
ಬೆಂಗಳೂರು (ಏ. 28): ಐಪಿಎಲ್ 2025 ರ ತನ್ನ 9 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ (Delhi Capitals vs Royal Challengers Bengaluru) ಸೋಲು ಕಂಡಿತು. ಡೆಲ್ಲಿ ಕ್ಯಾಪಿಟಲ್ಸ್ ತನ್ನ ತವರು ನೆಲವಾದ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ 162 ರನ್ಗಳ ಸಾಧಾರಣ ಟಾರ್ಗೆಟ್ ನೀಡಿತಷ್ಟೆ. ಇದಕ್ಕೆ ಉತ್ತರವಾಗಿ ಆರ್‌ಸಿಬಿ 19ನೇ ಓವರ್‌ನಲ್ಲಿ ಗುರಿ ತಲುಪಿತು. ಒಂದು ಹಂತದಲ್ಲಿ ದೆಹಲಿ ಪಂದ್ಯದ ಮೇಲೆ ಪ್ರಾಬಲ್ಯ ಸಾಧಿಸಿತ್ತು ಆದರೆ ಆ ನಂತರ ಆರ್‌ಸಿಬಿಗೆ ಮತ್ತೆ ಚೇತರಿಸಿಕೊಂಡು ಕಮ್ಬ್ಯಾಕ್ ಮಾಡಿತು. ಲಯವನ್ನು ಕಾಯ್ದುಕೊಳ್ಳುವಲ್ಲಿ ಅಕ್ಷರ್ ಪಡೆ ವಿಫಲವಾಯಿತು. ಆರ್‌ಸಿಬಿ ಗೆಲುವು ಸಾಧಿಸಲು ಡೆಲ್ಲಿ ಕ್ಯಾಪಿಟಲ್ಸ್ ಮಾಡಿದ ಕೆಲವು ತಪ್ಪುಗಳನ್ನು ನೋಡುವುದಾದರೆ…
ಡೆಲ್ಲಿ ಕ್ಯಾಪಿಟಲ್ಸ್ ಮಧ್ಯಮ ಓವರ್‌ಗಳಲ್ಲಿ ನಿಧಾನವಾಗಿ ಬ್ಯಾಟಿಂಗ್ ಮಾಡಿತು. ಪವರ್ ಪ್ಲೇ ನಂತರ ತಂಡದ ಸ್ಕೋರ್ 52 ರನ್ ಆಗಿತ್ತು. 15 ಓವರ್‌ಗಳ ನಂತರ ಕೇವಲ 108 ರನ್‌ಗಳನ್ನು ಮಾತ್ರ ತಲುಪಲು ಸಾಧ್ಯವಾಯಿತು. ಅಂದರೆ ಬ್ಯಾಟ್ಸ್‌ಮನ್‌ಗಳು 9 ಓವರ್‌ಗಳಲ್ಲಿ ಕೇವಲ 56 ರನ್‌ಗಳನ್ನು ಗಳಿಸಿದರು. ಈ ಕಾರಣದಿಂದಾಗಿ ತಂಡವು ಕೇವಲ 162 ರನ್‌ಗಳನ್ನು ಮಾತ್ರ ತಲುಪಲು ಸಾಧ್ಯವಾಯಿತು.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೃನಾಲ್ ಪಾಂಡ್ಯಗೆ ಕ್ರೀಸ್ನಲ್ಲಿ ಸೆಟ್ ಆಗಲು ಸಾಕಷ್ಟು ಅವಕಾಶ ನೀಡಿತು. 16 ನೇ ಓವರ್‌ನಲ್ಲಿ ಮಿಚೆಲ್ ಸ್ಟಾರ್ಕ್ ಅವರನ್ನು ಎರಡನೇ ಸ್ಪೆಲ್‌ಗೆ ಕರೆತರಲಾಯಿತು. ಅಷ್ಟೊತ್ತಿಗೆ ವಿರಾಟ್ ಮತ್ತು ಕೃನಾಲ್ ಸೆಟ್ ಆಗಿದ್ದರು. ಹೀಗಿದ್ದರೂ ಸ್ಟಾರ್ಕ್ ಒಂದು ಅವಕಾಶ ಸೃಷ್ಟಿಸಿ ಕೊಟ್ಟರು. ಆದರೆ ಅಭಿಷೇಕ್ ಪೊರೆಲ್ ಸುಲಭವಾದ ಕ್ಯಾಚ್ ಅನ್ನು ಕೈಬಿಟ್ಟರು. ಸ್ಟಾರ್ಕ್ 13 ನೇ ಓವರ್‌ನಲ್ಲಿ ಬಂದಿದ್ದರೆ, ಫಲಿತಾಂಶ ವಿಭಿನ್ನವಾಗಿರುತ್ತಿತ್ತು ಏಕೆಂದರೆ ಆರ್‌ಸಿಬಿ ಈ ಓವರ್‌ನಿಂದ ದಾಳಿ ಆರಂಭಿಸಿತು.
Virat Kohli: ವಿರಾಟ್ ಕೊಹ್ಲಿ-ಕೆಎಲ್ ರಾಹುಲ್ ಜಗಳಕ್ಕೆ ಏನು ಕಾರಣ?: ಪಂದ್ಯದ ನಂತರವೂ ಫೈಟ್ ನಡೆದಿದ್ದೇಕೆ?
ಈ ಪಿಚ್ ಸ್ಪಿನ್ ಬೌಲರ್‌ಗಳಿಗೆ ಸಹಕಾರಿಯಾಗಿತ್ತು. ಅಕ್ಷರ್ ತಮ್ಮ 4 ಓವರ್‌ಗಳಲ್ಲಿ 19 ರನ್‌ಗಳನ್ನು ನೀಡಿದರು. ಕುಲ್ದೀಙ್ ಕೂಡ ಕೇವಲ 28 ರನ್ ಮಾತ್ರ ನೀಡಿದರು. ಆರ್‌ಸಿಬಿ ಸ್ಪಿನ್ನರ್ ಕೂಡ ಉತ್ತಮವಾಗಿ ಆಡಿದರು. ಇದಾದ ನಂತರವೂ ಅಕ್ಷರ್ ಪಟೇಲ್ ವಿಪ್ರರಾಜ್ ನಿಗಮ್ ಗೆ ಒಂದೇ ಒಂದು ಓವರ್ ನೀಡಿದರು. ಬೆಂಗಳೂರಿನಲ್ಲಿ ನಡೆದ ಈ ಎರಡೂ ತಂಡಗಳ ಪಂದ್ಯದಲ್ಲಿ ವಿಪ್ರರಾಜ್ ವಿರಾಟ್ ಮತ್ತು ಕೃನಾಲ್ ಇಬ್ಬರನ್ನೂ ಔಟ್ ಮಾಡಿದ್ದರು.
ಆರ್‌ಸಿಬಿ ಗೆಲುವಿಗೆ ಎರಡು ಓವರ್‌ಗಳಲ್ಲಿ 17 ರನ್‌ಗಳು ಬೇಕಾಗಿದ್ದವು. ಮಿಚೆಲ್ ಸ್ಟಾರ್ಕ್ ಒಂದು ಓವರ್ ಬೌಲಿಂಗ್ ಮಾಡಿದ್ದರು. ಇದಾದ ನಂತರವೂ ಅಕ್ಷರ್ ಪಟೇಲ್ ಮುಖೇಶ್ ಕುಮಾರ್ಗೆ ಬೌಲಿಂಗ್ ನೀಡಿದರು. ಮೊದಲ 3 ಓವರ್‌ಗಳಲ್ಲಿ ಮುಖೇಶ್ 32 ರನ್‌ಗಳನ್ನು ನೀಡಿದರು. ಟಿಮ್ ಡೇವಿಡ್ ಕೇವಲ 3 ಎಸೆತಗಳಲ್ಲಿ 19 ರನ್ (ನೋ ಬಾಲ್ ಸೇರಿದಂತೆ) ಗಳಿಸುವ ಮೂಲಕ ಪಂದ್ಯವನ್ನು ಮುಗಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ