Asia Cup 2022: ಏಷ್ಯಾಕಪ್ ಕ್ವಾಲಿಫೈಯರ್‌ನಲ್ಲಿ ಕುವೈತ್​ಗೆ ಗೆಲುವು; ಯುಎಇ ಸೋಲಿಗೆ ಕಾರಣನಾದ ದಾವೂದ್‌..!

| Updated By: ಪೃಥ್ವಿಶಂಕರ

Updated on: Aug 22, 2022 | 9:56 PM

Asia Cup 2022: ಕೊನೆಯ ಓವರ್‌ನಲ್ಲಿ ಕುವೈತ್‌ಗೆ 9 ರನ್‌ಗಳ ಅಗತ್ಯವಿತ್ತು. ಜೊತೆಗೆ ಯುಎಇ, ಕುವೈತ್ ತಂಡದ 8 ವಿಕೆಟ್‌ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಅಂತಿಮ ಓವರ್ ಎಸೆದ ಕಾಶಿಫ್ ದಾವೂದ್ ಮೊದಲ ಎಸೆತದಲ್ಲೇ ಸಿಕ್ಸರ್ ತಿಂದರು.

Asia Cup 2022: ಏಷ್ಯಾಕಪ್ ಕ್ವಾಲಿಫೈಯರ್‌ನಲ್ಲಿ ಕುವೈತ್​ಗೆ ಗೆಲುವು; ಯುಎಇ ಸೋಲಿಗೆ ಕಾರಣನಾದ ದಾವೂದ್‌..!
Follow us on

ಏಷ್ಯಾಕಪ್ 2022 (Asia Cup 2022) ಆಗಸ್ಟ್ 27 ರಿಂದ ಪ್ರಾರಂಭವಾಗಲಿದೆ ಆದರೆ ಅದಕ್ಕೂ ಮೊದಲು ಕ್ವಾಲಿಫೈಯರ್ ಪಂದ್ಯಗಳು ನಡೆಯುತ್ತಿವೆ. ಯುಎಇ, ಕುವೈತ್, ಹಾಂಕಾಂಗ್ ಮತ್ತು ಸಿಂಗಾಪುರ (UAE, Kuwait, Hong Kong and Singapore) ತಂಡಗಳು ಅರ್ಹತಾ ಪಂದ್ಯಗಳಲ್ಲಿ ಸ್ಪರ್ಧಿಸುತ್ತಿವೆ. ಈ ಬಾರಿಯ ಏಷ್ಯಾಕಪ್ ಅರ್ಹತಾ ಪಂದ್ಯವನ್ನು ಗೆಲ್ಲುವ ತಂಡವನ್ನು ಏಷ್ಯಾಕಪ್‌ನಲ್ಲಿ ಭಾರತದ ಗುಂಪಿನಲ್ಲಿ ಸೇರಿಸಲಾಗುತ್ತದೆ. ಅಲ್ ಎಮಿರೇಟ್ಸ್​ನಲ್ಲಿ ನಡೆದ ಪಂದ್ಯದಲ್ಲಿ ಯುಎಇಯ ಬಲಿಷ್ಠ ತಂಡ ಕುವೈತ್ ಎದುರು ಸೋತಿತ್ತು. ಕುವೈತ್ ಕೇವಲ ಒಂದು ವಿಕೆಟ್‌ ಹಾಗೂ ಒಂದು ಎಸೆತ ಬಾಕಿ ಇರುವಂತೆ ಗೆದ್ದುಬೀಗಿತು.

ಪ್ರಬಲ ಸ್ಕೋರ್ ಮಾಡಿದ ಯುಎಇ

ಮೊದಲು ಬ್ಯಾಟ್ ಮಾಡಿದ ಯುಎಇ ತಂಡ 20 ಓವರ್‌ಗಳಲ್ಲಿ 173 ರನ್ ಗಳಿಸಿತು. ಯುಎಇ ಪರ ಚಿರಾಗ್ ಸೂರಿ 61 ಎಸೆತಗಳಲ್ಲಿ 88 ರನ್ ಗಳಿಸಿದರು. ಅರ್ಧಶತಕದ ಇನ್ನಿಂಗ್ಸ್‌ನಲ್ಲಿ ಸೂರಿ 9 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿದರು. ಇವರಲ್ಲದೆ ಮುಹಮ್ಮದ್ ವಾಸಿಂ 35 ಹಾಗೂ ಅರವಿಂದ್ 33 ರನ್ ಗಳಿಸಿದರು. ಪ್ರತ್ಯುತ್ತರವಾಗಿ, ಕುವೈತ್‌ನಿಂದ ಯಾವುದೇ ಬ್ಯಾಟ್ಸ್‌ಮನ್‌ಗಳು ದೊಡ್ಡ ಇನ್ನಿಂಗ್ಸ್ ಆಡಲಿಲ್ಲ ಆದರೆ ರವಿಜ ಸಂದರುವನ್ 34, ಮೀಟ್ ಭಾವಸರ್ 27 ರನ್ ಕೊಡುಗೆ ನೀಡಿದರು. ಎಡ್ಸನ್ ಸಿಲ್ವಾ ಕೂಡ 25 ರನ್ ಗಳಿಸಿದರು. ಆದರೆ ಕೊನೆಯ ಓವರ್‌ನಲ್ಲಿ ಇಡೀ ಪಂದ್ಯದ ದಿಕ್ಕೆ ಬದಲಾಯಿತು.

ಇದನ್ನೂ ಓದಿ
Asia Cup 2022: ಏಷ್ಯಾಕಪ್​ನಲ್ಲಿ ಕ್ರಿಕೆಟ್ ಅಭಿಮಾನಿಗಳ ಕಣ್ಣು ಈ ಐದು ಆಟಗಾರರ ಮೇಲಿರಲಿದೆ
IND vs PAK: ಭಾರತ- ಪಾಕ್ ತಂಡದ ಪ್ರಮುಖ ಆಟಗಾರರ ಫೇವರಿಟ್ ಆಹಾರಗಳಿವು
NED vs PAK: ಕ್ರಿಕೆಟ್ ಶಿಶು ನೆದರ್ಲೆಂಡ್ಸ್ ಎದುರು ರನ್ ಗಳಿಸಲು ಪರದಾಡಿದ ಪಾಕಿಸ್ತಾನ; ಮಾನ ಉಳಿಸಿದ ಬಾಬರ್

ಕೊನೆಯ ಓವರ್‌ನ ರೋಚಕತೆ

ಕೊನೆಯ ಓವರ್‌ನಲ್ಲಿ ಕುವೈತ್‌ಗೆ 9 ರನ್‌ಗಳ ಅಗತ್ಯವಿತ್ತು. ಜೊತೆಗೆ ಯುಎಇ, ಕುವೈತ್ ತಂಡದ 8 ವಿಕೆಟ್‌ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಅಂತಿಮ ಓವರ್ ಎಸೆದ ಕಾಶಿಫ್ ದಾವೂದ್ ಮೊದಲ ಎಸೆತದಲ್ಲೇ ಸಿಕ್ಸರ್ ತಿಂದರು. ಯಾಸಿನ್ ಪಟೇಲ್ ಸಿಕ್ಸರ್ ಬಾರಿಸಿ ಪಂದ್ಯವನ್ನು ಸಂಪೂರ್ಣವಾಗಿ ಕುವೈತ್ ಕಡೆಗೆ ತಿರುಗಿಸಿದರು. ಇದಾದ ನಂತರ ಪಟೇಲ್ ಎರಡನೇ ಎಸೆತದಲ್ಲಿ ರನ್ ಗಳಿಸಿದರು. ಮೂರನೇ ಎಸೆತದಲ್ಲಿ ಸೈಯದ್ ಮುನೀಬ್ ಒಂದು ರನ್ ಗಳಿಸುವ ಮೂಲಕ ಸ್ಕೋರ್ ಸಮಗೊಳಿಸಿದರು. ನಾಲ್ಕನೇ ಎಸೆತದಲ್ಲಿ ಪಂದ್ಯ ಮತ್ತೊಮ್ಮೆ ರೋಚಕತೆಗೆ ತಿರುಗಿ ಮುನೀಬ್ ರನೌಟ್ ಆದರು. ಈಗ ಯುಎಇ ಗೆಲುವಿಗೆ ಒಂದು ವಿಕೆಟ್ ಬೇಕಿದ್ದರೆ, ಕುವೈತ್ ಗೆಲುವಿಗೆ ಒಂದು ರನ್ ಗಳಿಸಬೇಕಿತ್ತು. ಆದರೆ ಐದನೇ ಎಸೆತದಲ್ಲಿ ಮೊಹಮ್ಮದ್ ಶಫೀಕ್ ಕಾಶಿಫ್ ದಾವೂದ್ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಕುವೈತ್ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು. ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ಹಾಂಕಾಂಗ್ ಸಿಂಗಾಪುರವನ್ನು 8 ರನ್‌ಗಳಿಂದ ಸೋಲಿಸಿತ್ತು.