ಹಗಲಿನಲ್ಲಿ ಶೇ.70ರಷ್ಟು ಮಳೆ! ರಾತ್ರಿ ಕಥೆ ಕೇಳುವುದೇ ಬೇಡ; ಭಾರತ- ಪಾಕ್ ಪಂದ್ಯ ನಡೆಯುವುದು ಡೌಟ್

India vs Pakistan Weather Report: ಹವಾಮಾನ ಇಲಾಖೆ ಪ್ರಕಾರ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವೂ ಸೇರಿದಂತೆ ಕ್ಯಾಂಡಿಯಲ್ಲಿ ನಡೆಯಲಿರುವ ಹೆಚ್ಚಿನ ಪ್ರಮುಖ ಪಂದ್ಯಗಳಿಗೆ ಮಳೆ ಅಡ್ಡಿಯುಂಟು ಮಾಡುವ ಆತಂಕವಿದೆ. ಭಾರತ ಹಾಗೂ ಪಾಕ್ ಪಂದ್ಯ ನಡೆಯಲಿರುವ ಸಪ್ಟೆಂಬರ್ 2ರಂದು ಹಗಲಿನ ಸಮಯದಲ್ಲಿ 70ರಷ್ಟು ಭಾಗದಲ್ಲಿ ಮಳೆಯಾಗುವ ಮುನ್ಸೂಚನೆಯಿದೆ. ಇನ್ನು ರಾತ್ರಿ ಸಂದರ್ಭದಲ್ಲಿ 87% ಭಾಗದಲ್ಲಿ ಮಳೆಯಾಗುವ ಸಂಭವವಿದೆ.

ಹಗಲಿನಲ್ಲಿ ಶೇ.70ರಷ್ಟು ಮಳೆ! ರಾತ್ರಿ ಕಥೆ ಕೇಳುವುದೇ ಬೇಡ; ಭಾರತ- ಪಾಕ್ ಪಂದ್ಯ ನಡೆಯುವುದು ಡೌಟ್
ಭಾರತ- ಪಾಕ್ ಪಂದ್ಯಕ್ಕೆ ಮಳೆ ಕಾಟ

Updated on: Sep 02, 2023 | 7:50 AM

ಏಷ್ಯಾ ಸಮರದಲ್ಲಿ ಇಂಡೋ-ಪಾಕ್  ಮಹಾಯುದ್ಧಕ್ಕೆ ಕೆಲವೇ ಗಂಟೆಗಳಷ್ಟೇ ಬಾಕಿ ಇದೆ. ಏಷ್ಯಾಕಪ್‌ನಲ್ಲಿ (Asia Cup 2023) ಭಾರತ ಹಾಗೂ ಪಾಕಿಸ್ತಾನ (India vs Pakistan) ತಂಡಗಳ ಮುಖಾಮುಖಿಯನ್ನು ನೋಡಲು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಏಕದಿನ ಮಾದರಿಯಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗುತ್ತಿದ್ದು ಮುಂಬರುವ ವಿಶ್ವಕಪ್ ದೃಷ್ಟಿಯಿಂದಲೂ ಈ ಪಂದ್ಯ ಮಹತ್ವ ಪಡೆದುಕೊಳ್ಳಲಿದೆ. ಆರಂಭಿಕ ಪಂದ್ಯದಲ್ಲೇ ನೇಪಾಳ ವಿರುದ್ಧ ಪಾಕಿಸ್ತಾನ ಭರ್ಜರಿ ಗೆಲುವಿನ ಕೇಕೆ ಹಾಕಿದೆ. ಈ ಗೆಲುವಿನ ಬೆನ್ನಲ್ಲೇ ಭಾರತವನ್ನು ಎದುರಿಸೋದಕ್ಕೆ ಪಾಕ್ ಎದುರುನೋಡ್ತಿದೆ. ಇತ್ತ ಟೀಂ ಇಂಡಿಯಾ (Team India) ಆಟಗಾರರು ಕೂಡ ಏಷ್ಯಾಯುದ್ಧದಲ್ಲಿ ಪಾಕಿಸ್ತಾನಕ್ಕೆ ಮಣ್ಣುಮುಕ್ಕಿಸಿ ಮತ್ತೊಮ್ಮೆ ಏಷ್ಯಾಬಾಸ್ ಆಗೋ ಮಹಾಕನಸು ಕಂಡಿದ್ದಾರೆ. ಆದರೆ ಈ ಉಭಯ ತಂಡಗಳ ಹೈವೋಲ್ಟೇಜ್ ಕದನ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಪಲ್ಲೆಕೆಲೆ ಹವಾಮಾನ.

ಹಗಲಿನಲ್ಲಿ ಶೇಕಡಾ 70ರಷ್ಟು ಮಳೆ

ಹವಾಮಾನ ಇಲಾಖೆ ಪ್ರಕಾರ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವೂ ಸೇರಿದಂತೆ ಕ್ಯಾಂಡಿಯಲ್ಲಿ ನಡೆಯಲಿರುವ ಹೆಚ್ಚಿನ ಪ್ರಮುಖ ಪಂದ್ಯಗಳಿಗೆ ಮಳೆ ಅಡ್ಡಿಯುಂಟು ಮಾಡುವ ಆತಂಕವಿದೆ. ಭಾರತ ಹಾಗೂ ಪಾಕ್ ಪಂದ್ಯ ನಡೆಯಲಿರುವ ಸಪ್ಟೆಂಬರ್ 2ರಂದು ಹಗಲಿನ ಸಮಯದಲ್ಲಿ 70ರಷ್ಟು ಭಾಗದಲ್ಲಿ ಮಳೆಯಾಗುವ ಮುನ್ಸೂಚನೆಯಿದೆ. ಇನ್ನು ರಾತ್ರಿ ಸಂದರ್ಭದಲ್ಲಿ 87% ಭಾಗದಲ್ಲಿ ಮಳೆಯಾಗುವ ಸಂಭವವಿದೆ. ಸಂಜೆ 5 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಮಳೆ ಸತತವಾಗಿ ಸುರಿಯುವ ಲಕ್ಷಣಗಳು ಇರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಹವಾಮಾನ ಇಲಾಖೆ ನೀಡಿರುವ ವರದಿಯನ್ನು ನೋಡಿದರೆ, ಈ ಬಹು ನಿರೀಕ್ಷಿತ ಪಂದ್ಯ ಸಂಪೂರ್ಣವಾಗಿ ಮಳೆಗೆ ಆಹುತಿಯಾಗುವುದು ನಿಶ್ಚಿತ. ಕೋಟ್ಯಂತರ ಅಭಿಮಾನಿಗಳು ಕಾಯುತ್ತಿರುವ ಪಂದ್ಯ ಮಳೆಯಿಂದಾಗಿ ರದ್ದಾದರೆ ನಿರಾಸೆಯೂಂಟಾಗುವುದು ಖಂಡಿತ.

ಹೈವೋಲ್ಟೇಜ್ ಕದನಕ್ಕೂ ಮುನ್ನ ಪಾಕ್ ಬೌಲರ್​ಗಳ ಜೊತೆ ಸಮಯ ಕಳೆದ ಕಿಂಗ್ ಕೊಹ್ಲಿ; ವಿಡಿಯೋ ನೋಡಿ

ಮಳೆಯಿಂದ ಪಂದ್ಯ ರದ್ದಾದರೇ ಏನಾಗುತ್ತೆ?

ಇನ್ನು ಮಳೆಯಿಂದಾಗಿ ಇಂಡೋ-ಪಾಕ್ ಪಂದ್ಯ ರದ್ದಾದರೆ ಎರಡು ತಂಡಗಳು ಕೂಡ ತಲಾ ಒಂದೊಂದು ಅಂಕಗಳನ್ನು ಹಂಚಿಕೊಳ್ಳಲಿವೆ. ಪಾಕಿಸ್ತಾನ ನೇಪಾಳದ ವಿರುದ್ಧ ಈಗಾಗಲೇ ಒಂದು ಪಂದ್ಯವನ್ನು ಗೆದ್ದುಕೊಂಡಿರುವ ಕಾರಣ ಮೂರು ಅಂಕಗಳೊಂದಿಗೆ ಪಾಕಿಸ್ತಾನ ಸೂಪರ್ 4 ಹಂತಕ್ಕೆ ಪ್ರವೇಶಿಸಲಿದೆ. ಇನ್ನು ಭಾರತ ಲೀಗ್ ಹಂತದ ಕೊನೆಯ ಪಂದ್ಯವನ್ನು ನೇಪಾಳದ ವಿರುದ್ಧ ಆಡಲಿದ್ದು, ನೇಪಾಳವನ್ನು ಭಾರತ ಮಣಿಸಿದ್ರೆ, ರೋಹಿತ್ ಬಳಗ ಕೂಡ ಸೂಪರ್ 4ಗೆ ಪ್ರವೇಶ ಪಡೆಯಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ