4 ಪಂದ್ಯಗಳಲ್ಲಿ 10 ಕ್ಯಾಚ್ ಕೈಚೆಲ್ಲಿದ ಟೀಂ ಇಂಡಿಯಾ! ಹೀಗಾದರೆ ವಿಶ್ವಕಪ್ ಗೆಲ್ಲುವುದು ಡೌಟ್ ಎಂದ ಫ್ಯಾನ್ಸ್

Asia Cup 2023: ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯವನ್ನು ಬಿಟ್ಟರೆ, ಟೀಂ ಇಂಡಿಯಾ ಉಳಿದ ನಾಲ್ಕು ಪಂದ್ಯಗಳಲ್ಲಿ ಕನಿಷ್ಠ ಒಂದು ಅಥವಾ ಎರಡು ಕ್ಯಾಚ್‌ಗಳನ್ನು ಕೈಬಿಟ್ಟಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ಫೀಲ್ಡಿಂಗ್ ಮಾಡದ ಕಾರಣ ಮೊದಲ ಪಂದ್ಯದಲ್ಲಿ ಕ್ಯಾಚ್ ಮಿಸ್ ಆಗಿರಲಿಲ್ಲ.

4 ಪಂದ್ಯಗಳಲ್ಲಿ 10 ಕ್ಯಾಚ್ ಕೈಚೆಲ್ಲಿದ ಟೀಂ ಇಂಡಿಯಾ! ಹೀಗಾದರೆ ವಿಶ್ವಕಪ್ ಗೆಲ್ಲುವುದು ಡೌಟ್ ಎಂದ ಫ್ಯಾನ್ಸ್
ಟೀಂ ಇಂಡಿಯಾ
Follow us
ಪೃಥ್ವಿಶಂಕರ
|

Updated on: Sep 16, 2023 | 8:12 AM

ಈ ಬಾರಿ ಏಷ್ಯಾಕಪ್​ನಲ್ಲಿ (Asia Cup 2023) ಟೀಂ ಇಂಡಿಯಾ ಮೊದಲ ಸೋಲಿಗೆ ಕೊರಳೊಡ್ಡಿದೆ. ಸೂಪರ್-4 ಸುತ್ತಿನ ತನ್ನ ಕೊನೆಯ ಪಂದ್ಯದಲ್ಲಿ ರೋಹಿತ್ ಪಡೆ, ಬಾಂಗ್ಲಾದೇಶ (India vs Bangladesh) ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಈಗಾಗಲೇ ಟೂರ್ನಿಯಿಂದ ಹೊರಗುಳಿದಿದ್ದ ಬಾಂಗ್ಲಾದೇಶ ಈ ಪಂದ್ಯದಲ್ಲಿ ಟೀಂ ಇಂಡಿಯಾವನ್ನು 6 ರನ್‌ಗಳಿಂದ ಸೋಲಿಸಿತ್ತು. ಈ ಸೋಲು ಟೀಮ್ ಇಂಡಿಯಾದ (Team India) ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಏಕೆಂದರೆ ಅದು ಈಗಾಗಲೇ ಏಷ್ಯಾಕಪ್‌ನ ಫೈನಲ್‌ಗೆ ತಲುಪಿದೆ. ಇದೀಗ ಭಾರತ ಹಾಗೂ ಶ್ರೀಲಂಕಾ (India vs Sri lanka) ನಡುವೆ ಇದೇ ಭಾನುವಾರದಂದು ಅಂದರೆ, ಸೆಪ್ಟೆಂಬರ್ 17 ರಂದು ಏಷ್ಯಾಕಪ್ ಫೈನಲ್ ಪಂದ್ಯ ನಡೆಯಲ್ಲಿದೆ. ಆದರೆ ಅದಕ್ಕೂ ಮುನ್ನ ನಾಯಕ ರೋಹಿತ್ ಶರ್ಮಾ (Rohit Sharma) ಹಾಗೂ ಆಡಳಿತ ಮಂಡಳಿಗೆ ತಂಡದ ಆಟಗಾರರ ಕಳಪೆ ಫಿಲ್ಡಿಂಗ್ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಏಷ್ಯಾಕಪ್‌ನಲ್ಲಿ ಭಾರತ ತಂಡ ಇದುವರೆಗೆ ಒಟ್ಟು 5 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 3ರಲ್ಲಿ ಗೆಲುವು ಸಾಧಿಸಿದ್ದರೆ, ಒಂದು ಪಂದ್ಯವನ್ನು ಮಳೆಯಿಂದಾಗಿ ರದ್ದುಪಡಿಸಲಾಗಿದೆ. ಇನ್ನುಳಿದ ಏಕೈಕ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಭಾರತ ಮುಗ್ಗರಿಸಿದೆ. ಈ ಎಲ್ಲಾ ಪಂದ್ಯಗಳಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಬ್ಯಾಟಿಂಗ್‌ನಲ್ಲಿ ಏರಿಳಿತಗಳಿದ್ದರೂ ಬೌಲಿಂಗ್‌ನಲ್ಲಿ ತಂಡವು ಪ್ರತಿ ಪಂದ್ಯದಲ್ಲೂ ತನ್ನ ಎದುರಾಳಿಗಳಿಗಿಂತ ಉತ್ತಮವಾಗಿದೆ ಎಂದು ಸಾಬೀತುಪಡಿಸಿತು. ಹೀಗಿದ್ದರೂ ಹಲವು ಬಾರಿ ಟೀಂ ಇಂಡಿಯಾದ ಆಟಗಾರರು ತಮ್ಮದೇ ಬೌಲರ್​ಗಳಿಗೆ ಬೆಂಬಲ ನೀಡದೇ ತಪ್ಪುಗಳನ್ನು ಎಸಗುತ್ತಿರುವುದು ತಂಡಕ್ಕೆ ಕೊಂಚ ಹಿನ್ನಡೆಯುಂಟು ಮಾಡಿದೆ.

IND vs BAN: ಏಕದಿನದಲ್ಲಿ 200 ವಿಕೆಟ್ ಪೂರೈಸಿದ ಜಡೇಜಾ; ಈ ಸಾಧನೆ ಮಾಡಿದ 7ನೇ ಭಾರತೀಯ

4 ಪಂದ್ಯಗಳಲ್ಲಿ 10 ಕ್ಯಾಚ್‌ ಡ್ರಾಪ್

ಟೀಂ ಇಂಡಿಯಾದ ಈ ತಪ್ಪುಗಳು ವೈಡ್, ನೋ ಬಾಲ್, ಬ್ಯಾಡ್ ಶಾಟ್ ಅಥವಾ ರನೌಟ್ ಕೈತಪ್ಪಿರುವುದಲ್ಲ. ಬದಲಿಗೆ ತಂಡದ ಆಟಗಾರರು ಪಂದ್ಯದಿಂದ ಪಂದ್ಯಕ್ಕೆ ಕ್ಯಾಚ್​ಗಳನ್ನು ಕೈಚೆಲ್ಲುವ ಚಾಳಿಯನ್ನು ಹೆಚ್ಚಿಸಿಕೊಳ್ಳುತ್ತಿರುವುದು. ಹೌದು, ಈ ಪಂದ್ಯಾವಳಿಯಲ್ಲಿ ಭಾರತ ತಂಡವು ಖಂಡಿತವಾಗಿಯೂ ಫೈನಲ್‌ಗೆ ತಲುಪಿದೆ. ಆದರೆ ತಂಡದ ಫೀಲ್ಡಿಂಗ್ ಮಾತ್ರ ತುಂಬಾ ಸರಾಸರಿಯಾಗಿದೆ. ಈ ಪಂದ್ಯಾವಳಿಯಲ್ಲಿ ಆಡಿರುವ 5 ಪಂದ್ಯಗಳಲ್ಲಿ ಭಾರತ 10 ಕ್ಯಾಚ್‌ಗಳನ್ನು ಕೈಬಿಟ್ಟಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯವನ್ನು ಬಿಟ್ಟರೆ, ಟೀಂ ಇಂಡಿಯಾ ಉಳಿದ ನಾಲ್ಕು ಪಂದ್ಯಗಳಲ್ಲಿ ಕನಿಷ್ಠ ಒಂದು ಅಥವಾ ಎರಡು ಕ್ಯಾಚ್‌ಗಳನ್ನು ಕೈಬಿಟ್ಟಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ಫೀಲ್ಡಿಂಗ್ ಮಾಡದ ಕಾರಣ ಮೊದಲ ಪಂದ್ಯದಲ್ಲಿ ಕ್ಯಾಚ್ ಮಿಸ್ ಆಗಿರಲಿಲ್ಲ.

ನೇಪಾಳ ವಿರುದ್ಧವೂ ಕಳಪೆ ಫಿಲ್ಡಿಂಗ್

ಗ್ರೂಪ್ ಹಂತದಲ್ಲಿಯೇ ನೇಪಾಳ ವಿರುದ್ಧ ಟೀಂ ಇಂಡಿಯಾ 4 ಕ್ಯಾಚ್‌ಗಳನ್ನು ಕೈಬಿಟ್ಟಿತ್ತು. ಇದರಲ್ಲಿ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ತಲಾ 1 ಕ್ಯಾಚ್ ಕೈಬಿಟ್ಟರೆ, ವಿಕೆಟ್ ಕೀಪಿಂಗ್ ಮಾಡುತ್ತಿದ್ದ ಇಶಾನ್ ಕಿಶನ್ 2 ಕ್ಯಾಚ್ ಕೈಬಿಟ್ಟರು. ರೋಹಿತ್ ಶರ್ಮಾ ಪಂದ್ಯಾವಳಿಯಲ್ಲಿ ಸ್ಲಿಪ್‌ನಲ್ಲಿ ಕೆಲವು ಅತ್ಯುತ್ತಮ ಕ್ಯಾಚ್‌ಗಳನ್ನು ತೆಗೆದುಕೊಂಡರು. ಆದರೆ ಪಾಕಿಸ್ತಾನ ವಿರುದ್ಧದ ಸೂಪರ್-4 ಪಂದ್ಯದಲ್ಲಿ ರೋಹಿತ್ ಕೂಡ 2 ಕ್ಯಾಚ್‌ಗಳನ್ನು ಕೈಬಿಟ್ಟರು, ಅದರಲ್ಲಿ ಒಂದು ಸ್ವಲ್ಪ ಕಷ್ಟಕರವಾಗಿತ್ತು. ನಂತರ ಶ್ರೀಲಂಕಾ ವಿರುದ್ಧದ ಸೂಪರ್-4 ಪಂದ್ಯದಲ್ಲಿಯೂ ಇಶಾನ್ ಕಿಶನ್ ಔಟ್‌ಫೀಲ್ಡ್‌ನಲ್ಲಿ 1 ಕ್ಯಾಚ್ ಕೈಚೆಲ್ಲಿದರು.

ಬಾಂಗ್ಲಾ ವಿರುದ್ಧ 3 ಕ್ಯಾಚ್ ಡ್ರಾಪ್

ಶುಕ್ರವಾರ ಸೆಪ್ಟೆಂಬರ್ 15 ರಂದು ನಡೆದ ಬಾಂಗ್ಲಾದೇಶದ ವಿರುದ್ಧದ ಸೂಪರ್-4 ಸುತ್ತಿನ ಕೊನೆಯ ಪಂದ್ಯದಲ್ಲೂ ಟೀಂ ಇಂಡಿಯಾ ಆಟಗಾರರ ಈ ಕಳಪೆ ಫಿಲ್ಡಿಂಗ್ ಪ್ರದರ್ಶನ ಮುಂದುವರೆಯಿತು. ಈ ಪಂದ್ಯದಲ್ಲಿ ತಂಡ ಒಟ್ಟು 3 ಕ್ಯಾಚ್ ಗಳನ್ನು ಕೈಬಿಟ್ಟಿತು. ಒಂದೇ ಓವರ್​ನಲ್ಲಿ ಎರಡು ಕ್ಯಾಚ್ ಕೈಬಿಟ್ಟಿದ್ದು, ನಾಯಕ ರೋಹಿತ್​ಗೆ ಇನ್ನಿಲ್ಲದ ಕೋಪ ತರಿಸಿತು. ಶಾರ್ದೂಲ್ ಠಾಕೂರ್ ಬೌಲ್ ಮಾಡಿದ ಈ ಓವರ್‌ನಲ್ಲಿ ಮೊದಲಿಗೆ ತಿಲಕ್ ವರ್ಮಾ ಕ್ಯಾಚ್ ಕೈಬಿಟ್ಟರೆ, ಅದೇ ಓವರ್​ನ ಕೊನೆಯ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಸ್ಲಿಪ್‌ನಲ್ಲಿ ಕ್ಯಾಚ್ ಕೈಚೆಲ್ಲಿದರು. ಬಳಿಕ 18ನೇ ಓವರ್​ನಲ್ಲಿ ವಿಕೆಟ್ ಕೀಪರ್ ಕೆಎಲ್ ರಾಹುಲ್ ಶಕಿಬ್ ಅಲ್ ಹಸನ್ ನೀಡಿದ ಕೊಂಚ ಕಠಿಣ ಕ್ಯಾಚ್ ಅನ್ನು ಕೈಬಿಟ್ಟರು. ಆಗ ಶಕೀಬ್ 28 ರನ್ ಗಳಿಸಿ ಆಡುತ್ತಿದ್ದರು. ಆದರೆ ಜೀವದಾನದ ಲಾಭ ಪಡೆದ ಶಕೀಬ್, ತಂಡದ ಪರ 80 ರನ್ ಸಿಡಿಸಿದರು. ಶಕೀಬ್ ಸಿಡಿಸಿದ ಈ ರನ್ ಟೀಂ ಇಂಡಿಯಾದ ಸೋಲಿಗೆ ಪ್ರಮುಖ ಕಾರಣವಾಯಿತು.

ಹೀಗಾಗಿ ವಿಶ್ವಕಪ್ ಸನಿಹವಾಗುತ್ತಿರುವ ವೇಳೆ ಟೀಂ ಇಂಡಿಯಾ ಆಟಗಾರರು ಪದೇ ಪದೇ ಈ ರೀತಯ ತಪ್ಪುಗಳನ್ನು ಮಾಡುತ್ತಿರುವುದು ಮುಖ್ಯ ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ ಹಾಗೂ ಆಡಳಿತ ಮಂಡಳಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ತಂಡದ ಆಟಗಾರರು ಇದೇ ರೀತಿಯ ಕಳಪೆ ಫಿಲ್ಡಿಂಗ್ ಮುಂದುವರೆಸಿದರೆ, ತಂಡ ವಿಶ್ವಕಪ್ ಗೆಲ್ಲುವುದು ಅನುಮಾನ ಎನ್ನುವುದು ಅಭಿಮಾನಿಗಳ ಅಭಿಪ್ರಾಯವಾಗಿದೆ. ಹೀಗಾಗಿ ಟೀಂ ಇಂಡಿಯಾ ವಿಶ್ವಕಪ್ ಆರಂಭಕ್ಕೂ ಮುನ್ನವೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ