IND vs ENG: ಕೊಹ್ಲಿ ಕಾಲೆಳೆದ ಬಾರ್ಮಿ ಆರ್ಮಿಗೆ ಭಾರತ್ ಆರ್ಮಿ ನೀಡಿದ ತಿರುಗೇಟು ಹೇಗಿತ್ತು ಗೊತ್ತಾ?

IND vs ENG, ICC World Cup 2023: ವಿಶ್ವಕಪ್​ನಲ್ಲಿ ಮೊದಲ ಬಾರಿಗೆ ಶೂನ್ಯಕ್ಕೆ ಔಟಾದ ಕೊಹ್ಲಿಯನ್ನು ಇಂಗ್ಲೆಂಡ್​ನ ಬಾರ್ಮಿ ಆರ್ಮಿ ತನ್ನ ಎಕ್ಸ್​ ಖಾತೆಯಲ್ಲಿ ಲೆವಡಿ ಮಾಡಿ ಪೋಸ್ಟ್ ಹಾಕಿತ್ತು. ಆದರೆ ಇಂಗ್ಲೆಂಡ್ ಇನ್ನಿಂಗ್ಸ್ ಆರಂಭವಾದ ಕೆಲವೇ ಸಮಯದಲ್ಲಿ ಕೊಹ್ಲಿ ಕಾಲೆಳೆದಿದ್ದ ಬಾರ್ಮಿ ಆರ್ಮಿಗೆ, ಭಾರತ್ ಆರ್ಮಿ ಸರಿಯಾಗಿ ಟಾಂಗ್ ನೀಡಿತು.

IND vs ENG: ಕೊಹ್ಲಿ ಕಾಲೆಳೆದ ಬಾರ್ಮಿ ಆರ್ಮಿಗೆ ಭಾರತ್ ಆರ್ಮಿ ನೀಡಿದ ತಿರುಗೇಟು ಹೇಗಿತ್ತು ಗೊತ್ತಾ?
ಬಾರ್ಮಿ ಆರ್ಮಿ, ಭಾರತ್ ಆರ್ಮಿ ನಡುವಿನ ಟ್ವೀಟ್ ವಾರ್
Follow us
ಪೃಥ್ವಿಶಂಕರ
|

Updated on:Oct 30, 2023 | 12:16 PM

ಲಕ್ನೋದ ಏಕನಾ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ವಿಶ್ವಕಪ್ ಪಂದ್ಯವನ್ನು ಟೀಂ ಇಂಡಿಯಾ 100 ರನ್​ಗಳಿಂದ ಗೆದ್ದು ಬೀಗಿದೆ. ಇಂಗ್ಲೆಂಡ್​ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ ಆಗಿದ್ದರಿಂದ ಈ ಪಂದ್ಯದ ಮೇಲೆ ಭಾರಿ ನಿರೀಕ್ಷೆಗಳಿದ್ದವು. ಆದರೆ ಟೀಂ ಇಂಡಿಯಾದ ಸಾಂಘೀಕ ಆಟಕ್ಕೆ ಮಂಕಾದ ಇಂಗ್ಲೆಂಡ್‌ ತನ್ನ ಸೋಲಿನ ಸರಣಿಯನ್ನು ಮುಂದುವರೆಸಿತು. ಈ ಪಂದ್ಯದಲ್ಲಿ ಟಾಸ್ ಸೋತ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಬೇಕಾಯಿತು. ಆದರೆ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಆರಂಭಿಕ ಗಿಲ್ ಒಂದಂಕಿಗೆ ಸುಸ್ತಾದರೆ, ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ವಿಶ್ವಕಪ್​ನಲ್ಲಿ ಮೊದಲ ಬಾರಿಗೆ ಶೂನ್ಯಕ್ಕೆ ಔಟಾದ ಕೊಹ್ಲಿಯನ್ನು ಇಂಗ್ಲೆಂಡ್​ನ ಬಾರ್ಮಿ ಆರ್ಮಿ (Barmy Army) ತನ್ನ ಎಕ್ಸ್​ ಖಾತೆಯಲ್ಲಿ ಲೆವಡಿ ಮಾಡಿ ಪೋಸ್ಟ್ ಹಾಕಿತ್ತು. ಆದರೆ ಇಂಗ್ಲೆಂಡ್ ಇನ್ನಿಂಗ್ಸ್ ಆರಂಭವಾದ ಕೆಲವೇ ಸಮಯದಲ್ಲಿ ಕೊಹ್ಲಿ ಕಾಲೆಳೆದಿದ್ದ ಬಾರ್ಮಿ ಆರ್ಮಿಗೆ, ಭಾರತ್ ಆರ್ಮಿ (Bharat Army) ಸರಿಯಾಗಿ ಟಾಂಗ್ ನೀಡಿತು.

ಕೊಹ್ಲಿ ಕಾಲೆಳೆದ ಬಾರ್ಮಿ ಆರ್ಮಿ

ವಾಸ್ತವವಾಗಿ ಭಾರತದ ಇನ್ನಿಂಗ್ಸ್​ನ 4ನೇ ಓವರ್​ನಲ್ಲಿ ಶುಭ್​ಮನ್ ಗಿಲ್ ವಿಕೆಟ್ ಬಳಿಕ ಮೈದಾನಕ್ಕೆ ಬಂದ ಕೊಹ್ಲಿ ಬರೋಬ್ಬರಿ 9 ಎಸೆತಗಳನ್ನು ಎದುರಿಸಿ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು. 7ನೇ ಓವರ್ ಬೌಲ್ ಮಾಡಲು ಬಂದ ಕ್ರಿಸ್ ವೋಕ್ಸ್ ವಿರಾಟ್ ಕೊಹ್ಲಿಯನ್ನು ಶೂನ್ಯಕ್ಕೆ ಪೆವಿಲಿಯನ್​ಗಟ್ಟುವಲ್ಲಿ ಯಶಸ್ವಿಯಾದರು. ವಿಶ್ವಕಪ್ ಪಂದ್ಯವೊಂದರಲ್ಲಿ ವಿರಾಟ್ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಡಕ್ ಔಟ್ ಆಗಿದ್ದು ಇದೇ ಮೊದಲು. ಕೊಹ್ಲಿಯ ಈ ಶೂನ್ಯ ಸಂಪಾದನೆಯನ್ನು ಇಂಗ್ಲೆಂಡ್‌ನ ಬಾರ್ಮಿ ಆರ್ಮಿ, ಕೊಹ್ಲಿ ಫೋಟೋವನ್ನು ವ್ಯಂಗ್ಯವಾಗಿ ಟ್ವೀಟ್ ಮಾಡಿತ್ತು.

ಟಕ್ಕರ್ ನೀಡಿದ ಭಾರತ್ ಆರ್ಮಿ

ಇದಾದ ಬಳಿಕ 230 ರನ್‌ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್‌ಗೆ ಭಾರತ ಆರಂಭದಲ್ಲೇ ಆಘಾತ ನೀಡಿತು. ಭಾರತದ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಮೊಹಮ್ಮದ್ ಶಮಿ ಆಂಗ್ಲರಿಗೆ ಬ್ಯಾಕ್ ಟು ಬ್ಯಾಕ್ ಆಘಾತ ನೀಡಿದರು. ಮೊದಲಿಗೆ ಬುಮ್ರಾ, ಜೋ ರೂಟ್ ಅವರನ್ನು ಶೂನ್ಯಕ್ಕೆ ಪೆವಿಲಿಯನ್​ ಗಟ್ಟಿದರೆ, ಮೊಹಮ್ಮದ್ ಶಮಿ ಬೆನ್ ಸ್ಟೋಕ್ಸ್ ಅವರನ್ನು ಶೂನ್ಯಕ್ಕೆ ತಮ್ಮ ಬಲೆಗೆ ಕೆಡುವಿದರು. ಇಂಗ್ಲೆಂಡ್ ಆಟಗಾರರ ಶೂನ್ಯ ಪೆವಿಲಿಯನ್ ಪರೇಡ್ ಗಮನಿಸಿದ ಭಾರತ್ ಆರ್ಮಿ ಜೋ ರೂಟ್ ಹಾಗೂ ಬೆನ್ ಸ್ಟೋಕ್ಸ್ ಅವರ ಶೂನ್ಯ ಸಂಪಾದನೆಯನ್ನು ತನ್ನ ಎಕ್ಸ್ ಖಾತೆಯಲ್ಲಿ ಟ್ರೋಲ್ ಮಾಡುವುದರೊಂದಿಗೆ ಬಾರ್ಮಿ ಆರ್ಮಿಗೆ ಸರಿಯಾಗಿ ಟಕ್ಕರ್ ನೀಡಿತು. ಬಾರ್ಮಿ ಆರ್ಮಿ ಮಾಡಿದಂತೆಯೇ ಸ್ಟೋಕ್ಸ್ ಹಾಗೂ ರೂಟ್ ಫೋಟೋವನ್ನು ಭಾರತ್ ಆರ್ಮಿ ವ್ಯಂಗ್ಯವಾಗಿ ಪೋಸ್ಟ್ ಮಾಡಿತ್ತು.

ಮೂವರು ಶೂನ್ಯಕ್ಕೆ ಔಟ್

ಈ ಪಂದ್ಯದಲ್ಲಿ ಜೋ ರೂಟ್ ಹಾಗೂ ಬೆನ್ ಸ್ಟೋಕ್ಸ್ ಮಾತ್ರವಲ್ಲದೆ ಬಾಲಂಗೋಚಿ ಮಾರ್ಕ್​ವುಡ್​ ಕೂಡ ಸೊನ್ನೆಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಇಂಗ್ಲೆಂಡ್ ತಂಡದ ಮೂವರು ಆಟಗಾರರು ಸೊನ್ನೆಗೆ ವಿಕೆಟ್ ಒಪ್ಪಿಸಿದರೆ, ಉಳಿದಂತೆ ತಂಡದ 7 ಆಟಗಾರರಿಗೆ 20 ರನ್​ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ತಂಡದ ಪರ ಲಿಯಾಮ್ ಲಿವಿಂಗ್​ಸ್ಟನ್ 27 ರನ್ ಬಾರಿಸಿದ್ದೆ ತಂಡದ ಪರ ದಾಖಲಾದ ಅತ್ಯಧಿಕ ಮೊತ್ತವಾಯಿತು. ಇದೀಗ ಭಾರತದ ವಿರುದ್ಧ ಹೀನಾಯವಾಗಿ ಸೋತಿರುವ ಇಂಗ್ಲೆಂಡ್ ತಂಡಕ್ಕೆ ಉಳಿದಿರುವ 3 ಪಂದ್ಯಗಳು ಏಕದಿನ ವಿಶ್ವಕಪ್​ನಲ್ಲಿ ಕೇವಲ ಔಪಚಾರಿಕವಾಗಿವೆ. ಏಕೆಂದರೆ ಉಳಿದ ಮೂರೂ ಪಂದ್ಯಗಳನ್ನು ಗೆದ್ದರೂ ಇಂಗ್ಲೆಂಡ್ ತಂಡಕ್ಕೆ ಸೆಮಿಫೈನಲ್‌ ಟಿಕೆಟ್ ಸಿಗುವುದು ಅನುಮಾನ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:12 pm, Mon, 30 October 23

ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ