- Kannada News Photo gallery Cricket photos India vs Sri Lanka Asia Cup 2023 final Weather Update From Colombo
ಕೊಲಂಬೊದಲ್ಲಿ ಇಂದು ಹವಾಮಾನ ಹೇಗಿದೆ?: ಭಾರತ-ಶ್ರೀಲಂಕಾ ಫೈನಲ್ ಪಂದ್ಯಕ್ಕೆ ಮಳೆ ಬರುತ್ತಾ?
India Vs Sri Lanka Asia Cup 2023 Final, Colombo Weather: ಕೊಲಂಬೊದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದೀಗ ಹವಾಮಾನ ಮುನ್ಸೂಚನೆಯ ಪ್ರಕಾರ ಏಷ್ಯಾಕಪ್ 2023 ಫೈನಲ್ನ ಭಾರತ-ಶ್ರೀಲಂಕಾ ಫೈನಲ್ ಪಂದ್ಯಕ್ಕೆ ಭಾನುವಾರವೂ ಮಳೆ ಅಡ್ಡಿ ಪಡಿಸುವ ನಿರೀಕ್ಷೆಯಿದೆ. 2023 ರ ಏಷ್ಯಾಕಪ್‌ನ ಪ್ರತಿಯೊಂದು ಪಂದ್ಯದ ಮೇಲೆ ಮಳೆಯ ಕರಿ ನೆರಳು ಬಿದ್ದಿದೆ. ಇಂದಿನ ಪಂದ್ಯಕ್ಕೂ ಮಳೆಯ ಕಾಟ ಇರಲಿದೆಯಂತೆ.
Updated on: Sep 17, 2023 | 7:53 AM

ಏಷ್ಯಾಕಪ್ 2023 ಟೂರ್ನಿಗೆ ಇಂದು ತೆರೆಬೀಳಲಿದೆ. ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ಹಾಗೂ ದಸುನ್ ಶನಕ ನೇತೃತ್ವದ ಶ್ರೀಲಂಕಾ (India vs Sri Lanka) ತಂಡ ಇಂದು ಏಷ್ಯಾಕಪ್ ಫೈನಲ್ನಲ್ಲಿ ಮುಖಾಮುಖಿ ಆಗುತ್ತಿದೆ.

ಎರಡು ಬಲಿಷ್ಠ ತಂಡದಗಳ ನಡುವಣ ಕಾದಾಟಕ್ಕೆ ಅಭಿಮಾನಿಗಳು ಕಾದುಕುಳಿತಿದ್ದಾರೆ. ಆದರೆ, ಇದೀಗ ಹವಾಮಾನ ಮುನ್ಸೂಚನೆಯ ಪ್ರಕಾರ ಇಂಡೋ-ಲಂಕಾ ಫೈನಲ್ ಪಂದ್ಯಕ್ಕೆ ಭಾನುವಾರವೂ ಮಳೆ ಅಡ್ಡಿ ಪಡಿಸುವ ನಿರೀಕ್ಷೆಯಿದೆ. 2023 ರ ಏಷ್ಯಾಕಪ್‌ನ ಪ್ರತಿಯೊಂದು ಪಂದ್ಯದ ಮೇಲೆ ಮಳೆಯ ಕರಿ ನೆರಳು ಬಿದ್ದಿದೆ. ಇಂದಿನ ಪಂದ್ಯಕ್ಕೂ ಮಳೆಯ ಕಾಟ ಇರಲಿದೆಯಂತೆ.

ಕೊಲಂಬೊದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ತುಂತುರು ಮಳೆ ಮತ್ತು ಸೂರ್ಯನ ಬೆಳಕು ಕಣ್ಣಾಮುಚ್ಚಾಲೆ ಆಡುತ್ತಿದೆ. ದುರದೃಷ್ಟವಶಾತ್, ಭಾರತ ಮತ್ತು ಶ್ರೀಲಂಕಾ ಏಷ್ಯಾಕಪ್ 2023 ರ ಫೈನಲ್ ಪಂದ್ಯದ ಮೇಲೆ ಮಳೆಯು ಪರಿಣಾಮ ಬೀರುವ ಸಾಧ್ಯತೆಯಿದೆ.

ಪಂದ್ಯವು ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ. ಈ ಸಂದರ್ಭ ಮಳೆ ಬರುವ ಲಕ್ಷಣವಿಲ್ಲ. ಆದರೆ, ಸಂಜೆಯ ವೇಳೆಗೆ ಮಳೆಯಾಗುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ. ದಿನವಿಡೀ ಮೋಡ ಕವಿದ ವಾತಾವರಣ ಇರಲಿದೆ. ಸಂಜೆ ವೇಳೆಗೆ ಶೇ. 50ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಆಟದ ಕೊನೆಯ ಭಾಗದಲ್ಲಿ ಮಳೆಯ ಪ್ರಮಾಣ ಶೇ. 68 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಪಂದ್ಯದ ಮಧ್ಯೆ ಆಗಾಗ ಮಳೆ ಸುರಿಯಲಿದ್ದು, ಓವರ್‌ಗಳ ಕಡಿತಕ್ಕೆ ಕಾರಣವಾಗಬಹುದು. ದಿನವಿಡೀ ತಾಪಮಾನವು 24 ರಿಂದ 28 ಡಿಗ್ರಿಗಳವರೆಗೆ ಇರುತ್ತದೆ. ಎಲ್ಲಾದರು ಭಾರತ-ಶ್ರೀಲಂಕಾ ಫೈನಲ್ ಪಂದ್ಯ ಮಳೆಗೆ ರದ್ದಾದರೆ ಏನು ಗತಿ?.

ಭಾರತ ಮತ್ತು ಶ್ರೀಲಂಕಾ ಏಷ್ಯಾಕಪ್ 2023 ಫೈನಲ್ ಹಣಾಹಣಿ ಭಾನುವಾರದಂದು ಮಳೆಯಿಂದ ರದ್ದಾದರೆ, ಮೀಸಲು ದಿನಕ್ಕೆ ಅವಕಾಶವಿದೆ. ಮಳೆ ಬಂದು ಪಂದ್ಯ ಅರ್ಧ ನಡೆದರೆ ಅಥವಾ ಪಂದ್ಯ ಆರಂಭವೇ ಆಗಿದಿದ್ದಲ್ಲಿ, ಮರುದಿನ (ಸೋಮವಾರ) ಮುಂದುವರೆಸುವ ಅವಕಾಶವಿದೆ. ಪಂದ್ಯ ಅರ್ಧಕ್ಕೆ ಮೊಟಕುಗೊಳಿಸಿದರೆ ಮುಂದಿನ ದಿನ ಅರ್ಧದಿಂದಲೇ ಮುಂದುವರೆಯಲಿದೆ.

ಸಾಮಾನ್ಯವಾಗಿ ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ ಶ್ರೀಲಂಕಾದಲ್ಲಿ ಭಾರೀ ಮಳೆಯಾಗುತ್ತದೆ. ಹೀಗಾಗಿ ಲಂಕಾ ಕ್ರಿಕೆಟ್ ಮಂಡಳಿ ಈ ತಿಂಗಳುಗಳಲ್ಲಿ ಇಲ್ಲಿ ಯಾವುದೇ ಪಂದ್ಯಗಳನ್ನು ನಿಗದಿಪಡಿಸುವುದಿಲ್ಲ. ಆದರೆ, ಪಾಕಿಸ್ತಾನಕ್ಕೆ ತೆರಳಲು ಭಾರತಕ್ಕೆ ಸರ್ಕಾರದ ಅನುಮತಿ ಇಲ್ಲದ ಕಾರಣ ಶ್ರೀಲಂಕಾಕ್ಕೆ ತನ್ನ ನಾಡಿನಲ್ಲಿ ಏಷ್ಯಾಕಪ್ 2023 ಅನ್ನು ಆಯೋಜಿಸುವುದು ಅನಿವಾರ್ಯವಾಗಿದ್ದವು. ಈ ಕಾರಣಕ್ಕಾಗಿ ಲಂಕಾದಲ್ಲೇ ಮಳೆಯ ನಡುವೆ ಪಂದ್ಯವನ್ನು ನಡೆಸಲಾಗುತ್ತಿದೆ.
