ಭಾರತಕ್ಕೆ ಸೋಲು, ಅಮಿತಾಭ್ ಬಚ್ಚನ್ ಟ್ವೀಟ್ ವೈರಲ್: ಡಿಲೀಟ್ ಮಾಡುವಂತೆ ಮನವಿ

| Updated By: ಝಾಹಿರ್ ಯೂಸುಫ್

Updated on: Aug 28, 2021 | 7:04 PM

Amitabh Bachchan - Joe Root: ಮೂರನೇ ಟೆಸ್ಟ್​ನಲ್ಲಿ  121 ರನ್ ಬಾರಿಸಿ ಇಂಗ್ಲೆಂಡ್ ತಂಡಕ್ಕೆ ಭರ್ಜರಿ ಮುನ್ನಡೆ ತಂದುಕೊಡುವಲ್ಲಿ ರೂಟ್ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೆ ಈ ವರ್ಷ 11 ಇನಿಂಗ್ಸ್​ಗಳಿಂದ ಒಟ್ಟು 1398 ರನ್ ಬಾರಿಸುವ ಮೂಲಕ ಇಂಗ್ಲೆಂಡ್ ಪರ ಒಂದೇ ವರ್ಷದಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ಕ್ಯಾಪ್ಟನ್ ಎನಿಸಿಕೊಂಡಿದ್ದಾರೆ.

ಭಾರತಕ್ಕೆ ಸೋಲು, ಅಮಿತಾಭ್ ಬಚ್ಚನ್ ಟ್ವೀಟ್ ವೈರಲ್: ಡಿಲೀಟ್ ಮಾಡುವಂತೆ ಮನವಿ
Amitabh Bachchan- Joe Root
Follow us on

India vs England 3rd Test: ಲೀಡ್ಸ್​ನಲ್ಲಿ ನಡೆದ ಟೀಮ್ ಇಂಡಿಯಾ (Team India) ವಿರುದ್ದದ 3ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ (England) ತಂಡ ಭರ್ಜರಿ ಜಯ ಸಾಧಿಸಿದೆ. ಮೊದಲ ಇನಿಂಗ್ಸ್​ನಲ್ಲಿ ಭಾರತವನ್ನು ಕೇವಲ 78 ರನ್​ಗೆ ಆಲೌಟ್ ಮಾಡಿದ್ದ ಇಂಗ್ಲೆಂಡ್ 432 ರನ್​ ಕಲೆಹಾಕಿತ್ತು. ಬೃಹತ್ ಮೊತ್ತದ ಮುನ್ನಡೆ ಪಡೆದಿದ್ದ ಆಂಗ್ಲರು ಎರಡನೇ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾವನ್ನು 278 ರನ್​ಗಳಿಗೆ ಆಲೌಟ್ ಮಾಡಿದೆ. ಈ ಮೂಲಕ ಇನಿಂಗ್ಸ್​ ಹಾಗೂ 76 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಬೆನ್ನಲ್ಲೇ ಬಾಲಿವುಡ್ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರ ಹಳೆಯ ಟ್ವೀಟ್​ವೊಂದು ವೈರಲ್ ಆಗಿದೆ. ಇದೀಗ ಈ ಟ್ವೀಟ್​ ಅನ್ನು ಡಿಲೀಟ್ ಮಾಡುವಂತೆ ಬಿಗ್-ಬಿ ಗೆ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಮನವಿ ಮಾಡುತ್ತಿದ್ದಾರೆ. ಅಷ್ಟಕ್ಕೂ ಆ ಟ್ವೀಟ್​ನಲ್ಲಿ ಏನಿದೆ ಎಂದು ಗಮನಿಸಿದರೆ…

2016 ರಲ್ಲಿ ಟಿ20 ವಿಶ್ವಕಪ್​ನ ಸೆಮಿ ಫೈನಲ್​ನಲ್ಲಿ ವಿರಾಟ್ ಕೊಹ್ಲಿ (Virat Kohli) ಕೇವಲ 51 ಎಸೆತಗಳಲ್ಲಿ ಅಜೇಯ 82 ರನ್ ಸಿಡಿಸಿದ್ದರು. ಈ ಭರ್ಜರಿ ಇನಿಂಗ್ಸ್​ ಬಗ್ಗೆ ಪ್ರತಿಕ್ರಿಯಿಸಿದ್ದ ಇಂಗ್ಲೆಂಡ್​ನ ಮಾಜಿ ಆಲ್​ರೌಂಡರ್​ ಆಂಡ್ರೊ ಫ್ಲಿಂಟಾಫ್, ಕೊಹ್ಲಿ ಇದೇ ರೀತಿಯಲ್ಲಿ ಮುಂದುವರೆದೆ ಮುಂದೊಂದು ದಿನ ಜೋ ರೂಟ್​ರಂತೆ (Joe Root) ಉತ್ತಮ ಬ್ಯಾಟ್ಸ್​ಮನ್ ಆಗಲಿದ್ದಾರೆ ಎಂದಿದ್ದರು.

ಫ್ಲಿಂಟಾಫ್ ಅವರ ಈ ಟ್ವೀಟ್​ ನೋಡಿ ಕೆರಳಿದ್ದ ಅಮಿತಾಭ್ ಬಚ್ಚನ್, ಯಾರು ರೂಟ್​? ಬುಡದಿಂದಲೇ ರೂಟ್ (ಬೇರು) ಕಿತ್ತು ಹಾಕುತ್ತೇವೆ ಎಂದು ಮರು ಟ್ವೀಟ್ ಮಾಡಿದ್ದರು. ಇದೀಗ ಆ ಹಳೇ ಟ್ವೀಟ್ ವೈರಲ್ ಆಗುತ್ತಿದೆ. ಏಕೆಂದರೆ ಟೀಮ್ ಇಂಡಿಯಾ ವಿರುದ್ದ ಜೋ ರೂಟ್ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಪ್ರಸ್ತುತ ಸರಣಿಯ ಮೂರು ಪಂದ್ಯಗಳಲ್ಲಿ ರೂಟ್ ಭಾರತದ ವಿರುದ್ದ ಮೂರು ಶತಕಗಳನ್ನು ಬಾರಿಸಿದ್ದಾರೆ.

ಅಮಿತಾಭ್ ಬಚ್ಚನ್ ಮಾಡಿದ ಹಳೆಯ ಟ್ವೀಟ್

ಮೂರನೇ ಟೆಸ್ಟ್​ನಲ್ಲಿ  121 ರನ್ ಬಾರಿಸಿ ಇಂಗ್ಲೆಂಡ್ ತಂಡಕ್ಕೆ ಭರ್ಜರಿ ಮುನ್ನಡೆ ತಂದುಕೊಡುವಲ್ಲಿ ರೂಟ್ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೆ ಈ ವರ್ಷ 11 ಇನಿಂಗ್ಸ್​ಗಳಿಂದ ಒಟ್ಟು 1398 ರನ್ ಬಾರಿಸುವ ಮೂಲಕ ಇಂಗ್ಲೆಂಡ್ ಪರ ಒಂದೇ ವರ್ಷದಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ಕ್ಯಾಪ್ಟನ್ ಎನಿಸಿಕೊಂಡಿದ್ದಾರೆ. ಇದರಲ್ಲಿ 4 ಶತಕ ಹಾಗೂ 2 ದ್ವಿಶತಕ ಹಾಗೂ 1 ಅರ್ಧಶತಕಗಳು ಸೇರಿವೆ.

ಈ ಎಲ್ಲಾ ಕಾರಣಗಳಿಂದ ಯಾರು ರೂಟ್? ಎಂಬ ಅಮಿತಾಭ್ ಬಚ್ಚನ್ ಅವರ ಪ್ರಶ್ನೆ ಮುನ್ನಲೆಗೆ ಬಂದಿದೆ. ಅಷ್ಟೇ ಅಲ್ಲದೆ ರೂಟ್ ಯಾರು ಎಂಬ ಪ್ರಶ್ನೆಗೆ ಟೀಮ್ ಇಂಡಿಯಾ ವಿರುದ್ದದ ಮೂರು ಪಂದ್ಯಗಳಲ್ಲಿನ ಮೂರು ಶತಕಗಳೇ ಉತ್ತರ ಎಂದು ಕೆಲವರು ಬಿಗ್ ಬಿ ಅನ್ನು ಕಾಲೆಳೆಯುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ಅಭಿಮಾನಿಗಳು ಹಳೆಯ ಟ್ವೀಟ್​ ಅನ್ನು ಡಿಲೀಟ್ ಮಾಡುವಂತೆ ಅಮಿತಾಭ್ ಬಚ್ಚನ್ ಅವರಲ್ಲಿ ಕೇಳಿ ಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ 5 ಪಂದ್ಯಗಳ ಸರಣಿಯ 3 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಬೌಲರುಗಳ ಪಾಲಿಗೆ ಜೋ ರೂಟ್​ ತಡಗೋಡೆಯಾಗಿ ಪರಿಣಮಿಸಿರುವುದಂತು ಸುಳ್ಳಲ್ಲ.

ಇದನ್ನೂ ಓದಿ: T20 ವಿಶ್ವಕಪ್ ಅರ್ಹತಾ​ ಪಂದ್ಯ: 20 ಓವರ್​ನಲ್ಲಿ ಕೇವಲ 32 ರನ್​..!

ಇದನ್ನೂ ಓದಿ: India vs England 3rd test: ಸಿರಾಜ್ ಮೇಲೆ ಚೆಂಡಿನ ದಾಳಿ: ಮುಂದುವರೆದ ಇಂಗ್ಲೆಂಡ್ ಪ್ರೇಕ್ಷಕರ ಪುಂಡಾಟ

ಇದನ್ನೂ ಓದಿ: IPL 2021: ಮಾಜಿ RCB ಆಟಗಾರ, ವಿಶ್ವದ ನಂಬರ್ 1 ಬೌಲರ್ ರಾಜಸ್ಥಾನ್ ರಾಯಲ್ಸ್ ಪಾಲು

(Amitabh Bachchan’s tweet on Joe Root goes viral, demand to delete)