ಬಾಂಗ್ಲಾ ವಿರುದ್ಧದ ಸೋಲಿನ ಬಳಿಕ ರೋಹಿತ್ ಶರ್ಮಾ ಆಡಿದ ಮಾತುಗಳೇನು ನೋಡಿ

Rohit Sharma Post Match Presentation, IND vs BAN: ಏಷ್ಯಾಕಪ್​ನ ಸೂಪರ್-4 ಹಂತದ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಸೋಲು ಅನುಭವಿಸಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ಹುಡುಗರಿಗೆ ಆಟದ ಸಮಯವನ್ನು ನೀಡಿದೆವು ಎಂದಿದ್ದಾರೆ.

|

Updated on: Sep 16, 2023 | 7:32 AM

ಏಷ್ಯಾಕಪ್ 2023 ಫೈನಲ್​ಗು ಮುನ್ನ ಸೂಪರ್-4 ಹಂತದ ಕೊನೆಯ ಪಂದ್ಯದಲ್ಲಿ ಕಣಕ್ಕಿಳಿದ ಭಾರತ ತಂಡ ಬಾಂಗ್ಲಾದೇಶ ವಿರುದ್ಧ ಸೋಲು ಕಂಡಿತು. ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ರೋಚಕ ಪಂದ್ಯದಲ್ಲಿ ರೋಹಿತ್ ಪಡೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು.

1 / 7
ತನ್ನ ಬೆಂಚ್ ಸ್ಟ್ರೆಂತ್ ಅನ್ನು ಪರೀಕ್ಷಿಸುವ ನಿಟ್ಟಿನಲ್ಲಿ ವಿರಾಟ್ ಕೊಹ್ಲಿ, ಜಸ್​ಪ್ರಿತ್ ಬುಮ್ರಾ ಸೇರಿದಂತೆ ಕೆಲ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ ಕಣಕ್ಕಿಳಿಯಿತು. ಆದರೆ, ನಿರೀಕ್ಷೆಗೆ ತಕ್ಕ ಪ್ರದರ್ಶನ ತೋರಲಿಲ್ಲ. ಪಂದ್ಯ ಮುಗಿದ ಬಳಿಕ ರೋಹಿತ್ ಶರ್ಮಾ ಮಾತನಾಡಿದ್ದು, ಏನು ಹೇಳಿದ್ದಾರೆ ನೋಡಿ.

2 / 7
ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ಹುಡುಗರಿಗೆ ಆಟದ ಸಮಯವನ್ನು ನೀಡಿದೆವು. ವಿಶ್ವಕಪ್ ಆಡಲಿರುವ ಕೆಲ ಆಟಗಾರರನ್ನು ಇಂದು ಆಡಿಸಿದ್ದೇವೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

3 / 7
ಮಾತು ಮುಂದುವರೆಸಿದ ರೋಹಿತ್, ಅಕ್ಷರ್ ಪಟೇಲ್ ಆಟವನ್ನು ಹಾಡಿಹೊಗಳಿದ್ದಾರೆ. ಅಕ್ಷರ್ ಅದ್ಭುತವಾಗಿ ಬ್ಯಾಟ್ ಮಾಡಿದರು. ಆದರೆ, ಅವರಿಗೆ ಪಂದ್ಯವನ್ನು ಮುಗಿಸಲು ಸಾಧ್ಯವಾಗಲಿಲ್ಲ. ಅವರು ಈ ಪಂದ್ಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದರೆ ಕ್ರೆಡಿಟ್ ಬಾಂಗ್ಲಾದೇಶ ಬೌಲರ್‌ಗಳಿಗೆ ಸಲ್ಲಬೇಕು ಎಂಬುದು ರೋಹಿತ್ ಮಾತು.

4 / 7
ಶುಭ್​ಮನ್ ಗಿಲ್ ಅವರ ಶತಕ ಅದ್ಭುತವಾಗಿತ್ತು. ಅವರು ಸದಾ ತಮ್ಮ ಆಟವನ್ನು ಬೆಂಬಲಿಸುತ್ತಾರೆ. ತಾನು ಹೇಗೆ ಆಡಬೇಕು ಎಂಬುದು ಆತನಿಗೆ ಚೆನ್ನಾಗಿ ತಿಳಿದಿದೆ. ಅವರು ತಂಡಕ್ಕಾಗಿ ಏನು ಮಾಡಲು ಬಯಸುತ್ತಾರೆ ಎಂಬುದರ ಬಗ್ಗೆ ಸ್ಪಷ್ಟತೆ ಇದೆ. ಕಳೆದ ವರ್ಷ ಅವರ ಫಾರ್ಮ್ ನೋಡಿ. ಹೊಸ ಚೆಂಡಿನಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ್ದಾರೆ. ನಿಜವಾಗಿಯೂ ಅವರು ಕಷ್ಟಪಟ್ಟು ಕೆಲಸ ಮಾಡಿದ್ದಾರೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

5 / 7
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿತು. ನಾಯಕ ಶಕಿಬ್ ಅಲ್ ಹಸನ್ 85 ಎಸೆತಗಳಲ್ಲಿ 80 ರನ್ ಬಾರಿಸಿದರೆ, ತೌಹಿದ್ ಹ್ರಿದೈ 54 ಮತ್ತು ನಸುಮ್ ಅಹ್ಮದ್ 44 ರನ್ ಗಳಿಸಿದರು. ಭಾರತ ಪರ ಶಾರ್ದೂಲ್ ಥಾಕೂರ್ 3, ಮೊಹಮ್ಮದ್ ಶಮಿ 2 ವಿಕೆಟ್ ಪಡೆದರು.

6 / 7
ಟಾರ್ಗೆಟ್ ಬೆನ್ನಟ್ಟಿದ ಭಾರತ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಶುಭ್​ಮನ್ 43 ಓವರ್ ವರೆಗೆ ಆಡಿದ್ದು ಬಿಟ್ಟರೆ ಉಳಿದ ಬ್ಯಾಟರ್​ಗಳೆಲ್ಲ ವೈಫಲ್ಯ ಅನುಭವಿಸಿದರು. ಗಿಲ್ 133 ಎಸೆತಗಳಲ್ಲಿ 121 ರನ್ ಸಿಡಿಸಿದರು. ಅಂತಿಮ ಹಂತದಲ್ಲಿ ಅಕ್ಷರ್ ಪಟೇಲ್ 42 ರನ್ ಬಾರಿಸಿದರೂ ಗೆಲುವು ಸಾಧ್ಯವಾಗಲಿಲ್ಲ. ಭಾರತ 49.5 ಓವರ್​ಗಳಲ್ಲಿ 259 ರನ್​ಗೆ ಆಲೌಟ್ ಆಯಿತು. ಬಾಂಗ್ಲಾ ಪರ ಮುಸ್ತಫಿಜುರ್ ರಹ್ಮಾನ್ 3 ವಿಕೆಟ್ ಪಡೆದರು.

7 / 7
Follow us
ಕೋಲಾರದಲ್ಲಿ ಶೌರ್ಯ ಜಾಗರಣಾ ರಥಯಾತ್ರೆ, ಬಜರಂಗ ದಳದ ಕಾರ್ಯಕರ್ತರು ಭಾಗಿ

ಅದೃಷ್ಟ ಕೂಡಿಬಂದರೆ ಸಿದ್ದರಾಮಯ್ಯ ಪ್ರಧಾನ ಮಂತ್ರಿಯಾಗಬಹುದು: ವಿಶ್ವನಾಥ್

ಚಿಕ್ಕಬಳ್ಳಾಪುರ: ಬಸ್ ಟಾಪ್ ಕಿತ್ತುಹೋಗುವಂತೆ ಸೀಟಿಗಾಗಿ ಮಹಿಳೆಯರ ಕಿತ್ತಾಟ

ಶಿವಮೊಗ್ಗ ಗಲಾಟೆ; ಕಿಡಿಗೇಡಿಗಳು ಸ್ವಾರ್ಥಕ್ಕಾಗಿ ಮಾಡಿದ್ದಾರೆ-ಮಧುಬಂಗಾರಪ್ಪ

ಲಿಂಗಾಯತ ಅಧಿಕಾರಿಗಳು ಬೇಕೆಂದು ಶಾಮನೂರು ಶಿವಶಂಕರಪ್ಪ ಪಟ್ಟು ಹಿಡಿದಿದ್ದಾರೆ!

ಜಮೀರ್ ಬಗ್ಗೆ ಮಾತಾಡೋದು ಕೆಸರು ಮುಖಕ್ಕೆರಚಿಕೊಂಡಂತೆ: ಹೆಚ್ ಡಿ ಕುಮಾರಸ್ವಾಮಿ

ಶಿವಮೊಗ್ಗದಲ್ಲಿ ಈದ್ ಮಿಲಾದ್ ಗೆ ಹಾಕಿದ್ದ ಬೃಹತ್​​ ಟಿಪ್ಪು ಕಟೌಟ್​ ತೆರವು

ಕುಮಾರಸ್ವಾಮಿ ಸೆಕ್ಯುಲರ್ ಅಲ್ಲವೆಂದು ಮೊದಲೇ ಗೊತ್ತಿತ್ತು: ಜಮೀರ್ ಅಹ್ಮದ್ 

ಸೋನಿಯಾಗಾಂಧಿ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ: ಶಿವಕುಮಾರ್

ಚನ್ನಪಟ್ಟಣದ ಜೆಡಿಎಸ್​ ಮುಖಂಡರು ಕಾಂಗ್ರೆಸ್ ಸೇರ್ಪಡೆ