Asia Cup 2025: ಫೈನಲ್ ನೋಡಲು ಸ್ಟೇಡಿಯಂಗೆ ಬರುವವರಿಗೆ ಕಟ್ಟುನಿಟ್ಟಿನ ನಿಯಮ ಜಾರಿ
India vs Pakistan Asia Cup Final: ದುಬೈನಲ್ಲಿ ನಡೆಯಲಿರುವ ಭಾರತ-ಪಾಕಿಸ್ತಾನ ಏಷ್ಯಾಕಪ್ 2025 ಫೈನಲ್ ಪಂದ್ಯಕ್ಕಾಗಿ ದುಬೈ ಪೊಲೀಸರು ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೊಳಿಸಿದ್ದಾರೆ. ಅಭಿಮಾನಿಗಳು 3 ಗಂಟೆ ಮುಂಚಿತವಾಗಿ ಬರಬೇಕು. ನಿಷಿದ್ಧ ವಸ್ತುಗಳಾದ ಪಟಾಕಿ, ಬ್ಯಾನರ್‌ಗಳು ಕ್ರೀಡಾಂಗಣಕ್ಕೆ ನಿಷಿದ್ಧ. ನಿಯಮ ಉಲ್ಲಂಘಿಸಿದರೆ ಭಾರಿ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಪಂದ್ಯದ ವಾತಾವರಣ ಹಾಳುಮಾಡಲು ಪ್ರಯತ್ನಿಸುವವರಿಗೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.

ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಐತಿಹಾಸಿಕ ಏಷ್ಯಾಕಪ್ 2025 ರ ಫೈನಲ್ (Asia Cup 2025) ಪಂದ್ಯವು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ (Dubai International Cricket Stadium) ನಡೆಯಲಿದೆ. ಅಭಿಮಾನಿಗಳು ಈ ಪಂದ್ಯಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ಪಂದ್ಯದ ಎಲ್ಲಾ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ. ಏತನ್ಮಧ್ಯೆ, ದುಬೈ ಪೊಲೀಸರು ಕ್ರೀಡಾಂಗಣಕ್ಕೆ ಪಂದ್ಯವನ್ನು ವೀಕ್ಷಿಸಲು ಬರುವಂತಹ ಅಭಿಮಾನಿಗಳಿಗಾಗಿಯೇ ಕೆಲವು ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಈಗ ಜಾರಿಗೆ ತಂದಿರುವ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಮತ್ತು ದಂಡ ವಿಧಿಸುವುದಾಗಿಯೂ ಪೊಲೀಸರು ಹೆಚ್ಚರಿಕೆ ನೀಡಿದ್ದಾರೆ. ಅಲ್ಲದೆ ದುಬೈ ಪೊಲೀಸರು ನಿಷೇಧಿತ ವಸ್ತುಗಳ ಪಟ್ಟಿಯನ್ನು ಸಹ ಬಿಡುಗಡೆ ಮಾಡಿದ್ದಾರೆ.
ದುಬೈ ಪೊಲೀಸರ ಸೂಚನೆ
ದುಬೈ ಪೊಲೀಸರು 2025 ರ ಏಷ್ಯಾಕಪ್ ಫೈನಲ್ ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಬರುವ ಅಭಿಮಾನಿಗಳಿಗೆ ಹಲವಾರು ಸಲಹೆಗಳನ್ನು ನೀಡಿದ್ದಾರೆ. ನಿಗದಿತ ಆರಂಭದ ಸಮಯಕ್ಕಿಂತ (ರಾತ್ರಿ 8 ಗಂಟೆಗೆ IST) ಕನಿಷ್ಠ ಮೂರು ಗಂಟೆಗಳ ಮೊದಲು ಕ್ರೀಡಾಂಗಣಕ್ಕೆ ಬರುವಂತೆ ಅಭಿಮಾನಿಗಳಿಗೆ ಸೂಚನೆ ನೀಡಿದ್ದಾರೆ.
ಪ್ರತಿ ಟಿಕೆಟ್‌ಗೆ ಒಬ್ಬರಿಗೆ ಮಾತ್ರ ಪ್ರವೇಶವಿದ್ದು, ಮರು ಪ್ರವೇಶವಿಲ್ಲ. ಆದ್ದರಿಂದ ಪಂದ್ಯದ ಸಮಯದಲ್ಲಿ ಕ್ರೀಡಾಂಗಣದಿಂದ ಹೊರಹೋಗುವ ಯಾವುದೇ ಅಭಿಮಾನಿಗೆ ಮತ್ತೆ ಒಳಗೆ ಪ್ರವೇಶಿಸಲು ಅವಕಾಶವಿರುವುದಿಲ್ಲ. ಅಭಿಮಾನಿಗಳು ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸುವಂತೆಯೂ ಕೇಳಿಕೊಳ್ಳಲಾಗಿದೆ. ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದೊಳಗೆ ಭಾರತ ಮತ್ತು ಪಾಕಿಸ್ತಾನಿ ಅಭಿಮಾನಿಗಳು ಧ್ವಜಗಳು, ಬ್ಯಾನರ್‌ಗಳು ಅಥವಾ ಪಟಾಕಿಗಳನ್ನು ಹೊತ್ತೊಯ್ಯುವಂತಿಲ್ಲವಾದ್ದರಿಂದ ನಿಷೇಧಿತ ವಸ್ತುಗಳ ಪಟ್ಟಿಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾಗಿದೆ.
ಭಾರಿ ಮೊತ್ತದ ದಂಡ
ಏತನ್ಮಧ್ಯೆ, ಈ ನಿಷೇಧಿತ ವಸ್ತುಗಳನ್ನು ಹೊಂದಿರುವ ಯಾರಾದರೂ ಸಿಕ್ಕಿಬಿದ್ದರೆ ₹1.2 ಲಕ್ಷದಿಂದ ₹7.24 ಲಕ್ಷದವರೆಗೆ ದಂಡ ಮತ್ತು ಮೂರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು ಎಂದು ದುಬೈ ಪೊಲೀಸರು ಘೋಷಿಸಿದ್ದಾರೆ. ಪಂದ್ಯದ ವಾತಾವರಣವನ್ನು ಹಾಳು ಮಾಡಲು ಪ್ರಯತ್ನಿಸುವ ಅಭಿಮಾನಿಗಳಿಗೆ ₹2.41 ಲಕ್ಷದಿಂದ ₹7.24 ಲಕ್ಷದವರೆಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
Asia cup 2025 Final IND vs PAK Live Score: ಭಾರತ- ಪಾಕ್ ನಡುವೆ ಫೈನಲ್ ಫೈಟ್
ಇವುಗಳ ಮೇಲೆ ನಿಷೇಧ ಹೇರಲಾಗಿದೆ
- ಪಟಾಕಿಗಳು, ಲೇಸರ್ ಪಾಯಿಂಟರ್‌ಗಳು ಮತ್ತು ಯಾವುದೇ ಇತರ ಅಪಾಯಕಾರಿ ವಸ್ತುಗಳು.
- ಚೂಪಾದ ವಸ್ತುಗಳು, ಆಯುಧಗಳು, ವಿಷಕಾರಿ ವಸ್ತುಗಳು ಮತ್ತು ರಿಮೋಟ್ ನಿಯಂತ್ರಿತ ಸಾಧನಗಳು.
- ದೊಡ್ಡ ಛತ್ರಿಗಳು, ಕ್ಯಾಮೆರಾ ಟ್ರೈಪಾಡ್‌ಗಳು, ಸೆಲ್ಫಿ ಸ್ಟಿಕ್‌ಗಳು ಮತ್ತು ಅನಧಿಕೃತ ಕ್ಯಾಮೆರಾ.
- ಬ್ಯಾನರ್‌ಗಳು ಮತ್ತು ಆಯೋಜಕರು ಅನುಮೋದಿಸದ ಧ್ವಜಗಳು.
- ಸಾಕುಪ್ರಾಣಿಗಳು, ಸೈಕಲ್‌ಗಳು, ಸ್ಕೇಟ್‌ಬೋರ್ಡ್‌ಗಳು, ಸ್ಕೂಟರ್‌ಗಳು ಮತ್ತು ಗಾಜಿನ ವಸ್ತುಗಳು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:48 pm, Sun, 28 September 25
