AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ-ಆಫ್ರಿಕಾ, ಭಾರತ-ನೆದರ್​ಲೆಂಡ್ಸ್ ವಿಶ್ವಕಪ್ ಪಂದ್ಯದ ಟಿಕೆಟ್ ಇಂದು ಮಾರಾಟ: ಹೇಗೆ ಖರೀದಿಸುವುದು?

ICC ODI World Cup 2023 Tickets: ಭಾರತ ವಿರುದ್ಧದ ನೆದರ್​ಲೆಂಡ್ಸ್ ಮತ್ತು ದಕ್ಷಿಣ ಆಫ್ರಿಕಾ ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟವು ಇಂದು ರಾತ್ರಿ 8 ಗಂಟೆಗೆ ತೆರೆಯುತ್ತದೆ. ಅಭಿಮಾನಿಗಳು tickets.cricketworldcup.com ಮತ್ತು BookMyShow ನಲ್ಲಿ ಟಿಕೆಟ್ ಬುಕ್ ಮಾಡಬಹುದು. ಈ ಬಾರಿ ಯಾವುದೇ ಇ-ಟಿಕೆಟ್‌ಗಳು ಇರುವುದಿಲ್ಲ.

ಭಾರತ-ಆಫ್ರಿಕಾ, ಭಾರತ-ನೆದರ್​ಲೆಂಡ್ಸ್ ವಿಶ್ವಕಪ್ ಪಂದ್ಯದ ಟಿಕೆಟ್ ಇಂದು ಮಾರಾಟ: ಹೇಗೆ ಖರೀದಿಸುವುದು?
ICC ODI World Cup 2023 Tickets
Vinay Bhat
|

Updated on: Sep 02, 2023 | 9:13 AM

Share

ಭಾರತ ವಿರುದ್ಧದ ನೆದರ್​ಲೆಂಡ್ಸ್ ಮತ್ತು ಭಾರತ vs ದಕ್ಷಿಣ ಆಫ್ರಿಕಾದ ಐಸಿಸಿ ಏಕದಿನ ವಿಶ್ವಕಪ್ 2023 (ODI World Cup 2023) ಪಂದ್ಯದ ಟಿಕೆಟ್‌ಗಳು ಇಂದಿನಿಂದ ಮಾರಾಟವಾಗಲಿದೆ. ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾವು ನವೆಂಬರ್ 5 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ನಂತರ, ನವೆಂಬರ್ 12 ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆದರ್​ಲೆಂಡ್ಸ್ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಈ ಎರಡೂ ಪಂದ್ಯಗಳ ಟಿಕೆಟ್ ಇಂದು ಮಾರಾಟ ಕಾಣಲಿದೆ.

ಟಿಕೆಟ್ ಮಾರಾಟವು ರಾತ್ರಿ 8 ಗಂಟೆಗೆ ತೆರೆಯುತ್ತದೆ. ಅಭಿಮಾನಿಗಳು tickets.cricketworldcup.com ಮತ್ತು BookMyShow ನಲ್ಲಿ ಟಿಕೆಟ್ ಬುಕ್ ಮಾಡಬಹುದು. ಈ ಬಾರಿ ಯಾವುದೇ ಇ-ಟಿಕೆಟ್‌ಗಳು ಇರುವುದಿಲ್ಲ. ಕಳೆದ ಐಪಿಎಲ್​ನಲ್ಲಿ ಇ-ಟಿಕೆಟ್ ಮಾರಾಟದ ವೇಳೆ ಕಾಲ್ತುಳಿತ ಸಂಭವಿಸಿದ ಕಾರಣ ಬಿಸಿಸಿಐ ಈ ಅವಕಾಶ ಕಲ್ಪಿಸಿಲ್ಲ. ಅಭಿಮಾನಿಗಳು ತಮ್ಮ ಟಿಕೆಟ್‌ಗಳನ್ನು ಕೊರಿಯರ್ ಮೂಲಕ ಪಡೆಯಬಹುದು ಅಥವಾ ಆಯಾ ಕ್ರೀಡಾಂಗಣದಿಂದ ಬಾಕ್ಸ್ ಆಫೀಸ್ ಕೌಂಟರ್‌ಗಳಲ್ಲಿ ಸಂಗ್ರಹಿಸಬಹುದು.

ಹೈವೋಲ್ಟೇಜ್ ಕದನಕ್ಕೂ ಮುನ್ನ ಪಾಕ್ ಬೌಲರ್​ಗಳ ಜೊತೆ ಸಮಯ ಕಳೆದ ಕಿಂಗ್ ಕೊಹ್ಲಿ; ವಿಡಿಯೋ ನೋಡಿ

ಇದನ್ನೂ ಓದಿ
Image
ಪಲ್ಲೆಕೆಲೆ ಪಿಚ್​ನಲ್ಲಿ ಭಾರತ ಗೆದ್ದಿದ್ದೆಷ್ಟು? ಪಾಕ್ ಸೋತಿದ್ದೆಷ್ಟು?
Image
ಭಾರತ-ಪಾಕಿಸ್ತಾನ ಪಂದ್ಯಕ್ಕೂ ಮುನ್ನ ಕ್ಯಾಂಡಿಯಲ್ಲಿ ‘ರೆಡ್ ಅಲರ್ಟ್'
Image
ಭಾರತ-ಪಾಕ್ ಪಂದ್ಯಕ್ಕೆ ಕ್ಷಣಗಣನೆ: ಟೀಮ್ ಇಂಡಿಯಾ ಪ್ರ್ಯಾಕ್ಟೀಸ್ ಹೇಗಿದೆ?
Image
ಏಷ್ಯಾಕಪ್​ನಲ್ಲಿಂದು ಭಾರತ-ಪಾಕ್ ಮುಖಾಮುಖಿ: ಹೈವೋಲ್ಟೇಜ್ ಮ್ಯಾಚ್ ನಿರೀಕ್ಷೆ

ಐಸಿಸಿ ಏಕದಿನ ವಿಶ್ವಕಪ್​ನಲ್ಲಿ ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ ಭಾರತ ತನ್ನ ಅಭಿಯಾನವನ್ನು ಆರಂಭಿಸಲಿದೆ. ಭಾರತ ಒಟ್ಟು ಒಂಬತ್ತು ಮೈದಾನಗಳಲ್ಲಿ ವಿಶ್ವಕಪ್ ಆಡಲಿದೆ. ಚೆನ್ನೈ, ಪುಣೆ, ಧರ್ಮಶಾಲಾ, ಮುಂಬೈ, ಲಕ್ನೋ ಮತ್ತು ದೆಹಲಿಯಲ್ಲಿ ಭಾರತದ ಪಂದ್ಯಗಳ ಟಿಕೆಟ್ ಮಾರಾಟವು ಈಗಾಗಲೇ ಮಾರಾಟವಾಗಿದೆ.

ಏಕದಿನ ವಿಶ್ವಕಪ್ 2023 ಟಿಕೆಟ್‌ಗಳನ್ನು ಬುಕ್ ಮಾಡುವುದು ಹೇಗೆ?:

  • BookMyShow ವೆಬ್‌ಸೈಟ್‌ಗೆ ಭೇಟಿ ನೀಡಿ.
  • ‘ಫೈಂಡ್ ಮ್ಯಾಚೆಸ್ ಬೈ ವೆನ್ಯೂ’ ಅಡಿಯಲ್ಲಿ ನಿಮ್ಮ ಆಯ್ಕೆಯ ಸ್ಥಳವನ್ನು ಕ್ಲಿಕ್ ಮಾಡಿ.
  • ನೀವು ವಿಶ್ವಕಪ್ ಟಿಕೆಟ್‌ಗಳನ್ನು ಖರೀದಿಸಲು ಬಯಸುವ ಪಂದ್ಯವನ್ನು ಆಯ್ಕೆಮಾಡಿ.
  • ಪರದೆಯ ಮೇಲೆ ಪ್ರದರ್ಶಿಸಲಾದ ‘ಬುಕ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ಈಗ ಲಾಗಿನ್ ಪ್ರಾಂಪ್ಟ್ ಕಾಣಿಸಿಕೊಳ್ಳುತ್ತದೆ, ನೀವು ಖಾತೆಯನ್ನು ಹೊಂದಿದ್ದರೆ ಲಾಗ್ ಇನ್ ಮಾಡಲು ಅನುಮತಿಸುತ್ತದೆ.
  • ಲಾಗಿನ್ ಆಗಿ ನಿಮಗೆ ಬೇಕಾದ ಆಸನಗಳ ಸಂಖ್ಯೆಯನ್ನು ಆರಿಸಿ.
  • ‘ಬುಕ್’ ಬಟನ್ ಮೇಲೆ ಕ್ಲಿಕ್ ಮಾಡಿ.
  • ಟಿಕೆಟ್‌ಗಳ ಹೋಮ್ ಡೆಲಿವರಿಗಾಗಿ ಪಿನ್‌ಕೋಡ್ ಅನ್ನು ಒತ್ತಿರಿ.
  • ನಿಮ್ಮ ಅಗತ್ಯ ವೈಯಕ್ತಿಕ ವಿವರಗಳನ್ನು ನಮೂದಿಸಿ.
  • ‘ಪ್ರೊಸಿಡ್ ಟಿ ಪೇ’ ಮೇಳೆ ಕ್ಲಿಕ್ ಮಾಡುವ ಮೂಲಕ ಮುಂದುವರಿಯಿರಿ.

ವಿಶ್ವಕಪ್​ಗೆ ಮುಂದಿನ ವಾರ ಭಾರತ ತಂಡ ಪ್ರಕಟ:

ಏಕದಿನ ವಿಶ್ವಕಪ್​ಗೆ ತಂಡವನ್ನು ಪ್ರಕಟಿಸಲು ಸೆಪ್ಟೆಂಬರ್ 5 ಕೊನೆಯ ದಿನಾಂಕವಾಗಿದೆ. ಹೀಗಾಗಿ ಹೆಚ್ಚಿನ ತಂಡಗಳು ಈಗಾಗಲೇ ತಂಡವನ್ನು ಹೆಸರಿಸಿದೆ. ಆದರೆ, ಬಿಸಿಸಿಐ ಮಾತ್ರ ಟೀಮ್ ಇಂಡಿಯಾವನ್ನು ಇನ್ನೂ ಆಯ್ಕೆ ಮಾಡಿಲ್ಲ. ಇದೀಗ ಬಂದಿರುವ ಮಾಹಿತಿಯ ಪ್ರಕಾರ, 2023ರ ಏಕದಿನ ವಿಶ್ವಕಪ್‌ಗೆ ಭಾರತ ತಂಡ ಮುಂದಿನ ವಾರ ಪ್ರಕಟವಾಗಲಿದೆ ಎಂದು ಹೇಳಲಾಗಿದೆ. ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಹಿರಿಯ ರಾಷ್ಟ್ರೀಯ ಆಯ್ಕೆ ಸಮಿತಿಯು ಸೆಪ್ಟೆಂಬರ್ 5 ರಂದು ಸಭೆ ಕರೆದು ವಿಶ್ವಕಪ್ 2023 ಕ್ಕಾಗಿ ಭಾರತ ತಂಡವನ್ನು ಆಯ್ಕೆ ಮಾಡಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ