Virat Kohli: ಕೊಹ್ಲಿಯ ಮಿಂಚಿನ ವೇಗಕ್ಕೆ ಕಡಿವಾಣ: 5 ವರ್ಷಗಳ ಭಿನ್ನವಾಗಿ ಔಟ್ ಆದ ವಿರಾಟ್

| Updated By: ಝಾಹಿರ್ ಯೂಸುಫ್

Updated on: Sep 30, 2021 | 3:27 PM

IPL 2021: ಆರ್​ಸಿಬಿಗೆ ಉತ್ತಮ ಆರಂಭ ಒದಗಿಸುವಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಯಶಸ್ವಿಯಾಗಿದ್ದರು. ಮೊದಲ ವಿಕೆಟ್​ಗೆ 48 ರನ್ ಪೇರಿಸುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು.

Virat Kohli: ಕೊಹ್ಲಿಯ ಮಿಂಚಿನ ವೇಗಕ್ಕೆ ಕಡಿವಾಣ: 5 ವರ್ಷಗಳ ಭಿನ್ನವಾಗಿ ಔಟ್ ಆದ ವಿರಾಟ್
Virat Kohli
Follow us on

ಐಪಿಎಲ್​ನ 43ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು 17 ಎಸೆತಗಳು ಬಾಕಿ ಇರುವಂತೆ 7 ವಿಕೆಟ್ ಗಳಿಂದ ಸೋಲಿಸಿತು. ಆರ್​ಆರ್​ ತಂಡ ನೀಡಿದ 150 ರನ್​ಗಳ ಟಾರ್ಗೆಟ್​​ ಅನ್ನು ಆರ್​ಸಿಬಿ ಗ್ಲೆನ್ ಮ್ಯಾಕ್ಸ್​ವೆಲ್ ಅವರ ಅಬ್ಬರ ಅರ್ಧಶತಕದ ನೆರವಿನಿಂದ ಸುಲಭವಾಗಿ ಚೇಸ್ ಮಾಡಿತು. ಇದಕ್ಕೂ ಮುನ್ನ ಆರ್​ಸಿಬಿಗೆ ಉತ್ತಮ ಆರಂಭ ಒದಗಿಸುವಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಯಶಸ್ವಿಯಾಗಿದ್ದರು. ಮೊದಲ ವಿಕೆಟ್​ಗೆ 48 ರನ್ ಪೇರಿಸುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು. ಇದಾದ ಬಳಿಕ ಪಡಿಕ್ಕಲ್ ಬೌಲ್ಡ್​ ಆಗಿ ಹೊರ ನಡೆದಿದ್ದರು. ಆ ಬಳಿಕ ಭರತ್ ಜೊತೆಗೂಡಿದ ಕೊಹ್ಲಿ ತಂಡದ ಮೊತ್ತಕ್ಕೆ ರನ್ ಸೇರಿಸುವಷ್ಟರಲ್ಲಿ ಔಟ್ ಆಗಿ ನಿರ್ಗಮಿಸಿದ್ದರು. ಆದರೆ ಈ ಬಾರಿ ಕೊಹ್ಲಿ ಔಟ್ ಆಗಿದ್ದು ರನೌಟ್​ ಮೂಲಕ ಎಂಬುದು ವಿಶೇಷ.

ಹೌದು, ವಿಶ್ವದ ಶ್ರೇಷ್ಠ ಬ್ಯಾಟ್ಸ್​ಮನ್ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ರನೌಟ್ ಆಗಿ ನಿರ್ಗಮಿಸಿದ್ದು ಅಪರೂಪ. ಅದರಲ್ಲೂ ಐಪಿಎಲ್​ನಲ್ಲಿ ರನೌಟ್ ಮೂಲಕ ವಿಕೆಟ್ ಒಪ್ಪಿಸಿದ್ದು ತೀರಾ ವಿರಳ. ಆದರೆ ರಾಜಸ್ಥಾನ್ ರಾಯಲ್ಸ್​ ವಿರುದ್ದದ ಪಂದ್ಯದಲ್ಲಿ 25 ರನ್​ಗಳಿಸಿದ್ದ ಕೊಹ್ಲಿಯನ್ನು ಯುವ ಫೀಲ್ಡರ್ ರಿಯಾನ್ ಪರಾಗ್ ರನೌಟ್ ಮಾಡಿದ್ದರು. ಇದರೊಂದಿಗೆ ಕೊಹ್ಲಿ 5 ವರ್ಷಗಳ ಕಾಲ ಉಳಿಸಿಕೊಂಡಿದ್ದ ದೀರ್ಘ ದಾಖಲೆಯು ಪತನವಾಯಿತು. ಏಕೆಂದರೆ ವಿರಾಟ್ ಕೊಹ್ಲಿ ಐಪಿಎಲ್​ನಲ್ಲಿ ಕೊನೆಯ ಬಾರಿ ರನೌಟ್ ಆಗಿದ್ದು 2015 ರಲ್ಲಿ. ಆ ಬಳಿಕ ಮತ್ತೆ ಎಂದಿಗೂ ಕೊಹ್ಲಿಯನ್ನು ಫೀಲ್ಡರ್ ಥ್ರೋ ಮೂಲಕ ಔಟ್ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ರಿಯಾನ್ ಪರಾಗ್ ಅವರ ಅಧ್ಭುತ ಫೀಲ್ಡಿಂಗ್​ಗೆ ಕೊಹ್ಲಿ ವಿಕೆಟ್ ಒಪ್ಪಿಸಿದ್ದಾರೆ.

ವಿರಾಟ್ ಕೊಹ್ಲಿ ಸ್ಕ್ವೇರ್​ನತ್ತ ಬಾರಿಸಿದ್ದ ಚೆಂಡನ್ನು ಅದ್ಭುತ ಡೈವಿಂಗ್ ಮೂಲಕ ಹಿಡಿದ ರಿಯಾನ್ ಪರಾಗ್, ಅಷ್ಟೇ ವೇಗದಲ್ಲಿ ನಾನ್​ ಸ್ಟ್ರೈಕ್​ ವಿಕೆಟ್​ನತ್ತ ಎಸೆದರು. ಅತ್ತ ವೇಗವಾಗಿ ಕೊಹ್ಲಿ ಕ್ರೀಸ್​ ತಲುಪಿದರೂ, ರಿಯಾನ್ ಡೈರೆಕ್ಟ್​ ಥ್ರೋ ಮಿಂಚಿನ ವೇಗದಲ್ಲಿ ವಿಕೆಟ್​ಗೆ ಬಡಿಯಿತು. ಅದರಂತೆ ಕೊಹ್ಲಿ ಮೈಕ್ರೋ ಸೆಕೆಂಡುಗಳ ಅಂತರದಲ್ಲಿ ತಮ್ಮ ವಿಕೆಟ್ ಕಳೆದುಕೊಂಡಿದ್ದರು. ಅಲ್ಲಿಗೆ 20 ಎಸೆತಗಳಲ್ಲಿ 4 ಬೌಂಡರಿಗಳೊಂದಿಗಿನ 25 ರನ್​ಗಳ ಕೊಹ್ಲಿ ಇನಿಂಗ್ಸ್​ ಅಂತ್ಯಗೊಂಡಿತು.

ಇದನ್ನೂ ಓದಿ: IPL 2021: ಇದು ಅಂತಿಂಥ ಗೆಲುವಲ್ಲ…ಮುಂಬೈ ದಾಖಲೆಯನ್ನು ಅಳಿಸಿ ಹಾಕಿದ RCB

ಇದನ್ನೂ ಓದಿ: IPL 2021: RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು ಇವರೇ..!

ಇದನ್ನೂ ಓದಿ: Crime News: ತಾಯಿಗೆ ಅನೈತಿಕ ಸಂಬಂಧ: ಅದನ್ನೇ ಬಂಡವಾಳ ಮಾಡಿಕೊಂಡ ಮಗಳು

ಇದನ್ನೂ ಓದಿ: Mumbai Indians: ಸಾಲು ಸಾಲು ಪಂದ್ಯ ಸೋತು ಮುಂಬೈ ಪ್ಲೇ ಆಫ್ ಪ್ರವೇಶಿಸಿತ್ತು..!

(After 2015, Virat Kohli got Run out)