ಆಸ್ಟ್ರೇಲಿಯಾ ತಂಡ ಪ್ರಕಟ: ಟೀಮ್​ನಲ್ಲಿ 8 ಹೊಸ ಆಟಗಾರರು!

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಣ 8 ಪಂದ್ಯಗಳ ಸರಣಿಯು ನವೆಂಬರ್ 13 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಮೊದಲಿಗೆ ಮೂರು ಮ್ಯಾಚ್​ಗಳ ಏಕದಿನ ಸರಣಿಯನ್ನು ಆಡಲಾಗುತ್ತದೆ. ಇದಾದ ಬಳಿಕ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಈ ಎರಡು ಸರಣಿಗಳಿಗಾಗಿ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ.

ಆಸ್ಟ್ರೇಲಿಯಾ ತಂಡ ಪ್ರಕಟ: ಟೀಮ್​ನಲ್ಲಿ 8 ಹೊಸ ಆಟಗಾರರು!
Australia
Image Credit source: GettyImages

Updated on: Nov 02, 2026 | 12:39 PM

ಇಂಗ್ಲೆಂಡ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗಳಿಗೆ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ 8 ಮಂದಿ ಹೊಸ ಆಟಗಾರರು ಸ್ಥಾನ ಪಡೆದಿದ್ದಾರೆ. ಇವರಲ್ಲಿ ಕೆಲವರು ಈಗಾಗಲೇ ಆಸ್ಟ್ರೇಲಿಯಾ ಪರ ಒಂದೆರಡು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರೆ, ಇನ್ನುಳಿದವರು ಇನ್ನೂ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿಲ್ಲ ಎಂಬುದು ವಿಶೇಷ.

ಮುಂಬರುವ ಪ್ರಮುಖ ಟೆಸ್ಟ್ ಪಂದ್ಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಆಸ್ಟ್ರೇಲಿಯಾದ ಸ್ಟಾರ್ ಬೌಲರ್‌ಗಳಾದ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹೇಝಲ್​ವುಡ್​ ಅವರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಹಿರಿಯರ ಅನುಪಸ್ಥಿತಿಯಲ್ಲಿ ಯುವ ಪ್ರತಿಭೆಗಳನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಯುವ ಆಟಗಾರರ ದಂಡು!

ಆಸ್ಟ್ರೇಲಿಯಾ ಟಿ20 ತಂಡದಲ್ಲಿ ವಿಕೆಟ್ ಕೀಪರ್-ಬ್ಯಾಟರ್‌ಗಳಾದ ಲಚ್ಲಾನ್ ಶಾ ಮತ್ತು ಸ್ಯಾಮ್ ಹಾರ್ಪರ್ ಚೊಚ್ಚಲ ಬಾರಿ ಅವಕಾಶ ಪಡೆದಿದ್ದಾರೆ. ಇವರೊಂದಿಗೆ ದೇಶಿ ಕ್ರಿಕೆಟ್‌ನಲ್ಲಿ ಮಿಂಚಿರುವ ಮಹ್ಲಿ ಬೇರ್ಡ್‌ಮನ್, ಜಾಕ್ ಎಡ್ವರ್ಡ್ಸ್, ಲಿಯಾಮ್ ಸ್ಕಾಟ್, ಆಲಿ ಪೀಕ್, ನಿಖಿಲ್ ಚೌಧರಿ ಮತ್ತು ಜೋಯಲ್ ಡೇವಿಸ್  ಅವರಂತಹ ಉದಯೋನ್ಮುಖ ಆಟಗಾರರನ್ನು ಕೂಡ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.

  1.  ಲಚ್ಲಾನ್ ಶಾ – ವಿಕೆಟ್ ಕೀಪರ್-ಬ್ಯಾಟರ್
  2.  ಸ್ಯಾಮ್ ಹಾರ್ಪರ್ – ವಿಕೆಟ್ ಕೀಪರ್-ಬ್ಯಾಟರ್
  3.  ಮಹ್ಲಿ ಬಿಯರ್ಡ್‌ಮನ್ – ವೇಗದ ಬೌಲರ್
  4.  ಓಲಿ ಪೀಕ್  – ಬ್ಯಾಟರ್
  5.  ಜಾಕ್ ಎಡ್ವರ್ಡ್ಸ್ – ಆಲ್‌ರೌಂಡರ್
  6.  ಲಿಯಾಮ್ ಸ್ಕಾಟ್ – ಆಲ್‌ರೌಂಡರ್
  7.  ನಿಖಿಲ್ ಚೌಧರಿ  – ಆಲ್‌ರೌಂಡರ್
  8.  ಜೋಯಲ್ ಡೇವಿಸ್ – ಆಲ್‌ರೌಂಡರ್.

ಆಸ್ಟ್ರೇಲಿಯಾ ಏಕದಿನ ತಂಡ: ಮಿಚೆಲ್ ಮಾರ್ಷ್ (ನಾಯಕ), ಕ್ಸೇವಿಯರ್ ಬಾರ್ಟ್ಲೆಟ್, ಮಹ್ಲಿ ಬಿಯರ್ಡ್‌ಮನ್, ಅಲೆಕ್ಸ್ ಕ್ಯಾರಿ, ಕೂಪರ್ ಕೊನೊಲಿ, ಜ್ಯಾಕ್ ಎಡ್ವರ್ಡ್ಸ್, ಕ್ಯಾಮರೋನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಸ್ಪೆನ್ಸರ್ ಜಾನ್ಸನ್, ಓಲಿ ಪೀಕ್, ಮ್ಯಾಟ್ ರೆನ್‌ಶಾ, ಲಿಯಾಮ್ ಸ್ಕಾಟ್, ಆ್ಯಡಂ ಝಂಪಾ.

ಆಸ್ಟ್ರೇಲಿಯಾ ಟಿ20 ತಂಡ: ಮಿಚೆಲ್ ಮಾರ್ಷ್ (ನಾಯಕ), ಕ್ಸೇವಿಯರ್ ಬಾರ್ಟ್ಲೆಟ್, ಮಹ್ಲಿ ಬಿಯರ್ಡ್‌ಮನ್, ನಿಖಿಲ್ ಚೌಧರಿ, ಟಿಮ್ ಡೇವಿಡ್, ಜೋಯಲ್ ಡೇವಿಸ್, ಜ್ಯಾಕ್ ಎಡ್ವರ್ಡ್ಸ್, ನಾಥನ್ ಎಲ್ಲಿಸ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಸ್ಯಾಮ್ ಹಾರ್ಪರ್, ಸ್ಪೆನ್ಸರ್ ಜಾನ್ಸನ್, ಮಿಚೆಲ್ ಓವನ್, ಲಾಚ್ಲಾನ್ ಶಾ, ಆ್ಯಡಂ ಝಂಪಾ.

ಯಾರೆಲ್ಲಾ ಅಲಭ್ಯ?

  • ಏಕದಿನ ಮತ್ತು ಟಿ20 ಸರಣಿಗೆ ಅಲಭ್ಯರಾಗಿರುವ ಆಟಗಾರರು: ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹೇಝಲ್​ವುಡ್.
  • ಏಕದಿನ ಸರಣಿಗೆ ಮಾತ್ರ ಅಲಭ್ಯರಾಗಿರುವ ಆಟಗಾರ: ನಾಥನ್ ಎಲ್ಲಿಸ್.
  • ಟಿ20 ಸರಣಿಗೆ ಅಲಭ್ಯರಾಗಿರುವ ಆಟಗಾರರು: ಟ್ರಾವಿಸ್ ಹೆಡ್, ಕ್ಯಾಮರೋನ್ ಗ್ರೀನ್, ಅಲೆಕ್ಸ್ ಕ್ಯಾರಿ, ಜೋಶ್ ಇಂಗ್ಲಿಸ್, ಮ್ಯಾಥ್ಯೂ ರೆನ್‌ಶಾ ಮತ್ತು ಕೂಪರ್ ಕೊನೊಲಿ.

ಆಸ್ಟ್ರೇಲಿಯಾ vs ಇಂಗ್ಲೆಂಡ್ ವೇಳಾಪಟ್ಟಿ:

ಪಂದ್ಯದ ವಿವರ ದಿನಾಂಕ (2026) ಕ್ರೀಡಾಂಗಣ / ಸ್ಥಳ
1ನೇ ಏಕದಿನ ಪಂದ್ಯ ನವೆಂಬರ್ 13 ಪರ್ತ್ ಕ್ರಿಕೆಟ್ ಸ್ಟೇಡಿಯಂ
2ನೇ ಏಕದಿನ ಪಂದ್ಯ ನವೆಂಬರ್ 15 ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ
3ನೇ ಏಕದಿನ ಪಂದ್ಯ ನವೆಂಬರ್ 19 ಸಿಡ್ನಿ ಕ್ರಿಕೆಟ್ ಸ್ಟೇಡಿಯಂ
1ನೇ ಟಿ20 ಪಂದ್ಯ  ನವೆಂಬರ್ 22 ಬ್ರಿಸ್ಬೇನ್ ಕ್ರಿಕೆಟ್ ಸ್ಟೇಡಿಯಂ
2ನೇ ಟಿ20 ಪಂದ್ಯ ನವೆಂಬರ್ 24 ಸಿಡ್ನಿ ಕ್ರಿಕೆಟ್ ಸ್ಟೇಡಿಯಂ
3ನೇ ಟಿ20 ಪಂದ್ಯ  ನವೆಂಬರ್ 27 ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ
4ನೇ ಟಿ20 ಪಂದ್ಯ ನವೆಂಬರ್ 29 ಅಡಿಲೇಡ್ ಓವಲ್ ಸ್ಟೇಡಿಯಂ
5ನೇ ಟಿ20 ಪಂದ್ಯ ಡಿಸೆಂಬರ್ 2 ಮನುಕಾ ಓವಲ್, ಕ್ಯಾನ್‌ಬೆರಾ

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us