AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs PAK: ಟಾಸ್ ಸಮಯದಲ್ಲೇ ವಿವಾದ; ರವಿಶಾಸ್ತ್ರಿ ಜೊತೆ ಮಾತನಾಡಲು ಒಪ್ಪದ ಸಲ್ಮಾನ್ ಆಘಾ

Asia Cup Final Toss Row: 2025ರ ಏಷ್ಯಾಕಪ್ ಭಾರತ-ಪಾಕಿಸ್ತಾನ ಪಂದ್ಯಗಳ ವಿವಾದಗಳಿಂದಲೇ ಆರಂಭವಾಗಿ ಅಂತ್ಯಗೊಳ್ಳುತ್ತಿದೆ. ಫೈನಲ್‌ನಲ್ಲಿ ಪಾಕ್ ನಾಯಕ ಸಲ್ಮಾನ್ ಅಲಿ ಅಘಾ ಭಾರತೀಯ ವೀಕ್ಷಕ ವಿವರಣೆಗಾರ ರವಿಶಾಸ್ತ್ರಿಯೊಂದಿಗೆ ಟಾಸ್ ಸಮಯದಲ್ಲಿ ಮಾತನಾಡಲು ನಿರಾಕರಿಸಿದರು. ಇದರಿಂದಾಗಿ ವಕಾರ್ ಯೂನಿಸ್ ಮಧ್ಯಪ್ರವೇಶಿಸಬೇಕಾಯಿತು. ಇದು ಪಂದ್ಯಾವಳಿಯ ಅಂತಿಮ ಹಂತದಲ್ಲಿ ಮತ್ತೊಂದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.

IND vs PAK: ಟಾಸ್ ಸಮಯದಲ್ಲೇ ವಿವಾದ; ರವಿಶಾಸ್ತ್ರಿ ಜೊತೆ ಮಾತನಾಡಲು ಒಪ್ಪದ ಸಲ್ಮಾನ್ ಆಘಾ
Ind Vs Pak Final
ಪೃಥ್ವಿಶಂಕರ
|

Updated on:Sep 28, 2025 | 8:32 PM

Share

ವಿವಾದಗಳೊಂದಿಗೆ ಆರಂಭವಾಗಿದ್ದ 2025 ರ ಏಷ್ಯಾಕಪ್ (Asia Cup 2025) ಇದೀಗ ವಿವಾದಗಳೊಂದಿಗೆ ಅಂತ್ಯಗೊಳ್ಳುತ್ತಿದೆ. ಅದರಲ್ಲೂ ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವೆ ನಡೆದ ಎರಡೂ ಪಂದ್ಯಗಳಲ್ಲಿ ವಿವಾದಗಳ ಸರಮಾಲೆಯೇ ಹುಟ್ಟಿಕೊಂಡಿತ್ತು. ಇದೀಗ ಫೈನಲ್ ಪಂದ್ಯದ ಆರಂಭದಲ್ಲೇ ಹೊಸ ವಿವಾದ ಸೃಷ್ಟಿಯಾಗಿದೆ. ವಾಸ್ತವವಾಗಿ ಟಾಸ್ ಸಮಯದಲ್ಲಿ ಭಾರತೀಯ ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಅವರೊಂದಿಗೆ ಮಾತನಾಡಲು ಪಾಕಿಸ್ತಾನಿ ನಾಯಕ ಸಲ್ಮಾನ್ ಅಲಿ ಅಘಾ ನಿರಾಕರಿಸಿದ್ದಾರೆ. ಹೀಗಾಗಿ ಪಾಕಿಸ್ತಾನದ ಮಾಜಿ ಬೌಲರ್ ವಕಾರ್ ಯೂನಿಸ್ ಅವರು ಟಾಸ್ ಸಮಯದಲ್ಲಿ ಉಪಸ್ಥಿತರಿದ್ದು, ಟಾಸ್ ಬಳಿಕ ಸಲ್ಮಾನ್ ಅಲಿ ಅಘಾ ಅವರೊಂದಿಗೆ ಮಾತನಾಡಿದರು.

ಟಾಸ್ ಸಮಯದಲ್ಲಿ ಅಚ್ಚರಿ

ವಾಸ್ತವವಾಗಿ ಏಷ್ಯಾಕಪ್ ಪಂದ್ಯಾವಳಿ ಆರಂಭವಾಗುವ ಮೊದಲೇ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಿತ್ತು. ನಿರೀಕ್ಷೆಯಂತೆ ಎರಡೂ ತಂಡಗಳು ಮೈದಾನದಲ್ಲಿ ಮುಖಾಮುಖಿಯಾದಾಗಲೂ ಪರಿಸ್ಥಿತಿ ಹಾಗೆಯೇ ಮುಂದುವರೆಯಿತು. ಫೈನಲ್‌ನಲ್ಲಿ ಪರಿಸ್ಥಿತಿ ಸುಧಾರಿಸುತ್ತದೆಯೇ ಅಥವಾ ಹದಗೆಡುತ್ತದೆಯೇ ಎಂಬುದರ ಮೇಲೆ ಎಲ್ಲರ ದೃಷ್ಟಿ ನೆಟ್ಟಿತ್ತು. ಆದರೆ ಆಟ ಪ್ರಾರಂಭವಾಗುವ ಮೊದಲೇ, ಎಲ್ಲರನ್ನೂ ಅಚ್ಚರಿಗೊಳಿಸುವ ದೃಶ್ಯವೊಂದು ತೆರೆದುಕೊಂಡಿತು.

ಪಾಕ್ ನಾಯಕನ ಹೊಸ ನಾಟಕ

ಕಳೆದ ಎರಡು ಭಾರತ-ಪಾಕಿಸ್ತಾನ ಪಂದ್ಯಗಳು ಸೇರಿದಂತೆ, ಟೂರ್ನಿಯ ಉದ್ದಕ್ಕೂ ಭಾರತದ ಪ್ರತಿಯೊಂದು ಪಂದ್ಯದಲ್ಲೂ ಟಾಸ್ ಜವಾಬ್ದಾರಿಯನ್ನು ರವಿಶಾಸ್ತ್ರಿ ವಹಿಸಿದ್ದರು. ಆದಾಗ್ಯೂ, ಫೈನಲ್‌ಗೆ ಬಂದಾಗ, ಪಂದ್ಯಾವಳಿಯಲ್ಲಿ ವ್ಯಾಖ್ಯಾನಕಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಪಾಕಿಸ್ತಾನದ ಮಾಜಿ ನಾಯಕ ಮತ್ತು ವೇಗದ ಬೌಲರ್ ವಕಾರ್ ಯೂನಿಸ್, ಟಾಸ್ ಸಮಯದಲ್ಲಿ ಶಾಸ್ತ್ರಿ ಅವರೊಂದಿಗೆ ಇದ್ದರು. ಸಲ್ಮಾನ್ ಆಘಾ ಶಾಸ್ತ್ರಿ ಅವರೊಂದಿಗೆ ಮಾತನಾಡಲು ನಿರಾಕರಿಸಿದ್ದರಿಂದ ವಕಾರ್ ಯೂನಿಸ್ ಅವರನ್ನು ಮೈದಾನಕ್ಕೆ ಕರೆಸಬೇಕಾಯಿತು. ಪರಿಣಾಮವಾಗಿ, ಟಾಸ್ ಸಮಯದಲ್ಲಿ, ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಭಾರತೀಯ ವ್ಯಾಖ್ಯಾನಕಾರ ಶಾಸ್ತ್ರಿ ಅವರೊಂದಿಗೆ ಮಾತನಾಡಿದರೆ, ಪಾಕಿಸ್ತಾನದ ನಾಯಕ ವಕಾರ್ ಯೂನಿಸ್ ಅವರೊಂದಿಗೆ ಮಾತನಾಡಿದರು.

ಟಾಸ್ ಸಮಯದಲ್ಲಿ ಎರಡೂ ದೇಶಗಳ ನಾಯಕರೊಂದಿಗೆ ಮಾತನಾಡಲು ಎರಡೂ ದೇಶಗಳ ವ್ಯಾಖ್ಯಾನಕಾರರು ಹಾಜರಿದಿದ್ದು, ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎನ್ನಬಹುದು.  ಅಚ್ಚರಿಯ ಸಂಗತಿಯೆಂದರೆ ಇದೇ ಸಲ್ಮಾನ್ ಅಲಿ ಅಘಾ, ಈ ಟೂರ್ನಿಯಲ್ಲಿ ಈ ಮೊದಲು ನಡೆದಿದ್ದ ಎರಡೂ ಪಂದ್ಯಗಳ ಟಾಸ್ ಸಮಯದಲ್ಲಿ ರವಿಶಾಸ್ತ್ರಿ ಅವರೊಂದಿಗೆ ಮಾತನಾಡಿದ್ದರು. ಆದರೆ ಫೈನಲ್ ಪಂದ್ಯದಲ್ಲಿ ನಿದ್ರೆಯಿಂದ ಎಚ್ಚರಗೊಂಡವರಂತೆ ನಡೆದುಕೊಂಡಿರುವ ಪಾಕ್ ನಾಯಕ ರವಿಶಾಸ್ತ್ರಿ ಜೊತೆ ಮಾತನಾಡಲು ನಿರಾಕರಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:07 pm, Sun, 28 September 25