T20 World Cup 2022: ಟಿ20 ವಿಶ್ವಕಪ್‌ಗೆ ಅಫ್ಘಾನಿಸ್ತಾನ ತಂಡ ಪ್ರಕಟ; 5 ಆಟಗಾರರಿಗೆ ಗೇಟ್ಪಾಸ್..!
T20 World Cup 2022: ಮುಂಬರುವ ವಿಶ್ವ ಚುಟುಕು ಸಮರಕ್ಕೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ 15 ಸದಸ್ಯರನೊಳಗೊಂಡ ತಂಡವನ್ನು ಪ್ರಕಟಿಸಿದೆ. ತಂಡದ ನಾಯಕತ್ವವನ್ನು ಮತ್ತೊಮ್ಮೆ ಮೊಹಮ್ಮದ್ ನಬಿಗೆ ವಹಿಸಿದೆ.
ಮುಂಬರುವ ವಿಶ್ವ ಚುಟುಕು ಸಮರಕ್ಕೆ (T20 World Cup 2022:) ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ 15 ಸದಸ್ಯರನೊಳಗೊಂಡ ತಂಡವನ್ನು ಪ್ರಕಟಿಸಿದೆ. ತಂಡದ ನಾಯಕತ್ವವನ್ನು ಮತ್ತೊಮ್ಮೆ ಮೊಹಮ್ಮದ್ ನಬಿಗೆ ವಹಿಸಿದೆ. ಅವರ ನಾಯಕತ್ವದಲ್ಲಿ ಅಫ್ಘಾನ್ ತಂಡ ಏಷ್ಯಾ ಕಪ್‌ನ ಆರಂಭದಲ್ಲಿ ಭರ್ಜರಿ ಪ್ರದರ್ಶನ ನೀಡಿತ್ತು. ಆದರೆ ಸೂಪರ್-4 ಸುತ್ತಿನಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗದೆ ಟೂರ್ನಿಯಿಂದ ಹೊರಬಿತ್ತು. ಟಿ20 ವಿಶ್ವಕಪ್ನ 8ನೇ ಆವೃತ್ತಿಯ ಗುಂಪು ಹಂತದ ಪಂದ್ಯಗಳು ಆಕ್ಟೋಬರ್ 16 ರಿಂದ ಆರಂಭವಾಗಲಿದ್ದು,ಸೂಪರ್ 12 ರೌಂಡ್ನ ಪಂದ್ಯಗಳು ಆ. 22 ರಿಂದ ಆರಂಭವಾಗಲಿವೆ. ನವೆಂಬರ್ 13 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಫೈನಲ್ ಪಂದ್ಯದೊಂದಿಗೆ ಈ ಮಿನಿ ವಿಶ್ವಕಪ್‌ಗೆ ತೆರೆ ಬೀಳಲಿದೆ.
ಆಫ್ಘಾನ್ ತಂಡ ಗುಂಪು 1 ರಲ್ಲಿ ಸ್ಥಾನ ಪಡೆದಿದ್ದು, ಈ ತಂಡದೊಂದಿಗೆ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ಬಲಿಷ್ಠ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ಸ್ಥಾನ ಪಡೆದಿವೆ. ಅಲ್ಲದೆ, ಅರ್ಹತಾ ಪಂದ್ಯಗಳ ಎ ಗುಂಪಿನಲ್ಲಿ ಗೆದ್ದ ತಂಡ ಮತ್ತು ಬಿ ಗುಂಪಿನ ರನ್ನರ್ಸ್ ಅಪ್ ತಂಡಗಳು ಗುಂಪು 1 ಗೆ ಸೇರಿಕೊಳ್ಳಲ್ಲಿವೆ.
ಈಗ ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿರುವ ಅಫ್ಘಾನ್ ತಂಡದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದ್ದು, ಈ ಹಿಂದೆ ಏಷ್ಯಾಕಪ್ 2022 ರ ತಂಡದಲ್ಲಿದ್ದ 17 ಆಟಗಾರರ ಪೈಕಿ ಸಮೀವುಲ್ಲಾ ಶಿನ್ವಾರಿ, ಹಶ್ಮತುಲ್ಲಾ ಶಾಹಿದಿ, ಅಫ್ಸರ್ ಝಜೈ, ಕರೀಂ ಜನತ್ ಮತ್ತು ನೂರ್ ಅಹ್ಮದ್ ಅವರನ್ನು ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಿಲ್ಲ. ಆದರೆ ದರ್ವಿಶ್ ರಸೂಲಿ, ಖೈಸ್ ಅಹ್ಮದ್ ಮತ್ತು ಸಲೀಂ ಸಫಿ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
? BREAKING NEWS ?
Afghanistan Cricket Board today announced its 15-member squad for the ICC @T20WorldCup 2022, which will be played from 16th October to 13th November in Australia.
More: https://t.co/1x7it7hx5w pic.twitter.com/ToTKvyCzM4
— Afghanistan Cricket Board (@ACBofficials) September 15, 2022
ತಂಡವನ್ನು ಪ್ರಕಟಿಸಿದ ಬಳಿಕ ಮಾತನಾಡಿದ ಎಸಿಬಿ ಮುಖ್ಯ ಆಯ್ಕೆಗಾರ ನೂರ್ ಮಲಿಕ್ಜೈ, ನಾವು ದೇಶದಲ್ಲಿ ಲಭ್ಯವಿರುವ ಅತ್ಯುತ್ತಮ ಆಟಗಾರರನ್ನು ಟಿ20 ವಿಶ್ವಕಪ್ ಆಯ್ಕೆ ಮಾಡಿದ್ದೇವೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಹು-ರಾಷ್ಟ್ರಗಳ ಪಂದ್ಯಾವಳಿಯಲ್ಲಿ ತಂಡವು ಉತ್ತಮ ಪ್ರದರ್ಶನ ನೀಡುವ ಭರವಸೆಯಿದೆ.
ಅಲ್ಲದೆ “ಆಸ್ಟ್ರೇಲಿಯಾದಲ್ಲಿ ನಡೆಯುವ ವಿಶ್ವಕಪ್‌ಗೆ ತಂಡದಲ್ಲಿ ತಯಾರಿ ನಡೆಸಲು ಏಷ್ಯಾಕಪ್ ಉತ್ತಮ ಅವಕಾಶವಾಗಿತ್ತು. ಅದೃಷ್ಟವಶಾತ್, ಡಾರ್ವಿಶ್ ರಸೂಲಿ ಅವರು ಗಾಯದಿಂದ (ಮುರಿದ ಬೆರಳು) ಚೇತರಿಸಿಕೊಂಡಿದ್ದು, ಅವರು ವಿಶ್ವಕಪ್‌ಗೆ ಲಭ್ಯವಿರುವುದು ನಮಗೆ ಸಂತಸ ತಂದಿದೆ. ಅವರು ಈ ಹಿಂದೆ ನಡೆದ ಶಪಜೀಜಾ ಕ್ರಿಕೆಟ್ ಲೀಗ್ 2022 ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ನಮ್ಮ ಮಧ್ಯಮ ಕ್ರಮಾಂಕಕ್ಕೆ ಹೆಚ್ಚುವರಿ ಬ್ಯಾಟಿಂಗ್ ಆಯ್ಕೆಯಾಗಿದ್ದಾರೆ ಎಂದಿದ್ದಾರೆ.
“ಹಾಗೆಯೇ ಆಸ್ಟ್ರೇಲಿಯದ ಪರಿಸ್ಥಿತಿಗಳು ವೇಗದ ಬೌಲರ್‌ಗಳಿಗೆ ಹೆಚ್ಚಿನ ಬೆಂಬಲವನ್ನು ನೀಡುವುದರಿಂದ, ನಮ್ಮ ಬೌಲಿಂಗ್ ವಿಭಾಗಕ್ಕೆ ಮತ್ತಷ್ಟು ಬಲ ನೀಡಲು ನಾವು ಸಲೀಂ ಸಫಿಯನ್ನು ತಂಡಕ್ಕೆ ಆಯ್ಕೆ ಮಾಡಿದ್ದೇವೆ. ಒಟ್ಟಾರೆಯಾಗಿ ನಾವು ಈ ಈವೆಂಟ್‌ಗೆ ಲಭ್ಯವಿರುವ ನಮ್ಮ ಅತ್ಯುತ್ತಮ ಆಟಗಾರರನ್ನು ಆಯ್ಕೆ ಮಾಡಿದ್ದೇವೆ. ಅವರು ಉತ್ತಮ ಪ್ರದರ್ಶನ ನೀಡುತ್ತಾರೆ ಮತ್ತು ಮೆಗಾ ಈವೆಂಟ್‌ನಲ್ಲಿ ದೇಶವನ್ನು ಉತ್ತಮವಾಗಿ ಪ್ರತಿನಿಧಿಸುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ.
ಟಿ20 ವಿಶ್ವಕಪ್‌ಗೆ ಅಫ್ಘಾನಿಸ್ತಾನ ತಂಡ:
ಮೊಹಮ್ಮದ್ ನಬಿ (ನಾಯಕ), ನಜೀಬುಲ್ಲಾ ಝದ್ರಾನ್ (ಉಪನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಅಜ್ಮತುಲ್ಲಾ ಒಮರ್ಜಾಯ್, ದರ್ವಿಶ್ ರಸೂಲಿ, ಫರೀದ್ ಅಹ್ಮದ್ ಮಲಿಕ್, ಫಜಲ್ ಹಕ್ ಫಾರೂಕಿ, ಹಜರತುಲ್ಲಾ ಝಜೈ, ಇಬ್ರಾಹಿಂ ಝದ್ರಾನ್, ಮುಜೀಬ್ ಉರ್ ರಹ್ಮದ್, ಕ್ವೀನ್ ಹಕ್ಮದ್ ಖಾನ್, ಸಲೀಂ ಸಫಿ ಮತ್ತು ಉಸ್ಮಾನ್ ಘನಿ.
ಮೀಸಲು ಆಟಗಾರರಾಗಿ: ಅಫ್ಸರ್ ಝಜೈ, ಶರಫುದ್ದೀನ್ ಅಶ್ರಫ್, ರಹಮತ್ ಶಾ, ಗುಲ್ಬದಿನ್ ನೈಬ್.
Published On - 3:16 pm, Thu, 15 September 22