AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ- ಪಾಕ್ ನಡುವೆ ಹೈವೋಲ್ಟೇಜ್ ಸಂಘರ್ಷ ಸೃಷ್ಟಿಸಿದ್ದ ಈ 5 ರಣರೋಚಕ ಪಂದ್ಯಗಳ ಬಗ್ಗೆ ನಿಮಗೆಷ್ಟು ಗೊತ್ತು?

India vs Pakistan: ಇಡೀ ವಿಶ್ವವೇ ಬೆಕ್ಕಸ ಬೆರಗುಗಣ್ಣಿನಿಂದ ಕಾಯುತ್ತಿರುವ ರೋಚಕ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಕ್ರಿಕೆಟ್ ಪ್ರೇಮಿಗಳ ಉಸಿರು ಬಿಗಿ ಹಿಡಿಯುವಂತೆ ಮಾಡುವ ಜಗತ್ತಿನ ಏಕೈಕ ಕದನ ಅಂದ್ರೆ ಅದು ಇಂಡೋ-ಪಾಕ್ ಕ್ರಿಕೆಟ್ ಪಂದ್ಯ. 4 ವರ್ಷಗಳ ಬಳಿಕ ಏಕದಿನ ಕ್ರಿಕೆಟ್​ನಲ್ಲಿ ಭಾರತ-ಪಾಕ್ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಗುತ್ತಿರುವುದು ಸ್ಪರ್ಧೆಯ ರೋಚಕತೆಯನ್ನು ಇನ್ನಷ್ಟು ಇಮ್ಮಡಿಗೊಳಿಸಿದೆ.

ಭಾರತ- ಪಾಕ್ ನಡುವೆ ಹೈವೋಲ್ಟೇಜ್ ಸಂಘರ್ಷ ಸೃಷ್ಟಿಸಿದ್ದ ಈ 5 ರಣರೋಚಕ ಪಂದ್ಯಗಳ ಬಗ್ಗೆ ನಿಮಗೆಷ್ಟು ಗೊತ್ತು?
ಭಾರತ- ಪಾಕ್ ತಂಡಗಳುImage Credit source: insidesport
ಪೃಥ್ವಿಶಂಕರ
|

Updated on:Sep 02, 2023 | 9:31 AM

Share

ಇಡೀ ವಿಶ್ವವೇ ಬೆಕ್ಕಸ ಬೆರಗುಗಣ್ಣಿನಿಂದ ಕಾಯುತ್ತಿರುವ ರೋಚಕ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಕ್ರಿಕೆಟ್ ಪ್ರೇಮಿಗಳ ಉಸಿರು ಬಿಗಿ ಹಿಡಿಯುವಂತೆ ಮಾಡುವ ಜಗತ್ತಿನ ಏಕೈಕ ಕದನ ಅಂದ್ರೆ ಅದು ಇಂಡೋ-ಪಾಕ್ (India vs Pakistan) ಕ್ರಿಕೆಟ್ ಪಂದ್ಯ. 4 ವರ್ಷಗಳ ಬಳಿಕ ಏಕದಿನ ಕ್ರಿಕೆಟ್​ನಲ್ಲಿ ಭಾರತ-ಪಾಕ್ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಗುತ್ತಿರುವುದು ಸ್ಪರ್ಧೆಯ ರೋಚಕತೆಯನ್ನು ಇನ್ನಷ್ಟು ಇಮ್ಮಡಿಗೊಳಿಸಿದೆ. ಸಾಂಪ್ರದಾಯಿಕ ಎದುರಾಳಿಯನ್ನು ರೋಹಿತ್ (Rohit Sharma) ಪಡೆ ಮಣಿಸೋದನ್ನು ಸಂಭ್ರಮಿಸೋಕೆ ಟೀಂ ಇಂಡಿಯಾ (Team India) ಅಭಿಮಾನಿಗಳು ಕಾತರರಾಗಿದ್ದಾರೆ. ಆದರೆ ಅದಕ್ಕೂ ಮುನ್ನ ಈ ಉಭಯ ತಂಡಗಳ ನಡುವೆ ನಡೆದ ಈ ಐದು ಪ್ರಮುಖ ಹೈವೋಲ್ಟೇಜ್ ಕದನಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನಾವು ನಿಮಗೆ ಹೇಳಲಿದ್ದೇವೆ.

ರೋಚಕ ಕಡೇ ಓವರ್ ಗೆಲುವು ದಾಖಲಿಸಿದ್ದ ಭಾರತ

ಅದು 2010ರ ಏಷ್ಯಾ ಕಪ್ ಟೂರ್ನಿ.. ಶ್ರೀಲಂಕಾದ ಡಂಬುಲ್ಲಾ ಮೈದಾನದಲ್ಲಿ ನಡೆದಿದ್ದ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ. ಆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ 49.3 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 267 ರನ್​ಗಳ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪರ ಆರಂಭಿಕ ಗೌತಮ್ ಗಂಭೀರ್, 97 ಬಾಲ್​ಗಳಲ್ಲಿ ಭರ್ತಿ 83 ರನ್ ಸಿಡಿಸಿದ್ರು. ಆ ನಂತರ ಬಂದ ನಾಯಕ ಎಂ.ಎಸ್.ಧೋನಿ 71 ಬಾಲ್​ಗಳಲ್ಲಿ 56 ರನ್ ಬಾರಿಸಿ ಪೆವಿಯನ್ ಸೇರಿದ್ರು. ಆದರೆ ಬಳಿಕ ಬಂದ ಯಾವುದೇ ಆಟಗಾರರು ಉತ್ತಮ ಪ್ರದರ್ಶನ ನೀಡದ ಕಾರಣ, ಧೋನಿ ಪಡೆ ಸೋಲಿನ ಸನಿಹ ತಲುಪಿತ್ತು. ಆದರೆ ಡೆತ್ ಓವರ್​ನಲ್ಲಿ ಪಾಕ್ ಬೌಲರ್​ಗಳ ಬೆವರಿಳಿಸಿದ್ದು ಸುರೇಶ್ ರೈನಾ ಮತ್ತು ಹರ್ಬಜನ್ ಸಿಂಗ್ ಜೋಡಿ, 50ನೇ ಓವರ್​ನ 4ನೇ ಬಾಲ್​ನಲ್ಲಿ ರೋಚಕ ಜಯ ತಂದುಕೊಟ್ಟಿದ್ದರಯ. ಗೆದ್ದೇ ಬಿಟ್ಟೆವು ಅನ್ನೋ ಹುಮ್ಮಸ್ಸಿನಲ್ಲಿದ್ದ ಪಾಕಿಸ್ತಾನಕ್ಕೆ ಟೀಂ ಇಂಡಿಯಾ ಪಡೆ, ಕಡೇ ಓವರ್​ನ ಶಾಕ್ ನೀಡಿತ್ತು.

ಪಲ್ಲೆಕೆಲೆ ಪಿಚ್​ನಲ್ಲಿ ಭಾರತ ಗೆದ್ದಿದ್ದೆಷ್ಟು? ಪಾಕ್ ಸೋತಿದ್ದೆಷ್ಟು?; ಏಷ್ಯಾಕಪ್‌ನಲ್ಲಿ ಉಭಯ ತಂಡಗಳ ಮುಖಾಮುಖಿ ವರದಿ ಹೇಗಿದೆ? ಇಲ್ಲಿದೆ ವಿವರ

ಕಡೇ 2 ಬಾಲ್​ನಲ್ಲಿ ಮುಗ್ಗರಿಸಿದ್ದ ಟೀಂ ಇಂಡಿಯಾ

2014ರ ಟಿ20 ವಿಶ್ವಕಪ್​ಗೂ ಕೆಲವೇ ತಿಂಗಳ ಮುನ್ನ ವೈರಿ ಪಡೆ ಪಾಕಿಸ್ತಾನ ತಂಡದ ಜೊತೆ ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ಏಷ್ಯಾಕಪ್​ನಲ್ಲಿ, ಟೀಂ ಇಂಡಿಯಾ ಸೆಣೆಸಾಡಿತ್ತು. ಮೊದಲಿಗೆ ಬ್ಯಾಟ್ ಹಿಡಿದಿದ್ದ ಭಾರತದ ಬಾಹುಬಲಿಗಳು 50 ಓವರ್​ನಲ್ಲಿ ಪಾಕಿಸ್ತಾನಕ್ಕೆ 245 ರನ್​ಗಳ ಗುರಿ ನೀಡಿದ್ರು. ಆಡಲು ಕಠಿಣವಾದ ಮೈದಾನ ಎನ್ನಲಾದ ಢಾಕಾದ ಸ್ಲಗ್ಗಿಶ್ ಫೀಲ್ಡ್​ನಲ್ಲಿ ಪಾಕ್ ಬೆಂಕಿ ಚಂಡುಗಳಿಗೆ ರವೀಂದ್ರ ಜಡೇಜಾ ಮತ್ತು ಅಂಬತಿ ರಾಯುಡು ತಲಾ ಒಂದೊಂದು ಅರ್ಧ ಶತಕ ಸಿಡಿಸಿ ಖಡಕ್ ಉತ್ತರ ನೀಡಿದ್ದರು.

ಭಾರತ ನೀಡಿದ್ದ 245 ಗುರಿ ಬೆನ್ನತ್ತಿದ್ದ ಪಾಕಿಸ್ತಾನ ತಂಡಕ್ಕೆ 50ನೇ ಓವರ್​ನ 4ನೇ ಬಾಲ್​ನಲ್ಲಿ ರೋಚಕ ಜಯ ಸಿಕ್ಕಿತ್ತು. ಅಂದು ಪಾಕಿಸ್ತಾನ ಪಡೆಗೆ ಗೆಲುವು ತಂದುಕೊಟ್ಟಿದ್ದು, 7ನೇ ಸ್ಲಾಟ್​ನಲ್ಲಿ ಬ್ಯಾಟ್ ಹಿಡಿದು 18 ಬಾಲ್​ಗಳಲ್ಲಿ 34 ರನ್ ಸಿಡಿಸಿದ್ದ ಶಾಹಿದ್ ಅಫ್ರಿದಿ ಆಟ.

ಪ್ರಪ್ರಥಮ ಏಷ್ಯಾಕಪ್ ಪಂದ್ಯದಲ್ಲೇ ಪಾಕ್​ನ ಬಗ್ಗು ಬಡಿದಿದ್ದ ಭಾರತ

1984ರಲ್ಲಿ ಏಷ್ಯಾಕಪ್ ಟೂರ್ನಿ ಆರಂಭವಾದ ಪ್ರಪ್ರಥಮ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನ ಭಾರತದ ತಂಡ ಬಗ್ಗು ಬಡಿದಿತ್ತು. ದುಬೈನ ಶಾರ್ಜಾನಲ್ಲಿ ನಡೆದ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ್ದ ಭಾರತ ತಂಡ, 188 ರನ್ ಕಲೆ ಹಾಕಿತ್ತು. ಅಲ್ಪ ಗುರಿಯ ಬೆನ್ನಟ್ಟಿದ್ದ ಪಾಕಿಸ್ತಾನ ತಂಡವನ್ನ ಕೇವಲ 134 ರನ್​ಗಳಿಗೆ ಸರ್ವಪತನವಾಗುವಂತೆ ಬೆಂಕಿ ಚೆಂಡಿನ ದಾಳಿ ನಡೆಸಿತ್ತು ಭಾರತ. ಹೀಗಾಗಿ ಏಷ್ಯಾಕಪ್​ನ ಮೊದಲ ಭಾರತ-ಪಾಕಿಸ್ತಾನದ ಪಂದ್ಯವನ್ನ ಭಾರತ ಭರ್ತಿ 51 ರನ್​ಗಳ ಅಂತರದಿಂದ ಗೆದ್ದು ಬೀಗಿತ್ತು.

ಭಾರತದ ವಿರುದ್ಧ 143 ರನ್ ಸಿಡಿಸಿದ್ದ ಶೋಯೆಬ್ ಮಲಿಕ್

2004 ರ ಏಷ್ಯಾಕಪ್ ಪಂದ್ಯ ಶ್ರೀಲಂಕಾದ ಕೊಲಂಬೊದಲ್ಲಿ ನಡೆದಿತ್ತು. ಭಾರತದ ವಿರುದ್ಧ ಟೂರ್ನಿಯ ಮೊದಲ ಪಂದ್ಯವಾಡಿದ್ದ ಪಾಕಿಸ್ತಾನ ಭರ್ತಿ 50 ಓವರ್​ನಲ್ಲಿ 300 ರನ್ ಸಿಡಿಸಿತ್ತು. ವಿಶೇಷ ಅಂದರೆ ಪಾಕ್ ಆಟಗಾರ ಶೋಯೆಬ್ ಮಲಿಕ್ 127 ಬಾಲ್​ಗಳಲ್ಲಿ 143 ರನ್ ಸಿಡಿಸಿ ದಾಖಲೆ ಬರೆದಿದ್ದರು. ಆ ಪಂದ್ಯದಲ್ಲಿ ಭಾರತ 241 ರನ್​ಗಳಿಸಲಷ್ಟೇ ಸಾಧ್ಯವಾಗಿತ್ತು.

183 ರನ್ ಸಿಡಿಸಿ ಪಾಕ್ ಪಿಕ್ಚರ್ ಬಿಡಿಸಿದ್ದ ಚೇಸ್ ಮಾಸ್ಟರ್ ಕೊಹ್ಲಿ

2012ರಲ್ಲಿ ಬಾಂಗ್ಲಾದ ಮಿರ್​ಪುರದಲ್ಲಿ ನಡೆದ ಏಷ್ಯಾಕಪ್​ನಲ್ಲಿ ಪಾಕಿಸ್ತಾನದ ವಿರುದ್ಧ ಏಕಾಂಗಿ ದಂಡಯಾತ್ರೆ ನಡೆಸಿದ್ದು ಚೇಸ್ ಮಾಸ್ಟರ್ ಕೊಹ್ಲಿ. ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟ್ ಮಾಡಿದ್ದ ಪಾಕ್ ಪಡೆ 50 ಓವರ್​ನಲ್ಲಿ 329 ರನ್​ಗಳ ಬೃಹತ್ ಟಾರ್ಗೆಟ್ ನೀಡಿತ್ತು. ಮೊಹಮ್ಮದ್ ಹಫೀಜ್ ಹಾಗೂ ನಾಸಿರ್ ಜಮ್​ಶೆದ್ ತಲಾ ಒಂದು ಶತಕ ಬಾರಿಸಿ ಅಬ್ಬರಿಸಿದ್ದರು. ಅಂದು ಪಾಕಿಸ್ತಾನದ ತಂಡದ ಬೃಹತ್ ರನ್ ಕೋಟೆಯನ್ನ ಏಕಾಂಗಿಯಾಗಿ ಕೆಡವಿದ್ದು ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಅಬ್ಬರದ ಆಟ. 148 ಬಾಲ್ ಎದುರಿಸಿದ ಕೊಹ್ಲಿ ಬರೋಬ್ಬರಿ 183 ರನ್ ಬಾರಿಸಿ ಪಾಕಿಸ್ತಾನ ಬೌಲರ್​ಗಳನ್ನ ದಂಗಾಗಿಸಿದ್ದರು. ಈ ಮೂಲಕ ಏಷ್ಯಾಕಪ್​ನ ಪಂದ್ಯವೊಂದರಲ್ಲಿ ಅತಿಹೆಚ್ಚು ರನ್ ಸಿಡಿಸಿದ ನಾಯಕ ಅನ್ನೋ ಮೈಲಿಗಲ್ಲನ್ನು ಕೊಹ್ಲಿ ಸ್ಥಾಪಿಸಿದ್ದರು. ಅಂತಿಮವಾಗಿ ಕೊಹ್ಲಿ ವಿಶ್ವಶ್ರೇಷ್ಠ ಆಟಕ್ಕೆ ಪತರಗುಟ್ಟಿದ ಪಾಕ್ ವಿರುದ್ಧ ಭಾರತ 47.5 ಓವರ್​ಗಳಲ್ಲೇ 330 ರನ್ ಸಿಡಿಸಿ ಜಯ ದಾಖಲಿಸಿತ್ತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:31 am, Sat, 2 September 23

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ