AUS vs SA: ‘ನಾವು ಆರಂಭದಲ್ಲೇ ಸೋತೆವು’; ಪಂದ್ಯದ ಬಳಿಕ ನಾಯಕ ತೆಂಬ ಬವುಮಾ ಹೇಳಿದ್ದೇನು?

|

Updated on: Nov 17, 2023 | 8:02 AM

AUS vs SA, ICC World Cup 2023: ಪಂದ್ಯಾವಳಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ದಕ್ಷಿಣ ಆಫ್ರಿಕಾ ತಂಡ ಸೆಮಿಫೈನಲ್​ನಲ್ಲಿ ಮುಗ್ಗರಿಸಿತು. ಸೋಲಿನ ಬಳಿಕ ಬಾವುಕರಾಗಿ ಮಾತನಾಡಿದ ನಾಯಕ ತೆಂಬ ಬಾವುಮಾ ಪಂದ್ಯವನ್ನು ಯಾವ ಹಂತದಲ್ಲಿ ಪಂದ್ಯವನ್ನು ಕಳೆದುಕೊಂಡೆವು ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ.

AUS vs SA: ‘ನಾವು ಆರಂಭದಲ್ಲೇ ಸೋತೆವು’; ಪಂದ್ಯದ ಬಳಿಕ ನಾಯಕ ತೆಂಬ ಬವುಮಾ ಹೇಳಿದ್ದೇನು?
ತೆಂಬ ಬವುಮಾ
Follow us on

ವಿಶ್ವಕಪ್-2023 ರ (ICC World Cup 2023) ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾವನ್ನು (South Africa vs Australia) 3 ವಿಕೆಟ್‌ಗಳಿಂದ ಸೋಲಿಸಿದೆ. ಇದರೊಂದಿಗೆ ಆಸ್ಟ್ರೇಲಿಯಾ ಫೈನಲ್‌ಗೆ ಲಗ್ಗೆ ಇಟ್ಟಿದ್ದು ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಎದುರಿಸಲಿದೆ. ನವೆಂಬರ್ 19 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ಫೈನಲ್ ಪಂದ್ಯ ನಡೆಯಲಿದೆ. ಇನ್ನು ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 49.4 ಓವರ್‌ಗಳಲ್ಲಿ 212 ರನ್ ಗಳಿಸಿತು. 213 ರನ್‌ಗಳ ಗುರಿಯನ್ನು ಆಸ್ಟ್ರೇಲಿಯಾ 47.2 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಸಾಧಿಸಿತು. ಈ ಪಂದ್ಯದಲ್ಲಿ 3 ವಿಕೆಟ್‌ಗಳಿಂದ ಸೋಲುವ ಮೂಲಕ ಫೈನಲ್‌ಗೆ ತಲುಪುವ ಅವಕಾಶವನ್ನೂ ಕಳೆದುಕೊಂಡಿತ್ತು. ಈ ಸೋಲಿನೊಂದಿಗೆ ಆಫ್ರಿಕಾ ತಂಡ ಐದನೇ ಬಾರಿಗೆ ಸೆಮಿಫೈನಲ್‌ನಲ್ಲಿ ಸೋತ ಅತ್ಯಂತ ಕಳಪೆ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ. ಪಂದ್ಯಾವಳಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ದಕ್ಷಿಣ ಆಫ್ರಿಕಾ ತಂಡ ಸೆಮಿಫೈನಲ್​ನಲ್ಲಿ ಮುಗ್ಗರಿಸಿತು. ಸೋಲಿನ ಬಳಿಕ ಬಾವುಕರಾಗಿ ಮಾತನಾಡಿದ ನಾಯಕ ತೆಂಬ ಬವುಮಾ (Temba Bavuma) ಪಂದ್ಯವನ್ನು ಯಾವ ಹಂತದಲ್ಲಿ ಪಂದ್ಯವನ್ನು ಕಳೆದುಕೊಂಡೆವು ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ.

ಬವುಮಾ ಹೇಳಿದ್ದೇನು?

ಸೆಮಿಫೈನಲ್ ಪಂದ್ಯದ ಸೋಲಿನ ನಂತರ ಮಾತನಾಡಿದ ಬವುಮಾ, ‘ಅದನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಮೊದಲನೆಯದಾಗಿ ಆಸ್ಟ್ರೇಲಿಯಾಕ್ಕೆ ಅಭಿನಂದನೆಗಳು. ಫೈನಲ್‌ಗೆ ಅವರಿಗೆ ಶುಭಾಶಯಗಳು. ಅವರು ಇಂದು ಚೆನ್ನಾಗಿ ಆಡಿದ್ದಾರೆ. ನಾವು ಬ್ಯಾಟ್ ಮತ್ತು ಬಾಲ್‌ನಿಂದ ಪ್ರಾರಂಭಿಸಿದ ರೀತಿ ಈ ಪಂದ್ಯದ ಟರ್ನಿಂಗ್ ಪಾಯಿಂಟ್, ಅಲ್ಲಿಯೇ ನಾವು ಸೋತಿದ್ದೇವೆ. ಆಸ್ಟ್ರೇಲಿಯಾ ತಂಡ ಆರಂಭದಲ್ಲೇ ಆಕ್ರಮಣಕಾರಿ ಕ್ರಿಕೆಟ್ ಆಡಿತು, ಇದು ನಿಜವಾಗಿಯೂ ನಮ್ಮನ್ನು ಒತ್ತಡಕ್ಕೆ ಸಿಲುಕಿಸಿತು. ನೀವು ಕೇವಲ 24 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡ ಬಳಿಕ ಉತ್ತಮ ಸ್ಕೋರ್ ದಾಖಲಿಸಲು ಯಾವಾಗಲೂ ಕಷ್ಟಪಡಬೇಕಾಗುತ್ತದೆ. ಮಿಲ್ಲರ್ ಮತ್ತು ಕ್ಲಾಸೆನ್ ಇದ್ದಾಗ ಸ್ಕೋರ್ ಬೋರ್ಡ್​ನಲ್ಲಿ ಏರಿಕೆ ಕಂಡುಬರುತ್ತಿತ್ತು. ಆದರೆ ದುರದೃಷ್ಟವಶಾತ್ ಅದು ಹೆಚ್ಚು ಕಾಲ ಉಳಿಯಲಿಲ್ಲ. ಮಿಲ್ಲರ್ ಅವರ ಇನ್ನಿಂಗ್ಸ್ ಅದ್ಭುತವಾಗಿತ್ತು. ಅಂತಹ ಒತ್ತಡದ ಪರಿಸ್ಥಿತಿಯಲ್ಲಿ, ಅದರಲ್ಲೂ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಈ ರೀತಿಯ ಪ್ರದರ್ಶನ ನೀಡಿದ್ದು ಶ್ಲಾಘನೀಯ ಎಂದರು.

ಚೋಕರ್ಸ್​ ಪಟ್ಟವನ್ನು ತನ್ನಲ್ಲೇ ಉಳಿಸಿಕೊಂಡ ಆಪ್ರಿಕಾ; ಭಾರತ- ಆಸ್ಟ್ರೇಲಿಯಾ ನಡುವೆ ಫೈನಲ್ ಫೈಟ್..!

ಹಾಗೆಯೇ ನಾವು ನೀಡಿದ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಪಂದ್ಯದ ಮೊದಲ 10 ಓವರ್​ಗಳಲ್ಲಿ ಸುಮಾರು 70 ರನ್ ಕಲೆಹಾಕಿತು. ಆ ಅದ್ಭುತ ಆರಂಭ ನಿಜವಾಗಿಯೂ ಮುಂದೆ ಬರುವ ಆಟಗಾರರ ಒತ್ತಡವನ್ನು ಕಡಿಮೆ ಮಾಡಿತು. ಈ ವೇಳೆ ಮಾರ್ಕ್ರಾಮ್ ಮತ್ತು ಮಹಾರಾಜ್ ಅದ್ಭುತವಾಗಿ ಬೌಲಿ ಮಾಡಿದರು. ಆಸೀಸ್ ಬ್ಯಾಟರ್​ಗಳನ್ನು ನಿಜವಾಗಿಯೂ ಒತ್ತಡಕ್ಕೆ ಒಳಪಡಿಸಿದರು. ಪಂದ್ಯದ ವೇಳೆ ನಾವು ಕೆಲವೊಂದು ಕಠಿಣ ಅವಕಾಶಗಳನ್ನು ಕಳೆದುಕೊಂಡೆವು. ನಾವು ಆ ಅವಕಾಶಗಳನ್ನು ತಪ್ಪಿಸದಿದ್ದರೆ, ನಾವು ಗೆಲುವಿಗೆ ಸನಿಹವಾಗಬಹುದಿತ್ತು ಎಂದಿದ್ದಾರೆ.

ಡಿ ಕಾಕ್ ಕುರಿತು ಹೇಳಿದ್ದೇನು?

ಜೆರಾಲ್ಡ್ ಕೊಯೆಟ್ಜಿ ಅವರನ್ನು ಹೊಗಳಿದ ತೆಂಬಾ ಬಾವುಮಾ, ಕೊಯೆಟ್ಜಿ ಯುವ ಆಟಗಾರನಾಗಿ ನಿಜವಾಗಿಯೂ ಯೋಧರಂತೆ ಕೆಲಸ ಮಾಡಿದರು. ಸೀಮರ್‌ಗಳಿಗೆ ಹೆಚ್ಚು ಸಹಾಯಕವಲ್ಲದ ಪಿಚ್​ನಲ್ಲಿ ಸ್ಮಿತ್‌ ಅವರ ವಿಕೆಟ್ ಪಡೆದದ್ದು ಅದ್ಭುತವಾಗಿತ್ತು. ಅಲ್ಲದೆ ಅವರು ಸ್ನಾಯು ಸೆಳೆತದಿಂದ ಬಳಲುತ್ತಿದ್ದರೂ ಬೌಲಿಂಗ್ ಮುಂದುವರಿಸಿದರು ಇದು ಅವರ ಬದ್ಧತೆಯನ್ನು ತೊರಿಸುತ್ತದೆ ಎಂದಿದ್ದಾರೆ.

ಹಾಗೆಯೇ ಕೊನೆಯ ವಿಶ್ವಕಪ್ ಪಂದ್ಯವನ್ನಾಡಿದ ಕ್ವಿಂಟನ್ ಡಿ ಕಾಕ್ ಬಗ್ಗೆಯೂ ಮಾತನಾಡಿದ ಬವುಮಾ, ಕ್ವಿಂಟನ್ ತಮ್ಮ ವೃತ್ತಿಜೀವನವನ್ನು ವಿಭಿನ್ನ ರೀತಿಯಲ್ಲಿ ಕೊನೆಗೊಳಿಸಲು ಬಯಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಆದರೆ ಫಲಿತಾಂಶವನ್ನು ಲೆಕ್ಕಿಸದೆಯೇ ಅವರು ತಮ್ಮ ಈ ಅದ್ಭುತ ಜರ್ನಿಯನ್ನು ನೆನಪಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಅವರು ದಕ್ಷಿಣ ಆಫ್ರಿಕಾ ಕ್ರಿಕೆಟ್‌ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿ ತಮ್ಮ ಪ್ರಯಾಣವನ್ನು ಮುಗಿಸುತ್ತಿದ್ದಾರೆ ಎಂದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:59 am, Fri, 17 November 23