IND vs PAK: ಭಾರತದಲ್ಲಿ ಭಾರಿ ವಿರೋಧ; ಆಟಗಾರರಿಗೆ ಗೌತಮ್ ಗಂಭೀರ್ ವಿಶೇಷ ಸಂದೇಶ

India vs Pakistan Asia Cup 2025: 2025ರ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯಕ್ಕೂ ಮುನ್ನ ಭಾರತ ತಂಡದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಭಾರತದಲ್ಲಿ ಪಾಕಿಸ್ತಾನ ವಿರುದ್ಧ ಪಂದ್ಯವನ್ನು ಬಹಿಷ್ಕರಿಸಬೇಕೆಂಬ ಕೂಗು ಆಟಗಾರರ ಮೇಲೆ ಒತ್ತಡ ಹೇರುತ್ತಿದೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಆಟಗಾರರಿಗೆ ಭಾವನೆಗಳನ್ನು ಬದಿಗಿಟ್ಟು ಕ್ರಿಕೆಟ್ ಮೇಲೆ ಗಮನ ಕೇಂದ್ರೀಕರಿಸುವಂತೆ ಸಂದೇಶ ರವಾನಿಸಿದ್ದಾರೆ.

IND vs PAK: ಭಾರತದಲ್ಲಿ ಭಾರಿ ವಿರೋಧ; ಆಟಗಾರರಿಗೆ ಗೌತಮ್ ಗಂಭೀರ್ ವಿಶೇಷ ಸಂದೇಶ
Ind Vs Pak

Updated on: Sep 14, 2025 | 3:15 PM

2025 ರ ಏಷ್ಯಾಕಪ್‌ನಲ್ಲಿ (Asia Cup 2025) ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವೆ ಹೈ-ವೋಲ್ಟೇಜ್ ಪಂದ್ಯ ನಡೆಯಲಿದ್ದು, ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾದ ಡ್ರೆಸಿಂಗ್ ರೂಮ್​​ನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಇದಕ್ಕೆ ಕಾರಣ, ಭಾರತದಲ್ಲಿ ಪಾಕ್ ವಿರುದ್ಧದ ಪಂದ್ಯವನ್ನು ಟೀಂ ಇಂಡಿಯಾ ಬಹಿಷ್ಕರಿಸಬೇಕು ಎಂಬ ಕೂಗು. ಏಷ್ಯಾಕಪ್​ನ ವೇಳಾಪಟ್ಟಿ ಪ್ರಕಟವಾದಗಿನಿಂದಲೂ ಈ ಪಂದ್ಯದ ಬಗ್ಗೆ ಅಪಸ್ವರ ಕೇಳಿಬರುತ್ತಲೇ ಇದೆ. ಇದೀಗ ಪಂದ್ಯ ಹತ್ತಿರವಾದಂತೆ ರಾಜಕೀಯ ಪಕ್ಷಗಳಿಂದ ಹಿಡಿದು ಸಾರ್ವಜನಿಕರು ಕೂಡ ಈ ಪಂದ್ಯವನ್ನು ಟೀಂ ಇಂಡಿಯಾ ಆಡಬಾರದು ಎಂಬ ಅಭಿಪ್ರಾಯ ಹೊರಹಾಕುತ್ತಿದ್ದಾರೆ. ಭಾರತದಲ್ಲಿನ ಈ ವಾತಾವರಣ ಆಟಗಾರರ ಆತಂಕಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ಪಂದ್ಯಕ್ಕೂ ಮುನ್ನ ಆಟಗಾರರ ಮನೋಬಲವನ್ನು ಹೆಚ್ಚಿಸಲು ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್​ ಆಟಗಾರರಿಗೆ ವಿಶೇಷ ಸಂದೇಶ ರವಾನಿಸಿದ್ದಾರೆ.

ಗೌತಮ್ ಗಂಭೀರ್ ವಿಶೇಷ ಸಂದೇಶ

ವಾಸ್ತವವಾಗಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಒಂದು ದಿನ ಮೊದಲು ಪತ್ರಿಕಾಗೋಷ್ಠಿ ನಡೆದಿತು. ಈ ಪತ್ರಿಕಾಗೋಷ್ಠಿಯಲ್ಲಿ ಟೀಂ ಇಂಡಿಯಾದ ಯಾವ ಆಟಗಾರನೂ ಹಾಜರಿರಲಿಲ್ಲ. ಆಟಗಾರರ ಬದಲಿಗೆ ತಂಡದ ಪರವಾಗಿ ಸಹಾಯಕ ಕೋಚ್ ರಯಾನ್ ಟೆನ್​ಡೋಸ್ಚೇಟ್ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ‘ಮುಖ್ಯ ಕೋಚ್ ಗೌತಮ್ ಗಂಭೀರ್ ಆಟಗಾರರು ಪಂದ್ಯದ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸುವಂತೆ ಕೇಳಿಕೊಂಡಿದ್ದಾರೆ. ಭಾರತದಲ್ಲಿ ಈ ಪಂದ್ಯದ ಬಗ್ಗೆ ಯಾವ ರೀತಿಯ ಅಭಿಪ್ರಾಯ ಕೇಳಿಬರುತ್ತಿದೆ ಎಂಬುದು ನಮಗೆ ತಿಳಿದಿದೆ.

ಆದರೆ ನಾವು ಭಾವನೆಗಳನ್ನು ಬದಿಗಿಟ್ಟು, ವೃತ್ತಿಪರರಾಗಿರಬೇಕು. ಆಟದ ಮೇಲೆ ಮಾತ್ರ ಗಮನವನ್ನು ಕೇಂದ್ರೀಕರಿಸಬೇಕು. ಪ್ರತಿಯೊಬ್ಬರೂ ವಿಭಿನ್ನ ಅಭಿಪ್ರಾಯವನ್ನು ಹೊಂದಿರುತ್ತಾರೆ ಆದರೆ ತಂಡದ ಗಮನ ಕ್ರಿಕೆಟ್ ಮೇಲೆ ಮಾತ್ರ ಇರಬೇಕು. ಇದು ಸೂಕ್ಷ್ಮ ವಿಷಯ. ಏಷ್ಯಾಕಪ್ ಬಹಳ ದಿನಗಳಿಂದ ಚರ್ಚೆಯ ವಿಷಯವಾಗಿತ್ತು. ಒಂದು ಸಮಯದಲ್ಲಿ ನಾವು ಈ ಪಂದ್ಯಾವಳಿಯಲ್ಲಿ ಆಡುವುದಿಲ್ಲ ಎಂದು ಭಾವಿಸಿದ್ದೇವು. ಆದರೆ ನಮಗೆ ಆಡುವ ಅವಕಾಶ ಸಿಕ್ಕಿದೆ. ಹೀಗಾಗಿ ಆಟಗಾರರು ಭಾವನೆಗಳನ್ನು ಬದಿಗಿಟ್ಟು ತಮ್ಮ ಕೆಲಸವನ್ನು ಮಾಡಬೇಕು ಎಂಬ ವಿಶೇಷ ಸಂದೇಶ ನೀಡಿದ್ದಾರೆ ಎಂದರು.

Asia Cup 2025: ಭಾರತ-ಪಾಕ್ ಪಂದ್ಯದ ಮೇಲೆ ಶತಕೋಟಿ ಡಾಲರ್ ಬೆಟ್ಟಿಂಗ್! ಪಾಕ್ ಆಟಗಾರರಿಗೆ ಹಣದ ಆಮಿಷ

ಹಲವು ಆಟಗಾರರಿಗೆ ಮೊದಲ ಪಂದ್ಯ

ಪ್ರಸ್ತುತ ಭಾರತ ತಂಡದ ಬಗ್ಗೆ ಹೇಳುವುದಾದರೆ, ಪಾಕಿಸ್ತಾನ ವಿರುದ್ಧ ಯಾವುದೇ ಟಿ20 ಪಂದ್ಯವನ್ನು ಆಡದ 7 ಆಟಗಾರರು ತಂಡದಲ್ಲಿದ್ದಾರೆ. ಅವರಲ್ಲಿ ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ರಿಂಕು ಶರ್ಮಾ, ಜಿತೇಶ್ ಶರ್ಮಾ, ಅಭಿಷೇಕ್ ಶರ್ಮಾ, ಹರ್ಷಿತ್ ರಾಣಾ ಮತ್ತು ಕುಲ್ದೀಪ್ ಯಾದವ್ ಸೇರಿದ್ದಾರೆ. ಇದೀಗ ಈ ಐದು ಆಟಗಾರರು ಪಾಕಿಸ್ತಾನ ವಿರುದ್ಧ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಪಾದಾರ್ಪಣೆ ಮಾಡುವುದು ಖಚಿತವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ