AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Amit Mishra: ವಿವಾದಕ್ಕೆ ಕಾರಣವಾಯಿತು ಆರ್​ಸಿಬಿ-ಎಲ್​ಎಸ್​ಜಿ ನಡುವಣ ರೋಚಕ ಪಂದ್ಯ: ಫಲಿತಾಂಶದಲ್ಲಿ ಆಗುತ್ತಾ ಬದಲಾವಣೆ?

RCB vs LSG, IPL 2023: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2023ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಖನೌ ಸೂಪರ್ ಜೇಂಟ್ಸ್ ನಡುವಣ ಪಂದ್ಯದಲ್ಲಿ ಅಮಿತ್ ಮಿಶ್ರಾ ಮಾಡಿದ ಎಡವಟ್ಟು ವಿವಾದಕ್ಕೆ ಕಾರಣವಾಗಿದೆ.

Amit Mishra: ವಿವಾದಕ್ಕೆ ಕಾರಣವಾಯಿತು ಆರ್​ಸಿಬಿ-ಎಲ್​ಎಸ್​ಜಿ ನಡುವಣ ರೋಚಕ ಪಂದ್ಯ: ಫಲಿತಾಂಶದಲ್ಲಿ ಆಗುತ್ತಾ ಬದಲಾವಣೆ?
Amit Mishra and Virat Kohli
Vinay Bhat
|

Updated on:Apr 11, 2023 | 10:40 AM

Share

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಖನೌ ಸೂಪರ್ ಜೇಂಟ್ಸ್ (RCB vs LSG) ನಡುವಣ ಪಂದ್ಯ ಕೊನೆಯ ಓವರ್ ವರೆಗೂ ತುದಿಗಾಲಿನಲ್ಲಿ ನಿಲ್ಲಿಸಿತ್ತು. ಅಂತಿಮವಾಗಿ ಕೊನೆಯ ಎಸೆತದಲ್ಲಿ ಒಂದು ರನ್ ಕಲೆಹಾಕುವ ಮೂಲಕ ಎಲ್​ಎಸ್​ಜಿ 1 ವಿಕೆಟ್​ಗಳ ರೋಚಕ ಜಯ ಸಾಧಿಸಿತು. ಈ ಮೂಲಕ ಕೆಎಲ್ ರಾಹುಲ್ ಪಡೆ ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನಕ್ಕೇರಿದೆ. ಆರ್​ಸಿಬಿ ಏಳನೇ ಸ್ಥಾನದಲ್ಲಿದೆ. ಆರ್​ಸಿಬಿ- ಎಲ್​ಎಸ್​ಜಿ ನಡುವಣ ಪಂದ್ಯ ಕೆಲ ಕುತೂಹಲಕಾರಿ ಘಟನೆಗೂ ಸಾಕ್ಷಿಯಾಯಿತು. ಕೊಹ್ಲಿ (Virat Kohli), ಡುಪ್ಲೆಸಿಸ್, ಮ್ಯಾಕ್ಸ್​ವೆಲ್, ಸ್ಟಾಯಿನಿಸ್, ಪೂರನ್ ಫೋರ್-ಸಿಕ್ಸರ್​ಗಳ ಮಳೆ ಸುರಿಸಿದರು. ಇದರ ನಡುವೆ ಈ ಪಂದ್ಯದಲ್ಲಿ ಅಮಿತ್ ಮಿಶ್ರಾ (Amit Mishra) ಮಾಡಿದ ಎಡವಟ್ಟು ವಿವಾದಕ್ಕೆ ಕಾರಣವಾಗಿದೆ.

ಲಖನೌ ಸೂಪರ್ ಜೇಂಟ್ಸ್ ತಂಡದ ಹಿರಿಯ ಸ್ಪಿನ್ನರ್ ಅಮಿತ್ ಮಿಶ್ರಾ ಅನಗತ್ಯವಾಗಿ ವಿವಾದವೊಂದನ್ನು ತಮ್ಮ ಮೈಮೇಲೆ ಹಾಕಿಕೊಂಡಿದ್ದಾರೆ. ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಮಿಶ್ರಾ ಚೆಂಡಿನ ಹೊಳಪು ನಿರ್ವಹಿಸಲು ಎಂಜಲು ಬಳಸಿದ್ದಾರೆ. ಇದು ಐಸಿಸಿ ನಿಯಮದ ವಿರುದ್ಧವಾಗಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕಳೆದ ವರ್ಷ ಅಕ್ಟೋಬರ್​ನಲ್ಲಿ ಕ್ರಿಕೆಟ್ ಪಂದ್ಯಗಳಲ್ಲಿ ಚೆಂಡಿನ ಹೊಳಪು ನಿರ್ವಹಿಸಲು ಎಂಜಲು ಬಳಸುವುದನ್ನು ಶಾಶ್ವತವಾಗಿ ನಿಷೇಧಿಸಿದೆ. ಹೀಗಿದ್ದರೂ 40 ವರ್ಷದ ಅನುಭವಿ ಸ್ಪಿನ್ನರ್ ಮಿಶ್ರಾ ಚೆಂಡಿಗೆ ಎಂಜಲು ಬಳಸಿ ನಿಯಮದ ವಿರುದ್ಧ ಹೋಗಿದ್ದಾರೆ.

ಇದನ್ನೂ ಓದಿ
Image
Faf Duplessis: ಪಂದ್ಯ ಮುಗಿದ ಬಳಿಕ ಬೇಸರದ ಮಾತುಗಳನ್ನಾಡಿದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್: ಏನು ಹೇಳಿದ್ರು ನೋಡಿ
Image
DC vs MI, IPL 2023: ಐಪಿಎಲ್​ನಲ್ಲಿಂದು ಸೋತವರ ಕಾಳಗ: ಮೊದಲ ಗೆಲುವಿಗೆ ಡೆಲ್ಲಿ-ಮುಂಬೈ ಸೆಣೆಸಾಟ
Image
IPL 2023: ಬರೋಬ್ಬರಿ 115 ಮೀಟರ್ ಸಿಕ್ಸ್: ಫಾಫ್ ಡುಪ್ಲೆಸಿಸ್ ಶಾಟ್​ಗೆ ನಿಬ್ಬೆರಗಾದ ಪ್ರೇಕ್ಷಕರು
Image
Nicholas Pooran: ದಾಖಲೆಯ ಬ್ಯಾಟಿಂಗ್ ಮೂಲಕ RCB ಯ ಗೆಲುವು ಕಸಿದ ನಿಕೋಲಸ್ ಪೂರನ್

Nicholas Pooran: ದಾಖಲೆಯ ಬ್ಯಾಟಿಂಗ್ ಮೂಲಕ RCB ಯ ಗೆಲುವು ಕಸಿದ ನಿಕೋಲಸ್ ಪೂರನ್

ಆರ್​ಸಿಬಿ ಬ್ಯಾಟಿಂಗ್ ಇನ್ನಿಂಗ್ಸ್​ನ 12ನೇ ಓವರ್​ನಲ್ಲಿ ಈ ಘಟನೆ ನಡೆದಿದೆ. ನಾಯಕ ಕೆಎಲ್ ರಾಹುಲ್ ಮೊದಲ ಬಾರಿ ಬೌಲಿಂಗ್ ಮಾಡಲು ಅವಕಾಶ ನೀಡಿದಾಗ ಮಿಶ್ರಾ ಅವರು ಮೊದಲ ಎಸೆತ ಹಾಕುವ ಮುನ್ನ ಚೆಂಡಿಗೆ ಎಂಜಲು ಬಳಸಿದ್ದಾರೆ. ಇದು ಕ್ಯಾಮೆರಾ ಕಣ್ಣಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ತನ್ನ ಮೊದಲ ಎರಡು ಎಸೆತಗಳಲ್ಲಿ ತಲಾ ಒಂದೊಂದು ರನ್ ನೀಡಿದ ಇವರು ಮೂರನೇ ಎಸೆತದಲ್ಲಿ 61 ರನ್ ಗಳಿಸಿದ್ದ ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದರು.

ಅಮಿತ್ ಮಿಶ್ರಾ ಈರೀತಿಯ ತಪ್ಪುಗಳನ್ನು ಎಸಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಐಪಿಎಲ್ 2021 ರಲ್ಲಿ ಕೂಡ ಕೋವಿಡ್ ನಿಯಮವಿದ್ದಾಗ ಚೆಂಡಿಗೆ ಎಂಜಲು ಬಳಸುವುದು ನಿಷೇಧವಾಗಿತ್ತು. ಆಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡುತ್ತಿದ್ದ ಮಿಶ್ರಾ ಅಲ್ಲೂ ಮೊದಲ ಎಸೆತ ಹಾಕುವ ಮುನ್ನ ಚೆಂಡಿಗೆ ಎಂಜಲು ಬಳಸಿದ್ದರು. ಈ ಸಂದರ್ಭ ಆನ್​-ಫೀಲ್ಡ್ ಅಂಪೈರ್ ಮೊದಲ ಎಚ್ಚರಿಕೆ ನೀಡಿದ್ದರು. ಇದೀಗ ಆರ್​ಸಿಬಿ-ಲಖನೌ ಪಂದ್ಯದಲ್ಲಿ ಕೂಡ ನಿಯಮದ ವಿರುದ್ಧ ನಡೆದುಕೊಂಡಿದ್ದಾರೆ. ಇದರಿಂದ ಪಂದ್ಯದ ಫಲಿತಾಂಶದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ನಿಯಮವನ್ನು ಮೀರಿದ್ದಕ್ಕಾಗಿ ಮಿಶ್ರಾ ಅವರಿಗೆ ದಂಡ ವಿಧಿಸುವ ಸಾಧ್ಯತೆ ಇದೆ.

ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿ ಪರ ವಿರಾಟ್​ ಕೊಹ್ಲಿ (61), ಫಾಫ್​ ಡುಪ್ಲೆಸಿಸ್​ (79*) ಮತ್ತು ಗ್ಲೆನ್​ ಮ್ಯಾಕ್ಸ್​ವೆಲ್​ (59) ಭರ್ಜರಿ ಅರ್ಧಶತಕ ಸಿಡಿಸಿದರು. ಇವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಬೆಂಗಳೂರು 20 ಓವರ್​ಗಳಲ್ಲಿ ಎರಡು ವಿಕೆಟ್​ ನಷ್ಟಕ್ಕೆ 212 ರನ್​ ಗಳಿಸಿತು. ಗುರಿ ಬೆನ್ನತ್ತಿದ ಲಖನೌ ತಂಡಕ್ಕೆ ಆರ್​ಸಿಬಿ ಬೌಲರ್​ಗಳು ಆರಂಭದಲ್ಲಿ ಕಾಡಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಮಾರ್ಕಸ್ ಸ್ಟೊಯಿನಿಸ್ (30 ಎಸೆತಗಳಲ್ಲಿ 65 ರನ್) ಮತ್ತು ನಿಕೋಲಾಸ್ ಪೂರನ್ (19 ಎಸೆತಗಳಲ್ಲಿ 62 ರನ್) ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಕೊನೆಯ ಎಸೆತದಲ್ಲಿ ಎಲ್​ಎಸ್​ಜಿ ಗೆಲುವಿಗೆ 1 ರನ್ ಬೇಕಾಗುತ್ತು. ಆರ್​ಸಿಬಿ ಮಾಡಿದ ಕೆಲ ಎಡವಟ್ಟಿನಿಂದ ಲಖನೌ ಬೈಸ್ ಮೂಲಕ ಒಂದು ರನ್ ಕಲೆಹಾಕಿ ಗೆಲುವು ಕಂಡಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:40 am, Tue, 11 April 23

ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?