AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia cup 2025 IND vs OMAN Highlights: ಬಲಿಷ್ಠ ಭಾರತಕ್ಕೆ ಸೋಲಿನ ಭಯ ಹುಟ್ಟಿಸಿ ಸೋತ ಒಮಾನ್

Asia cup 2025 INDIA vs OMAN Highlights in Kannada: ಏಷ್ಯಾಕಪ್​​ನಲ್ಲಿ ಟೀಂ ಇಂಡಿಯಾ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಲೀಗ್ ಸುತ್ತಿನ ಕೊನೆಯ ಪಂದ್ಯದಲ್ಲಿ ಒಮಾನ್ ತಂಡವನ್ನು ಎದುರಿಸಿದ್ದ ಸೂರ್ಯಕುಮಾರ್ ಪಡೆ ಈ ಪಂದ್ಯವನ್ನು 21 ರನ್​​ಗಳಿಂದ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

Asia cup 2025 IND vs OMAN Highlights: ಬಲಿಷ್ಠ ಭಾರತಕ್ಕೆ ಸೋಲಿನ ಭಯ ಹುಟ್ಟಿಸಿ ಸೋತ ಒಮಾನ್
India Vs Oman
ಪೃಥ್ವಿಶಂಕರ
|

Updated on:Sep 20, 2025 | 12:06 AM

Share

ಏಷ್ಯಾಕಪ್​​ನಲ್ಲಿ ಟೀಂ ಇಂಡಿಯಾ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಲೀಗ್ ಸುತ್ತಿನ ಕೊನೆಯ ಪಂದ್ಯದಲ್ಲಿ ಒಮಾನ್ ತಂಡವನ್ನು ಎದುರಿಸಿದ್ದ ಸೂರ್ಯಕುಮಾರ್ ಪಡೆ ಈ ಪಂದ್ಯವನ್ನು 21 ರನ್​​ಗಳಿಂದ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 188 ರನ್ ಗಳಿಸಿತು. ಭಾರತದ ಪರ ಸಂಜು ಸ್ಯಾಮ್ಸನ್ 45 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್ ಸೇರಿದಂತೆ ಅದ್ಭುತ 56 ರನ್ ಗಳಿಸುವ ಮೂಲಕ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಅಭಿಷೇಕ್ ಶರ್ಮಾ 15 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಸೇರಿದಂತೆ 38 ರನ್ ಗಳಿಸಿದರು. ತಿಲಕ್ ವರ್ಮಾ 18 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್ ಸೇರಿದಂತೆ 29 ರನ್ ಗಳಿಸಿದರು. ಅಕ್ಷರ್ ಪಟೇಲ್ 13 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ 26 ರನ್ ಗಳಿಸಿದರು. ಈ ಗುರಿ ಬೆನ್ನಟ್ಟಿದ ಒಮಾನ್ ತಂಡ ಕೊನೆಯವರೆಗೂ ಗೆಲುವಿಗಾಗಿ ಹೋರಾಡಿತ್ತಾದರೂ ಗೆಲುವು ಸಾಧಿಸಲು ಆಗಲಿಲ್ಲ. ಆದಾಗ್ಯೂ ಬಲಿಷ್ಠ ಭಾರತ ತಂಡದೆದುರು ಒಮಾನ್ ನೀಡಿದ ಪ್ರದರ್ಶನ ಪ್ರಶಂಸನೀಯವಾಗಿದೆ.

LIVE NEWS & UPDATES

The liveblog has ended.
  • 20 Sep 2025 12:05 AM (IST)

    IND vs OMAN Live Score: ಭಾರತಕ್ಕೆ 21 ರನ್ ಜಯ

    188 ರನ್​ಗಳ ಗುರಿ ಬೆನ್ನಟ್ಟಿದ ಒಮಾನ್ ತಂಡ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 167 ರನ್ ಕಲೆಹಾಕಲಷ್ಟೇ ಶಕ್ತವಾಗಿ 21 ರನ್​ಗಳಿಂದ ಸೋಲೊಪ್ಪಿಕೊಂಡಿತು.

  • 20 Sep 2025 12:02 AM (IST)

    IND vs OMAN Live Score: ಹಮ್ಮದ್ ಮಿರ್ಜಾ ಅರ್ಧಶತಕ

    ಆಮಿರ್ ಕಲೀಮ್ ನಂತರ, ಒಮಾನ್ ಬ್ಯಾಟ್ಸ್‌ಮನ್ ಹಮ್ಮದ್ ಮಿರ್ಜಾ ಕೂಡ 30 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು.

  • 19 Sep 2025 11:44 PM (IST)

    IND vs OMAN Live Score: ಕಲೀಮ್ ಅರ್ಧಶತಕ

    ಒಮಾನ್ ಆಲ್‌ರೌಂಡರ್ ಅಮೀರ್ ಕಲೀಮ್ ಟೀಮ್ ಇಂಡಿಯಾ ವಿರುದ್ಧ 38 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಇದು ಟಿ20ಐಗಳಲ್ಲಿ ಅವರ ಎರಡನೇ ಅರ್ಧಶತಕವಾಗಿದೆ.

  • 19 Sep 2025 11:43 PM (IST)

    IND vs OMAN Live Score: 100 ರನ್ ಪೂರ್ಣ

    189 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಒಮಾನ್ ತಂಡವು ಒಂದು ವಿಕೆಟ್‌ಗೆ 100 ರನ್‌ಗಳನ್ನು ಪೂರ್ಣಗೊಳಿಸಿದೆ.

  • 19 Sep 2025 11:42 PM (IST)

    IND vs OMAN Live Score: 10 ಓವರ್‌ಗಳಲ್ಲಿ 62 ರನ್

    2025 ರ ಏಷ್ಯಾ ಕಪ್‌ನ ಅಂತಿಮ ಗ್ರೂಪ್ ಎ ಲೀಗ್ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಒಮಾನ್ 10 ಓವರ್‌ಗಳಲ್ಲಿ 1 ವಿಕೆಟ್‌ಗೆ 62 ರನ್ ಗಳಿಸಿದೆ.

  • 19 Sep 2025 11:05 PM (IST)

    IND vs OMAN Live Score: ನಾಯಕ ಔಟ್

    89 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಒಮಾನ್ ತಂಡವು ಮೊದಲ ವಿಕೆಟ್ ಕಳೆದುಕೊಂಡಿತು, ನಾಯಕ ಜತಿಂದರ್ ಸಿಂಗ್, ಕುಲ್ದೀಪ್ ಯಾದವ್ ಬೌಲಿಂಗ್‌ನಲ್ಲಿ 33 ಎಸೆತಗಳಲ್ಲಿ 32 ರನ್ ಗಳಿಸಿ ಔಟ್ ಆದರು.

  • 19 Sep 2025 10:48 PM (IST)

    IND vs OMAN Live Score: ಪವರ್ ಪ್ಲೇ ಅಂತ್ಯ

    ಭಾರತದ ವಿರುದ್ಧದ ಪವರ್ ಪ್ಲೇನಲ್ಲಿ ಒಮಾನ್ ಯಾವುದೇ ವಿಕೆಟ್ ಕಳೆದುಕೊಳ್ಳದೆ 44 ರನ್ ಗಳಿಸಿತು.

  • 19 Sep 2025 10:08 PM (IST)

    IND vs OMAN Live Score: 189 ರನ್‌ಗಳ ಗುರಿ

    2025 ರ ಏಷ್ಯಾ ಕಪ್‌ನ ಅಂತಿಮ ಗ್ರೂಪ್ ಎ ಲೀಗ್ ಪಂದ್ಯದಲ್ಲಿ ಒಮಾನ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 188 ರನ್ ಗಳಿಸಿತು. ಭಾರತದ ಪರ ಸಂಜು ಸ್ಯಾಮ್ಸನ್ 45 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್ ಸೇರಿದಂತೆ ಅದ್ಭುತ 56 ರನ್ ಗಳಿಸುವ ಮೂಲಕ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಅಭಿಷೇಕ್ ಶರ್ಮಾ 15 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಸೇರಿದಂತೆ 38 ರನ್ ಗಳಿಸಿದರು. ತಿಲಕ್ ವರ್ಮಾ 18 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್ ಸೇರಿದಂತೆ 29 ರನ್ ಗಳಿಸಿದರು. ಅಕ್ಷರ್ ಪಟೇಲ್ 13 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ 26 ರನ್ ಗಳಿಸಿದರು. ಓಮನ್ ಪರ ಶಾ ಫೈಸಲ್, ಜಿತೆನ್ ರಮಾನಂದಿ ಮತ್ತು ಆಮಿರ್ ಕಲೀಮ್ ತಲಾ 2 ವಿಕೆಟ್ ಪಡೆದರು

  • 19 Sep 2025 09:34 PM (IST)

    IND vs OMAN Live Score: ಸ್ಯಾಮ್ಸನ್ ಅರ್ಧಶತಕ

    ಟೀಮ್ ಇಂಡಿಯಾ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ 41 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ ಅರ್ಧಶತಕ ಗಳಿಸಿದರು.

  • 19 Sep 2025 09:33 PM (IST)

    IND vs OMAN Live Score: 150 ರನ್ ಪೂರ್ಣ

    ಏಷ್ಯಾಕಪ್‌ನ ಅಂತಿಮ ಲೀಗ್ ಪಂದ್ಯದಲ್ಲಿ ಟೀಮ್ ಇಂಡಿಯಾ 16 ಓವರ್‌ಗಳಲ್ಲಿ 150 ರನ್‌ಗಳನ್ನು ತಲುಪಿದೆ. ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಕ್ರೀಸ್‌ನಲ್ಲಿದ್ದಾರೆ.

  • 19 Sep 2025 09:13 PM (IST)

    IND vs OMAN Live Score: ಭಾರತದ 100 ರನ್ ಪೂರ್ಣ

    ಟೀಮ್ ಇಂಡಿಯಾ 10 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 100 ರನ್ ಗಳಿಸಿದೆ. ಸಂಜು ಸ್ಯಾಮ್ಸನ್ 29 ಎಸೆತಗಳಲ್ಲಿ 37 ರನ್ ಮತ್ತು ಅಕ್ಷರ್ ಪಟೇಲ್ 7 ಎಸೆತಗಳಲ್ಲಿ 10 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 19 Sep 2025 08:45 PM (IST)

    IND vs OMAN Live Score: ಅಭಿಷೇಕ್ ಔಟ್

    ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ 15 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 38 ರನ್ ಗಳಿಸಿ ಔಟಾದರು.

  • 19 Sep 2025 08:42 PM (IST)

    IND vs OMAN Live Score: ಒಂದೇ ಓವರ್‌ನಲ್ಲಿ 19 ರನ್

    ಟೀಮ್ ಇಂಡಿಯಾ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಮೊಹಮ್ಮದ್ ನದೀಮ್ ಅವರ ಒಂದು ಓವರ್‌ನಲ್ಲಿ 19 ರನ್‌ ಬಾರಿಸಿದರು.

  • 19 Sep 2025 08:14 PM (IST)

    IND vs OMAN Live Score: ಗಿಲ್ ಔಟ್

    ಶುಭ್​ಮನ್ ಗಿಲ್ ಕೇವಲ 5 ರನ್‌ಗಳಿಗೆ ಶಾ ಫೈಸಲ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.

  • 19 Sep 2025 08:11 PM (IST)

    IND vs OMAN Live Score: ಭಾರತದ ಬ್ಯಾಟಿಂಗ್ ಆರಂಭ

    ಒಮಾನ್ ವಿರುದ್ಧ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ. ಅಭಿಷೇಕ್ ಶರ್ಮಾ ಮತ್ತು ಶುಭ್​ಮನ್ ಗಿಲ್ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.

  • 19 Sep 2025 07:51 PM (IST)

    IND vs OMAN Live Score: ಒಮಾನ್ ಪ್ಲೇಯಿಂಗ್ XI

    ಅಮೀರ್ ಕಲೀಂ, ಜತೀಂದರ್ ಸಿಂಗ್ (ನಾಯಕ), ಹಮ್ಮದ್ ಮಿರ್ಜಾ, ವಿನಾಯಕ್ ಶುಕ್ಲಾ (ವಿಕೆಟ್ ಕೀಪರ್), ಶಾ ಫೈಸಲ್, ಜಿಕಾರಿಯಾ ಇಸ್ಲಾಂ, ಆರ್ಯನ್ ಬಿಶ್ತ್, ಮೊಹಮ್ಮದ್ ನದೀಮ್, ಶಕೀಲ್ ಅಹ್ಮದ್, ಸಮಯ್ ಶ್ರೀವಾಸ್ತವ, ಜಿತೇನ್ ರಮಾನಂದಿ.

  • 19 Sep 2025 07:50 PM (IST)

    IND vs OMAN Live Score: ಟೀಂ ಇಂಡಿಯಾ ಪ್ಲೇಯಿಂಗ್ XI

    ಅಭಿಷೇಕ್ ಶರ್ಮಾ, ಶುಭ್​ಮನ್ ಗಿಲ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್.

  • 19 Sep 2025 07:33 PM (IST)

    IND vs OMAN Live Score: ಟಾಸ್ ಗೆದ್ದ ಭಾರತ

    ಟಾಸ್ ಗೆದ್ದ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.

  • 19 Sep 2025 07:04 PM (IST)

    IND vs OMAN Live Score: ಹ್ಯಾಟ್ರಿಕ್ ಗೆಲುವಿನತ್ತ ಭಾರತ

    2025 ರ ಏಷ್ಯಾಕಪ್‌ನಲ್ಲಿ ಒಮಾನ್ ವಿರುದ್ಧ ಹ್ಯಾಟ್ರಿಕ್ ಗೆಲುವು ಸಾಧಿಸುವ ಗುರಿಯನ್ನು ಟೀಂ ಇಂಡಿಯಾ ಹೊಂದಿದೆ. ಈ ಹಿಂದೆ, ಭಾರತ ತಂಡ ಯುಎಇ ಮತ್ತು ಪಾಕಿಸ್ತಾನವನ್ನು ಸೋಲಿಸುವ ಮೂಲಕ ಸೂಪರ್ ಫೋರ್‌ನಲ್ಲಿ ಸ್ಥಾನ ಪಡೆದುಕೊಂಡಿತ್ತು.

Published On - Sep 19,2025 7:03 PM