ಕೊಹಿನೂರ್ ವಜ್ರ ತರಲು ಪ್ಲ್ಯಾನ್: ಇಂಗ್ಲೆಂಡ್ ಪ್ರಧಾನಿ ಹೆಸರಿನಲ್ಲಿ ಆಶಿಶ್ ನೆಹ್ರಾ ವೈರಲ್

Ashish Nehra-Rishi Sunak: ಈ ಐತಿಹಾಸಿಕ ವಜ್ರವನ್ನು ಮರಳಿ ತರಬೇಕೆಂಬುದು ಭಾರತೀಯರ ಆಶಯ. ಇದೀಗ ರಿಷಿ ಸುನಕ್ ಇಂಗ್ಲೆಂಡ್​ನ ಪ್ರಧಾನಿಯಾಗಲಿದ್ದಾರೆ ಎಂಬ ಸುದ್ದಿ ಬೆನ್ನಲ್ಲೇ ಕೊಹ್ಲಿನೂರ್ ವಜ್ರ ಕೂಡ ಚರ್ಚಾ ವಿಷಯವಾಗಿದೆ.

ಕೊಹಿನೂರ್ ವಜ್ರ ತರಲು ಪ್ಲ್ಯಾನ್: ಇಂಗ್ಲೆಂಡ್ ಪ್ರಧಾನಿ ಹೆಸರಿನಲ್ಲಿ ಆಶಿಶ್ ನೆಹ್ರಾ ವೈರಲ್
Ashish Nehra-Rishi Sunak
Follow us
TV9 Web
| Updated By: ಝಾಹಿರ್ ಯೂಸುಫ್

Updated on:Oct 25, 2022 | 3:05 PM

ಭಾರತೀಯ ಮೂಲದ ರಿಷಿ ಸುನಕ್ (Rishi Sunak) ಇಂಗ್ಲೆಂಡ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾದ (Team India) ಮಾಜಿ ಕ್ರಿಕೆಟಿಗ ಆಶಿಶ್ ನೆಹ್ರಾ (Ashish Nehra) ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವುದು ವಿಶೇಷ. ಅಂದರೆ ನೆಹ್ರಾ ಹಾಗೂ ರಿಷಿ ಸುನಕ್ ಮುಖಚರ್ಯೆಯಲ್ಲಿ ಸಾಮ್ಯತೆ ಇರುವುದರಿಂದ ಇದೀಗ ನಾನಾ ರೀತಿಯ ಮೀಮ್ಸ್ ಹುಟ್ಟಿಕೊಂಡಿದೆ.

ನೆಹ್ರಾ ಅವರ ಫೋಟೋಗಳೊಂದಿಗೆ ಇದೀಗ ರಿಷಿ ಸುನಕ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಇಬ್ಬರೂ ನಡುವೆ ಹೋಲಿಕೆ ಇರುವುದರಿಂದ ನೆಹ್ರಾ ಅವರ ಸ್ಟ್ರಾಟಜಿಯನ್ನು ಬಳಸಿ ನಾನಾ ರೀತಿಯ ಹಾಸ್ಯಚಟಾಕಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಅವುಗಳಲ್ಲಿ ಪ್ರಮುಖ ಮೀಮ್ಸ್​ಗಳ ಕೆಲ ಸ್ಯಾಂಪಲ್​ಗಳು ಇಲ್ಲಿವೆ.

ಇದನ್ನೂ ಓದಿ
Image
Virat Kohli: ಒಂದಲ್ಲ, ಎರಡಲ್ಲ…ಹಲವು ವಿಶ್ವ ದಾಖಲೆಗಳನ್ನು ಉಡೀಸ್ ಮಾಡಿದ ಕಿಂಗ್ ಕೊಹ್ಲಿ
Image
India vs Pakistan: ಪಾಕ್​ನ ಬಗ್ಗು ಬಡಿದು ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ
Image
IND vs PAK: ವಿಶ್ವಕಪ್​ನಲ್ಲಿ ವಿಶ್ವ ದಾಖಲೆ ಬರೆದ ರೋಹಿತ್ ಶರ್ಮಾ
Image
India vs Pakistan: ಹೊಸ ದಾಖಲೆ ನಿರ್ಮಿಸಿದ ದಿನೇಶ್ ಕಾರ್ತಿಕ್

ರಿಷಿ ಸುನಕ್ ಹಾಗೂ ಆಶಿಶ್ ನೆಹ್ರಾ ಕುಂಭಮೇಳದಲ್ಲಿ ಕಳೆದು ಹೋಗಿರುವ ಸಹೋದರಂತೆ ಕಾಣುತ್ತಾರೆ ಎಂದು ವ್ಯಕ್ತಿಯೊಬ್ಬರು ಇಬ್ಬರ ಫೋಟೋ ಟ್ವೀಟ್ ಮಾಡಿದ್ದಾರೆ.

ರಿಷಿ ಸುನಕ್ ಹಿಂದೂ ಆಗಿರುವುದರಿಂದ ಅವರು ಭಗವದ್ಗೀತೆಯ ಶ್ಲೋಕಗಳನ್ನು ಉಲ್ಲೇಖಿಸುತ್ತಾರೆ. ಹಾಗೆಯೇ ದೀಪಾವಳಿಯಂದು ದೀಪಗಳನ್ನು ಬೆಳಗಿಸುತ್ತಾರೆ. ಅವರ ಪೋಷಕರು ಭಾರತೀಯ ಮೂಲದವರು. ಈ ಹಿಂದೆ ಭಗವದ್ಗೀತೆಯನ್ನು ಪ್ರಮಾಣ ಮಾಡಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಶೀಘ್ರದಲ್ಲೇ ಬ್ರಿಟನ್ ಪ್ರಧಾನಿಯಾಗಲಿರುವುದರಿಂದ ಇನ್ನು ಕೊಹಿನೂರ್ ವಜ್ರವನ್ನು ಕೇಳುವುದು ನ್ಯಾಯಯುತವಾಗಿದೆ…ಎಂದು ವ್ಯಕ್ತಿಯೊಬ್ಬರು ಬರೆದುಕೊಂಡಿದ್ದಾರೆ.

ಅದರಲ್ಲೂ ನೆಹ್ರಾ ಅವರು ಗುಜರಾತ್ ಟೈಟಾನ್ಸ್ ತಂಡಕ್ಕಾಗಿ ಬಳಸಿಕೊಂಡಿದ್ದ ಸ್ಟ್ರಾಟಜಿಯನ್ನೇ ಬಳಸಿ ಕೊಹಿನೂರ್ ವಜ್ರವನ್ನು ತರಲು ಪ್ಲ್ಯಾನ್ ಮಾಡಬಹುದು ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.

ಮತ್ತೊಬ್ಬರು ರಿಷಿ ಸುನಕ್ ಅವರನ್ನು ಭಾರತಕ್ಕೆ ಆಹ್ವಾನಿಸಿ…ಆ ಬಳಿಕ ಅವರು ತಮ್ಮ ಹೆಂಡತಿಯ ಮನೆಗೆ ಹೋಗುವಾಗ ಬೆಂಗಳೂರು ಟ್ರಾಫಿಕ್ ಜಾಮ್​ನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಈ ವೇಳೆ ಕಿಡ್ನಾಪ್ ಮಾಡಿ, ಅವರ ಬದಲಿಗೆ ಆಶಿಶ್ ನೆಹ್ರಾ ಅವರನ್ನು ಇಂಗ್ಲೆಂಡ್​ ಕಳುಹಿಸಿ. ಆ ನಂತರ ಕೊಹಿನೂರ್ ವಜ್ರವನ್ನು ಹಿಂತಿರುಗಿಸಲು ಬಿಲ್ ಪಾಸ್ ಮಾಡಿಸಬಹುದು ಎಂದು ಟ್ವಿಟಿಸಿದ್ದಾರೆ.

ಕೊಹಿನೂರ್ ವಜ್ರದ ಇತಿಹಾಸ:

105.6 ಕ್ಯಾರೆಟ್ ಹೊಂದಿರುವ ಕೊಹಿನೂರ್​ ವಜ್ರವು 14ನೇ ಶತಮಾನದಲ್ಲಿ ಭಾರತದಲ್ಲಿತ್ತು. 1849 ರಲ್ಲಿ, ಪಂಜಾಬ್ ಅನ್ನು ಬ್ರಿಟಿಷ್ ಸ್ವಾಧೀನಪಡಿಸಿಕೊಂಡ ನಂತರ, ವಜ್ರವನ್ನು ರಾಣಿ ವಿಕ್ಟೋರಿಯಾಗೆ ನೀಡಲಾಯಿತು. ಅಂದಿನಿಂದ ಇದು ಬ್ರಿಟಿಷ್ ರಾಣಿಯ ಕಿರೀಟದ ಭಾಗವಾಗಿದೆ. ಈ ಐತಿಹಾಸಿಕ ವಜ್ರವನ್ನು ಮರಳಿ ತರಬೇಕೆಂಬುದು ಭಾರತೀಯರ ಆಶಯ. ಇದೀಗ ರಿಷಿ ಸುನಕ್ ಇಂಗ್ಲೆಂಡ್​ನ ಪ್ರಧಾನಿಯಾಗಲಿದ್ದಾರೆ ಎಂಬ ಸುದ್ದಿ ಬೆನ್ನಲ್ಲೇ ಕೊಹಿನೂರ್ ವಜ್ರ ಕೂಡ ಚರ್ಚಾ ವಿಷಯವಾಗಿದೆ.

Published On - 1:55 pm, Tue, 25 October 22

‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ