ICC T20 Rankings: ಬಾಬರ್ ಹಿಂದಿಕ್ಕಿದ ರಿಜ್ವಾನ್​ಗೆ ನಂ.1 ಪಟ್ಟ! ಟಾಪ್ 3 ರಿಂದ ಸೂರ್ಯ ಔಟ್..!

ICC T20 Rankings: ಏಷ್ಯಾಕಪ್ ಅಥವಾ ಮೊದಲು ಆಡಿದ ಟಿ20 ಸರಣಿಯಲ್ಲಿ ಹಾಂಕಾಂಗ್ ವಿರುದ್ಧ ಸೂರ್ಯಕುಮಾರ್ ಯಾದವ್ ತೋರಿದ ರೀತಿಯ ಪ್ರದರ್ಶನ, ಅವರು ಬಾಬರ್ ಅಜಮ್ ಅವರನ್ನು ಟಿ20 ನಂ.1 ರ‍್ಯಾಂಕಿಂಗ್​ನಿಂದ ಕೆಳಕ್ಕಿಳಿಸಬಹುದು ಎಂದು ನಿರೀಕ್ಷಿಸಲಾಗಿತ್ತು.

ICC T20 Rankings: ಬಾಬರ್ ಹಿಂದಿಕ್ಕಿದ ರಿಜ್ವಾನ್​ಗೆ ನಂ.1 ಪಟ್ಟ! ಟಾಪ್ 3 ರಿಂದ ಸೂರ್ಯ ಔಟ್..!
ಸೂರ್ಯ, ಬಾಬರ್, ರಿಜ್ವಾನ್
Follow us
TV9 Web
| Updated By: ಪೃಥ್ವಿಶಂಕರ

Updated on:Sep 07, 2022 | 3:23 PM

ಐಸಿಸಿ ಟಿ20 ಬ್ಯಾಟ್ಸ್‌ಮನ್‌ಗಳ ನೂತನ ರ‍್ಯಾಂಕಿಂಗ್ ಪಟ್ಟಿಯನ್ನು (ICC T20 Rankings) ಬಿಡುಗಡೆ ಮಾಡಿದ್ದು, ಹೊಸ ಶ್ರೇಯಾಂಕದಲ್ಲಿ, ಬಾಬರ್ ಅಜಮ್ (Babar Azam) ಬದಲಿಗೆ ಸೂರ್ಯಕುಮಾರ್ ಯಾದವ್ (Suryakumar Yadav) ಕಾಣಿಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಇವರಿಬ್ಬರ ಕದನದಲ್ಲಿ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್​ಗೆ ದೊಡ್ಡ ಲಾಭವಾಗಿದೆ. ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಜ್ವಾನ್ ಈಗ ಟಿ20ಯಲ್ಲಿ ನಂಬರ್ ಒನ್ ಪಟ್ಟವನ್ನು ಅಲಂಕರಿಸಿದ್ದಾರೆ. ಅವರು ತಮ್ಮದೇ ದೇಶಬಾಂಧವ ಮತ್ತು ಆರಂಭಿಕ ಪಾಲುದಾರ ಬಾಬರ್ ಅಜಮ್ ಅವರನ್ನು ಹಿಂದುಕ್ಕುವ ಮೂಲಕ ಈ ಸ್ಥಾನವನ್ನು ಸಾಧಿಸಿದ್ದಾರೆ. ಈ ಮೊದಲು ಬಾಬರ್ ಆಜಮ್ ನಂಬರ್ ಒನ್ ಸ್ಥಾನದಲ್ಲಿದ್ದರು. ಈ ಹಿಂದೆ ಟಿ20 ರ‍್ಯಾಂಕಿಂಗ್​ನಲ್ಲಿ ಬರಪೂರ ಲಾಭ ಪಡೆದಿದ್ದ ಭಾರತದ ಸೂರ್ಯಕುಮಾರ್ ಯಾದವ್ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದಾರೆ.

ಬಾಬರ್- ಸೂರ್ಯಕುಮಾರ್ ಕದನದಲ್ಲಿ ರಿಜ್ವಾನ್​ಗೆ ಲಾಭ!

ಇದನ್ನೂ ಓದಿ
Image
ಸೂರ್ಯಕುಮಾರ್​ನನ್ನು ಡಿವಿಲಿಯರ್ಸ್​ಗೆ ಹೋಲಿಸಿದ ಪಾಂಟಿಂಗ್; ಲೇವಡಿ ಮಾಡಿದ ಪಾಕ್ ಕ್ರಿಕೆಟರ್
Image
ICC T20 Rankings: ಕೆರಿಬಿಯನ್​ ನಾಡಲ್ಲಿ ಸೂರ್ಯ ಸ್ಫೋಟ, ಟಿ20 ರ‍್ಯಾಂಕಿಂಗ್​ನಲ್ಲಿ 2ನೇ ಸ್ಥಾನ! ನಲುಗಿದ ಬಾಬರ್ ಸಿಂಹಾಸನ
Image
IND vs ENG: ಸೂರ್ಯ ಮುಳುಗದ ನಾಡಿನಲ್ಲಿ ದಾಖಲೆಗಳ ಮಳೆ ಸುರಿಸಿದ ಸೂರ್ಯ..!

ಏಷ್ಯಾಕಪ್ ಅಥವಾ ಮೊದಲು ಆಡಿದ ಟಿ20 ಸರಣಿಯಲ್ಲಿ ಹಾಂಕಾಂಗ್ ವಿರುದ್ಧ ಸೂರ್ಯಕುಮಾರ್ ಯಾದವ್ ತೋರಿದ ರೀತಿಯ ಪ್ರದರ್ಶನ, ಅವರು ಬಾಬರ್ ಅಜಮ್ ಅವರನ್ನು ಟಿ20 ನಂ.1 ರ‍್ಯಾಂಕಿಂಗ್​ನಿಂದ ಕೆಳಕ್ಕಿಳಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಏಷ್ಯಾಕಪ್​ನಲ್ಲಿ ಸೂರ್ಯಕುಮಾರ್ ಯಾದವ್ ಮಾತ್ರವಲ್ಲ ಬಾಬರ್ ಅಜಮ್ ಕೂಡ ವಿಫಲರಾಗಿದ್ದರು. ಆದರೆ ಅವರ ವೈಫಲ್ಯದ ಮಧ್ಯೆ, ಮೊಹಮ್ಮದ್ ರಿಜ್ವಾನ್ ಬ್ಯಾಟಿಂಗ್​ನಲ್ಲಿ ಕೆಲವು ಅತ್ಯುತ್ತಮ ಇನ್ನಿಂಗ್ಸ್‌ಗಳನ್ನು ಆಡಿದ್ದರಿಂದ ಇದು ICC ಯ ಹೊಸ T20 ರ‍್ಯಾಂಕಿಂಗ್ ಪಟ್ಟಿಯ ಮೇಲೆ ಪ್ರಭಾವ ಬೀರಿದೆ.

ತಲಾ ಒಂದು ಸ್ಥಾನ ಕಳೆದುಕೊಂಡ ಬಾಬರ್ ಮತ್ತು ಸೂರ್ಯ

ಹೊಸ ಟಿ20 ಶ್ರೇಯಾಂಕದಲ್ಲಿ ಬಾಬರ್ ಅಜಂ ಮತ್ತು ಸೂರ್ಯಕುಮಾರ್ ಯಾದವ್ ತಲಾ ಒಂದೊಂದು ಸ್ಥಾನ ಕಳೆದುಕೊಂಡಿದ್ದಾರೆ. ಬಾಬರ್ ಆಜಮ್ ನಂಬರ್ ಒನ್ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ. ಅದೇ ಸಮಯದಲ್ಲಿ, ಸೂರ್ಯಕುಮಾರ್ ಯಾದವ್ ಹೊಸ ಶ್ರೇಯಾಂಕದಲ್ಲಿ ಅಗ್ರ 3ನೇ ಸ್ಥಾನದಿಂದ 4 ನೇ ಸ್ಥಾನಕ್ಕೆ ಕುಸಿದಿದ್ದಾರೆ. ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಏಡನ್ ಮಾರ್ಕ್ರಾಮ್ ಈಗ ಟಿ 20 ರ್ಯಾಂಕಿಂಗ್‌ನಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಹಿಂದಿಕ್ಕಿ 3 ನೇ ಸ್ಥಾನವನ್ನು ಗಳಿಸಿದ್ದಾರೆ.

ಬೌಲಿಂಗ್‌ನಲ್ಲಿ ಹ್ಯಾಜಲ್‌ವುಡ್ ನಂ.1

ಐಸಿಸಿಯ ನೂತನ ಟಿ20 ಶ್ರೇಯಾಂಕದ ಅಗ್ರ 5 ಪಟ್ಟಿಯಲ್ಲಿ ಪಾಕಿಸ್ತಾನ 2 ಬ್ಯಾಟ್ಸ್‌ಮನ್‌ಗಳನ್ನು ಹೊಂದಿದ್ದರೆ, ಭಾರತ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಲಾ ಒಬ್ಬೊಬ್ಬ ಬ್ಯಾಟ್ಸ್‌ಮನ್‌ಗಳನ್ನು ಹೊಂದಿವೆ. ಬೌಲರ್‌ಗಳ ಟಿ20 ರ್ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯಾದ ಜೋಸ್ ಹೇಜಲ್‌ವುಡ್ ಮೊದಲ ಸ್ಥಾನದಲ್ಲಿದ್ದಾರೆ. ಟಾಪ್ 10ರಲ್ಲಿ ಭಾರತದ ಯಾವುದೇ ಬೌಲರ್ ಇಲ್ಲ. ಅದೇ ಸಮಯದಲ್ಲಿ, ಅಫ್ಘಾನಿಸ್ತಾನದ ಮೊಹಮ್ಮದ್ ನಬಿ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಹಾಗೆಯೇ ಆಲ್​ರೌಂಡರ್ ವಿಭಾಗದಲ್ಲಿ ಭಾರತದ ಹಾರ್ದಿಕ್ ಪಾಂಡ್ಯ 5ನೇ ಸ್ಥಾನದಲ್ಲಿದ್ದಾರೆ.

Published On - 3:16 pm, Wed, 7 September 22

ತಂದೆಯ ರೀತಿ ಆಶೀರ್ವಾದ ಮಾಡಿದ್ದರು: ಸರಿಗಮ ವಿಜಿ ನಿಧನಕ್ಕೆ ತರುಣ್ ಸಂತಾಪ
ತಂದೆಯ ರೀತಿ ಆಶೀರ್ವಾದ ಮಾಡಿದ್ದರು: ಸರಿಗಮ ವಿಜಿ ನಿಧನಕ್ಕೆ ತರುಣ್ ಸಂತಾಪ
ಬಹಳ ಎಚ್ಚರವಹಿಸಬೇಕೆಂದು ಹೇಳುತ್ತಾರೆ ಪ್ರಯಾಗ್​ರಾಜ್​ಗೆ ಬಂದಿರುವ ಕನ್ನಡಿಗ
ಬಹಳ ಎಚ್ಚರವಹಿಸಬೇಕೆಂದು ಹೇಳುತ್ತಾರೆ ಪ್ರಯಾಗ್​ರಾಜ್​ಗೆ ಬಂದಿರುವ ಕನ್ನಡಿಗ
ಕೊಪ್ಪಳ ಗವಿಮಠದ ಅಜ್ಜನ ಜಾತ್ರೆಗೆ ಹರಿದು ಬಂದ ಜನ ಸಾಗರದ ವಿಡಿಯೋ ನೋಡಿ
ಕೊಪ್ಪಳ ಗವಿಮಠದ ಅಜ್ಜನ ಜಾತ್ರೆಗೆ ಹರಿದು ಬಂದ ಜನ ಸಾಗರದ ವಿಡಿಯೋ ನೋಡಿ
ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡಿದ್ದಾರೆ: ಬಿವೈವಿ
ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡಿದ್ದಾರೆ: ಬಿವೈವಿ
ಮೂಕ ಪ್ರಾಣಿಯ ಕೆಚ್ಚಲು ಕೊಯ್ಯುವುದು ತಾಯಿಗೆ ದ್ರೋಗ ಬಗೆದಂತೆ: ತನ್ವೀರ್ ಸೇಟ
ಮೂಕ ಪ್ರಾಣಿಯ ಕೆಚ್ಚಲು ಕೊಯ್ಯುವುದು ತಾಯಿಗೆ ದ್ರೋಗ ಬಗೆದಂತೆ: ತನ್ವೀರ್ ಸೇಟ
ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ
ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ
ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ
ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ
ನಾಳೆಯಲ್ಲ, ಮುಂದಿನ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆ: ಸಿದ್ದರಾಮಯ್ಯ
ನಾಳೆಯಲ್ಲ, ಮುಂದಿನ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆ: ಸಿದ್ದರಾಮಯ್ಯ