ಕೋಟಿ ರೂ. ಲೆಕ್ಕದಲ್ಲಿ ಕೊಹ್ಲಿಯನ್ನೇ ಹಿಂದಿಕ್ಕಿದ ಅಜಯ್ ಜಡೇಜಾ

Ajay Jadeja: ಅಜಯ್ ಜಡೇಜಾ 1992-2000 ರ ನಡುವೆ ಟೀಮ್ ಇಂಡಿಯಾ ಪರ 15 ಟೆಸ್ಟ್ ಪಂದ್ಯಗಳು ಮತ್ತು 196 ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಒಟ್ಟು 5935 ರನ್​ ಕಲೆಹಾಕಿದ್ದಾರೆ. ಅಷ್ಟೇ ಅಲ್ಲದೆ 2023ರ ಏಕದಿನ ವಿಶ್ವಕಪ್ ವೇಳೆ ಅಫ್ಘಾನಿಸ್ತಾನ್ ತಂಡದ ಮೆಂಟರ್ ಆಗಿಯೂ ಜಡೇಜಾ ಕಾರ್ಯ ನಿರ್ವಹಿಸಿದ್ದರು.

ಕೋಟಿ ರೂ. ಲೆಕ್ಕದಲ್ಲಿ ಕೊಹ್ಲಿಯನ್ನೇ ಹಿಂದಿಕ್ಕಿದ ಅಜಯ್ ಜಡೇಜಾ
Ajay Jadeja - Virat Kohli
Follow us
|

Updated on: Oct 15, 2024 | 11:15 AM

ಭಾರತದಲ್ಲಿ ಕ್ರಿಕೆಟ್ ಅತ್ಯಂತ ಶ್ರೀಮಂತ ಮತ್ತು ಹೆಚ್ಚು ಲಾಭದಾಯಕ ಕ್ರೀಡೆ ಎಂಬುದರಲ್ಲಿ ಡೌಟೇ ಇಲ್ಲ. ಆದರೆ ಈ ವಾರ ಭಾರತದ ಮಾಜಿ ತಾರೆಯೊಬ್ಬರು ಟೀಮ್ ಇಂಡಿಯಾ ದಂತಕಥೆಗಳಾದ ಎಂಎಸ್ ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ನಿವ್ವಳ ಮೌಲ್ಯದಲ್ಲಿ ಹಿಂದಿಕ್ಕಿದ್ದಾರೆ ಎಂದರೆ ನಂಬಲೇಬೇಕು.

ಹೌದು, ಭಾರತ ತಂಡದ ಮಾಜಿ ಆಟಗಾರ ಅಜಯ್ ಜಡೇಜಾ ಅವರ ನಿವ್ವಳ ಮೌಲ್ಯವು ಇದ್ದಕ್ಕಿದ್ದಂತೆ 1450 ಕೋಟಿ ರೂ. ಆಗಿದೆ. ಇದಕ್ಕೆ ಮುಖ್ಯ ಕಾರಣ ಅವರು ಜಾಮ್‌ ನಗರ ರಾಜಮನೆತನದ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿರುವುದು.

ಇದೇ ದಸರಾ ದಿನದಂದು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಅವರನ್ನು ಜಾಮ್ ​ನಗರದ ಸಿಂಹಾಸನದ ಉತ್ತರಾಧಿಕಾರಿ ಎಂದು ಘೋಷಿಸಲಾಗಿದೆ. ಅದರಂತೆ ಮುಂಬರುವ ದಿನಗಳಲ್ಲಿ ಜಡೇಜಾ, ಜಾಮ್ ​ನಗರ (ನವನಗರ) ರಾಜಮನೆತನದ ಜಾಮ್​ ಸಾಹೇಬ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಇದರೊಂದಿಗೆ ಅಜಯ್ ಜಡೇಜಾ ಅವರ ನಿವ್ವಳ ಮೌಲ್ಯವು 1,450 ಕೋಟಿ ರೂ.ಗೆ ಏರಿದೆ. ಇದು ಟೀಮ್ ಇಂಡಿಯಾ ಕ್ರಿಕೆಟಿಗರರಾದ ವಿರಾಟ್ ಕೊಹ್ಲಿ ಹಾಗೂ ಮಹೇಂದ್ರ ಸಿಂಗ್ ಧೋನಿಗಿಂತ ಹೆಚ್ಚು ಎಂಬುದು ವಿಶೇಷ.

ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರ ಪ್ರಸ್ತುತ ನಿವ್ವಳ ಮೌಲ್ಯವು 1,022 ಕೋಟಿ ರೂ. ಇದ್ದರೆ, ವಿರಾಟ್ ಕೊಹ್ಲಿಯ ನೆಟ್ ವರ್ತ್​ 1,050 ಕೋಟಿ ರೂ. ತಲುಪಿದೆ. ಇದೀಗ ಈ ಇಬ್ಬರು ಸ್ಟಾರ್ ಕ್ರಿಕೆಟಿಗರನ್ನು 1,450 ಕೋಟಿ ರೂ. ನೊಂದಿಗೆ ಅಜಯ್ ಜಡೇಜಾ ಹಿಂದಿಕ್ಕಿರುವುದು ವಿಶೇಷ.

ಅಜಯ್ ಜಡೇಜಾ ಅವರ ಆಯ್ಕೆ ಯಾಕೆ?

ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಜಾಮ್‌ ನಗರದ ರಾಜಮನೆತನಕ್ಕೆ ಸೇರಿದವರು. ಇದಲ್ಲದೆ, ಅವರು ರಣಜಿತ್‌ಸಿನ್‌ಜಿ ಜಡೇಜಾ ಮತ್ತು ದುಲೀಪ್‌ಸಿನ್‌ಜಿ ಜಡೇಜಾ ಅವರ ಕುಟುಂಬಸ್ಥರು. ರಣಜಿತ್​ಸಿನ್​ಜಿ ಅವರ ಹೆಸರಿನಲ್ಲಿಯೇ ಭಾರತದಲ್ಲಿ ರಣಜಿ ಟ್ರೋಫಿ ಪಂದ್ಯಗಳನ್ನು ಆಯೋಜಿಸಲಾಗುತ್ತದೆ. ಹಾಗೆಯೇ ದುಲೀಪ್​ಸಿನ್​​ಜಿ ಹೆಸರಿನಲ್ಲಿ ದುಲೀಪ್ ಟ್ರೋಫಿಗಳನ್ನು ಆಡಲಾಗುತ್ತದೆ.

ಇದನ್ನೂ ಓದಿ: IPL 2025: RCB ತಂಡದಿಂದ ಗ್ರೀನ್​ಗೆ ಗೇಟ್​ ಪಾಸ್..!

ಇದೀಗ ಜಾಮ್‌ ನಗರದ ಜಾಮ್ ಸಾಹೇಬ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಶತ್ರುಸಲ್ಯಸಿನ್​ಜಿ ಅವರು ದಸರಾ ದಿನದಂದು ಅಜಯ್ ಜಡೇಜಾ ಅವರನ್ನು ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿದ್ದಾರೆ. ಅದರಂತೆ ಮುಂಬರುವ ದಿನಗಳಲ್ಲಿ ಅಜಯ್ ಜಡೇಜಾ ಜಾಮ್ ನಗರ ರಾಜಮನೆತನದ ಜಾಮ್ ಸಾಹೇಬ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

ತನಿಖೆಯ ನಂತರ ಪೂರ್ಣ ಮಾಹಿತಿ ನೀಡುತ್ತೇವೆ: ಡಾ ಶರಣಪ್ಪ, ಪೊಲೀಸ್ ಕಮೀಶನರ್
ತನಿಖೆಯ ನಂತರ ಪೂರ್ಣ ಮಾಹಿತಿ ನೀಡುತ್ತೇವೆ: ಡಾ ಶರಣಪ್ಪ, ಪೊಲೀಸ್ ಕಮೀಶನರ್
ಬೆಂಗಳೂರಲ್ಲಿ ಧಾರಾಕಾರ ಮಳೆ: ಬೆಳ್ಳಂಬೆಳಗ್ಗೆಯೇ ಶುರುವಾಯ್ತು ರಗಳೆ
ಬೆಂಗಳೂರಲ್ಲಿ ಧಾರಾಕಾರ ಮಳೆ: ಬೆಳ್ಳಂಬೆಳಗ್ಗೆಯೇ ಶುರುವಾಯ್ತು ರಗಳೆ
ಬೆಂಗಳೂರಲ್ಲಿ ಬೆಳ್ಳಂ ಬೆಳಗ್ಗೆ ಧಾರಾಕಾರ ಮಳೆ; ಕೆಲಸಕ್ಕೆ ಹೋಗುವ ಜನರಿಗೆ ರಗಳ
ಬೆಂಗಳೂರಲ್ಲಿ ಬೆಳ್ಳಂ ಬೆಳಗ್ಗೆ ಧಾರಾಕಾರ ಮಳೆ; ಕೆಲಸಕ್ಕೆ ಹೋಗುವ ಜನರಿಗೆ ರಗಳ
‘ನಾನು ಅನ್​ಫಿಟ್ ಅನಿಸುತ್ತಿದೆ’; ಕಣ್ಣೀರು ಹಾಕಿದ ಧನರಾಜ್ ಆಚಾರ್
‘ನಾನು ಅನ್​ಫಿಟ್ ಅನಿಸುತ್ತಿದೆ’; ಕಣ್ಣೀರು ಹಾಕಿದ ಧನರಾಜ್ ಆಚಾರ್
ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ಹುಂಡಿ‌ ಎಣಿಕೆ ಕಾರ್ಯ, ಕಾಣಿಕೆಹಣ ಎಷ್ಟಿದೆ?
ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ಹುಂಡಿ‌ ಎಣಿಕೆ ಕಾರ್ಯ, ಕಾಣಿಕೆಹಣ ಎಷ್ಟಿದೆ?
Daily Devotional: ಕನಸಿನಲ್ಲಿ ಹಾವುಗಳು ಕಂಡರೆ ಏನು ಅರ್ಥ? ಈ ವಿಡಿಯೋ ನೋಡಿ
Daily Devotional: ಕನಸಿನಲ್ಲಿ ಹಾವುಗಳು ಕಂಡರೆ ಏನು ಅರ್ಥ? ಈ ವಿಡಿಯೋ ನೋಡಿ
Nithya Bhavishya: ಶುಭ ಮಂಗಳವಾರದ ದಿನ ಭವಿಷ್ಯ ತಿಳಿಯಿರಿ
Nithya Bhavishya: ಶುಭ ಮಂಗಳವಾರದ ದಿನ ಭವಿಷ್ಯ ತಿಳಿಯಿರಿ
ರಾಮಲೀಲಾ ವೇಳೆ ವೇದಿಕೆಯಲ್ಲೇ ಕಿತ್ತಾಡಿಕೊಂಡ ರಾಮ -ರಾವಣ; ವಿಡಿಯೋ ವೈರಲ್
ರಾಮಲೀಲಾ ವೇಳೆ ವೇದಿಕೆಯಲ್ಲೇ ಕಿತ್ತಾಡಿಕೊಂಡ ರಾಮ -ರಾವಣ; ವಿಡಿಯೋ ವೈರಲ್
ಐಶ್ವರ್ಯಾ, ಅನುಷಾ ರೈ ನಡುವೆ ಜೋರು ಜಗಳ; ಬಿಗ್​ ಬಾಸ್​ ಮನೆಯಲ್ಲಿ ರಂಪಾಟ
ಐಶ್ವರ್ಯಾ, ಅನುಷಾ ರೈ ನಡುವೆ ಜೋರು ಜಗಳ; ಬಿಗ್​ ಬಾಸ್​ ಮನೆಯಲ್ಲಿ ರಂಪಾಟ
ರಸ್ತೆಯಲ್ಲೇ ಯುವಕನಿಗೆ ಹೊಡೆದು ಕೊಲೆ; ಮಗನ ಮೇಲೆ ಮಲಗಿ ಬೇಡಿಕೊಂಡ ತಾಯಿ
ರಸ್ತೆಯಲ್ಲೇ ಯುವಕನಿಗೆ ಹೊಡೆದು ಕೊಲೆ; ಮಗನ ಮೇಲೆ ಮಲಗಿ ಬೇಡಿಕೊಂಡ ತಾಯಿ