ಏಕದಿನ ವಿಶ್ವಕಪ್ನ 30ನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ದ ಅಫ್ಘಾನಿಸ್ತಾನ್ ಜಯ ಸಾಧಿಸಿದೆ. ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ್ ತಂಡದ ನಾಯಕ ಹಶ್ಮತ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡ 49.3 ಓವರ್ಗಳಲ್ಲಿ 241 ರನ್ಗಳಿಗೆ ಆಲೌಟ್ ಆಯಿತು. 242 ರನ್ಗಳ ಗುರಿಯನ್ನು ಬೆನ್ನತ್ತಿದ ಅಫ್ಘಾನಿಸ್ತಾನ್ ತಂಡವು 45.2 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಉಭಯ ತಂಡಗಳು ಏಕದಿನ ಕ್ರಿಕೆಟ್ನಲ್ಲಿ 12 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ 7 ಮ್ಯಾಚ್ಗಳಲ್ಲಿ ಶ್ರೀಲಂಕಾ ಗೆದ್ದರೆ, ಅಫ್ಘಾನಿಸ್ತಾನ್ 4 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇನ್ನು ಒಂದು ಪಂದ್ಯ ಕಾರಣಾಂತರಗಳಿಂದ ರದ್ದಾಗಿತ್ತು.
ಅಫ್ಘಾನಿಸ್ತಾನ್ (ಪ್ಲೇಯಿಂಗ್ XI): ರಹಮಾನುಲ್ಲಾ ಗುರ್ಬಾಝ್, ಇಬ್ರಾಹಿಂ ಝದ್ರಾನ್, ರಹಮತ್ ಷಾ, ಹಶ್ಮತುಲ್ಲಾ ಶಾಹಿದಿ (ನಾಯಕ), ಅಜ್ಮತುಲ್ಲಾ ಒಮರ್ಜಾಯ್, ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್), ಮೊಹಮ್ಮದ್ ನಬಿ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನವೀನ್-ಉಲ್-ಹಕ್, ಫಝಲ್ಹಕ್ ಫಾರೂಖಿ.
ಶ್ರೀಲಂಕಾ (ಪ್ಲೇಯಿಂಗ್ XI): ಪಾತುಮ್ ನಿಸ್ಸಾಂಕ, ಕುಸಾಲ್ ಪೆರೇರಾ, ಕುಸಾಲ್ ಮೆಂಡಿಸ್ (ನಾಯಕ), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ಏಂಜೆಲೊ ಮ್ಯಾಥ್ಯೂಸ್, ಮಹೀಶ್ ತೀಕ್ಷಣ, ಕಸುನ್ ರಜಿತ, ದುಷ್ಮಂತ ಚಮೀರ, ದಿಲ್ಶನ್ ಮಧುಶಂಕ.
ಶ್ರೀಲಂಕಾ ನೀಡಿದ 242 ರನ್ಗಳ ಗುರಿಯನ್ನು 45.2 ಓವರ್ಗಳಲ್ಲಿ ಚೇಸ್ ಮಾಡಿದ ಅಫ್ಘಾನಿಸ್ತಾನ್.
ಅಫ್ಘಾನಿಸ್ತಾನ್ ತಂಡಕ್ಕೆ 7 ವಿಕೆಟ್ಗಳ ಭರ್ಜರಿ ಜಯ.
45 ಓವರ್ಗಳ ಮುಕ್ತಾಯದ ವೇಳೆಗೆ 240 ರನ್ ಕಲೆಹಾಕಿದ ಅಫ್ಘಾನಿಸ್ತಾನ್
ಕ್ರೀಸ್ನಲ್ಲಿ ಹಶ್ಮತ್ ಶಾಹಿದಿ ಹಾಗೂ ಅಝ್ಮತ್ ಒಮರ್ಝಾಹಿ ಬ್ಯಾಟಿಂಗ್.
ಅಫ್ಘಾನ್ ತಂಡಕ್ಕೆ ಗೆಲ್ಲಲು ಕೇವಲ 2 ರನ್ಗಳ ಅವಶ್ಯಕತೆ
50 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅಝ್ಮತ್ ಒಮರ್ಝಾಹಿ.
ಕಸುನ್ ರಜಿತ್ ಎಸೆದ 43ನೇ ಓವರ್ನ 5ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಫೋರ್ ಬಾರಿಸಿದ ಅಝ್ಮತ್.
43 ಓವರ್ಗಳ ಮುಕ್ತಾಯದ ವೇಳೆಗೆ ಅಫ್ಘಾನ್ ತಂಡದ ಸ್ಕೋರ್ 223 ರನ್ಗಳು. ಇನ್ನು ಕೇವಲ 19 ರನ್ಗಳ ಅವಶ್ಯಕತೆ.
40 ಓವರ್ಗಳ ಮುಕ್ತಾಯದ ವೇಳೆಗೆ 201 ರನ್ ಕಲೆಹಾಕಿದ ಅಫ್ಘಾನಿಸ್ತಾನ್.
ಕ್ರೀಸ್ನಲ್ಲಿ ಹಶ್ಮತ್ ಶಾಹಿದಿ ಹಾಗೂ ಅಝ್ಮತ್ ಒಮರ್ಝಾಹಿ ಬ್ಯಾಟಿಂಗ್.
ಅಫ್ಘಾನಿಸ್ತಾನ್ ತಂಡಕ್ಕೆ ಗೆಲ್ಲಲು ಕೇವಲ 41 ರನ್ಗಳ ಅವಶ್ಯಕತೆ.
ದಿಲ್ಶನ್ ಮಧುಶಂಕ ಎಸೆದ 38ನೇ ಓವರ್ನ ಕೊನೆಯ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಅಝ್ಮತ್ ಒಮರ್ಝಾಹಿ.
ಕ್ರೀಸ್ನಲ್ಲಿ ಹಶ್ಮತ್ ಶಾಹಿದಿ ಹಾಗೂ ಅಝ್ಮತ್ ಒಮರ್ಝಾಹಿ ಬ್ಯಾಟಿಂಗ್.
ಅಫ್ಘಾನಿಸ್ತಾನ್ ತಂಡಕ್ಕೆ 54 ರನ್ಗಳ ಅವಶ್ಯಕತೆ.
ಮಹೀಶ್ ತೀಕ್ಷಣ ಎಸೆದ 35ನೇ ಓವರ್ನ 3ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಬಾರಿಸಿದ ಅಝ್ಮತ್ ಒಮರ್ಝಾಹಿ.
ಕ್ರೀಸ್ನಲ್ಲಿ ಹಶ್ಮತ್ ಶಾಹಿದಿ ಹಾಗೂ ಅಝ್ಮತ್ ಒಮರ್ಝಾಹಿ ಬ್ಯಾಟಿಂಗ್.
ಅಫ್ಘಾನ್ ತಂಡಕ್ಕೆ 76 ರನ್ಗಳ ಅವಶ್ಯಕತೆ.
33ನೇ ಓವರ್ನಲ್ಲಿ 150 ರನ್ ಪೂರೈಸಿದ ಅಫ್ಘಾನಿಸ್ತಾನ್.
ಕ್ರೀಸ್ನಲ್ಲಿ ಹಶ್ಮತ್ ಶಾಹಿದಿ ಹಾಗೂ ಅಝ್ಮತ್ ಒಮರ್ಝಾಹಿ ಬ್ಯಾಟಿಂಗ್.
ಅಫ್ಘಾನಿಸ್ತಾನ್ ತಂಡಕ್ಕೆ 89 ರನ್ಗಳ ಅವಶ್ಯಕತೆ.
31 ಓವರ್ಗಳ ಮುಕ್ತಾಯದ ವೇಳೆಗೆ ಅಫ್ಘಾನಿಸ್ತಾನ್ ತಂಡದ ಸ್ಕೋರ್ 143 ರನ್ಗಳು.
ಅಫ್ಘಾನಿಸ್ತಾನ್ ತಂಡಕ್ಕೆ ಗೆಲ್ಲಲು 114 ಎಸೆತಗಳಲ್ಲಿ 99 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ಎಡಗೈ ದಾಂಡಿಗ ಹಶ್ಮತ್ ಶಾಹಿದಿ ಹಾಗೂ ಬಲಗೈ ಬ್ಯಾಟರ್ ಅಝ್ಮತ್ ಒಮರ್ಝಾಹಿ ಬ್ಯಾಟಿಂಗ್.
ಕಸುನ್ ರಜಿತ ಎಸೆದ 28ನೇ ಓವರ್ನ ಕೊನೆಯ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ರಹಮತ್ ಶಾ.
74 ಎಸೆತಗಳಲ್ಲಿ 62 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಅನುಭವಿ ಆಟಗಾರ ರಹಮತ್ ಶಾ.
ಶ್ರೀಲಂಕಾ ತಂಡಕ್ಕೆ ಮೂರನೇ ಯಶಸ್ಸು.
ಧನಂಜಯ ಡಿಸಿಲ್ವಾ ಎಸೆದ 27ನೇ ಓವರ್ನ ಮೊದಲ ಎಸೆತದಲ್ಲೇ ಆಫ್ ಸೈಡ್ನತ್ತ ಫೋರ್ ಬಾರಿಸಿದ ರಹಮತ್ ಶಾ.
ಈ ಫೋರ್ನೊಂದಿಗೆ 3ನೇ ವಿಕೆಟ್ಗೆ ಅರ್ಧಶತಕದ ಜೊತೆಯಾಟ ಪೂರ್ಣಗೊಳಿಸಿದ ಶಾಹಿದಿ-ಶಾ.
ಕ್ರೀಸ್ನಲ್ಲಿ ಹಶ್ಮತ್ ಶಾಹಿದಿ ಹಾಗೂ ರಹಮತ್ ಶಾ ಬ್ಯಾಟಿಂಗ್.
25 ಓವರ್ಗಳ ಮುಕ್ತಾಯದ ವೇಳೆಗೆ 119 ರನ್ ಕಲೆಹಾಕಿದ ಅಫ್ಘಾನಿಸ್ತಾನ್ ತಂಡ.
ಅಫ್ಘಾನ್ ತಂಡಕ್ಕೆ ಗೆಲ್ಲಲು ಇನ್ನು 150 ಎಸೆತಗಳಲ್ಲಿ 123 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ಎಡಗೈ ದಾಂಡಿಗ ಹಶ್ಮತ್ ಶಾಹಿದಿ (20) ಹಾಗೂ ಬಲಗೈ ಬ್ಯಾಟರ್ ರಹಮತ್ ಶಾ (55) ಬ್ಯಾಟಿಂಗ್.
ಮಹೀಶ್ ತೀಕ್ಷಣ ಎಸೆದ 24ನೇ ಓವರ್ನ ಮೊದಲ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ರಹಮತ್ ಶಾ.
ಕ್ರೀಸ್ನಲ್ಲಿ ಹಶ್ಮತ್ ಶಾಹಿದಿ ಹಾಗೂ ರಹಮತ್ ಶಾ ಬ್ಯಾಟಿಂಗ್.
23 ಓವರ್ಗಳಲ್ಲಿ ಶತಕ ಪೂರೈಸಿದ ಅಫ್ಘಾನಿಸ್ತಾನ್ ತಂಡ.
ಕ್ರೀಸ್ನಲ್ಲಿ ಹಶ್ಮತ್ ಶಾಹಿದಿ ಹಾಗೂ ರಹಮತ್ ಶಾ ಬ್ಯಾಟಿಂಗ್.
ಅಫ್ಘಾನಿಸ್ತಾನ್ ತಂಡಕ್ಕೆ ಗೆಲ್ಲಲು ಇನ್ನು 137 ರನ್ಗಳ ಅವಶ್ಯಕತೆ.
ಶ್ರೀಲಂಕಾ ತಂಡಕ್ಕೆ 8 ವಿಕೆಟ್ಗಳ ಅಗತ್ಯತೆ.
21ನೇ ಓವರ್ನ ಮೂರನೇ ಎಸೆತದಲ್ಲಿ ಹಶ್ಮತ್ ಶಾಹಿದಿ ಬ್ಯಾಟ್ ಎಡ್ಜ್…ಹಿಂಬದಿತ್ತ ಸಿಕ್ಸ್.
ಕ್ರೀಸ್ನಲ್ಲಿ ಹಶ್ಮತ್ ಶಾಹಿದಿ ಹಾಗೂ ರಹಮತ್ ಶಾ ಬ್ಯಾಟಿಂಗ್.
ರಹಮಾನುಲ್ಲಾ ಗುರ್ಬಾಝ್ (0) ಹಾಗೂ ಇಬ್ರಾಹಿಂ ಝದ್ರಾನ್ (39) ಔಟ್.
20 ಓವರ್ಗಳ ಮುಕ್ತಾಯದ ವೇಳೆಗೆ 87 ರನ್ ಕಲೆಹಾಕಿದ ಅಫ್ಘಾನಿಸ್ತಾನ್ ತಂಡ.
2 ವಿಕೆಟ್ ಕಬಳಿಸಲು ಯಶಸ್ವಿಯಾಗಿರುವ ಶ್ರೀಲಂಕಾ ಬೌಲರ್ಗಳು.
ಕ್ರೀಸ್ನಲ್ಲಿ ಹಶ್ಮತ್ ಶಾಹಿದಿ (6) ಹಾಗೂ ರಹಮತ್ ಶಾ (39) ಬ್ಯಾಟಿಂಗ್.
ಎಡಗೈ ವೇಗಿ ದಿಲ್ಶನ್ ಮಧುಶಂಕ ಎಸೆದ 17ನೇ ಓವರ್ನ 5ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದ ಇಬ್ರಾಹಿಂ ಝದ್ರಾನ್.
57 ಎಸೆತಗಳಲ್ಲಿ 39 ರನ್ ಬಾರಿಸಿ ಇನಿಂಗ್ಸ್ ಅಂತ್ಯಗೊಳಿಸಿದ ಅಫ್ಘಾನ್ ಆರಂಭಿಕ ಆಟಗಾರ ಇಬ್ರಾಹಿಂ ಝದ್ರಾನ್.
ಕ್ರೀಸ್ನಲ್ಲಿ ಹಶ್ಮತ್ ಶಾಹಿದಿ ಹಾಗೂ ರಹಮತ್ ಶಾ ಬ್ಯಾಟಿಂಗ್.
15 ಓವರ್ಗಳ ಮುಕ್ತಾಯದ ವೇಳೆಗೆ 67 ರನ್ ಕಲೆಹಾಕಿದ ಅಫ್ಘಾನಿಸ್ತಾನ್.
ರಹಮಾನುಲ್ಲಾ ಗುರ್ಬಾಝ್ (0) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ ಶ್ರೀಲಂಕಾ ವೇಗಿ ದಿಲ್ಶನ್ ಮಧುಶಂಕ.
ಕ್ರೀಸ್ನಲ್ಲಿ ಇಬ್ರಾಹಿಂ ಝದ್ರಾನ್ ಹಾಗೂ ರಹಮತ್ ಶಾ ಬ್ಯಾಟಿಂಗ್.
ಅಫ್ಘಾನಿಸ್ತಾನ್ ತಂಡಕ್ಕೆ ಗೆಲ್ಲಲು ಇನ್ನು 175 ರನ್ಗಳ ಅವಶ್ಯಕತೆ.
ವಿಜಯಪುರ: ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಅಸಹಾಯಕವಾಗಿದೆ. ಸುಪ್ರೀಂಕೋರ್ಟ್ ಒತ್ತಡದಿಂದ ಆದೇಶ ಮಾಡ್ತಾರೆ, ಏನೂ ಮಾಡಲಾಗಲ್ಲ. ಸರ್ಕಾರ ಏನೂ ಮಾಡಲು ಆಗಲ್ಲ, ‘ಸುಪ್ರೀಂ’ ಆದೇಶ ಪಾಲಿಸಬೇಕಾಗುತ್ತೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
13 ಓವರ್ಗಳಲ್ಲಿ 60 ರನ್ ಕಲೆಹಾಕಿದ ಅಫ್ಘಾನಿಸ್ತಾನ್ ತಂಡ.
2ನೇ ವಿಕೆಟ್ಗೆ 60 ರನ್ಗಳ ಜೊತೆಯಾಟವಾಡಿರುವ ಇಬ್ರಾಹಿಂ ಝದ್ರಾನ್ ಹಾಗೂ ರಹಮತ್ ಶಾ.
ಅಫ್ಘಾನ್ ತಂಡದ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಝ್ (0) ಔಟ್.
ಮಹೀಶ್ ತೀಕ್ಷಣ ಎಸೆದ 10ನೇ ಓವರ್ನ 4ನೇ ಎಸೆತದಲ್ಲಿ ಮಿಡ್ ಆಫ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಇಬ್ರಾಹಿಂ ಝದ್ರಾನ್.
10 ಓವರ್ಗಳ ಮುಕ್ತಾಯದ ವೇಳೆಗೆ ಅರ್ಧಶತಕ ಪೂರೈಸಿದ ಅಫ್ಘಾನಿಸ್ತಾನ್ ತಂಡ.
ಕ್ರೀಸ್ನಲ್ಲಿ ಇಬ್ರಾಹಿಂ ಝದ್ರಾನ್ ಹಾಗೂ ರಹಮತ್ ಶಾ ಬ್ಯಾಟಿಂಗ್.
ಕಸುನ್ ರಜಿತ ಎಸೆದ 8ನೇ ಓವರ್ನ ಕೊನೆಯ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಫೋರ್ ಬಾರಿಸಿದ ರಹಮತ್ ಶಾ.
ರಹಮತ್ ಶಾ ಹಾಗೂ ಇಬ್ರಾಹಿಂ ಝದ್ರಾನ್ ನಡುವೆ ಉತ್ತಮ ಜೊತೆಯಾಟ.
ಕಸುನ್ ರಜಿತ ಎಸೆದ 6ನೇ ಓವರ್ನ ಕೊನೆಯ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಇಬ್ರಾಹಿಂ ಝದ್ರಾನ್.
ಇದು ಅಫ್ಘಾನಿಸ್ತಾನ್ ಇನಿಂಗ್ಸ್ನ ಮೊದಲ ಸಿಕ್ಸರ್.
ಕ್ರೀಸ್ನಲ್ಲಿ ಇಬ್ರಾಹಿಂ ಝದ್ರಾನ್ ಹಾಗೂ ರಹಮತ್ ಶಾ ಬ್ಯಾಟಿಂಗ್.
ದಿಲ್ಶನ್ ಮಧುಶಂಕ ಎಸೆದ 5ನೇ ಓವರ್ನ ಕೊನೆಯ ಎಸೆತದಲ್ಲಿ ಆಕರ್ಷಕ ಕವರ್ ಡ್ರೈವ್ ಬಾರಿಸಿದ ರಹಮತ್ ಶಾ…ಫೋರ್.
5 ಓವರ್ಗಳ ಮುಕ್ತಾಯದ ವೇಳೆಗೆ ಅಫ್ಘಾನಿಸ್ತಾನ್ ತಂಡದ ಸ್ಕೋರ್ 1 ವಿಕೆಟ್ ನಷ್ಟಕ್ಕೆ 20 ರನ್ಗಳು.
ಕ್ರೀಸ್ನಲ್ಲಿ ಇಬ್ರಾಹಿಂ ಝದ್ರಾನ್ ಹಾಗೂ ರಹಮತ್ ಶಾ ಬ್ಯಾಟಿಂಗ್.
ದಿಲ್ಶನ್ ಮಧುಶಂಕ ಎಸೆದ 3ನೇ ಓವರ್ನ ಕೊನೆಯ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ಇಬ್ರಾಹಿಂ ಝದ್ರಾನ್.
ಇದು ಅಫ್ಘಾನಿಸ್ತಾನ್ ತಂಡದ ಮೊದಲ ಬೌಂಡರಿ.
ಕ್ರೀಸ್ನಲ್ಲಿ ಇಬ್ರಾಹಿಂ ಝದ್ರಾನ್ ಹಾಗೂ ರಹಮತ್ ಶಾ ಬ್ಯಾಟಿಂಗ್.
ದಿಲ್ಶನ್ ಮಧುಶಂಕ ಎಸೆದ ಮೊದಲ ಓವರ್ನ 4ನೇ ಎಸೆತದಲ್ಲಿ ರಹಮಾನುಲ್ಲಾ ಗುರ್ಬಾಝ್ (0) ಕ್ಲೀನ್ ಬೌಲ್ಡ್.
ಮೊದಲ ಓವರ್ನಲ್ಲೇ ಶ್ರೀಲಂಕಾ ತಂಡಕ್ಕೆ ಮೊದಲ ಯಶಸ್ಸು.
ಕ್ರೀಸ್ನಲ್ಲಿ ಇಬ್ರಾಹಿಂ ಝದ್ರಾನ್ ಹಾಗೂ ರಹಮತ್ ಶಾ ಬ್ಯಾಟಿಂಗ್.
50ನೇ ಓವರ್ನ ಮೂರನೇ ಎಸೆತದ ವೇಳೆ ಕಸುನ್ ರಜಿತರನ್ನು ರನೌಟ್ ಮಾಡಿದ ವಿಕೆಟ್ ಕೀಪರ್ ರಹಮಾನುಲ್ಲಾ ಗುರ್ಬಾಝ್.
48.3 ಓವರ್ಗಳಲ್ಲಿ 241 ರನ್ಗಳಿಸಿ ಆಲೌಟ್ ಆದ ಶ್ರೀಲಂಕಾ.
ಅಫ್ಘಾನಿಸ್ತಾನ್ ತಂಡಕ್ಕೆ 242 ರನ್ಗಳ ಸುಲಭ ಗುರಿ ನೀಡಿದ ಶ್ರೀಲಂಕಾ.
ಫಝಲ್ಹಕ್ ಫಾರೂಖಿ ಎಸೆದ 49ನೇ ಓವರ್ನ 3ನೇ ಎಸೆತದಲ್ಲಿ ನೇರವಾಗಿ ಬಾರಿಸಿದ ಏಂಜೆಲೊ ಮ್ಯಾಥ್ಯೂಸ್…ಬೌಂಡರಿ ಲೈನ್ನಲ್ಲಿ ಮೊಹಮ್ಮದ್ ನಬಿ ಉತ್ತಮ ಕ್ಯಾಚ್.
26 ಎಸೆತಗಳಲ್ಲಿ 23 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಏಂಜೆಲೊ ಮ್ಯಾಥ್ಯೂಸ್.
ಕ್ರೀಸ್ನಲ್ಲಿ ಕಸುನ್ ರಜಿತ ಹಾಗೂ ದಿಲ್ಶನ್ ಮಧುಶಂಕ ಬ್ಯಾಟಿಂಗ್.
ನವೀನ್ ಉಲ್ ಹಕ್ ಎಸೆದ 48ನೇ ಓವರ್ನ ಕೊನೆಯ ಎಸೆತದಲ್ಲಿ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ಏಂಜೆಲೊ ಮ್ಯಾಥ್ಯೂಸ್.
ಕ್ರೀಸ್ನಲ್ಲಿ ಕಸುನ್ ರಜಿತ ಹಾಗೂ ಏಂಜೆಲೊ ಮ್ಯಾಥ್ಯೂಸ್ ಬ್ಯಾಟಿಂಗ್.
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಸೋಮವಾರ ಸಂಜೆ ಜಿಟಿ ಜಿಟಿ ಮಳೆಯಾಗಿದೆ. ಜಿಟಿ ಜಿಟಿ ಮಳೆಗೆ ಸಿಲಿಕಾನ್ ಸಿಟಿ ಕೂಲ್ ಆಗಿದೆ. ಟೌನ್ ಹಾಲ್, ಎಸ್ ಬಿ ರಸ್ತೆ. ಕೆ ಆರ್ ಸರ್ಕಲ್, ಕಾರ್ಪೋರೇಷನ್ ಸೇರಿದಂತೆ ಬೆಂಗಳೂರಿನ ವಿವಿಧೆಡೆ ಮಳೆಯಾಗಿದೆ.
ಫಝಲ್ಹಕ್ ಫಾರೂಖಿ ಎಸೆದ 47ನೇ ಓವರ್ನ ಕೊನೆಯ ಎಸೆತದಲ್ಲಿ ಮಹೀಶ್ ತೀಕ್ಷಣ ಬೌಲ್ಡ್.
31 ಎಸೆತಗಳಲ್ಲಿ 29 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಮಹೀಶ್ ತೀಕ್ಷಣ.
ಕ್ರೀಸ್ನಲ್ಲಿ ಕಸುನ್ ರಜಿತ ಹಾಗೂ ಏಂಜೆಲೊ ಮ್ಯಾಥ್ಯೂಸ್ ಬ್ಯಾಟಿಂಗ್.
ನವೀನ್ ಉಲ್ ಹಕ್ ಎಸೆದ 46ನೇ ಓವರ್ನ ಮೊದಲ ಎಸೆತದಲ್ಲೇ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಏಂಜೆಲೊ ಮ್ಯಾಥ್ಯೂಸ್.
ಇದು ಶ್ರೀಲಂಕಾ ಇನಿಂಗ್ಸ್ನ ಮೊದಲ ಸಿಕ್ಸ್ ಎಂಬುದು ವಿಶೇಷ.
ಕ್ರೀಸ್ನಲ್ಲಿ ಮಹೀಶ್ ತೀಕ್ಷಣ ಹಾಗೂ ಏಂಜೆಲೊ ಮ್ಯಾಥ್ಯೂಸ್ ಬ್ಯಾಟಿಂಗ್.
45 ಓವರ್ಗಳ ಮುಕ್ತಾಯದ ವೇಳೆಗೆ 212 ರನ್ ಕಲೆಹಾಕಿದ ಶ್ರೀಲಂಕಾ.
7 ವಿಕೆಟ್ ಕಬಳಿಸಿರುವ ಅಫ್ಘಾನಿಸ್ತಾನ್ ತಂಡದಿಂದ ಉತ್ತಮ ಬೌಲಿಂಗ್.
ಕ್ರೀಸ್ನಲ್ಲಿ ಮಹೀಶ್ ತೀಕ್ಷಣ ಹಾಗೂ ಏಂಜೆಲೊ ಮ್ಯಾಥ್ಯೂಸ್ ಬ್ಯಾಟಿಂಗ್.
ಹಾಸನ: ನಿತ್ಯ 2,600 ಕ್ಯೂಸೆಕ್ ನೀರು ಹರಿಸುವಂತೆ ಸಿಡಬ್ಲೂಆರ್ಸಿ ಸೂಚನೆ ನೀಡಿರುವ ಸಂಬಂಧ ರಾಜ್ಯ ಸರ್ಕಾರ ರೈತರ ಹಿತ ಕಾಯುವಲ್ಲಿ ಸಂಪೂರ್ಣ ವಿಫಲವಾಗಿದೆ. ನೀರಾವರಿ ಸಚಿವರೇ ಸಾಕಷ್ಟು ನೀರಿದೆ ಅಂದ್ರೆ ಇನ್ನೇನು ಮಾಡುತ್ತಾರೆ. ಈಗ ನಮ್ಮ ರೈತರ ಬೆಳೆಗೂ ನೀರು ಹರಿಸಲಿ. ಕನಿಷ್ಠ 10 ದಿನಗಳಿಗೊಮ್ಮೆಯಾದರೂ ನಮ್ಮ ಬೆಳೆಗೆ ನೀರು ಹರಿಸಲಿ. ಇಂಡಿಯಾ ಮೈತ್ರಿಕೂಟ ಜತೆ ಸರ್ಕಾರ ಸೇರಿ ರೈತರ ಹಿತ ಬಲಿಕೊಟ್ಟಿದೆ. ತಮಿಳುನಾಡಿನಲ್ಲಿ 40 ಸೀಟ್ ಗೆಲ್ಲಬೇಕೆಂದು ರೈತರ ಹಿತ ಕಡೆಗಣಿಸಲಾಗುತ್ತಿದೆ. ನಮ್ಮ ಸರ್ಕಾರ ತಮಿಳುನಾಡಿನ ಸರ್ಕಾರದ ಅಧೀನದಲ್ಲಿದೆ. ಕರ್ನಾಟಕದ ಈಗಿನ ಸರ್ಕಾರ ತನ್ನನ್ನು ತಮಿಳುನಾಡಿಗೆ ಅಡ ಇಟ್ಟಿದೆ ಎಂದು ಸರ್ಕಾರದ ವಿರುದ್ಧ ಶಾಸಕ ಹೆಚ್.ಡಿ.ರೇವಣ್ಣ ವಾಗ್ದಾಳಿ ಮಾಡಿದರು.
40ನೇ ಓವರ್ನ 5ನೇ ಎಸೆತದಲ್ಲಿ ರನ್ ಕದಿಯುವ ಯತ್ನದಲ್ಲಿ ದುಷ್ಮಂತ ಚಮೀರಾ ರನೌಟ್. ಇಬ್ರಾಹಿಂ ಝದ್ರಾನ್ ಅತ್ಯುತ್ತಮ ಫೀಲ್ಡಿಂಗ್.
40 ಓವರ್ಗಳ ಮುಕ್ತಾಯದ ವೇಳೆಗೆ ಶ್ರೀಲಂಕಾ ತಂಡದ ಸ್ಕೋರ್ 185 ರನ್ಗಳು.
7 ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ಅಫ್ಘಾನಿಸ್ತಾನ್.
ಫಝಲ್ಹಕ್ ಫಾರೂಖಿ ಎಸೆದ 39ನೇ ಓವರ್ನ 5ನೇ ಎಸೆತದಲ್ಲಿ ರಶೀದ್ ಖಾನ್ಗೆ ಕ್ಯಾಚ್ ನೀಡಿ ಹೊರನಡೆದ ಚರಿತ್ ಅಸಲಂಕಾ.
28 ಎಸೆತಗಳಲ್ಲಿ 22 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಚರಿತ್ ಅಸಲಂಕಾ.
ಕ್ರೀಸ್ನಲ್ಲಿ ದುಷ್ಮಂತ್ ಚಮೀರಾ ಹಾಗೂ ಏಂಜೆಲೊ ಮ್ಯಾಥ್ಯೂಸ್ ಬ್ಯಾಟಿಂಗ್.
ಬೆಂಗಳೂರು: ನಿತ್ಯ 2,600 ಕ್ಯೂಸೆಕ್ ನೀರು ಹರಿಸುವಂತೆ ಸಿಡಬ್ಲೂಆರ್ಸಿ ಸೂಚನೆ ವಿಚಾರವಾಗಿ ಸದ್ಯಕ್ಕೆ ನೀರು ಬಿಡುವ ಸ್ಥಿತಿಯಲ್ಲಿ ಇಲ್ಲ. ಕೃಷ್ಣರಾಜ ಸಾಗರ ಜಲಾಶಯಕ್ಕೆ ಸದ್ಯಕ್ಕೆ ಒಳ ಹರಿವು ಶೂನ್ಯವಿದೆ. ಕುಡಿಯುವ ನೀರಿಗೆ ಆದ್ಯತೆ ನೀಡಬೇಕಿದೆ. ಸದ್ಯಕ್ಕೆ ತಮಿಳುನಾಡಿಗೆ ಕಾವೇರಿ ನೀರು ಬಿಡುವ ಸ್ಥಿತಿಯಲ್ಲಿ ಇಲ್ಲ. ದೇವರ ಮೊರೆ ಹೋಗೋಣ, ಮಳೆ ಬರಲಿ ಎಂದು ಪ್ರಾರ್ಥಿಸೋಣ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ರಶೀದ್ ಖಾನ್ ಎಸೆದ 36ನೇ ಓವರ್ನ ಕೊನೆಯ ಎಸೆತದಲ್ಲಿ ಧನಂಜಯ ಡಿಸಿಲ್ವಾ ಕ್ಲೀನ್ ಬೌಲ್ಡ್.
26 ಎಸೆತಗಳಲ್ಲಿ 14 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಧನಂಜಯ ಡಿಸಿಲ್ವಾ.
ಕ್ರೀಸ್ನಲ್ಲಿ ಚರಿತ್ ಅಸಲಂಕಾ ಹಾಗೂ ಏಂಜೆಲೊ ಮ್ಯಾಥ್ಯೂಸ್ ಬ್ಯಾಟಿಂಗ್.
35 ಓವರ್ಗಳ ಮುಕ್ತಾಯದ ವೇಳೆಗೆ 166 ರನ್ ಕಲೆಹಾಕಿದ ಶ್ರೀಲಂಕಾ.
4 ವಿಕೆಟ್ ಕಬಳಿಸಿರುವ ಅಫ್ಘಾನಿಸ್ತಾನ್ ತಂಡ.
ಕ್ರೀಸ್ನಲ್ಲಿ ಚರಿತ್ ಅಸಲಂಕಾ ಹಾಗೂ ಧನಂಜಯ ಡಿಸಿಲ್ವಾ ಬ್ಯಾಟಿಂಗ್.
ಮಂಡ್ಯ: ಮತ್ತೆ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸಿಡಬ್ಲೂಆರ್ಸಿ ಆದೇಶ ಹೊರಿಡಿಸಿದ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಹೆದ್ದಾರಿ ತಡೆದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ರೈತರು ಪ್ರತಿಭಟನೆ ನಡೆಸಿ,
ಸಿಡಬ್ಲೂಆರ್ಸಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
33 ಓವರ್ಗಳ ಮುಕ್ತಾಯದ ವೇಳೆ 4 ವಿಕೆಟ್ ಕಬಳಿಸಿ 157 ರನ್ ನೀಡಿದ ಅಫ್ಘಾನಿಸ್ತಾನ್ ಬೌಲರ್ಗಳು.
ಕ್ರೀಸ್ನಲ್ಲಿ ಚರಿತ್ ಅಸಲಂಕಾ ಹಾಗೂ ಧನಂಜಯ ಡಿಸಿಲ್ವಾ ಬ್ಯಾಟಿಂಗ್.
ಮುಜೀಬ್ ಉರ್ ರೆಹಮಾನ್ ಎಸೆದ 30ನೇ ಓವರ್ನ ಮೊದಲ ಎಸೆತದಲ್ಲೇ ಎಲ್ಬಿಡಬ್ಲ್ಯೂ ಆದ ಸದೀರ ಸಮರವಿಕ್ರಮ.
40 ಎಸೆತಗಳಲ್ಲಿ 36 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಸದೀರ ಸಮರವಿಕ್ರಮ.
30 ಓವರ್ಗಳ ಮುಕ್ತಾಯದ ವೇಳೆಗೆ 144 ರನ್ ಕಲೆಹಾಕಿದ ಶ್ರೀಲಂಕಾ.
ಬೆಂಗಳೂರು: ನವೆಂಬರ್ 3ರಿಂದ ಬಿಜೆಪಿಯ 17 ತಂಡದಿಂದ ಬರ ಅಧ್ಯಯನ ಪ್ರವಾಸ ನಡೆಯಲಿದೆ. ನವೆಂಬರ್ 10ವರೆಗೆ ಪ್ರತಿ ತಂಡದಿಂದ 2 ಜಿಲ್ಲೆಗಳಲ್ಲಿ ಬರ ಪ್ರವಾಸ ನಡೆಯುತ್ತದೆ. ಬಿ.ಎಸ್.ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲು, ಸಿ.ಟಿ.ರವಿ, ಅರವಿಂದ ಬೆಲ್ಲದ್, ಶ್ರೀರಾಮುಲು, ಕೆ.ಎಸ್.ಈಶ್ವರಪ್ಪ, ಆರಗ ಜ್ಞಾನೇಂದ್ರ, ವಿಶ್ವೇಶ್ವರ ಹೆಗಡೆ ಕಾಗೇರಿ, ಆರ್.ಅಶೋಕ್, ಡಿ.ವಿ.ಸದಾನಂದಗೌಡ, ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಬರ ವೀಕ್ಷಣೆ ಮಾಡುತ್ತೇವೆ ಎಂದು ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್ ತಿಳಿಸಿದರು.
26 ಓವರ್ಗಳ ಮುಕ್ತಾಯದ ವೇಳೆ 129 ರನ್ ಕಲೆಹಾಕಿರುವ ಶ್ರೀಲಂಕಾ ತಂಡ.
3ನೇ ವಿಕೆಟ್ಗೆ 45 ರನ್ಗಳ ಜೊತೆಯಾಟವಾಡಿರುವ ಸದೀರ-ಕುಸಾಲ್.
ಕೇವಲ 2 ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿರುವ ಅಫ್ಘಾನ್ ಬೌಲರ್ಗಳು.
ಕ್ರೀಸ್ನಲ್ಲಿ ಸದೀರ ಸಮರವಿಕ್ರಮ ಹಾಗೂ ಕುಸಾಲ್ ಮೆಂಡಿಸ್ ಬ್ಯಾಟಿಂಗ್.
20 ಓವರ್ಗಳ ಮುಕ್ತಾಯದ ವೇಳೆಗೆ 87 ರನ್ ಕಲೆಹಾಕಿದ ಶ್ರೀಲಂಕಾ ತಂಡ.
2 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿರುವ ಅಫ್ಘಾನಿಸ್ತಾನ್ ಬೌಲರ್ಗಳು.
ಕ್ರೀಸ್ನಲ್ಲಿ ಸದೀರ ಸಮರವಿಕ್ರಮ ಹಾಗೂ ಕುಸಾಲ್ ಮೆಂಡಿಸ್ ಬ್ಯಾಟಿಂಗ್.
ಅಝ್ಮತ್ ಒಮರ್ಝಾಹಿ ಎಸೆದ 19ನೇ ಓವರ್ನ ಮೊದಲ ಎಸೆತದಲ್ಲೇ ಕ್ಯಾಚ್ ನೀಡಿ ಔಟಾದ ಪಾತುಮ್ ನಿಸ್ಸಂಕಾ.
60 ಎಸೆತಗಳಲ್ಲಿ 46 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಶ್ರೀಲಂಕಾ ತಂಡದ ಆರಂಭಿಕ ಆಟಗಾರ.
ಕ್ರೀಸ್ನಲ್ಲಿ ಸದೀರ ಸಮರವಿಕ್ರಮ ಹಾಗೂ ಕುಸಾಲ್ ಮೆಂಡಿಸ್ ಬ್ಯಾಟಿಂಗ್.
ಬೆಂಗಳೂರು: ರಾಜ್ಯದ ಜನರು ಏನು ತೀರ್ಪು ಕೊಡಬೇಕು ಅದನ್ನು ಕೊಟ್ಟಿದ್ದಾರೆ. ನಮಗೆ ಮಾಡಲು ಕೆಲಸ ಇದೆ ಎಂದು ಶಾಸಕ ರಮೇಶ್ ಜಾರಕಿಹೊಳಿ ಆರೋಪಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪರೋಕ್ಷವಾಗಿ ತಿರುಗೇಟು ನೀಡಿದರು.
ನವೀನ್ ಉಲ್ ಹಕ್ ಎಸೆದ 15ನೇ ಓವರ್ನ 3ನೇ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಕುಸಾಲ್ ಮೆಂಡಿಸ್.
15 ಓವರ್ಗಳ ಮುಕ್ತಾಯದ ವೇಳೆಗೆ 66 ರನ್ ಕಲೆಹಾಕಿದ ಶ್ರೀಲಂಕಾ.
ಕ್ರೀಸ್ನಲ್ಲಿ ಕುಸಾಲ್ ಮೆಂಡಿಸ್ (12) ಹಾಗೂ ಪಾತುಮ್ ನಿಸ್ಸಂಕಾ (38) ಬ್ಯಾಟಿಂಗ್.
ಬೆಂಗಳೂರು: ಮಂಗಳವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟವಾಗುತ್ತದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ಪ್ರಕಟಿಸಲಿದ್ದಾರೆ. ಈ ಬಾರಿ 68 ಸಾಧಕರು, 10 ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಲಿದೆ. ರವಿವಾರ ರಾತ್ರಿ ನಡೆದ ಮುಖ್ಯಂತ್ರಿ, ಉಪಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಟ್ಟಿ ಅಂತಿಮಗೊಳಿಸಲಾಗಿದೆ. ರಾಜ್ಯೋತ್ಸವ ಪ್ರಶಸ್ತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸ್ವೀಕಾರ ಆಗಿತ್ತು.
10 ಓವರ್ಗಳಲ್ಲಿ 41 ರನ್ ಕಲೆಹಾಕಿದ ಶ್ರೀಲಂಕಾ ತಂಡ.
ದಿಮಿತ್ ಕರುಣರತ್ನೆ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ಅಫ್ಘಾನಿಸ್ತಾನ್.
ಕ್ರೀಸ್ನಲ್ಲಿ ಕುಸಾಲ್ ಮೆಂಡಿಸ್ ಹಾಗೂ ಪಾತುಮ್ ನಿಸ್ಸಂಕಾ ಬ್ಯಾಟಿಂಗ್.
ಫಝಲ್ಹಕ್ ಹಕ್ ಫಾರೂಖಿ ಎಸೆದ 6ನೇ ಓವರ್ನ 2ನೇ ಎಸೆತದಲ್ಲಿ ದಿಮುತ್ ಕರುಣರತ್ನೆ ಎಲ್ಬಿಡಬ್ಲ್ಯೂ..ಔಟ್.
21 ಎಸೆತಗಳಲ್ಲಿ 15 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಎಡಗೈ ದಾಂಡಿಗ ದಿಮುತ್ ಕರುಣರತ್ನೆ.
ಕ್ರೀಸ್ನಲ್ಲಿ ಕುಸಾಲ್ ಮೆಂಡಿಸ್ ಹಾಗೂ ಪಾತುಮ್ ನಿಸ್ಸಂಕಾ ಬ್ಯಾಟಿಂಗ್.
5 ಓವರ್ಗಳಲ್ಲಿ 18 ರನ್ ಕಲೆಹಾಕಿದ ಶ್ರೀಲಂಕಾ.
ಮೊದಲ ಐದು ಓವರ್ಗಳಲ್ಲಿ ಯಾವುದೇ ಬೌಂಡರಿ ನೀಡದ ಅಫ್ಘಾನಿಸ್ತಾನ್ ಬೌಲರ್ಗಳು.
ಕ್ರೀಸ್ನಲ್ಲಿ ದಿಮುತ್ ಕರುಣರತ್ನೆ ಹಾಗೂ ಪಾತುಮ್ ನಿಸ್ಸಂಕಾ ಬ್ಯಾಟಿಂಗ್.
ಮೊದಲ ಮೂರು ಓವರ್ಗಳಲ್ಲಿ ಕೇವಲ 10 ರನ್ ನೀಡಿದ ಅಫ್ಘಾನಿಸ್ತಾನ್ ಬೌಲರ್ಗಳು.
ಮೂರು ಓವರ್ಗಳಲ್ಲಿ ಒಂದೇ ಒಂದು ಫೋರ್ ಬಾರಿಸದ ಶ್ರೀಲಂಕಾ ಬ್ಯಾಟರ್ಗಳು.
ಕ್ರೀಸ್ನಲ್ಲಿ ದಿಮುತ್ ಕರುಣರತ್ನೆ ಹಾಗೂ ಪಾತುಮ್ ನಿಸ್ಸಂಕಾ ಬ್ಯಾಟಿಂಗ್.
ಬೆಂಗಳೂರು: ಸಂಪುಟದಲ್ಲಿ ಅವಕಾಶ ಕೊಡುತ್ತೇವೆ ಅಂತ ಹೈಕಮಾಂಡ್ ಹೇಳಿದೆ. ಯಾವುದೇ ಹೇಳಿಕೆ ನೀಡಬಾರದೆಂದು ಡಿಸಿಎಂ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ. ಈ ವಿಚಾರವಾಗಿ ಜಾಸ್ತಿ ಮಾತನಾಡಲ್ಲ. ಮಂತ್ರಿ ಆಗಬೇಕೆಂಬ ಆಸೆ ನನಗೂ ಇದೆ, ಟೈಂ ಬಂದಾಗ ಆಗುತ್ತೇನೆ. ನಮ್ಮ ಹಣೆಬರಹ, ಯಾವಾಗ ಟೈಂ ಬರುತ್ತೆಂದು ಕಾಯುತ್ತಿದ್ದೇವೆ. ಸಚಿವ ಸ್ಥಾನ ಸಿಗುವ ಬಗ್ಗೆ ನೂರಕ್ಕೆ ನೂರರಷ್ಟು ಭರವಸೆ ಇದೆ ಎಂದು ಕಾಂಗ್ರೆಸ್ ಶಾಸಕ ಅಶೋಕ ಪಟ್ಟಣ್ ಹೇಳಿದರು.
ಮೊದಲ ಓವರ್ನಲ್ಲಿ ಕೇವಲ 4 ರನ್ ನೀಡಿದ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್.
ಕ್ರೀಸ್ನಲ್ಲಿ ದಿಮುತ್ ಕರುಣರತ್ನೆ ಹಾಗೂ ಪಾತುಮ್ ನಿಸ್ಸಂಕಾ ಬ್ಯಾಟಿಂಗ್.
ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಮಾಡುತ್ತಿರುವ ಅಫ್ಘಾನಿಸ್ತಾನ್.
ಶ್ರೀಲಂಕಾ (ಪ್ಲೇಯಿಂಗ್ XI): ಪಾತುಮ್ ನಿಸ್ಸಾಂಕ, ಕುಸಾಲ್ ಪೆರೇರಾ, ಕುಸಾಲ್ ಮೆಂಡಿಸ್ (ನಾಯಕ), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ಏಂಜೆಲೊ ಮ್ಯಾಥ್ಯೂಸ್, ಮಹೀಶ್ ತೀಕ್ಷಣ, ಕಸುನ್ ರಜಿತ, ದುಷ್ಮಂತ ಚಮೀರ, ದಿಲ್ಶನ್ ಮಧುಶಂಕ.
ಅಫ್ಘಾನಿಸ್ತಾನ್ (ಪ್ಲೇಯಿಂಗ್ XI): ರಹಮಾನುಲ್ಲಾ ಗುರ್ಬಾಝ್, ಇಬ್ರಾಹಿಂ ಝದ್ರಾನ್, ರಹಮತ್ ಷಾ, ಹಶ್ಮತುಲ್ಲಾ ಶಾಹಿದಿ (ನಾಯಕ), ಅಜ್ಮತುಲ್ಲಾ ಒಮರ್ಜಾಯ್, ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್), ಮೊಹಮ್ಮದ್ ನಬಿ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನವೀನ್-ಉಲ್-ಹಕ್, ಫಝಲ್ಹಕ್ ಫಾರೂಖಿ.
ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಅಫ್ಘಾನಿಸ್ತಾನ್ ತಂಡದ ನಾಯಕ ಹಶ್ಮತ್ ಬೌಲಿಂಗ್ ಆಯ್ದುಕೊಂಡಿದ್ದಾರೆ.
Published On - 1:33 pm, Mon, 30 October 23