Updated on: Sep 21, 2022 | 2:55 PM
ಐಸಿಸಿ ನೂತನ ಟಿ20 ಬ್ಯಾಟರ್ ರ‍್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಕೂಡ ಪಾಕಿಸ್ತಾನ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮೊಹಮ್ಮದ್ ರಿಜ್ವಾನ್ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ವಿಶೇಷ ಎಂದರೆ ಈ ಸಲ ಟಾಪ್ 10 ನಲ್ಲಿ ಟೀಮ್ ಇಂಡಿಯಾದ ಏಕೈಕ ಆಟಗಾರ ಮಾತ್ರ ಸ್ಥಾನ ಪಡೆದಿದ್ದಾರೆ.
ಹಾಗೆಯೇ ಈ ಬಾರಿ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಜಂ ಅವರನ್ನು ಹಿಂದಿಕ್ಕಿ ಟೀಮ್ ಇಂಡಿಯಾ ಆಟಗಾರ ಸೂರ್ಯಕುಮಾರ್ ಯಾದವ್ ಒಂದು ಸ್ಥಾನ ಮೇಲೇರಿದ್ದಾರೆ. ಹಾಗಿದ್ರೆ ನೂತನ ಟಾಪ್-10 ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ ನೋಡೋಣ...
10- ರೀಜಾ ಹೆಂಡ್ರಿಕ್ಸ್ (ಸೌತ್ ಆಫ್ರಿಕಾ) - 628 ರೇಟಿಂಗ್ಸ್
9- ಮೊಹಮ್ಮದ್ ವಸೀಂ (ಯುಎಇ)- 671 ರೇಟಿಂಗ್ಸ್
8- ಪಾತುಂ ನಿಸಂಕಾ (ಶ್ರೀಲಂಕಾ)- 677 ರೇಟಿಂಗ್
7- ಡೆವೋನ್ ಕಾನ್ವೆ (ನ್ಯೂಜಿಲೆಂಡ್)- 683 ರೇಟಿಂಗ್
6- ಆರೋನ್ ಫಿಂಚ್ (ಆಸ್ಟ್ರೇಲಿಯಾ)- 715 ರೇಟಿಂಗ್
5- ಡೇವಿಡ್ ಮಲಾನ್ (ಇಂಗ್ಲೆಂಡ್)- 725 ರೇಟಿಂಗ್
4- ಬಾಬರ್ ಆಜಂ (ಪಾಕಿಸ್ತಾನ್)- 771 ರೇಟಿಂಗ್
3- ಸೂರ್ಯಕುಮಾರ್ ಯಾದವ್ (ಭಾರತ)- 780 ರೇಟಿಂಗ್
2- ಐಡೆನ್ ಮಾರ್ಕ್ರಾಮ್ (ಸೌತ್ ಆಫ್ರಿಕಾ)- 792 ರೇಟಿಂಗ್
1- ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ್)- 825 ರೇಟಿಂಗ್