Asia cup 2022: ರೋಹಿತ್ ಮಾಡಿದ ಈ 4 ತಪ್ಪುಗಳು ಟೀಂ ಇಂಡಿಯಾವನ್ನು ಏಷ್ಯಾಕಪ್​ನಿಂದ ಹೊರಗಟ್ಟಿದವು..!

Asia cup 2022: ಏಷ್ಯಾಕಪ್ ಆರಂಭಕ್ಕೂ ಮುನ್ನ ಈ ಪಂದ್ಯಾವಳಿಯಲ್ಲಿ ಗೆಲ್ಲುವ ತಂಡ ಯಾವುದು ಎಂದರೆ ಬಹುಶಃ ಎಲ್ಲರು ಉತ್ತರಿಸುತ್ತಿದ್ದಿದ್ದು ಭಾರತ ಅಂತ. ಆದರೆ ಈಗ ಈ ಸ್ಪರ್ಧಿ ತಂಡ ಬಹುತೇಕ ಫೈನಲ್‌ನ ರೇಸ್‌ನಿಂದ ಹೊರಗುಳಿದಿದೆ.

Asia cup 2022: ರೋಹಿತ್ ಮಾಡಿದ ಈ 4 ತಪ್ಪುಗಳು ಟೀಂ ಇಂಡಿಯಾವನ್ನು ಏಷ್ಯಾಕಪ್​ನಿಂದ ಹೊರಗಟ್ಟಿದವು..!
Rohit Sharma
Follow us
TV9 Web
| Updated By: ಪೃಥ್ವಿಶಂಕರ

Updated on:Sep 07, 2022 | 6:16 PM

ಏಷ್ಯಾಕಪ್ (Asia Cup 2022) ಆರಂಭಕ್ಕೂ ಮುನ್ನ ಈ ಪಂದ್ಯಾವಳಿಯಲ್ಲಿ ಗೆಲ್ಲುವ ತಂಡ ಯಾವುದೇ ಎಂದರೆ ಬಹುಶಃ ಎಲ್ಲರು ಉತ್ತರಿಸುತ್ತಿದ್ದಿದ್ದು ಭಾರತ ಅಂತ. ಆದರೆ ಈಗ ಈ ಸ್ಪರ್ಧಿ ತಂಡ ಬಹುತೇಕ ಫೈನಲ್‌ನ ರೇಸ್‌ನಿಂದ ಹೊರಗುಳಿದಿದೆ. ಸೂಪರ್-4 ಸುತ್ತಿನ ಎರಡು ಪಂದ್ಯಗಳಲ್ಲಿ ಟೀಂ ಇಂಡಿಯಾ ಸೋತಿದೆ. ಮೊದಲು ಪಾಕಿಸ್ತಾನದ ವಿರುದ್ಧ ಪಂದ್ಯ ಸೋತಿದ್ದು, ಇದೀಗ ಶ್ರೀಲಂಕಾ ವಿರುದ್ಧದ ನಿರ್ಣಾಯಕ ಕದನದಲ್ಲಿ ಸೋಲನುಭವಿಸಿದೆ. ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾದ (Team India) ಕಳಪೆ ಪ್ರದರ್ಶನಕ್ಕೆ ಹಲವು ಕಾರಣಗಳಿದ್ದು, ಅದರಲ್ಲಿ ಟೀಮ್ ಮ್ಯಾನೇಜ್‌ಮೆಂಟ್ ಮತ್ತು ರೋಹಿತ್ ಶರ್ಮಾ (Rohit Sharma) ಪ್ರಮುಖ ಕಾರಣರಾಗಿದ್ದಾರೆ. ನಾಯಕ ಆಟದ ನಡುವೆ ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ತಂಡದ ಗೆಲುವು ಮತ್ತು ಸೋಲಿನ ನಡುವೆ ವ್ಯತ್ಯಾಸವನ್ನುಂಟುಮಾಡುತ್ತವೆ. ಆದರೆ ಈ ಎರಡು ಪಂದ್ಯಗಳಲ್ಲಿ ರೋಹಿತ್ ಶರ್ಮಾ ತೆಗೆದುಕೊಂಡ ಕೆಲವು ನಿರ್ಧಾರಗಳು ಟೀಮ್ ಇಂಡಿಯಾವನ್ನು ಗೆಲುವಿನ ದಡ ಸೇರಿಸಲಿಲ್ಲ.

ರೋಹಿತ್ ಈ 4 ನಿರ್ಧಾರಗಳನ್ನು ಬದಲಿಸಬೇಕಿತ್ತು

1) ಏಷ್ಯಾಕಪ್‌ನ ಸೂಪರ್ 4 ಸುತ್ತಿನಲ್ಲಿ ರೋಹಿತ್ ಶರ್ಮಾ ಸರಿಯಾದ ಪ್ಲೇಯಿಂಗ್ XI ಅನ್ನು ಆಯ್ಕೆ ಮಾಡಲಿಲ್ಲ. ಎರಡೂ ಪಂದ್ಯಗಳಲ್ಲಿ ನಾಲ್ವರು ಬೌಲರ್‌ಗಳೊಂದಿಗೆ ತಂಡ ಅಖಾಡಕ್ಕಿಳಿದಿತ್ತು. ಐದನೇ ಬೌಲರ್ ಹಾರ್ದಿಕ್ ಪಾಂಡ್ಯ. ಕ್ರಿಕೆಟ್‌ನ ಪ್ರತಿಯೊಂದು ಮಾದರಿಯಲ್ಲೂ ಗೆಲುವು ಸಾಧಿಸುವುದು ಬೌಲರ್‌ಗಳ ಬಲದಿಂದ ಮಾತ್ರ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ರೋಹಿತ್‌ ಅವರ ಕೇವಲ ನಾಲ್ಕು ಬೌಲರ್‌ಗಳ ತಂತ್ರವು ತಂಡಕ್ಕೆ ಹೆಚ್ಚು ಭಾರವಾಯಿತು. ದಿನೇಶ್ ಕಾರ್ತಿಕ್ ಉತ್ತಮ ಫಾರ್ಮ್ ಹೊರತಾಗಿಯೂ ಆಡುವ XI ನಲ್ಲಿ ಸ್ಥಾನ ಪಡೆಯಲಿಲ್ಲ. ಅದೇ ಸಮಯದಲ್ಲಿ, ರಿಷಬ್ ಪಂತ್ ಕೂಡ ತಮ್ಮ ಮೇಲಿರುವ ವಿಶ್ವಾಸವನ್ನು ಉಳಿಸಿಕೊಳ್ಳಲಿಲ್ಲ.

ಇದನ್ನೂ ಓದಿ
Image
‘ಮೆಗಾ ಬ್ಲಾಕ್‌ಬಸ್ಟರ್’; ಕನ್ನಡತಿ ರಶ್ಮಿಕಾ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ರೋಹಿತ್- ಗಂಗೂಲಿ..! ಪೋಸ್ಟರ್ ನೋಡಿ
Image
Asia Cup 2022: ಟೀಂ ಇಂಡಿಯಾ ನಾಯಕನಾಗಿ ರೋಹಿತ್​ಗೆ ಹೆಚ್ಚು ದಿನ ಉಳಿಗಾಲವಿಲ್ಲ; ಪಾಕ್ ಕ್ರಿಕೆಟಿಗನ ವಿಶ್ಲೇಷಣೆ
Image
SL vs BAN: ರಣ ರೋಚಕ ಪಂದ್ಯದಲ್ಲಿ ಬಾಂಗ್ಲಾ ಮಣಿಸಿ ಸೂಪರ್- 4 ಹಂತಕ್ಕೆ ಎಂಟ್ರಿಕೊಟ್ಟ ಶ್ರೀಲಂಕಾ

2) ಆಟಗಾರರ ಸರಿಯಾದ ನಿರ್ವಹಣೆ ಇಲ್ಲ: ಸೂಪರ್-4 ಸುತ್ತಿನಲ್ಲಿ ರೋಹಿತ್ ಶರ್ಮಾಗೆ ಆಟಗಾರರನ್ನು ಸರಿಯಾಗಿ ಬಳಸಿಕೊಳ್ಳಲಾಗಲಿಲ್ಲ. ದೀಪಕ್ ಹೂಡಾ ಅವರನ್ನು ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಆಗಿ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ಅವರನ್ನು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಸಲಾಯಿತು. ಅಷ್ಟೇ ಅಲ್ಲ, ಎರಡೂ ಪಂದ್ಯಗಳಲ್ಲಿ ಅವರಿಗೆ ಬೌಲಿಂಗ್ ಸಹ ನೀಡಲಿಲ್ಲ.

3) ಬೌಲರ್​ಗಳನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ: ರೋಹಿತ್ ಶರ್ಮಾ, ಬೌಲರ್​ಗಳನ್ನು ಸರಿಯಾದ ಸಮಯಕ್ಕೆ ಬಳಸಿಕೊಳ್ಳುವ ತಂತ್ರಕ್ಕೆ ಹೆಸರುವಾಸಿಯಾಗಿದ್ದಾರೆ .ಆದರೆ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪಿಚ್ ಸ್ವಿಂಗ್ ಪಡೆದರೂ, ಆರಂಭದಲ್ಲಿ ಕೇವಲ ಒಂದು ಓವರ್‌ಗೆ ಅರ್ಶ್‌ದೀಪ್ ಸಿಂಗ್ ದಾಳಿಯನ್ನು ಸೀಮಿತಗೊಳಿಸಿದರು. ಕೊನೆಯ ಓವರ್‌ನಲ್ಲೂ ಎಡವಟ್ಟು ಮಾಡಿಕೊಂಡ ರೋಹಿತ್ ಶರ್ಮಾ, ಅತ್ಯುತ್ತಮ ಯಾರ್ಕರ್ ಎಸೆಯುವಲ್ಲಿ ಪರಿಣತಿ ಹೊಂದಿರುವ ಅರ್ಷದೀಪ್ ಸಿಂಗ್ ಅವರಿಗೆ 19ನೇ ಓವರ್ ಬದಲಿಗೆ 20ನೇ ಓವರ್ ನೀಡಿದರು. 19ನೇ ಓವರ್‌ನಲ್ಲಿ ಭುವನೇಶ್ವರ್ ಕುಮಾರ್ ಬೌಲಿಂಗ್ ಮಾಡಿದರಾದರೂ ಎರಡೂ ಪಂದ್ಯಗಳಲ್ಲೂ ವಿಫಲರಾದರು.

4) ಅತ್ಯಂತ ಆಕ್ರಮಣಕಾರಿ ತಂತ್ರ – ರೋಹಿತ್ ಶರ್ಮಾ T20 ಕ್ರಿಕೆಟ್‌ನಲ್ಲಿ ಆಕ್ರಮಣಕಾರಿ ತಂತ್ರವನ್ನು ಬಳಸಿಕೊಳ್ಳುತ್ತಿದ್ದಾರೆ. ಆದರಿಂದ ಈ ಟರ್ನಿಂಗ್ ಟ್ರ್ಯಾಕ್​ಗಳಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ತಮ್ಮ ವಿಕೆಟ್‌ಗಳನ್ನು ಬಹುಬೇಗನೇ ಕಳೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ತಂಡದ ಮೇಲೆ ಒತ್ತಡ ಉಂಟಾಗುತ್ತಿದೆ. ಶ್ರೀಲಂಕಾ ವಿರುದ್ಧ ಇದೇ ರೀತಿಯ ಘಟನೆ ನಡೆದಿದ್ದು, ಸೂರ್ಯಕುಮಾರ್ ಮತ್ತು ವಿರಾಟ್ ಅವರಂತಹ ಆಟಗಾರರು ವೇಗವಾಗಿ ರನ್‌ಗಳಿಸುವ ನಿರೀಕ್ಷೆಯಲ್ಲಿದ್ದರು. ಆದರೆ ರನ್ ಗಳಿಸುವ ಬರದಲ್ಲಿ ಬೇಗನೇ ಪೆವಿಲಿಯನ್ ಸೇರಿದರು. ಇದು ತಂಡಕ್ಕೆ ದೊಡ್ಡ ನಷ್ಟವನ್ನುಂಟುಮಾಡಿತು.

Published On - 4:20 pm, Wed, 7 September 22

ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ