ಪಲ್ಲೆಕೆಲೆ ಪಿಚ್ನಲ್ಲಿ ಭಾರತ ಗೆದ್ದಿದ್ದೆಷ್ಟು? ಪಾಕ್ ಸೋತಿದ್ದೆಷ್ಟು?; ಏಷ್ಯಾಕಪ್‌ನಲ್ಲಿ ಉಭಯ ತಂಡಗಳ ಮುಖಾಮುಖಿ ವರದಿ ಹೇಗಿದೆ? ಇಲ್ಲಿದೆ ವಿವರ
Asia Cup 2023, Ind Vs Pak Head-To-Head Record: ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ 17 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ಟೀಂ ಇಂಡಿಯಾ 9 ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ 6 ಪಂದ್ಯಗಳನ್ನು ಗೆದ್ದಿದೆ. ಕಳೆದ 10 ವರ್ಷಗಳಲ್ಲಿ ಉಭಯ ತಂಡಗಳ ನಡುವೆ ಕೇವಲ 7 ಏಕದಿನ ಪಂದ್ಯಗಳು ನಡೆದಿದ್ದು, ಅದರಲ್ಲಿ ಭಾರತ 5 ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ ಎರಡು ಬಾರಿ ಮಾತ್ರ ಗೆದ್ದಿದೆ.

ಬದ್ಧವೈರಿ ಪಾಕಿಸ್ತಾನ ತಂಡದ ವಿರುದ್ಧ ಸತತ 4 ವರ್ಷಗಳ ಬಳಿಕ ಏಕದಿನ ಪಂದ್ಯದಲ್ಲಿ ಅಬ್ಬರಿಸೋಕೆ ಟೀಂ ಇಂಡಿಯಾ (India vs Pakistan) ಸಜ್ಜಾಗಿದೆ. ಚೇಸಿಂಗ್ ಮಾಸ್ಟರ್ ಕೊಹ್ಲಿ ಹಾಗೂ ಏಕದಿನ ಕ್ರಿಕೆಟ್ನ ನಂಬರ್ 1 ಬ್ಯಾಟ್ಸ್ಮನ್ ಬಾಬರ್ ಹೊಡಿಬಡಿ ಆಟಕ್ಕೆ ಲಂಕಾ ನೆಲ ರೆಡಿಯಾಗಿದೆ. ಏಷ್ಯಾಕಪ್ 2023ರ (Asia Cup 2023) ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ತನ್ನ ಮೊದಲ ಪಂದ್ಯದಲ್ಲಿ ನೇಪಾಳವನ್ನು 238 ರನ್‌ಗಳಿಂದ ಸೋಲಿಸಿ ಬಾಬರ್ ಆಝಂ (Babar Azam) ಪಡೆ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಇತ್ತ ಟೀಂ ಇಂಡಿಯಾ ಕೂಡ ಪಾಕ್ ತಂಡವನ್ನು ಮಣಿಸುವ ತಂತ್ರದೊಂದಿಗೆ ಅಖಾಡಕ್ಕಿಳಿಯಲು ಸಜ್ಜಾಗಿದೆ.
ಕಳೆದ ಎರಡು ವರ್ಷಗಳಲ್ಲಿ, ಭಾರತ ಮತ್ತು ಪಾಕಿಸ್ತಾನದ ನಡುವೆ ಅನೇಕ ಪಂದ್ಯಗಳನ್ನು ನಡೆದಿವೆ. ಆದರೆ ಇವೆಲ್ಲವೂ ಟಿ20 ಪಂದ್ಯಗಳಾಗಿವೆ. 2021 ಮತ್ತು 2022ರ ಟಿ20 ವಿಶ್ವಕಪ್‌ನಲ್ಲಿ ಈ ಉಭಯ ತಂಡಗಳು ಒಮ್ಮೊಮ್ಮೆ ಮಾತ್ರ ಮುಖಾಮುಖಿಯಾಗಿದ್ದವು. ಇದರಲ್ಲಿ ಒಂದು ಪಂದ್ಯವನ್ನು ಪಾಕಿಸ್ತಾನ ಗೆದ್ದಿದ್ದರೆ, ಒಂದು ಪಂದ್ಯವನ್ನು ಭಾರತ ಗೆದ್ದಿದೆ. ಅದೇ ರೀತಿ ಕಳೆದ ವರ್ಷದ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಲಾ ಒಂದೊಂದು ಪಂದ್ಯವನ್ನು ಗೆದ್ದಿದ್ದವು. ಆದರೆ, ಏಕದಿನದಲ್ಲಿ ಉಭಯ ತಂಡಗಳ ನಡುವಿನ ಪೈಪೋಟಿ ಬಹಳ ದಿನಗಳಿಂದ ಕಾದಿತ್ತು. 2019 ರ ಏಕದಿನ ವಿಶ್ವಕಪ್‌ನಲ್ಲಿ ಕೊನೆಯ ಬಾರಿಗೆ ಎರಡೂ ತಂಡಗಳು ಮುಖಾಮುಖಿಯಾಗಿದ್ದವು. ಅಲ್ಲಿ ರೋಹಿತ್ ಶರ್ಮಾ ಅವರ ಅದ್ಭುತ ಶತಕದ ಹಿನ್ನಲೆಯಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಗೆಲುವು ದಾಖಲಿಸಿತ್ತು.
ಹಗಲಿನಲ್ಲಿ ಶೇ.70ರಷ್ಟು ಮಳೆ! ರಾತ್ರಿ ಕಥೆ ಕೇಳುವುದೇ ಬೇಡ; ಭಾರತ- ಪಾಕ್ ಪಂದ್ಯ ನಡೆಯುವುದು ಡೌಟ್
ಉಭಯ ತಂಡಗಳ ಮುಖಾಮುಖಿ ವರದಿ ಹೇಳುವುದೇನು?
ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ 17 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ಟೀಂ ಇಂಡಿಯಾ 9 ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ 6 ಪಂದ್ಯಗಳನ್ನು ಗೆದ್ದಿದೆ. ಕಳೆದ 10 ವರ್ಷಗಳಲ್ಲಿ ಉಭಯ ತಂಡಗಳ ನಡುವೆ ಕೇವಲ 7 ಏಕದಿನ ಪಂದ್ಯಗಳು ನಡೆದಿದ್ದು, ಅದರಲ್ಲಿ ಭಾರತ 5 ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ ಎರಡು ಬಾರಿ ಮಾತ್ರ ಗೆದ್ದಿದೆ. 2018ರ ಏಕದಿನ ಏಷ್ಯಾಕಪ್‌ನಲ್ಲೂ ಭಾರತ ಪಾಕಿಸ್ತಾನವನ್ನು ಸೋಲಿಸಿತ್ತು.
ಪಲ್ಲೆಕೆಲೆ ಪಿಚ್ನಲ್ಲಿ ಭಾರತ ಸೋಲೇ ಕಂಡಿಲ್ಲ
ಪಾಕ್ ಪಡೆ ವಿರುದ್ಧ ಸೆಣೆಸಾಡೋಕೆ ಮೈಕೊಡವಿ ನಿಂತಿರುವ ಟೀಂ ಇಂಡಿಯಾ, ಪಲ್ಲೆಕೆಲೆ ಮೈದಾನದಲ್ಲಿ ಇದುವರೆಗೂ ಆಡಿದ ಯಾವುದೇ ಪಂದ್ಯವನ್ನ ಸೋತಿಲ್ಲ. ಆದ್ರೆ, ಇದೇ ಪಲ್ಲೆಕೆಲೆ ಪಿಚ್ನಲ್ಲಿ ಪಾಕಿಸ್ತಾನ ಸೋಲಿನ ರುಚಿ ಕಂಡಿದೆ. ಪಲ್ಲೆಕೆಲೆ ಪಿಚ್ನಲ್ಲಿ ಒಟ್ಟು 4 ಪಂದ್ಯಗಳನ್ನು ಟೀಂ ಇಂಡಿಯಾ ಆಡಿದೆ. ಈ ಪೈಕಿ 3 ಏಕದಿನ ಮತ್ತು ಒಂದು ಟಿ20 ಪಂದ್ಯ ಸೇರಿದ್ದು, ಇದರಲ್ಲಿ ಆಡಿದ ಎಲ್ಲಾ 4 ಪಂದ್ಯಗಳನ್ನು ಟೀಂ ಇಂಡಿಯಾ ಗೆದ್ದಿದೆ.
ಪಲ್ಲೆಕೆಲೆ ಪಿಚ್ನಲ್ಲಿ ಸೋಲಿನ ರುಚಿ ಕಂಡಿದೆ ಪಾಕ್!
ಪಲ್ಲೆಕೆಲೆ ಪಿಚ್ನಲ್ಲಿ ಪಾಕಿಸ್ತಾನ ಒಟ್ಟು 7 ಪಂದ್ಯ ಆಡಿದೆ. ಇದರಲ್ಲಿ 5 ಏಕದಿನ ಮತ್ತು 2 ಟಿ20 ಪಂದ್ಯಗಳು ಸೇರಿವೆ. ಈ ಪೈಕಿ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಪಾಕ್ ಪಡೆ, 3 ಪಂದ್ಯಗಳಲ್ಲಿ ಸೋಲಿನ ರುಚಿ ಕಂಡಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
