AUS vs SA: ಕೊನೆಯ 10 ಓವರ್​ಗಳಲ್ಲಿ ಸುನಾಮಿ ಎಬ್ಬಿಸಿದ ಆಫ್ರಿಕಾ; ಭಾರತದ ದಾಖಲೆಯೂ ಧ್ವಂಸ

AUS vs SA: ಕ್ಲಾಸೆನ್ ಹಾಗೂ ಮಿಲ್ಲರ್ ಅವರ ಸ್ಫೋಟಕ ಆಟದಿಂದಾಗಿ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ ಕೊನೆಯ 10 ಓವರ್‌ಗಳಲ್ಲಿ 173 ರನ್ ಕಲೆಹಾಕಿತು. ಏಕದಿನ ಇತಿಹಾಸದಲ್ಲಿ ಹಿಂದೆಂದೂ ಪಂದ್ಯದ ಕೊನೆಯ ಹತ್ತು ಓವರ್‌ಗಳಲ್ಲಿ ಇಷ್ಟು ರನ್ ಸಂಗ್ರಹವಾಗಿರಲಿಲ್ಲ. ಇದಕ್ಕೂ ಮುನ್ನ ಈ ದಾಖಲೆ ಇಂಗ್ಲೆಂಡ್ ಹೆಸರಿನಲ್ಲಿತ್ತು.

ಪೃಥ್ವಿಶಂಕರ
|

Updated on: Sep 16, 2023 | 9:58 AM

ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ದಾಖಲೆಯ ಗೆಲುವು ದಾಖಲಿಸಿದೆ. ಆಫ್ರಿಕಾ ನೀಡಿದ 416 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಆಸೀಸ್ ಕೇವಲ 252 ರನ್​ಗಳಿಗೆ ಆಲೌಟ್ ಆಗುವ ಮೂಲಕ 164 ರನ್​ಗಳಿಂದ ಹೀನಾಯ ಸೋಲು ಅನುಭವಿಸಿತು.

1 / 7
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಫ್ರಿಕಾ ಪರ ಹೆನ್ರಿಚ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ಬಿರುಸಿನ ಇನ್ನಿಂಗ್ಸ್ ಆಡಿದರು. ಇದರ ಫಲವಾಗಿ ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 416 ರನ್ ಕಲೆಹಾಕಿತು.

2 / 7
ಐದನೇ ಕ್ರಮಾಂಕದಲ್ಲಿ  ಬ್ಯಾಟಿಂಗ್​ ಇಳಿದ ಹೆನ್ರಿಚ್ ಕ್ಲಾಸೆನ್ 83 ಎಸೆತಗಳಲ್ಲಿ 13 ಸಿಕ್ಸರ್ ಮತ್ತು 13 ಬೌಂಡರಿಗಳ ನೆರವಿನಿಂದ 174 ರನ್ ಬಾರಿಸಿದರೆ, ಡೇವಿಡ್ ಮಿಲ್ಲರ್ 45 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿದರು.  ಅದರಲ್ಲೂ ಕೊನೆಯ ಹತ್ತು ಓವರ್​ಗಳಲ್ಲಿ ಈ ಇಬ್ಬರು ಮೈದಾನದಲ್ಲಿ ಸುನಾಮಿ ಎಬ್ಬಿಸಿದರು.

3 / 7
ಕ್ಲಾಸೆನ್ ಹಾಗೂ ಮಿಲ್ಲರ್ ಅವರ ಸ್ಫೋಟಕ ಆಟದಿಂದಾಗಿ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ ಕೊನೆಯ 10 ಓವರ್‌ಗಳಲ್ಲಿ 173 ರನ್ ಕಲೆಹಾಕಿತು.  ಏಕದಿನ ಇತಿಹಾಸದಲ್ಲಿ ಹಿಂದೆಂದೂ ಪಂದ್ಯದ ಕೊನೆಯ ಹತ್ತು ಓವರ್‌ಗಳಲ್ಲಿ ಇಷ್ಟು ರನ್ ಸಂಗ್ರಹವಾಗಿರಲಿಲ್ಲ. ಇದಕ್ಕೂ ಮುನ್ನ ಈ ದಾಖಲೆ ಇಂಗ್ಲೆಂಡ್ ಹೆಸರಿನಲ್ಲಿತ್ತು.

4 / 7
2022ರಲ್ಲಿ ನೆದರ್ಲೆಂಡ್ ವಿರುದ್ಧ ಇಂಗ್ಲೆಂಡ್ ಕೊನೆಯ 10 ಓವರ್‌ಗಳಲ್ಲಿ 164 ರನ್ ಗಳಿಸಿತ್ತು. ಆದರೆ ಈ ದಾಖಲೆಯನ್ನು ಇದೀಗ ದಕ್ಷಿಣ ಆಫ್ರಿಕಾ ಮುರಿದಿದೆ.

5 / 7
ಆಫ್ರಿಕಾ ಪರ 222 ರನ್ ಜೊತೆಯಾಟ ನಡೆಸಿದ ಕ್ಲಾಸೆನ್ ಮತ್ತು ಮಿಲ್ಲರ್ ತಂಡವನ್ನು ಬೃಹತ್​ ಗುರಿಯತ್ತ ಮುನ್ನಡೆಸಿದರೆ, ಇದೇ ವೇಳೆ ಡೇವಿಡ್ ಮಿಲ್ಲಾಲ್ ಏಕದಿನ ಕ್ರಿಕೆಟ್‌ನಲ್ಲಿ 4000 ರನ್ ಪೂರೈಸಿದರು.

6 / 7
ಇನ್ನು ಈ ಪಂದ್ಯದಲ್ಲಿ 400 ರ ಗಡಿ ದಾಟಿದ ದಕ್ಷಿಣ ಆಫ್ರಿಕಾ ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಏಳನೇ ಬಾರಿಗೆ 400ಕ್ಕೂ ಹೆಚ್ಚು ರನ್ ಗಳಿಸಿದ ದಾಖಲೆ ಮಾಡಿತು. ಅಲ್ಲದೆ ಈ ಹಿಂದೆ 6 ಬಾರಿ 400ಕ್ಕೂ ಹೆಚ್ಚು ರನ್ ಬಾರಿಸಿದ್ದ  ಭಾರತದ ದಾಖಲೆಯನ್ನೂ ಆಫ್ರಿಕಾ ಮುರಿದಿದೆ.

7 / 7
Follow us