅವಕಾಶ ಒದಗಿ ಬಂದಿದೆ. ಅಕ್ಟೋಬರ್ 7 ರಂದು ಹರ್ಮನ್‌ಪ್ರೀತ್ ಕೌರ್ (Harmanpreet Kaur) ನೇತೃತ್ವದ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಮಹಿಳಾ ಏಷ್ಯಾಕಪ್‌ನಲ್ಲಿ (Women’s Asia Cup) ಪಾಕಿಸ್ತಾನವನ್ನು ಎದುರಿಸಲಿದೆ.

ಮಹಿಳಾ ಏಷ್ಯಾಕಪ್ ಅಕ್ಟೋಬರ್ 1 ರಿಂದ ಆರಂಭ

ಪುರುಷರ ಏಷ್ಯಾಕಪ್ ಮುಗಿದ ಬಳಿಕ ಈಗ ಮಹಿಳೆಯರ ಏಷ್ಯಾಕಪ್ ಆರಂಭವಾಗಲಿದ್ದು, ಮುಂದಿನ ತಿಂಗಳು ಬಾಂಗ್ಲಾದೇಶದಲ್ಲಿ ಈ ಪಂದ್ಯಾವಳಿ ನಡೆಯಲಿದೆ. ಈ ಎಂಟನೇ ಆವೃತ್ತಿಯ ಮಹಿಳಾ ಏಷ್ಯಾಕಪ್‌ನಲ್ಲಿ ಒಟ್ಟು 7 ತಂಡಗಳು ಭಾಗವಹಿಸಲಿದ್ದು, ಫೈನಲ್ ಸೇರಿದಂತೆ ಒಟ್ಟು 24 ಪಂದ್ಯಗಳು ಅಕ್ಟೋಬರ್ 1 ರಿಂದ ಅಕ್ಟೋಬರ್ 15 ರ ನಡುವೆ ನಡೆಯಲಿವೆ. ಇದರ ಪ್ರಯುಕ್ತ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜಯ್ ಶಾ ಅವರು ಸೆಪ್ಟೆಂಬರ್ 20 ರಂದು ಮಹಿಳಾ ಏಷ್ಯಾಕಪ್‌ನ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ.

ಟೀಮ್ ಇಂಡಿಯಾ ಪಂದ್ಯದ ವೇಳಾಪಟ್ಟಿ

1 ಅಕ್ಟೋಬರ್ – ಭಾರತ v/s ಶ್ರೀಲಂಕಾ 3 ಅಕ್ಟೋಬರ್ – ಭಾರತ v/s ಮಲೇಷ್ಯಾ 4 ಅಕ್ಟೋಬರ್ – ಭಾರತ v/s ಯುಎಇ 7 ಅಕ್ಟೋಬರ್ – ಭಾರತ v/s ಪಾಕಿಸ್ತಾನ 8 ಅಕ್ಟೋಬರ್ – ಭಾರತ v/s ಬಾಂಗ್ಲಾದೇಶ 10 ಅಕ್ಟೋಬರ್ – ಭಾರತ v/s ಥೈಲ್ಯಾಂಡ್

ಪಂದ್ಯಾವಳಿಯು ರೌಂಡ್ ರಾಬಿನ್ ಆಧಾರದ ಮೇಲೆ ನಡೆಯಲಿದೆ. ಅಂದರೆ ಪ್ರತಿ ತಂಡವು ಎಲ್ಲಾ 6 ತಂಡಗಳ ವಿರುದ್ಧ ಒಂದು ಪಂದ್ಯವನ್ನು ಆಡುತ್ತದೆ. ಇದಾದ ಬಳಿಕ ಹೆಚ್ಚು ಅಂಕ ಗಳಿಸಿದ ಅಗ್ರ 4 ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ. ಟೂರ್ನಮೆಂಟ್‌ನ ಅಂತಿಮ ಪಂದ್ಯ ಅಕ್ಟೋಬರ್ 15 ರಂದು ನಡೆಯಲಿದೆ. ಈ ಎಲ್ಲಾ ಪಂದ್ಯಗಳು ಬಾಂಗ್ಲಾದೇಶದ ಸಿಲ್ಹೆಟ್‌ನಲ್ಲಿ ನಡೆಯಲಿವೆ. ಇದರಲ್ಲಿ ಭಾರತ, ಪಾಕಿಸ್ತಾನ ಆತಿಥೇಯ ಬಾಂಗ್ಲಾದೇಶ, ಶ್ರೀಲಂಕಾ, ಯುನೈಟೆಡ್ ಅರಬ್ ಎಮಿರೇಟ್ಸ್, ಥಾಯ್ಲೆಂಡ್ ಮತ್ತು ಮಲೇಷ್ಯಾ ತಂಡಗಳು ಭಾಗವಹಿಸಲಿವೆ.

ಅಕ್ಟೋಬರ್ 7 ರಂದು ಭಾರತ v/s ಪಾಕಿಸ್ತಾನ

ಈಗ ಭಾರತ ತಂಡದ ಬಗ್ಗೆ ಮಾತನಾಡೋಣ. ಅತಿ ಹೆಚ್ಚು 6 ಬಾರಿ ಚಾಂಪಿಯನ್ ಆಗಿರುವ ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಮೊದಲ ದಿನ ಅಂದರೆ ಅಕ್ಟೋಬರ್ 1 ರಂದು ಆಡಲಿದೆ. ಅಕ್ಟೋಬರ್ 7 ರಂದು ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ಕಾಮನ್‌ವೆಲ್ತ್ ಕ್ರೀಡಾಕೂಟದ ನಂತರ ಉಭಯ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಲಿವೆ. ಕಳೆದ ಕಾಮನ್‌ವೆಲ್ತ್​ನಲ್ಲಿ ಟೀಂ ಇಂಡಿಯಾ ವನಿತಾ ತಂಡ, ಪಾಕ್ ವನಿತಾ ಬಳಗವನ್ನು ಸುಲಭವಾಗಿ ಮಣಿಸುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಏಷ್ಯಾಕಪ್‌ನಲ್ಲೂ ಟೀಂ ಇಂಡಿಯಾ ಪಾಕ್ ತಂಡವನ್ನು ಸುಲಭವಾಗಿ ಮಣಿಸಲಿದೆ ಎಂಬುದು ಭಾರತ ಕ್ರಿಕೆಟ್ ಅಭಿಮಾನಿಗಳ ಆಶಯವಾಗಿದೆ.

Published On - 4:01 pm, Wed, 21 September 22

ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ