IND vs PAK: ಪಾಕ್ ವಿರುದ್ಧ ಕಣಕ್ಕಿಳಿಯಲ್ಲಿದ್ದಾರಾ ಕನ್ನಡಿಗ ಪ್ರಸಿದ್ಧ್ ಕೃಷ್ಣ..?
Asia Cup 2023: ಬೆಸ್ಟ್ ಬೌಲಿಂಗ್ ಬಳಗದ ಜೊತೆ ಏಷ್ಯಾಕಪ್ ಸಮರಕ್ಕಿಳಿದಿರುವ ಟೀಂ ಇಂಡಿಯಾಗೆ ವೈರೆಟಿ ಆಫ್ ಬೌಲಿಂಗ್ ಆಯ್ಕೆ ಇದೆ. ಬ್ಯಾಲೆನ್ಸಿಂಗ್ ಬೌಲಿಂಗ್ ಅಟ್ಯಾಕ್ ಹೊಂದಿರುವ ಟೀಂ ಇಂಡಿಯಾ, ಬಲಿಷ್ಠವಾಗಿದೆ. ಈ ಪೈಕಿ ರೋಹಿತ್ ಬತ್ತಳಿಕೆಯಲ್ಲಿರುವ ಬೆಂಕಿ ಚೆಂಡು ಪ್ರಸಿದ್ಧ್ ಕೃಷ್ಣಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಚಾನ್ಸ್ ಸಿಗುತ್ತಾ ಅನ್ನೋ ಬಗ್ಗೆ ಚರ್ಚೆ ಶುರುವಾಗಿದೆ.

ರೋಹಿತ್ ಶರ್ಮಾ (Rohit Sharma) ನೇತೃತ್ವದ ಟೀಂ ಇಂಡಿಯಾ (Team India) ಏಷ್ಯಾಸಮರಕ್ಕಾಗಿ ಸಿಂಹಳೀಯರ ನೆಲಕ್ಕೆ ಲ್ಯಾಂಡ್ ಆಗಿದೆ. ಇಂದು ಬದ್ಧವೈರಿ ಪಾಕ್ ತಂಡವನ್ನು ಎದುರಿಸುವ ಮೂಲಕ ಟೀಂ ಇಂಡಿಯಾ ತನ್ನ ಏಷ್ಯಾಕಪ್ (Asia Cup 2023) ಅಭಿಯಾನವನ್ನು ಆರಂಭಿಸಲಿದೆ. ಆದರೆ ಕನ್ನಡಿಗ ಕೆಎಲ್ ರಾಹುಲ್ (KL Rahul) ಮೊದಲೆರೆಡು ಪಂದ್ಯಗಳನ್ನು ಆಡುತ್ತಿಲ್ಲ ಎಂಬುದು ಕನ್ನಡಿಗರಿಗೆ ನಿರಾಸೆಯನ್ನುಂಟು ಮಾಡಿದೆ. ವಾಸ್ತವವಾಗಿ ಕಳೆದ ಐಪಿಎಲ್ನಲ್ಲಿ ಇಂಜುರಿಗೆ ತುತ್ತಾಗಿದ್ದ ರಾಹುಲ್ ಅಂದಿನಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದರು. ಏಷ್ಯಾಕಪ್ ಸನಿಹವಾಗುತ್ತಿದ್ದಂತೆ ಇಂಜುರಿಯಿಂದ ಚೇತರಿಸಿಕೊಂಡಿದ್ದ ರಾಹುಲ್, ತಂಡಕ್ಕೆ ಕಂಬ್ಯಾಕ್ ಮಾಡುವ ತವಕದಲ್ಲಿದ್ದರು. ಇದಕ್ಕೆ ಪೂರಕವಾಗಿ ಅವರನ್ನು ಏಷ್ಯಾಕಪ್ ತಂಡಕ್ಕೂ ಆಯ್ಕೆ ಮಾಡಲಾಯಿತು. ಆದರೆ ರಾಹುಲ್ ಚೇತರಿಕೆಗೆ ಮತ್ತಷ್ಟು ಸಮಯಬೇಕಾಗಿರುವುದರಿಂದ ಅವರನ್ನು ಏಷ್ಯಾಕಪ್ನ ಮೊದಲೆರಡು ಪಂದ್ಯಗಳಿಂದ ಹೊರಗಿಡಲಾಗಿದೆ. ಹೀಗಾಗಿ ಪಾಕ್ ವಿರುದ್ಧ ರಾಹುಲ್ ಕಣಕ್ಕಿಳಿಯದಿರುವುದು ಕನ್ನಡಿಗರಿಗೆ ನಿರಾಸೆ ತಂದಿತ್ತು. ಆದರೆ ಈ ಮಧ್ಯೆ ಮತ್ತೊಬ್ಬ ಕನ್ನಡಿಗನಿಗೆ ಪಾಕ್ ವಿರುದ್ಧ ಕಣಕ್ಕಿಳಿಯಲು ಅವಕಾಶ ಸಿಗುವ ಸಾಧ್ಯತೆಗಳಿದೆ.
ಪ್ಲೇಯಿಂಗ್ 11ನಲ್ಲಿ ಪ್ರಸಿದ್ಧ್ ಕೃಷ್ಣಗೆ ಸಿಗುತ್ತಾ ಚಾನ್ಸ್?
ಬೆಸ್ಟ್ ಬೌಲಿಂಗ್ ಬಳಗದ ಜೊತೆ ಏಷ್ಯಾಕಪ್ ಸಮರಕ್ಕಿಳಿದಿರುವ ಟೀಂ ಇಂಡಿಯಾಗೆ ವೈರೆಟಿ ಆಫ್ ಬೌಲಿಂಗ್ ಆಯ್ಕೆ ಇದೆ. ಬ್ಯಾಲೆನ್ಸಿಂಗ್ ಬೌಲಿಂಗ್ ಅಟ್ಯಾಕ್ ಹೊಂದಿರುವ ಟೀಂ ಇಂಡಿಯಾ, ಬಲಿಷ್ಠವಾಗಿದೆ. ಈ ಪೈಕಿ ರೋಹಿತ್ ಬತ್ತಳಿಕೆಯಲ್ಲಿರುವ ಬೆಂಕಿ ಚೆಂಡು ಪ್ರಸಿದ್ಧ್ ಕೃಷ್ಣಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಚಾನ್ಸ್ ಸಿಗುತ್ತಾ ಅನ್ನೋ ಬಗ್ಗೆ ಚರ್ಚೆ ಶುರುವಾಗಿದೆ.
IND vs IRE: ಪದಾರ್ಪಣೆ ಪಂದ್ಯದ ಮೊದಲ ಓವರ್ನಲ್ಲೇ ಮಿಂಚಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಇಂಜುರಿಯಿಂದ ಚೇತರಿಸಿಕೊಂಡು ಮರಳಿರುವ ಬೂಮ್ರಾ
ಇಂಜುರಿಯಿಂದಾಗಿ 2 ವರ್ಷಗಳ ಕಾಲ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬೂಮ್ರಾ ಟೀಂ ಇಂಡಿಯಾದಿಂದ ಹೊರಗಿದ್ರು. ಇದೀಗ ಚೇತರಿಸಿಕೊಂಡಿರುವ ಬೂಮ್ರಾ ಐರ್ಲೆಂಡ್ ಟೂರ್ನಿಯಲ್ಲಿ ನಾಯಕತ್ವವನ್ನು ವಹಿಸಿಕೊಂಡು ಸರಣಿಯನ್ನು ಗೆದ್ದು ಬಂದಿದ್ದಾರೆ. ಇದೀಗ ಟೀಂ ಇಂಡಿಯಾದ ನಾಲ್ವರು ಬೌಲರ್ಗಳ ಪೈಕಿ ಬೂಮ್ರಾಗೆ ತಂಡದಲ್ಲಿ ಸ್ಥಾನ ಖಚಿತ. ಬೂಮ್ರಾ ಜೊತೆಗಾರ ಯಾರು ಅನ್ನೋ ಪ್ರಶ್ನೆಗೆ ಮೊದಲ ಉತ್ತರವೇ ಮೊಹಮ್ಮದ್ ಸಿರಾಜ್ ಆಗಿದ್ದಾರೆ.
ಮೂರನೇ ಬೌಲರ್ ಆಗಿ ಕಣಕ್ಕಿಳಿಯೋದು ಪ್ರಸಿದ್ಧ್ ಕೃಷ್ಣನಾ? ಶಮಿನಾ?
ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭರ್ಜರಿ 4 ವಿಕೆಟ್ ಕಬಳಿಸಿದ್ದ ಬೆಂಗಳೂರು ಎಕ್ಸ್ಪ್ರೆಸ್ ಪ್ರಸಿದ್ಧ್ ಕೃಷ್ಣ ತಂಡದ ಗೆಲುವಿಗೆ ಪ್ರಮುಖಪಾತ್ರವಹಿಸಿದ್ದರು. ಭರ್ಜರಿ ಫಾರ್ಮ್ನಲ್ಲಿರುವ ಪ್ರಸಿದ್ಧ್ ಕೃಷ್ಣ ಸಂದರ್ಭಕ್ಕೆ ತಕ್ಕಂತೆ ದಾಳಿ ಮಾಡುವ ಕಲೆಯನ್ನು ಅರಿತಿದ್ದಾರೆ. ಹೀಗಾಗಿ 3ನೇ ಬೌಲರ್ಗೆ ಮೊಹಮ್ಮದ್ ಶಮಿ ಜೊತೆಗೆ ಪ್ರಸಿದ್ಧ್ ಕೃಷ್ಣ ಕೂಡ ಪೈಪೋಟಿ ಕೊಡುತ್ತಿರೋದು ಸುಳ್ಳಲ್ಲ.
ಮೂರನೇ ಬೌಲರ್ಗೆ ಶಮಿ ಮತ್ತು ಪ್ರಸಿದ್ಧ್ ಜೊತೆಗೆ ಮತ್ತೊಬ್ಬರು ಪೈಪೋಟಿಯಲ್ಲಿರೋದು ಶಾರ್ದೂಲ್ ಠಾಕೂರ್. ರೋಹಿತ್ ಬತ್ತಳಿಕೆಯಲ್ಲಿ ವೆರೈಟಿ ಬ್ರಹ್ಮಾಸ್ತ್ರಗಳಿದೆ. ಪಾಕ್ ಮಣಿಸೋದಕ್ಕೆ ಕ್ಯಾಪ್ಟನ್ ಹಿಟ್ಮ್ಯಾನ್ ಯಾವ್ಯಾವ ಬ್ರಹ್ಮಾಸ್ತ್ರ ಬಳಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
