ಏಷ್ಯಾಕಪ್ ಟ್ರೋಫಿ ವಿವಾದದ ನಡುವೆ ಭಾರತ- ಪಾಕಿಸ್ತಾನ ಮತ್ತೆ ಮುಖಾಮುಖಿ
Asia Cup Rising Stars Schedule: ಟ್ರೋಫಿ ವಿವಾದದ ನಡುವೆಯೇ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಚಾಂಪಿಯನ್‌ಶಿಪ್ ವೇಳಾಪಟ್ಟಿ ಪ್ರಕಟಗೊಂಡಿದೆ. ನವೆಂಬರ್ 14 ರಿಂದ 23 ರವರೆಗೆ ಕತಾರ್‌ನಲ್ಲಿ ನಡೆಯುವ ಈ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ನವೆಂಬರ್ 16 ರಂದು ಮುಖಾಮುಖಿಯಾಗಲಿವೆ. ಎಂಟು ತಂಡಗಳು ಭಾಗವಹಿಸಲಿವೆ. ಹಿಂದಿನ ಏಷ್ಯಾಕಪ್‌ನಲ್ಲಿ ಟ್ರೋಫಿ ಸಿಗದಿದ್ದರೂ, ಈ ಹೊಸ ಟೂರ್ನಿ ಭಾರತ-ಪಾಕ್ ಪಂದ್ಯದ ಕುತೂಹಲ ಹೆಚ್ಚಿಸಿದೆ.

2025 ರ ಏಷ್ಯಾಕಪ್ (Asia Cup 2025) ಗೆದ್ದಿದ್ದರೂ ಟೀಂ ಇಂಡಿಯಾ ಕೈಗೆ ಇನ್ನೂ ಟ್ರೋಫಿ ಬಂದಿಲ್ಲ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (PCB) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರ ಮೊಂಡುತನದಿಂದಾಗಿ, ಟೀಂ ಇಂಡಿಯಾ ಟ್ರೋಫಿ ಇಲ್ಲದೆ ದುಬೈನಿಂದ ಹಿಂತಿರುಗಿತ್ತು. ಈ ಟೂರ್ನಿ ತಿಂಗಳು ಮುಗಿದರು ಟ್ರೋಫಿಯ ಸುತ್ತಲಿನ ವಿವಾದವು ಇಂದಿಗೂ ಕಡಿಮೆಯಾಗಿಲ್ಲ. ಇದೆಲ್ಲದರ ನಡುವೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಹೊಸ ಪಂದ್ಯಾವಳಿಯ ವೇಳಾಪಟ್ಟಿಯನ್ನು ಘೋಷಿಸಿದ್ದು, ಆ ಪ್ರಕಾರ ಭಾರತ ಮತ್ತು ಪಾಕಿಸ್ತಾನ (India vs Pakistan) ತಂಡಗಳನ್ನು ಮತ್ತೊಮ್ಮೆ ಪರಸ್ಪರ ಮುಖಾಮುಖಿಯಾಗುತ್ತಿವೆ. ಈ ಚಾಂಪಿಯನ್‌ಶಿಪ್ ನವೆಂಬರ್ 14 ರಂದು ಪ್ರಾರಂಭವಾಗಲಿದೆ.
ವೇಳಾಪಟ್ಟಿ ಬಿಡುಗಡೆ
ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಚಾಂಪಿಯನ್‌ಶಿಪ್‌ನ ವೇಳಾಪಟ್ಟಿಯನ್ನು ಎಸಿಸಿ ಇಂದು ಬಿಡುಗಡೆ ಮಾಡಿದೆ. ಅದರಂತೆ ಟೂರ್ನಿಯ ಮೊದಲ ಪಂದ್ಯ ನವೆಂಬರ್ 14 ರಂದು ನಡೆಯಲಿದ್ದು, ನವೆಂಬರ್ 16 ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ರೋಮಾಂಚಕಾರಿ ಪಂದ್ಯ ನಡೆಯಲಿದೆ. ಈ ಹಿಂದೆ ಎಮರ್ಜಿಂಗ್ ಏಷ್ಯಾಕಪ್ ಎಂದು ಕರೆಯಲ್ಪಡುತ್ತಿದ್ದ ಈ ಪಂದ್ಯಾವಳಿಯು ಈಗ ನವೆಂಬರ್ 14 ರಿಂದ 23 ರವರೆಗೆ ಕತಾರ್‌ನ ದೋಹಾದಲ್ಲಿರುವ ವೆಸ್ಟ್ ಎಂಡ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
The stage is set, the stars are ready 🤩
From fiery clashes to fresh rivalries ~ it all unfolds in Doha, Qatar! 🇶🇦
Here’s your first look at the #DPWorldAsiaCupRisingStars2025 fixtures 🫡
Who will rise to the top? 👀#ACC pic.twitter.com/gze3cb1xmt
— AsianCricketCouncil (@ACCMedia1) October 31, 2025
ಎಂಟು ತಂಡಗಳು ಭಾಗಿ
- ಭಾರತ
- ಪಾಕಿಸ್ತಾನ
- ಅಫ್ಘಾನಿಸ್ತಾನ
- ಶ್ರೀಲಂಕಾ
- ಬಾಂಗ್ಲಾದೇಶ
- ಓಮನ್
- ಯುಎಇ
- ಹಾಂಗ್ ಕಾಂಗ್
ಒಂದೇ ಗುಂಪಿನಲ್ಲಿ ಭಾರತ- ಪಾಕಿಸ್ತಾನ
ಟೆಸ್ಟ್ ಆಡುವ ಐದು ಏಷ್ಯನ್ ರಾಷ್ಟ್ರಗಳು ತಮ್ಮ ‘ಎ’ ತಂಡಗಳನ್ನು ಕಣಕ್ಕಿಳಿಸಲಿದ್ದು, ಯುಎಇ, ಓಮನ್ ಮತ್ತು ಹಾಂಗ್ ಕಾಂಗ್ ತಮ್ಮ ಹಿರಿಯ ತಂಡಗಳೊಂದಿಗೆ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿವೆ. ಈ ಲೀಗ್ನಲ್ಲಿ ಒಟ್ಟು 15 ಟಿ20 ಪಂದ್ಯಗಳು ನಡೆಯಲಿದ್ದು, ಭಾರತ, ಪಾಕಿಸ್ತಾನ, ಓಮನ್ ಮತ್ತು ಯುಎಇ ತಂಡಗಳು ಒಂದು ಗುಂಪಿನಲ್ಲಿ ಸ್ಥಾನ ಪಡೆದಿವೆ.
ಎರಡನೇ ಗುಂಪಿನಲ್ಲಿ ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಹಾಂಗ್ ಕಾಂಗ್ ತಂಡಗಳು ಸೇರಿವೆ. ಪಂದ್ಯಾವಳಿಯ ಸ್ವರೂಪವು ಸೂಪರ್ ಫೋರ್ ಹಂತವನ್ನು ಒಳಗೊಂಡಿಲ್ಲ. ಹೀಗಾಗಿ ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಮುನ್ನಡೆಯುತ್ತವೆ.
ಎಸಿಸಿ ಪ್ರಧಾನ ಕಚೇರಿಯಿಂದಲೂ ಕಣ್ಮರೆಯಾದ ಏಷ್ಯಾಕಪ್ ಟ್ರೋಫಿ
ವೈಭವ್ಗೆ ಅವಕಾಶ?
ಕಳೆದ ಆವೃತ್ತಿಯಲ್ಲಿ ಭಾರತೀಯ ತಂಡದಲ್ಲಿ ಅಭಿಷೇಕ್ ಶರ್ಮಾ, ರಾಹುಲ್ ಚಾಹರ್, ಪ್ರಭ್ಸಿಮ್ರಾನ್ ಸಿಂಗ್, ಸಾಯಿ ಕಿಶೋರ್ ಮತ್ತು ಅನ್ಶುಲ್ ಕಾಂಬೋಜ್ ಅವರಂತಹ ಆಟಗಾರರು ಇದ್ದರು. ತಿಲಕ್ ವರ್ಮಾ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು. ಈ ವರ್ಷದ ತಂಡದಲ್ಲಿ ವೈಭವ್ ಸೂರ್ಯವಂಶಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಮುಂದಿನ ದಿನಗಳಲ್ಲಿ ಬಿಸಿಸಿಐ ಈ ಟೂರ್ನಿಗೆ ತಂಡವನ್ನು ಪ್ರಕಟಿಸಲಿದೆ. ಅಂಡರ್-19 ಏಷ್ಯಾಕಪ್ ಡಿಸೆಂಬರ್‌ನಲ್ಲಿ ನಡೆಯಲಿದ್ದು, ದಿನಾಂಕಗಳು ಮತ್ತು ಸ್ಥಳವನ್ನು ಇನ್ನೂ ನಿಗದಿಪಡಿಸಲಾಗಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
