Pat Cummins: ಪ್ಯಾಟ್ ಕಮಿನ್ಸ್ ಸ್ಫೋಟಕ ಆಟ ಕಂಡು ಮೈದಾನದಲ್ಲಿ ರಸೆಲ್ ಮಾಡಿದ್ದೇನು ನೋಡಿ
Andre Russell dance after Pat Cummins record fifty: ಮುಂಬೈ ಇಂಡಿಯನ್ಸ್ ವಿರುದ್ಧ ದಾಖಲೆಯ ಅರ್ಧಶತಕದೊಂದಿಗೆ ಪಂದ್ಯವನ್ನು ಗೆಲ್ಲಿಸಿ ಕೊಟ್ಟ ಪ್ಯಾಟ್ ಕಮಿನ್ಸ್ರನ್ನು ಪಂದ್ಯ ಮುಗಿದ ಬಳಿಕ ಕೆಕೆಆರ್ನ ಇತರೆ ಆಟಗಾರರು ಓಡಿ ಬಂದು ಅಪ್ಪಿಕೊಂಡರು. ಅದರಲ್ಲೂ ಆಂಡ್ರೆ ರಸೆಲ್ ಮಾಡಿದ್ದೇನು ನೋಡಿ.
ಈಗಾಗಲೇ ಸ್ಫೋಟಕ ಬ್ಯಾಟರ್ಗಳಿಂದ ತುಂಬಿ ತುಳುಕಾಡುತ್ತಿರುವ ಶ್ರೇಯಸ್ ಅಯ್ಯರ್ (Shreyas Iyer) ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ತಂಡಕ್ಕೆ ಇದೀಗ ಮತ್ತೊಬ್ಬ ಬಿಗ್ ಹಿಟ್ಟರ್ನ ಎಂಟ್ರಿ ಆಗಿದೆ. ಅದುವೇ ಆಸ್ಟ್ರೇಲಿಯಾ ಆಲ್ರೌಂಡರ್ ಪ್ಯಾಟ್ ಕಮಿನ್ಸ್ (Pat Cummins). ಆಡಿದ ಮೊದಲ ಪಂದ್ಯದಲ್ಲೇ ದಾಖಲೆಯ ಅರ್ಧಶತಕ ಸಿಡಿಸಿ ತಂಡಕ್ಕೆ ಊಹಿಸಲಾಗದ ರೀತಿಯಲ್ಲಿ ಗೆಲುವು ತಂದುಕೊಟ್ಟಿದ್ದಾರೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದ ಬ್ಯಾಟಿಂಗ್‌ಗೆ ಸುಲಭವಾಗಿರದ ಪಿಚ್ನಲ್ಲಿ ಮುಂಬೈ ಬೌಲರ್ಗಳ ಬೆವರಿಳಿಸಿ ಮನಸೋ ಇಚ್ಛೆ ಬ್ಯಾಟ್ ಬೀಸಿದ ಪ್ಯಾಟ್ ಕೇವಲ 15 ಎಸೆತಗಳಲ್ಲಿ ಅಜೇಯ 56 ರನ್ ಬಾರಿಸಿದರು. ಆರು ಸಿಕ್ಸರ್ ಮತ್ತು ನಾಲ್ಕು ಬೌಂಡರಿ ಇವರ ಬ್ಯಾಟ್ ನಿಂದ ಸಿಡಿಯಿತು. ಅದರಲ್ಲೂ ಡೇನಿಯಲ್ ಸ್ಯಾಮ್ಸ್ ಎಸೆದ 16ನೇ ಓವರ್ನಲ್ಲಿ ಕಮಿನ್ಸ್ ಬರೋಬ್ಬರಿ 35 ರನ್ ಚಚ್ಚಿದರು. ಕೇವಲ 14 ಎಸೆತದಲ್ಲಿ ಅರ್ಧಶತಕ ಪೂರೈಸಿ ಐಪಿಎಲ್ ಇತಿಹಾಸದಲ್ಲಿ ಅತೀ ವೇಗದ ಅರ್ಧಶತಕ ಬಾರಿಸಿದ ಕೆಎಲ್ ರಾಹುಲ್ ಜೊತೆ ಜಂಟಿಯಾಗಿ ಅಗ್ರ ಸ್ಥಾನ ಅಲಂಕರಿಸಿದ ಸಾಧನೆ ಕೂಡ ಮಾಡಿದ್ದಾರೆ.
ದಾಖಲೆಯ ಅರ್ಧಶತಕದೊಂದಿಗೆ ಪಂದ್ಯವನ್ನು ಗೆಲ್ಲಿಸಿ ಕೊಟ್ಟ ಪ್ಯಾಟ್ ಕಮಿನ್ಸ್ ಅವರನ್ನು ಪಂದ್ಯ ಮುಗಿದ ಬಳಿಕ ಕೆಕೆಆರ್ ತಂಡದ ಇತರೆ ಆಟಗಾರರು ಓಡಿ ಬಂದು ಅಪ್ಪಿಕೊಂಡರು. ಅದರಲ್ಲೂ ಕೆಕೆಆರ್ನ ಮತ್ತೊಬ್ಬ ಸ್ಫೋಟಕ ಹಿಟ್ಟರ್ ಆಂಡ್ರೆ ರಸೆಲ್ ನೃತ್ಯ ಮಾಡುವ ಮೂಲಕ ಸಂಭ್ರಮ ಹಂಚಿಕೊಂಡರು. ಕೋಲ್ಕತ್ತಾ ತಂಡದ ಮಾಲೀಕ, ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಕೂಡ ಪ್ಯಾಟ್ ಆಟಕ್ಕೆ ಮನಸೋತು ಟ್ವೀಟ್ ಮಾಡಿದ್ದಾರೆ. ರಸೆಲ್ ಡ್ಯಾನ್ಸ್ ಮತ್ತು ಹಗ್ ಮಾಡಿದ ರೀತಿಯಲ್ಲಿ ನನಗೂ ಮಾಡಬೇಕು ಅನಿಸುತ್ತದೆ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
Russell dance??????#KolkataKnightRiders #AmiKKR #Russell #KKRHaiTaiyaar #KKRvMI pic.twitter.com/Y3KjhIdRg8
— T srkians (@srkuniverselov) April 6, 2022
@patcummins30 I want to dance like Andre & hug u like the whole team did. Wow well done @KKRiders and what else is there to say!!!…’PAT’ DIYE CHAKKE!!!
— Shah Rukh Khan (@iamsrk) April 6, 2022
ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಆದರೆ, ಮುಂಬೈ ಈ ಬಾರಿಕೂಡ ಉತ್ತಮ ಆರಂಭ ಪಡೆದುಕೊಳ್ಳಲಿಲ್ಲ. ಇಶಾನ್ ಕಿಶನ್ ಜೊತೆ ಇನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ ಮೊದಲು ವಿಕೆಟ್ ಒಪ್ಪಿಸಿದರು. ನಂತರ ಇಶಾನ್ ಮತ್ತು ಡಿವಾಲ್ಡ್ ಬ್ರೆವಿಸ್ ನಿಧಾನಕ್ಕೆ ರನ್ ಗತಿ ಏರಿಸಲು ಹೊರಟರಾದರೂ ಸಂಪೂರ್ಣ ಯಶಸ್ಸು ಸಿಗಲಿಲ್ಲ. ವರುಣ್ ಎಸೆತದಲ್ಲಿ ಮಿಂಚಿನ ಸ್ಟಂಪಿಂಗ್ ಮಾಡಿದ ಬಿಲಿಂಗ್ಸ್, ಬ್ರೆವಿಸ್(29) ಅವರನ್ನು ವಾಪಸ್ ಕಳುಹಿಸಿದರು. ಇದರ ಬೆನ್ನಲ್ಲೇ 21 ಎಸೆತಗಳಲ್ಲಿ 14 ರನ್ ಗಳಿಸಿ ಕಿಶನ್ ಕೂಡ ಪೆವಿಲಿಯನ್ ಸೇರಿಕೊಂಡರು.
ಈ ಸಂದರ್ಭ ತಂಡಕ್ಕೆ ಸೂರ್ಯಕುಮಾರ್ ಯಾದವ್ ಆಸರೆಯಾದರು. ಇವರಿಗೆ ತಿಲಕ್ ವರ್ಮಾ ಉತ್ತಮ ಬೆಂಬಲ ಲಭಿಸಿತು. ಇಬ್ಬರೂ 83 ರನ್‌ಗಳ ಜೊತೆಯಾಟದ ಮೂಲಕ ಭರವಸೆ ಮೂಡಿಸಿದರು. ಯಾದವ್ 36 ಎಸೆತಗಳಲ್ಲಿ 52 ಹಾಘೂ ತಿಲಕ್ ಅಜೇಯ 38 ರನ್ ಸಿಡಿಸಿದರು. ಕೊನೇ ಹಂತದಲ್ಲಿ ಕೀರನ್ ಪೊಲಾರ್ಡ್ (22*, 5 ಎಸೆತ) ಬೌಂಡರಿ ಭರ್ಜರಿ ಸಿಕ್ಸರ್‌ಗಳ ಮೂಲಕ ಮಿಂಚಿದರು. ಅಂತಿಮವಾಗಿ ಮುಂಬೈ 20 ಓವರ್ಗೆ 4 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು.
ಟಾರ್ಗೆಟ್ ಬೆನ್ನತ್ತಿದ ಕೋಲ್ಕತ್ತಾ 16 ಓವರ್‌ಗಳಲ್ಲಿ 5 ವಿಕೆಟ್‌ಗೆ 162 ರನ್ ಚಚ್ಚಿತು. ಕೆಕೆಆರ್ ಇನಿಂಗ್ಸ್‌ನಲ್ಲಿ ವೆಂಕಟೇಶ್ ಐಯ್ಯರ್ ಮತ್ತು ಪ್ಯಾಟ್ ಕಮಿನ್ಸ್ ಅಬ್ಬರದ ಆಟವಾಡಿದರು. ಐಯ್ಯರ್ 41 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ನೆರವಿನಿಂದ 50 ರನ್ ಚಚ್ಚಿದರು. ಕಮಿನ್ಸ್ ಕೇವಲ 15 ಎಸೆತಗಳಲ್ಲಿ 4 ಬೌಂಡರಿ, 6 ಸಿಕ್ಸರ್ ನೆರವಿನಿಂದ 56 ರನ್ ಚಚ್ಚಿದರು. ಇವರಿಬ್ಬರ ಮುಂದೆ ಮುಂಬೈ ಬೌಲಿಂಗ್ ಪೂರ್ಣ ಸೊರಗಿತು. ಶ್ರೇಯಸ್ ಪಡೆ 5 ವಿಕೆಟ್ಗಳ ಅಮೋಘ ಗೆಲುವು ಕಂಡಿತು.
Rohit Sharma: ಸೋತ ಸಿಟ್ಟಿನಲ್ಲಿ ಪಂದ್ಯ ಮುಗಿದ ಬಳಿಕ ರೇಗಾಡಿದ ರೋಹಿತ್ ಶರ್ಮಾ: ಆಡಿದ ಮಾತು ಕೇಳಿ
IPL 2022 Points Table: 4 ರಲ್ಲಿ 3 ಗೆಲುವು: ಅಂಕಪಟ್ಟಿಯಲ್ಲಿ ಕೆಕೆಆರ್ ಟಾಪ್: ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿ?