IND vs PAK: ಭಾರತ- ಪಾಕ್ ತಂಡದ ಪ್ರಮುಖ ಆಟಗಾರರ ಫೇವರಿಟ್ ಆಹಾರಗಳಿವು
Asia Cup 2022: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಆಹಾರದ ಕ್ರಮದಲ್ಲಿ ತುಂಬಾ ಎಚ್ಚರಿಕೆ ವಹಿಸುತ್ತಾರೆ. ಹೆಚ್ಚು ಆರೋಗ್ಯಕರ ಆಹಾರವನ್ನು ಸೇವಿಸುವ ಕ್ರಮವನ್ನು ಕೊಹ್ಲಿ ಅಳವಡಿಸಿಕೊಂಡಿದ್ದಾರೆ.
Updated on:Aug 22, 2022 | 3:02 PM

ಏಷ್ಯಾಕಪ್ (ಏಷ್ಯಾ ಕಪ್ 2022) ಜ್ವರ ಎಲ್ಲೆಡೆ ಹಬ್ಬಲು ಆರಂಭವಾಗಿದ್ದು, ಟೂರ್ನಿಯೂ ಆಗಸ್ಟ್ 27 ರಿಂದ ಪ್ರಾರಂಭವಾಗುತ್ತಿದೆ. ಎಲ್ಲಾ ದೊಡ್ಡ ತಂಡಗಳು ಈ ಪಂದ್ಯಾವಳಿಗಾಗಿ ತಮ್ಮ ಆಟಗಾರರ ಹೆಸರನ್ನು ಘೋಷಿಸಿದ್ದು, ಸಕಲ ತಯಾರಿಯಲ್ಲಿ ತೊಡಗಿವೆ. ಅದರಲ್ಲೂ ಭಾರತ- ಪಾಕ್ ನಡುವಿನ ಕ್ರಿಕೆಟ್ ಕದನಕ್ಕೆ ಎಲ್ಲ ಕ್ರಿಕೆಟ್ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಈ ಪಂದ್ಯಕ್ಕೂ ಮೊದಲು ಈ ಎರಡು ತಂಡದ ಕೆಲವು ಪ್ರಮುಖ ಆಟಗಾರರ ಆಹಾರ ಕ್ರಮದ ಬಗ್ಗೆ ನಾವೀಗ ನಿಮಗೆ ಹೇಳಲಿದ್ದೇವೆ.

ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಆಹಾರದ ಕ್ರಮದಲ್ಲಿ ತುಂಬಾ ಎಚ್ಚರಿಕೆ ವಹಿಸುತ್ತಾರೆ. ಹೆಚ್ಚು ಆರೋಗ್ಯಕರ ಆಹಾರವನ್ನು ಸೇವಿಸುವ ಕ್ರಮವನ್ನು ಕೊಹ್ಲಿ ಅಳವಡಿಸಿಕೊಂಡಿದ್ದಾರೆ. ಕೊಹ್ಲಿ ಮೇನ್ನಲ್ಲಿ ಹೆಚ್ಚಾಗಿ ತರಕಾರಿಗಳು, ಮೊಟ್ಟೆಗಳು ಸೇರಿದಂತೆ ಹಲವು ಆರೋಗ್ಯಕರ ಆಹಾರಗಳು ಒಳಗೊಂಡಿರುತ್ತವೆ. ಇದನ್ನು ಸ್ವತಃ ಕೊಹ್ಲಿಯೇ ತಮ್ಮ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಲವು ಬಾರಿ ಹಂಚಿಕೊಂಡಿದ್ದಾರೆ.

ಪಾಕಿಸ್ತಾನದ ನಾಯಕ ಬಾಬರ್ ಅಜಮ್ಗೆ ಬಿರಿಯಾನಿ ಎಂದರೆ ಬಲು ಅಚ್ಚುಮೆಚ್ಚು. ಅಜಮ್ ಸದ್ಯ ಉತ್ತಮ ಫಾರ್ಮ್‌ನಲ್ಲಿದ್ದು, T20 ಮಾದರಿಯಲ್ಲಿ ವಿಶ್ವದ ನಂಬರ್ ಒನ್ ಬ್ಯಾಟ್ಸ್‌ಮನ್ ಆಗಿ ಮೆರೆಯುತ್ತಿದ್ದಾರೆ.

ಭಾರತ ತಂಡದ ನಾಯಕ ರೋಹಿತ್ ಶರ್ಮಾಗೆ ವಡಾಪಾವ್ ಎಂದರೆ ಪಂಚಪ್ರಾಣ. ರೋಹಿತ್ ಅವರು ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಪ್ರತಿದಿನ ವಡಾಪಾವ್ ತಿನ್ನುತ್ತಿದ್ದರು ಎಂಬುದನ್ನು ಸ್ವತಃ ಅವರೇ ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸಿದ್ದರು.

ಪಾಕಿಸ್ತಾನದ ಬ್ಯಾಟ್ಸ್‌ಮನ್ ಇಮಾಮ್-ಉಲ್-ಹಕ್ ಕೂಡ ತಮ್ಮ ಆಹಾರಕ್ರಮದ ಬಗ್ಗೆ ತುಂಬಾ ಎಚ್ಚರಿಕೆವಹಿಸುತ್ತಾರೆ. ಮಧ್ಯಾಹ್ನದ ಊಟಕ್ಕೆ ಹಣ್ಣು ಮತ್ತು ಮೊಸರು ಮಾತ್ರ ತಿನ್ನುವ ಇಮಾಮ್, ಮುಲ್ತಾನ್ ಕಾ ಸೋಹನ್ ಹಲ್ವಾ ಮತ್ತು ಪಾನಿ ಪುರಿಯನ್ನು ಸಹ ಹೆಚ್ಚು ಇಷ್ಟಪಡುತ್ತಾರೆ.

ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬೆಳಗಿನ ಉಪಾಹಾರಕ್ಕಾಗಿ ಮೊಟ್ಟೆ ಸೇವಿಸಿದ್ದರೆ, ಅವರ ದಿನನಿತ್ಯದ ಆಹಾರದಲ್ಲಿ ಚಿಕನ್ ಮತ್ತು ತರಕಾರಿಗಳು ಇದ್ದೆ ಇರುತ್ತವೆ. ಆದರೆ ಪಾಂಡ್ಯಗೆ ಖಿಚಡಿ ಎಂದರೆ ಬಹಳ ಇಷ್ಟ.
Published On - 3:02 pm, Mon, 22 August 22



















