
ಏಷ್ಯನ್ ಗೇಮ್ಸ್ 2026ರ ಪುರುಷರ ಟಿ20 ಟೂರ್ನಿ ಇದೀಗ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಕ್ವಾರ್ಟರ್ ಫೈನಲ್ ಹಂತದಿಂದ ಈಗಾಗಲೇ ಮೂರು ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಿದೆ. ಹೀಗೆ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟ ತಂಡಗಳೆಂದರೆ ಭಾರತ, ಪಾಕಿಸ್ತಾನ್ ಮತ್ತು ಶ್ರೀಲಂಕಾ. ಇತ್ತ ಶ್ರೀಲಂಕಾ ಎಂಟ್ರಿಯೊಂದಿಗೆ ಸೆಮಿಫೈನಲ್‌ನಲ್ಲಿ ಭಾರತ ತಂಡದ ಎದುರಾಳಿ ಯಾರೆಂಬುದು ಕನ್ಫರ್ಮ್ ಆಗಿದೆ.
ಜಪಾನ್‌ನ ನಿಶ್ಶಿನ್‌ನಲ್ಲಿರುವ ಐಚಿ ಪ್ರಿಫೆಕ್ಚರಲ್ ಕೊರೊಗಿ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ಅಕ್ಟೋಬರ್ 1, 2026ರ ಗುರುವಾರ ನಡೆಯಲಿರುವ ಎರಡನೇ ಸೆಮಿ-ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ ಮುಖಾಮುಖಿಯಾಗಲಿದೆ.
ನಿಶ್ಶಿನ್‌ನಲ್ಲಿ ನಡೆಯಬೇಕಿದ್ದ ಮೂರು ಕ್ವಾರ್ಟರ್ ಫೈನಲ್ ಪಂದ್ಯಗಳು ಮಳೆಗೆ ಆಹುತಿಯಾಗಿದೆ. ಹಾಂಗ್ ಕಾಂಗ್ ವಿರುದ್ಧದ ಮೊದಲ ಕ್ವಾರ್ಟರ್ ಫೈನಲ್ ಪಂದ್ಯ ಮಳೆಯಿಂದ ರದ್ದಾದ ಕಾರಣ ಪಾಕಿಸ್ತಾನ್ ತಂಡ ಸೆಮಿಫೈನಲ್ಗೇರಿತ್ತು.
ಇನ್ನು ಅಫ್ಘಾನಿಸ್ತಾನ್ ವಿರುದ್ಧದ ಮ್ಯಾಚ್ ರದ್ದಾದ ಕಾರಣ ಟೀಮ್ ಇಂಡಿಯಾ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟಿದೆ. ಇದೀಗ ನೇಪಾಳ ಮತ್ತು ಶ್ರೀಲಂಕಾ ನಡುವಣ ಮೂರನೇ ಕ್ವಾರ್ಟರ್ ಫೈನಲ್ ಪಂದ್ಯ ಕೂಡ ಮಳೆಗೆ ಆಹುತಿಯಾಗಿದೆ. ಹೀಗಾಗಿ ಐಸಿಸಿ ಶ್ರೇಯಾಂಕದಲ್ಲಿ ಉನ್ನತ ಸ್ಥಾನದಲ್ಲಿರುವ ಲಂಕಾ ಪಡೆ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ.
ಅದರಂತೆ ಅಕ್ಟೋಬರ್ 1 ರಂದು ನಡೆಯಲಿರುವ 2ನೇ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್ಗೆ ಪ್ರವೇಶಿಸಿದರೆ, ಸೋಲುವ ತಂಡ ಕಂಚಿನ ಪದಕಕ್ಕಾಗಿ ಪಂದ್ಯವಾಡಲಿದೆ.
ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪಾನಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ಜಸ್ಪ್ರೀತ್ ಬುಮ್ರಾ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಯಶ್ ಠಾಕೂರ್, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ವಿಪ್ರಾಜ್ ನಿಗಮ್, ವೈಭವ್ ಸೂರ್ಯವಂಶಿ.
ಇದನ್ನೂ ಓದಿ: ಹರಾಜಿಗೂ ಮುನ್ನ RCB ಮಾಸ್ಟರ್ ಪ್ಲ್ಯಾನ್: ಪೆರ್ರಿ ಇನ್, ಗ್ರೇಸ್ ಔಟ್..!
ಶ್ರೀಲಂಕಾ ಟಿ20 ತಂಡ: ಆಶೆನ್ ಬಂಡಾರ , ನುವಾನಿಡು ಫೆರ್ನಾಂಡೊ , ಚಾಮಿಕಾ ಕರುಣರತ್ನೆ ,
ನುವಾನ್ ತುಷಾರ , ಲಸಿತ್ ಕ್ರೂಸ್ಪುಲ್ಲೆ , ದುಶಾನ್ ಹೇಮಂತ , ಸಿನೆತ್ ಜಯವರ್ಧನೆ , ನಿರೋಷನ್ ಡಿಕ್ವೆಲ್ಲಾ , ಸೋಹನ್ ಡಿ ಲಿವೇರಾ , ತರಿಂದು ರತ್ನಾಯಕೆ , ಬಿನುರ ಫೆರ್ನಾಂಡೊ , ಗರುಕ ಸಂಕೇತ್ , ಸಹನ್ ಅರಚ್ಚಿಗೆ (ನಾಯಕ) ,
ವನುಜಾ ಸಹನ್ , ವಿಜಯಕಾಂತ್ ವಿಯಸ್ಕಾಂತ್.