IPL 2023: ಬರೋಬ್ಬರಿ 115 ಮೀಟರ್ ಸಿಕ್ಸ್: ಫಾಫ್ ಡುಪ್ಲೆಸಿಸ್ ಶಾಟ್ಗೆ ನಿಬ್ಬೆರಗಾದ ಪ್ರೇಕ್ಷಕರು
Faf Du Plessis 115-metre Six: ಗ್ಲೆನ್ ಮ್ಯಾಕ್ಸ್‌ವೆಲ್ ಕೇವಲ 29 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 3 ಫೋರ್ ಒಳಗೊಂಡಂತೆ 59 ರನ್ ಚಚ್ಚಿದರು. ಡುಪ್ಲೆಸಿಸ್ ಹಾಗೂ ಮ್ಯಾಕ್ಸಿಯ ಈ ಸಿಡಿಲಬ್ಬರದ ಬ್ಯಾಟಿಂಗ್ ಪರಿಣಾಮ ಆರ್ಸಿಬಿ ತಂಡವು ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಿತು.
IPL 2023 RCB vs LSG: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 15ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಲಕ್ನೂ ಸೂಪರ್ ಜೈಂಟ್ಸ್ (LSG) ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ತಂಡದ ನಾಯಕ ಕೆಎಲ್ ರಾಹುಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಆರ್ಸಿಬಿ ತಂಡಕ್ಕೆ ಆರಂಭಿಕರಾದ ಫಾಫ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ (Virat Kohli) ಸಿಡಿಲಬ್ಬರದ ಆರಂಭ ಒದಗಿಸಿದ್ದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಕಿಂಗ್ ಕೊಹ್ಲಿ ಲಕ್ನೋ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ ಕೇವಲ 35 ಎಸೆತಗಳಲ್ಲಿ ಕೊಹ್ಲಿ 47ನೇ ಅರ್ಧಶತಕ ಪೂರೈಸಿದರು. ಅಷ್ಟೇ ಅಲ್ಲದೆ 44 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 4 ಫೋರ್ನೊಂದಿಗೆ 61 ರನ್ ಬಾರಿಸಿ ಅಮಿತ್ ಮಿಶ್ರಾಗೆ ವಿಕೆಟ್ ಒಪ್ಪಿಸಿದರು.
ವಿರಾಟ್ ಕೊಹ್ಲಿಯ ನಿರ್ಗಮನದ ಬಳಿಕ ಜೊತೆಯಾದ ಫಾಫ್ ಡುಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದರು. ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ಗಳ ಸುರಿಮಳೆಗೈಯುತ್ತಾ ಇಬ್ಬರು ಅಬ್ಬರಿಸಿದರು. ಇದರ ನಡುವೆ ರವಿ ಬಿಷ್ಣೋಯ್ ಎಸೆದ 15ನೇ ಓವರ್ನ ಮೂರನೇ ಎಸೆತವನ್ನು ಫಾಫ್ ಡುಪ್ಲೆಸಿಸ್ ಸ್ಟೇಡಿಯಂನ ಮೇಲ್ಛಾವಣಿಗೆ ತಲುಪಿಸಿದ್ದರು.
ಬರೋಬ್ಬರಿ 115 ಮೀಟರ್ ಉದ್ದದ ಸಿಕ್ಸ್ ನೋಡಿ ನಾನ್ ಸ್ಟ್ರೈಕ್ನಲ್ಲಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ದಂಗಾದರು. ಅಲ್ಲದೆ ಸ್ಟೇಡಿಯಂನಲ್ಲಿದ್ದ ಪ್ರೇಕ್ಷಕರು ಕೂಡ ನಿಬ್ಬೆರಗಾದರು. ಇದೀಗ ಐಪಿಎಲ್ 2023 ರ ಅತ್ಯಂತ ದೂರ ಸಿಕ್ಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Longest six in IPL 2023. 115 meter by Captain FAF DU PLESSIS. ?#RCBvsLSGpic.twitter.com/DgeXDz9MHC
— Sexy Cricket Shots (@sexycricketshot) April 10, 2023
ಇನ್ನು ಅಂತಿಮ ಓವರ್ಗಳಲ್ಲಿ ಅಬ್ಬರಿಸಿದ ಡುಪ್ಲೆಸಿಸ್ ಹಾಗೂ ಮ್ಯಾಕ್ಸ್‌ವೆಲ್ ಸಿಕ್ಸ್ಗಳ ಸುರಿಮಳೆಗೈದರು. ಪರಿಣಾಮ ಫಾಫ್ ಡುಪ್ಲೆಸಿಸ್ ಕೇವಲ 45 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 5 ಫೋರ್ನೊಂದಿಗೆ ಅಜೇಯ 79 ರನ್ ಬಾರಿಸಿದರು.
ಮತ್ತೊಂದೆಡೆ ಗ್ಲೆನ್ ಮ್ಯಾಕ್ಸ್‌ವೆಲ್ ಕೇವಲ 29 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 3 ಫೋರ್ ಒಳಗೊಂಡಂತೆ 59 ರನ್ ಚಚ್ಚಿದರು. ಡುಪ್ಲೆಸಿಸ್ ಹಾಗೂ ಮ್ಯಾಕ್ಸಿಯ ಈ ಸಿಡಿಲಬ್ಬರದ ಬ್ಯಾಟಿಂಗ್ ಪರಿಣಾಮ ಆರ್ಸಿಬಿ ತಂಡವು ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಕೊನೆಯ ಎಸೆತದಲ್ಲಿ ಗೆಲ್ಲುವ ಮೂಲಕ 1 ವಿಕೆಟ್ನ ರೋಚಕ ಜಯ ಸಾಧಿಸಿತು.
?????????-??-????? becomes ???????-??-????? ?#RCBvLSG #TATAIPL #IPL2023 pic.twitter.com/KK5ZqpUmNl
— JioCinema (@JioCinema) April 10, 2023
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ 11: ವಿರಾಟ್ ಕೊಹ್ಲಿ , ಫಾಫ್ ಡು ಪ್ಲೆಸಿಸ್ (ನಾಯಕ) , ಮಹಿಪಾಲ್ ಲೊಮ್ರೋರ್ , ಗ್ಲೆನ್ ಮ್ಯಾಕ್ಸ್‌ವೆಲ್ , ಶಹಬಾಜ್ ಅಹ್ಮದ್ , ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್) , ಅನೂಜ್ ರಾವತ್ , ಡೇವಿಡ್ ವಿಲ್ಲಿ , ವೇಯ್ನ್ ಪಾರ್ನೆಲ್ , ಹರ್ಷಲ್ ಪಟೇಲ್ , ಮೊಹಮ್ಮದ್ ಸಿರಾಜ್.
ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ 11: ಕೆಎಲ್ ರಾಹುಲ್ (ನಾಯಕ) , ಕೈಲ್ ಮೇಯರ್ಸ್ , ದೀಪಕ್ ಹೂಡಾ , ಮಾರ್ಕಸ್ ಸ್ಟೊಯಿನಿಸ್ , ಕೃನಾಲ್ ಪಾಂಡ್ಯ , ನಿಕೋಲಸ್ ಪೂರನ್ ( ವಿಕೆಟ್ ಕೀಪರ್) , ಜಯದೇವ್ ಉನದ್ಕಟ್ , ಅಮಿತ್ ಮಿಶ್ರಾ , ಅವೇಶ್ ಖಾನ್ , ಮಾರ್ಕ್ ವುಡ್ , ರವಿ ಬಿಷ್ಣೋಯ್.